ಸರ್ವಧರ್ಮಿಯರಿಂದ ಚಂದಾವರ ಹಬ್ಬ ಸಂಭ್ರಮ

Team Udayavani, Dec 2, 2018, 3:41 PM IST

2-december-16.gif

ಹೊನ್ನಾವರ: ಹೊನ್ನಾವರ-ಕುಮಟಾ ಮಧ್ಯೆ ಸಹ್ಯಾದ್ರಿ ಮಡಿಲಲ್ಲಿರುವ ಚಂದಾವರದ ಸಂತ್‌ ಫ್ರಾನ್ಸಿಸ್‌ ಚರ್ಚಿನ ವಾರ್ಷಿಕ ಹಬ್ಬ (ಫೆಸ್ಟ್‌) ಡಿ. 3ರಂದು ನಡೆಯಲಿದೆ. ಅಂದು ನಾಡಿನ ನಾನಾಭಾಗದಿಂದ ಬಂದ ಸರ್ವಧರ್ಮಿಯರು ಮೊಂಬತ್ತಿ ಬೆಳಗಿ ಪ್ರಾರ್ಥಿಸುತ್ತಾರೆ. ಪ್ರಾರ್ಥನೆ ಈಡೇರಿದ್ದಕ್ಕೆ ನಮಿಸುತ್ತಾರೆ. ಗೆಳೆಯರ, ಬಂಧುಗಳ ಮನೆಯಲ್ಲಿ ಉಳಿದು, ಉಂಡು ಸಂತೋಷ ಹಂಚಿಕೊಳ್ಳುತ್ತಾರೆ.

ಜಗವೆಲ್ಲ ಗೆದ್ದು ತನ್ನ ಆತ್ಮವನ್ನು ಕಳೆದುಕೊಂಡರೆ ಅದರಿಂದ ಏನು ಲಾಭ ಎಂಬ ಏಸುಕ್ರಿಸ್ತರ ವಾಣಿಯಿಂದ ಆಕರ್ಷಿತರಾದ ಸ್ಪೇನ್‌ ದೇಶದ ಸಂತ್‌ ಫ್ರಾನ್ಸಿಸ್‌ ಝೇವಿಯರ್‌ ಅಲ್ಲಿ ತತ್ವ ಶಾಸ್ತ್ರದಲ್ಲಿ ಡಾಕ್ಟರೇಟ್‌ ಪಡೆದವರು. ಲೌಕಿಕ ಬದುಕಿಗೆ ಬೆನ್ನುಹಾಕಿ ಮನುಕುಲದ ಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡ ಅವರು 11 ಸಾವಿರ ಮೈಲಿ ದೂರ ಪ್ರಯಾಣಮಾಡಿ ಗೋವೆಗೆ ಬಂದಿದ್ದರು.

ಸಂತ್‌ ಫ್ರಾನ್ಸಿಸ್‌ ಝೇವಿಯರ್‌ ಹಡಗಿನಲ್ಲಿ ಚೀನಾಕ್ಕೆ ಹೊರಟಿದ್ದಾ ಮಾಕ್ವಾ ಎಂಬ ದ್ವೀಪದಲ್ಲಿ ಕಠಿಣ ಜ್ವರ ಪೀಡಿತರಾಗಿ 1552ರಲ್ಲಿ ದೈವಾದೀನರಾದರು. ಹಡಗಿನ ನಾವಿಕರು ಅಲ್ಲಿಯೇ ಅವರ ದೇಹವನ್ನು ಸಮಾಧಿ ಮಾಡಿದ್ದರು. ಕೆಲವು ತಿಂಗಳ ನಂತರ ನಾವಿಕರು ಮರಳಿ ಬರುವಾಗ ದ್ವೀಪದಲ್ಲಿ ಹಡಗು ನಿಲ್ಲಿಸಿ ಸಮಾಧಿಯನ್ನು ತೆರೆದಾಗ ಅವರ ಪಾರ್ಥಿವ ಶರೀರ ಯಥಾಸ್ಥಿತಿ ಇತ್ತು. ಅದನ್ನು ಮೇಲೆತ್ತಿ ಗೋವಾಕ್ಕೆ ತಂದ ನಾಗರಿಕರು ಬೋಮ್‌ ಜೀಸಸ್‌ ದೇವಾಲಯಕ್ಕೆ ಒಪ್ಪಿಸಿದ್ದರು. ಅಲ್ಲಿ ಅವರ ಪಾರ್ಥಿವ ಶರೀರ ಇಂದೂ ಇದೆ. ಅವರ ಒಂದು ಉಗುರು ಚಂದಾವರ ಚರ್ಚಿನಲ್ಲಿದೆ.

