ದೇವಿಮನೆ ರಸ್ತೆ ವಿಸ್ತರಣೆ ಬೇಕೇ?

Team Udayavani, Nov 8, 2018, 4:01 PM IST

8-november-17.gif

ಹೊನ್ನಾವರ: ಉತ್ತರ ಕನ್ನಡದ ಕರಾವಳಿಯಿಂದ ಘಟ್ಟ ಏರಿ ಉತ್ತರಭಾರತ, ಬಯಲುಸೀಮೆ, ಮಲೆನಾಡು ಸೇರಲು 5 ರಸ್ತೆಗಳಿರುವಾಗ ದೇವಿಮನೆ ಘಟ್ಟದ ರಸ್ತೆಯನ್ನು ವಿಸ್ತರಿಸುವ ಅಗತ್ಯವಿದೆಯೇ, ಇಲ್ಲವೇ ಎಂಬುದು ಪ್ರಸ್ತುತ ಚರ್ಚಿತ ವಿಷಯವಾಗಿದೆ. ವಿಸ್ತರಣೆ ಬೇಕು ಅನ್ನುವವರು, ಬೇಡ ಅನ್ನುವವರು ನಿಖರ ಕಾರಣ ಹೇಳುತ್ತಿಲ್ಲ.

ಜಿಲ್ಲೆಯಿಂದ 1. ಭಟ್ಕಳ-ಕೋಗಾರ-ಸಾಗರ, 2. ಹೊನ್ನಾವರ‌-ಗೇರಸೊಪ್ಪಾ-ಮಾವಿನಗುಂಡಿ-ಸಾಗರ, 3. ಕುಮಟಾ-ಚಂದಾವರ-ದೊಡ್ಮನೆ-ಸಿದ್ದಾಪುರ‌ , 4. ಕುಮಟಾ-ದೇವಿಮನೆ-ಶಿರಸಿ, 5. ಅಂಕೋಲಾ-ಯಲ್ಲಾಪುರ-ಹುಬ್ಬಳ್ಳಿ-ಧಾರವಾಡ ಈ ರಸ್ತೆಗಳಿವೆ. ಇದರ ಹೊರತಾಗಿ ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಗಳಾಗಿದ್ದಾಗ ಹೊನ್ನಾವರ-ಸಾಲಕೋಡ-ದೊಡ್ಮನೆ-ಸಿದ್ದಾಪುರ ರಸ್ತೆಗೆ ಮಂಜೂರಾತಿ ಕೊಟ್ಟಿದ್ದರು. ಈಗಲೂ ಕಚ್ಚಾ ರಸ್ತೆ ಇದೆ. ಹೆಗಡೆಯವರ ಅಧಿಕಾರ ಹೋದ ಕಾರಣ ಪಕ್ಕಾ ರಸ್ತೆ ಆಗಿಲ್ಲ.

