ಅಂಕೋಲಾ: ಫಿಲ್ಮ್ ಶೂಟಿಂಗ್ ತಂಡದಲ್ಲಿದ್ದ ಕೆಲಸಗಾರರ ಮೇಲೆ ಹೆಜ್ಜೇನು ದಾಳಿ: ಇಬ್ಬರು ಅಸ್ವಸ್ಥ
Team Udayavani, Nov 7, 2022, 6:41 PM IST
ಅಂಕೋಲಾ: ತಾಲೂಕಿನಲ್ಲಿ ಚಲನಚಿತ್ರವೊಂದರ ಚಿತ್ರೀಕರಣಕ್ಕೆಂದು ಆಗಮಿಸಿದ ಕೆಲಸಗಾರರ ಮೇಲೆ ಹೆಜ್ಜೇನು ದಾಳಿ ನಡೆಸಿದ ಪರಿಣಾಮ ಇಬ್ಬರು ತೀವ್ರ ಅಸ್ವಸ್ಥಗೊಂಡ ಘಟನೆ ಜಮಗೋಡ ರೈಲ್ವೆ ಸ್ಟೇಷನ್ ಕ್ರಾಸ್ ಬಳಿ ಸೋಮವಾರ ಮಧ್ಯಾಹ್ನ ( ನ.7 ರಂದು) ನಡೆದಿದೆ.
ಚಿತ್ರೀಕರಣ ತಂಡದಲ್ಲಿ ಲೈಟಿಂಗ್ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಮಂಡ್ಯ ಮೂಲದ ರಮೇಶ ಮತ್ತು ರಾಮು ಎನ್ನುವವರು ಜೇನು ನೊಣಗಳಿಂದ ದಾಳಿಗೀಡಾಗಿದ್ದು ತೀವ್ರ ಅಸ್ವಸ್ಥಗೊಂಡು ರಸ್ತೆಯಲ್ಲಿ ಕುಸಿದು ಬಿದ್ದಿದ್ದರು.
ಇವರ ಕೈಕಾಲು, ತಲೆ ಸೇರಿದಂತೆ ಅಂಗಾಂಗಗಳ ಮೇಲೆ ಜೇನು ನೊಣಗಳು ತೀವ್ರವಾಗಿ ದಾಳಿ ನಡೆಸಿ ಇಬ್ಬರೂ ಹೆಣಗಾಡುವ ಪರಿಸ್ಥಿತಿಯಲ್ಲಿದ್ದರು.
ಜೇನು ನೊಣಗಳು ತೀವ್ರವಾಗಿ ಹಾರಾಡುತ್ತಿರುವುದರಿಂದ ಯಾರೂ ಸಹಾಯಕ್ಕೆ ದಾವಿಸಲೂ ಸಾಧ್ಯವಾಗದ ಸಮಯದಲ್ಲಿ ಅದೇ ಮಾರ್ಗವಾಗಿ ಸಾಗುತ್ತಿದ್ದ ಲಕ್ಷ್ಮೇಶ್ವರದ ಆಟೋ ರಿಕ್ಷಾ ಚಾಲಕ ಮಹೇಶ ನಾಯ್ಕ ಎನ್ನುವವರು ಚಿನ್ನದಗರಿ ಯುವಕ ಸಂಘಕ್ಕೆ ಮತ್ತು 112 ಸಿಬ್ಬಂದಿಗೆ ಕರೆ ಮಾಡಿ ಸಮಯ ಪ್ರಜ್ಞೆ ತೋರಿದ್ದಾರೆ.
ಸ್ಥಳೀಯರು ಆಂಬ್ಯುಲೆನ್ಸ್ ಗೆ ಕರೆ ಮಾಡಿದರೂ ಯಾವುದೇ ಆಂಬ್ಯುಲೆನ್ಸ್ ಸ್ಥಳಕ್ಕೆ ಆಗಮಿಸದ ಕಾರಣ ಗೋಕರ್ಣದಿಂದ ಅಂಕೋಲಾ ಕಡೆ ರೋಗಿಯನ್ನು ಸಾಗಿಸುತ್ತಿದ್ದ ಖಾಸಗಿ ಆಂಬ್ಯುಲೆನ್ಸ್ ಚಾಲಕ ಗಣೇಶ ನಾಯಕ ಎನ್ನುವವರು ರೋಗಿಯ ಕುಟುಂಬಕ್ಕೆ ಮನವರಿಕೆ ಮಾಡಿ ಓರ್ವನನ್ನು ಅಂಕೋಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲು ಸಹಕರಿಸಿದರು.
ಇದನ್ನೂ ಓದಿ: ಒಂದಲ್ಲ ಎರಡಲ್ಲ 20 ವರ್ಷದಿಂದ ಪ್ರತಿದಿನ ಮಗಳ ಫೋಟೋ ತೆಗೆದಿಟ್ಟ ತಂದೆ: ವಿಡಿಯೋ ವೈರಲ್
ಇನ್ನೋರ್ವ ಅಸ್ವಸ್ಥನನ್ನು ಮಹೇಶ ನಾಯ್ಕ ಅವರು ಚಿನ್ನದಗರಿ ಯುವಕ ಸಂಘದ ಸಹಾಯದಲ್ಲಿ ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದರು.
ಸಾಮಾಜಿಕ ಕಾರ್ಯಕರ್ತ ಅನೀಲ ಮಹಾಲೆ ಅನೀಲ ಮಹಾಲೆ ಮತ್ತು ಸ್ಥಳೀಯರು, 112 ಮತ್ತು ಪೊಲೀಸ್ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಸಹಕರಿಸಿದರು.
ಸಮಯೋಚಿತವಾಗಿ ಆಸ್ಪತ್ರೆಗೆ ದಾಖಲಿಸಿದ್ದರಿಂದ ಜೇನು ಕಡಿತಕ್ಕೊಳಗಾದವರು ಪ್ರಾಣಾಪಾಯದಿಂದ ಪಾರಾಗಿರುವುದಾಗಿ ತಿಳಿದು ಬಂದಿದೆ.
ತಾಲೂಕಿನಲ್ಲಿ ಇತ್ತೀಚಿನ ಕೆಲವು ದಿನಗಳಿಂದ ಕನ್ನಡ ಚಲನಚಿತ್ರವೊಂದರ ಚಿತ್ರೀಕರಣ ನಡೆಯುತ್ತಿದ್ದು ಚಿತ್ರೀಕರಣ ತಂಡದ ಪ್ರಮುಖರಿಗೆ ಈ ಕುರಿತು ಸತೀಶ ಬೊಮ್ಮಿಗುಡಿ ಅವರು ಮಾಹಿತಿ ನೀಡಿ ಕಾರ್ಮಿಕರ ಆರೋಗ್ಯದ ಕಾಳಜಿ ವಹಿಸುವಂತೆ ಮನವಿ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Food Department Operation: ಬಿಪಿಎಲ್ ಚೀಟಿದಾರರಿಗೆ ಎಪಿಎಲ್ ಕಾವು!
Shakti scheme; ಪುರುಷರಿಗೆ ಉಚಿತ ಪ್ರಯಾಣ ಸೌಲಭ್ಯ ಇಲ್ಲ: ರಾಮಲಿಂಗಾರೆಡ್ಡಿ
MUST WATCH
ಹೊಸ ಸೇರ್ಪಡೆ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Bhairathi Ranagal Review: ರೋಣಾಪುರದ ರಣಬೇಟೆಗಾರ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.