ಸಂತ ಫ್ರಾನ್ಸಿಸ್‌ ಝೇವಿಯರ್‌ ಅವರನ್ನು ಪ್ರಾರ್ಥಿಸಿದರೆ ಸಕಲ ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂದು ಗೋವಾದಲ್ಲಿ ನಡೆಯುವ ಹಬ್ಬಕ್ಕೆ ಜಗತ್ತಿನ ನಾನಾಭಾಗದ ಜನ ಸೇರುತ್ತಾರೆ. 1678ರಲ್ಲಿ ಚಂದಾವರದಲ್ಲಿ ಕ್ರೈಸ್ತ ದೇವಾಲಯ ಇತ್ತು. ಸಂತ್‌ ಫ್ರಾನ್ಸಿಸ್‌ ಝೇವಿಯರ್‌ ಅವರಲ್ಲಿ ಪ್ರಾರ್ಥನೆಮಾಡಿಕೊಂಡ ಮಿರ್ಜಾನಿನ ಮೀನುಗಾರರೊಬ್ಬರಿಗೆ ಹೇರಳ ಮೀನು ದೊರಕಿತ್ತು. ಆತನ ಕುಟುಂಬ ಅಭಿವೃದ್ಧಿಯಾಯಿತು. ಆತ ಸಂತರ ಮೂರ್ತಿಯನ್ನು ಚಂದಾವರ ಚರ್ಚ್‌ಗೆ ನೀಡಿದ್ದ.

1934ರಲ್ಲಿ ಗೋವಾ ಚರ್ಚ್‌ನಿಂದ ಸಂತ ಫ್ರಾನ್ಸಿಸ್‌ ಝೇವಿಯರ್‌ ಅವರ ಉಗುರನ್ನು ಚಂದಾವರ ಚರ್ಚ್‌ಗೆ ತರಲಾಯಿತು. ಅದನ್ನು ಈಗಲೂ ಕರಂಡಕದಲ್ಲಿ ಸುರಕ್ಷಿತವಾಗಿ ಇಡಲಾಗಿದೆ. ಆದ್ದರಿಂದ ಚಂದಾವರ ಚರ್ಚ್‌ಗೆ ಇಷ್ಟಾರ್ಥ ಈಡೇರಿಸುವ ಚರ್ಚ್‌ ಎಂಬ ಹೆಸರು ಬಂದಿದ್ದು ಸಮಾಜದ ನಾನಾಸ್ತರದ, ಜಾತಿ ಧರ್ಮಗಳ ಜನ ಬಂದು, ಮೊಂಬತ್ತಿ ಬೆಳಗಿ ಹೋಗುತ್ತಾರೆ. ಫೆಸ್ಟ್‌ಗಾಗಿ ವಿಶೇಷ ಬಸ್ಸುಗಳನ್ನು ಕುಮಟಾ- ಹೊನ್ನಾವರದಿಂದ ಚಂದಾವರಕ್ಕೆ ಬಿಡಲಾಗುತ್ತದೆ. ಸೋಮವಾರ ದಿನವಿಡೀ ಚಂದಾವರದಲ್ಲಿ ಸಂಭ್ರಮ, ರಾತ್ರಿ ಮನರಂಜನೆಯಿದೆ.

ಗಡ್ಡೆ ಗೆಣಸು ಮಾರಾಟ ಜೋರು
ಚಂದಾವರದಲ್ಲಿ ಕ್ರಿಶ್ಚಿಯನ್‌, ಮುಸ್ಲಿಂ, ಹಿಂದು ಸಹಿತ ಎಲ್ಲ ಧರ್ಮ, ಜಾತಿಯವರಿದ್ದಾರೆ. ಈ ಹಬ್ಬವನ್ನು ಅವರು ಬಹುಪಾಲು ಒಟ್ಟಾಗಿಯೇ ಆಚರಿಸುತ್ತಾರೆ. ಚಂದಾವರ ಸೀಮೆಯ ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿ ವಾಸಿಸುವ ಜನರು ಈ ಪ್ರದೇಶದಲ್ಲಿ ಮಾತ್ರ ಬೆಳೆಯುವ ಕೆಸುವು, ಗೆಣಸು, ಗುಟ್ಟಗೆಣಸು, ಮತ್ತು ಹಲವಾರು ಜಾತಿಯ ಗಡ್ಡೆ, ಗೆಣಸುಗಳನ್ನು ಅಂದುಮಾತ್ರ ಮಾರಾಟಕ್ಕೆ ತರುತ್ತಾರೆ. ಹೊನ್ನಾವರದ ಮಲಬಾರ ಬೇಕರಿಯವರು ಚಂದಾವರ ಪೇಸ್ತಿನ ನೆನಪಿಗಾಗಿ ವಿಶೇಷ ರೀತಿಯ ಬಿಸ್ಕತ್ತುಗಳನ್ನು ತಯಾರಿಸುತ್ತಾರೆ. ಬೇರೆಲ್ಲೂ, ಬೇರಾವ ದಿನವೂ ಈ ಗಡ್ಡೆ, ಗೆಣಸುಗಳು, ಬಿಸ್ಕತ್ತುಗಳು ಮಾರಾಟಕ್ಕೆ ಸಿಗುವುದಿಲ್ಲ.