ಕೇರಳದ ತುದಿಯಿಂದ ಕರಾವಳಿ ಮಾರ್ಗವಾಗಿ ಕಾರವಾರ-ಗೋವಾ ಮತ್ತು ಮಹಾರಾಷ್ಟ್ರಕ್ಕೆ ಹೋಗುವ ರಸ್ತೆ ಚತುಷ್ಪಥವಾಗುತ್ತಿದೆ. ಹುಬ್ಬಳ್ಳಿ- ಧಾರವಾಡ- ಬಯಲುಸೀಮೆ- ಉತ್ತರಭಾರತಕ್ಕೆ ಹೋಗಲು ಅಂಕೋಲಾ-ಯಲ್ಲಾಪುರ ರಸ್ತೆ ಈಗಾಗಲೇ ದ್ವಿಪಥವಾಗಿದೆ. ಕುಮಟಾ-ದೇವಿಮನೆ ರಸ್ತೆಯ ಕಾಂಕ್ರೀಟೀಕರಣ ಕಾಗೇರಿಯವರ ಕಾಲದಲ್ಲಿ ಆಗಿದೆ. ಮಧ್ಯಾಹ್ನ 12ಗಂಟೆಗೂ ಒಂದು ಬಿಂದು ಬಿಸಿಲು ಬೀಳದ ಈ ಘಟ್ಟದ ಮಾರ್ಗವನ್ನು ಚತುಷ್ಪಥ ಮಾಡಿದರೆ ನಿತ್ಯಹರಿದ್ವರ್ಣದ ಕಾಡು ನಾಶವಾಗುವುದಲ್ಲದೇ ವಾಹನಗಳ ಓಡಾಟ ಹೆಚ್ಚಿ ಪರಿಸರಕ್ಕೆ ಹಾನಿಯಾಗಲಿದೆ. ಇದನ್ನು ಲೈಬಿಟ್ಟು ಕುಮಟಾ-ಚಂದಾವರ-ಸಿದ್ದಾಪುರ ಮತ್ತು ಹೊನ್ನಾವರ-ಗೇರಸೊಪ್ಪಾ- ಮಾವಿನಗುಂಡಿ ರಸ್ತೆಯನ್ನು ಮತ್ತು ಭಟ್ಕಳ-ಕೋಗಾರ-ಸಾಗರ ರಸ್ತೆಯನ್ನು ಇನ್ನಷ್ಟು ಭದ್ರಪಡಿಸಿದರೆ ಮಲೆನಾಡು, ಮೈಸೂರು ಪ್ರಾಂತಗಳಿಗೆ ಹೋಗಲು ಸಾಧ್ಯವಿದೆ. ಬೇಕಿದ್ದರೆ ತುಳಸಾಣಿ-ಹಿರೇಬೈಲ್‌ ವರೆಗೆ ಮುಗಿದಿರುವ ಸಾಲಕೋಡ-ದೊಡ್ಮನೆ ರಸ್ತೆಯನ್ನು ಬಲಪಡಿಸಿ ಇನ್ನೊಂದು 10ಕಿಮೀ ರಸ್ತೆ ನಿರ್ಮಿಸಿದರೆ ಕೇರಳದ ತುದಿಯಿಂದ ಉತ್ತರ ಕನ್ನಡದ ಮಾರ್ಗವಾಗಿ ಹೋಗಲು 5ಘಟ್ಟದ ರಸ್ತೆಗಳಾಗುತ್ತದೆ. ಎಲ್ಲ ರಸ್ತೆಗಳು ಸರಿಯಾಗಿದ್ದರೆ ವಾಹನಗಳು ಹತ್ತಿರದ ಮಾರ್ಗವನ್ನು ಆಯ್ದುಕೊಳ್ಳಬಹುದು. ಇದರಿಂದ ಘಟ್ಟದ ಸೌಂದರ್ಯ, ಪರಿಸರ ಉಳಿಯುತ್ತದೆ.

ದೇವಿಮನೆ ಘಟ್ಟವನ್ನು ವಿಸ್ತರಿಸಿದರೆ ಅಂಕೋಲಾ-ಹುಬ್ಬಳ್ಳಿ ರೈಲು ಮಾರ್ಗದ ಅಗತ್ಯಕ್ಕಿಂತ ಹೆಚ್ಚು ಕಾಡು ನಾಶವಾಗುತ್ತದೆ, ಪಶ್ಚಿಮಘಟ್ಟದ ಹೃದಯದಂತಹ ಕಾಡು ಒಣಗಿ ಹೋಗುತ್ತದೆ. ಕೇವಲ 10ಮೀಟರ್‌ ಅಗಲದಲ್ಲಿ ಹಳಿ ಜೋಡಿಸಿದರೆ ರೈಲು ಓಡುತ್ತದೆ. ರಸ್ತೆ ದ್ವಿಪಥ ಮಾಡಲು 20ಮೀಟರ್‌ ಅಗಲದ ಕಾಡು ತೆರವಾಗಬೇಕು. ವಾಹನಗಳ ಹೊಗೆ, ಧೂಳು ಕಾಡಿನ ಆಳಕ್ಕೆ ನುಗ್ಗಿ ಪರಿಸರ ಕೆಡಿಸುತ್ತದೆ. ಜಿಲ್ಲೆಯಿಂದ 5ರಸ್ತೆಗಳಿರುವಾಗ 2ರಸ್ತೆಗಳ ಮೇಲೆ ಒತ್ತಡ ಹೇರುವುದು, ಹತ್ತಿರ ಹತ್ತಿರ ಕಾಡಿನ ವಾತಾವರಣ ಕೆಡಿಸುವುದು ನ್ಯಾಯ ಸಮ್ಮತವಲ್ಲ. ರಸ್ತೆಯ ಹೊರತಾಗಿ ಕೊಂಕಣ ರೇಲ್ವೆ ಇದೆ. ವಾಜಪೇಯಿಯವರು ಪ್ರಧಾನಿಯಾಗಿದ್ದಾಗ ಹುಬ್ಬಳ್ಳಿ-ಅಂಕೋಲಾ ರೈಲಿಗೆ ಹಸಿರು ನಿಶಾನೆ ತೋರಿದ್ದರು. ಲಘಟಗಿ ತನಕ ಹಳಿಹಾಸಿ ಆಗಿದೆ. ಅವರ ಕನಸಿನ ಯೋಜನೆಯೆಂದು ದೇವಿಮನೆ ಘಟ್ಟಕ್ಕೆ ಕೈ ಹಚ್ಚುವ ಬದಲು ರೈಲಿನ ಕುರಿತು ಚಿಂತಿಸಲಿ. ಬೇಕು ಬೇಡಗಳ ಚರ್ಚೆಯ ನಂತರ ಏಕಾಭಿಪ್ರಾಯ ಮೂಡಿದರೆ ಯಾರೂ ಮುಂದುವರಿಯಲಾರರು. ಭಿನ್ನಾಭಿಪ್ರಾಯಗಳೇ ವಿಜೃಂಭಿಸಿದರೆ ದೇವಿಮನೆ ಘಟ್ಟದ ಕಾಮಗಾರಿ ಆರಂಭವಾಗುತ್ತದೆ ಅಷ್ಟೇ…

„ಜೀಯು, ಹೊನ್ನಾವರ 

ಟಾಪ್ ನ್ಯೂಸ್

UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ

UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ

Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ

Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ

Junior Doctor: ಹಾಸ್ಟೆಲ್ ಗೆ ಕರೆದು ಕಿರಿಯ ವೈದ್ಯೆಯ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…

Junior Doctor: ಮಾತನಾಡಲು ಕರೆಸಿ ಕಿರಿಯ ವೈದ್ಯೆ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…

Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ

Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ

Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…

Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…

Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾವು: ಪ್ರಾಣಿಗಳಿಗೆ ಕ್ವಾರಂಟೈನ್‌

Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್‌

1

540 ಅಡಿ ಆಳದ ಬೋರ್​ವೆಲ್​ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Honnavara: ಲಾರಿ ಪಲ್ಟಿಯಾಗಿ ಇಬ್ಬರು ಸಾವು; ಮೂವರಿಗೆ ಗಾಯ

Honnavara: ಲಾರಿ ಪಲ್ಟಿಯಾಗಿ ಇಬ್ಬರು ಸಾವು; ಮೂವರಿಗೆ ಗಾಯ

KPTCL: ಕೆಪಿಸಿಗೆ 30 ಸಾವಿರ ಕೋಟಿ ರೂ. ಬಾಕಿ ಸಂಕಷ್ಟ !

KPTCL: ಕೆಪಿಸಿಗೆ 30 ಸಾವಿರ ಕೋಟಿ ರೂ. ಬಾಕಿ ಸಂಕಷ್ಟ !

7-dandeli

Dandeli: ಗಾಂಜಾ ಅಕ್ರಮ ಮಾರಾಟ ಯತ್ನ; ಮಾಲು ಸಹಿತ ಆರೋಪಿಯ ಬಂಧನ

6-honnavara

Honnavar: ಮೂವರು ಯುವಕರ ಬಲಿ ತೆಗೆದುಕೊಂಡ ಭೀಕರ ರಸ್ತೆ ಅಪಘಾತ

5-1

Mundgod: ಹಾವು ಕಡಿದು ಅಂಗನವಾಡಿ ಬಾಲಕಿ ಸಾವು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ

UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ

Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ

Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ

Bengaluru: ಎಂಬಿಎ ವಿದ್ಯಾರ್ಥಿ 3ನೇ ಮಹಡಿಯಿಂದ ಬಿದ್ದು ಸಾವು

Bengaluru: ಎಂಬಿಎ ವಿದ್ಯಾರ್ಥಿ 3ನೇ ಮಹಡಿಯಿಂದ ಬಿದ್ದು ಸಾವು

Fraud Case: 3.25 ಕೋಟಿ ವಂಚನೆ ಕೇಸ್‌; ಐಶ್ವರ್ಯ ದಂಪತಿ ಮತ್ತೆ ಸೆರೆ

Fraud Case: 3.25 ಕೋಟಿ ವಂಚನೆ ಕೇಸ್‌; ಐಶ್ವರ್ಯ ದಂಪತಿ ಮತ್ತೆ ಸೆರೆ

Gas cylinder leakage: ಮನೆ ಛಿದ್ರ ಛಿದ್ರ, ಇಬ್ಬರಿಗೆ ಗಾಯ

Gas cylinder leakage: ಮನೆ ಛಿದ್ರ ಛಿದ್ರ, ಇಬ್ಬರಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.