„ಜೀಯು ಹೊನ್ನಾವರ

ಟಾಪ್ ನ್ಯೂಸ್

Rashmika Mandanna: ಸಾವಿರಾರು ಜನರ ಮುಂದೆ ಮದುವೆ ಆಗುವ ಹುಡುಗನ ಬಗ್ಗೆ ಮಾತನಾಡಿದ ರಶ್ಮಿಕಾ

Rashmika Mandanna: ಸಾವಿರಾರು ಜನರ ಮುಂದೆ ಮದುವೆ ಆಗುವ ಹುಡುಗನ ಬಗ್ಗೆ ಮಾತನಾಡಿದ ರಶ್ಮಿಕಾ

Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್‌ ಷೇರು ಮೌಲ್ಯ ಏರಿಕೆ

Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್‌ ಷೇರು ಮೌಲ್ಯ ಏರಿಕೆ

Bidar: ವಕ್ಫ್‌ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ

Bidar: ವಕ್ಫ್‌ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ

ಮಕ್ಕಳನ್ನು ಶಾಲೆಗೆ‌ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಶಿಕ್ಷಣ ಸಚಿವರ ಮನವಿ

ಮಕ್ಕಳನ್ನು ಶಾಲೆಗೆ‌ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ

5,000 tractors blockade Suvarna Soudha on December 10; Kudalasangama Sri

Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ

Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ

Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ

Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು

Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಕ್ಕಳನ್ನು ಶಾಲೆಗೆ‌ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಶಿಕ್ಷಣ ಸಚಿವರ ಮನವಿ

ಮಕ್ಕಳನ್ನು ಶಾಲೆಗೆ‌ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ

Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು

Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು

drowned

Honnavar;ಸಮುದ್ರದಲ್ಲಿ ಮುಳುಗುತ್ತಿದ್ದ ಮೂವರು ಯುವತಿಯರ ರಕ್ಷಣೆ

ಮುಂಡಗೋಡ: ಮಂಗನಬಾವು ಉಲ್ಬ‌ಣ-ಮೂರು ದಿನ ಶಾಲೆಗೆ ರಜೆ

ಮುಂಡಗೋಡ: ಮಂಗನಬಾವು ಉಲ್ಬ‌ಣ-ಮೂರು ದಿನ ಶಾಲೆಗೆ ರಜೆ

Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ

Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Rashmika Mandanna: ಸಾವಿರಾರು ಜನರ ಮುಂದೆ ಮದುವೆ ಆಗುವ ಹುಡುಗನ ಬಗ್ಗೆ ಮಾತನಾಡಿದ ರಶ್ಮಿಕಾ

Rashmika Mandanna: ಸಾವಿರಾರು ಜನರ ಮುಂದೆ ಮದುವೆ ಆಗುವ ಹುಡುಗನ ಬಗ್ಗೆ ಮಾತನಾಡಿದ ರಶ್ಮಿಕಾ

Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್‌ ಷೇರು ಮೌಲ್ಯ ಏರಿಕೆ

Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್‌ ಷೇರು ಮೌಲ್ಯ ಏರಿಕೆ

Bidar: ವಕ್ಫ್‌ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ

Bidar: ವಕ್ಫ್‌ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ

ಮಕ್ಕಳನ್ನು ಶಾಲೆಗೆ‌ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಶಿಕ್ಷಣ ಸಚಿವರ ಮನವಿ

ಮಕ್ಕಳನ್ನು ಶಾಲೆಗೆ‌ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ

5,000 tractors blockade Suvarna Soudha on December 10; Kudalasangama Sri

Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.