ನಾಲ್ಕು ಜಿಲ್ಲೆ ಜೋಡಿಸುವ ಸರ್ಕಲ್‌ ಗತಿ ​​​​​​​?


Team Udayavani, Mar 14, 2019, 11:29 AM IST

15-march-18.jpg

ಹೊನ್ನಾವರ: ಪ್ರತಿ ಕಿಮೀಗೆ 10 ಕೋಟಿ ರೂ. ವೆಚ್ಚಮಾಡಿ ಚತುಷ್ಪಥ ಕಾಮಗಾರಿ ನಡೆದಿದೆ. ಸರ್ಕಾರದ ವಶದಲ್ಲಿದ್ದ ಭೂಮಿಯಲ್ಲಿ ಕೆಲಸ ಮುಕ್ತಾಯ ಹಂತದಲ್ಲಿದೆ. ಖಾಸಗಿ ಭೂಮಿ ವಶಪಡಿಸಿಕೊಂಡು ಅಲ್ಲೂ ಕಾಮಗಾರಿ ಆರಂಭವಾಗಿದೆ. ಮೇಲ್ಸೇತುವೆ ನಿರ್ಮಾಣ, ಪರ್ಯಾಯ ಚತುಷ್ಪಥ (ಬೈಪಾಸ್‌) ಕುರಿತು ಇನ್ನೂ ತೀರ್ಮಾನಕ್ಕೆ ಬರದಿರುವುದು, ರಾಜಕಾರಣಿಗಳ ಹಗ್ಗಜಗ್ಗಾಟಕ್ಕೆ ಚತುಷ್ಪಥ ಕೆಲವೆಡೆ ದ್ವಿಪಥವಾಗಿ, ಜಗ್ಗಿದ ಕಡೆ ಬಾಗಿ, ಅಂಕುಡೊಂಕಾಗಿ ಸಾಗುತ್ತಿರುವುದು, ಕೊನೆಗೂ ಚತುಷ್ಪಥದ ಉದ್ದೇಶ ಫಲಿಸುವ ಲಕ್ಷಣ ಕಾಣಿಸುತ್ತಿಲ್ಲ.

ಜಿಲ್ಲೆಯಲ್ಲಿ ವಿಶಿಷ್ಟವಾದ ಹೊನ್ನಾವರ ಕಾಲೇಜು ರಸ್ತೆ ಯಲ್ಲಿರುವ ರಾಷ್ಟ್ರೀಯ ಹೆದ್ದಾರಿ 66 ಮತ್ತು 206 ಜೋಡಿಸುವ ಸರ್ಕಲ್‌ ಗತಿಯೇನು ? ಪ್ರತಿಭೋದಯದಿಂದ ಕರ್ನಲ್‌ ಹಿಲ್‌ವರೆಗೆ ಮೇಲ್‌ಸೇತುವೆ ನಿರ್ಮಾಣ ಆಗುತ್ತದೆ ಎಂದು ನೆಲದ ಒಳಗೂ, ಹೊರಗೂ ತಂತ್ರಜ್ಞರ ಸಮೀಕ್ಷೆ ನಡೆಯಿತು. ಈಗ ಕೈಬಿಟ್ಟ ಸುದ್ದಿ ಬಂದಿದೆ. ಕೆಲವರು ತಮ್ಮ ಆಸ್ತಿ ಉಳಿಸಿಕೊಳ್ಳುವುದಕ್ಕೆ ಕರ್ನಲ್‌ ಹಿಲ್‌ ಐತಿಹಾಸಿಕ, ಮಾಸ್ತಿಗುಡಿ ಪೌರಾಣಿಕ ಎಂದೆಲ್ಲಾ ಕಥೆಕಟ್ಟುತ್ತಾ ಅರ್ಜಿ ಗುಜರಾಯಿಸುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಐಆರ್‌ಬಿ ಕಂಪನಿ ಏನೂ ಹೇಳುತ್ತಿಲ್ಲ.

ಈ ಸರ್ಕಲ್‌ನಿಂದ ಗೋವಾ ರಾಜಧಾನಿ ಪಣಜಿ, ಕರಾವಳಿಯ ದೊಡ್ಡ ನಗರಗಳಾದ ಉಡುಪಿ, ಮಂಗಳೂರು, ಎರಡನೇ ವಾಣಿಜ್ಯ ರಾಜಧಾನಿ ಹುಬ್ಬಳ್ಳಿ, ಅಭಿವೃದ್ಧಿ ಹೊಂದುತ್ತಿರುವ ಶಿವಮೊಗ್ಗ ಸಮಾನ 180ಕಿಮೀ ದೂರದಲ್ಲಿದೆ. ಈ ಸರ್ಕಲ್‌ನಲ್ಲಿ ತಿಂಗಳಿಗೊಂದು ಅಪಘಾತ ಆಗುತ್ತಿದೆ. ಟ್ಯಾಂಕರ್‌ಗಳು ಪಲ್ಟಿ ಆಗುತ್ತವೆ. ವಾಹನಗಳು ನಿಂತು ಸಾಗಬೇಕಾಗಿದೆ. ಗುಜರಾತ್‌-ಮಹಾರಾಷ್ಟ್ರ-ಕೇರಳ-ಗೋವಾ ಮಾರ್ಗವಾಗಿ ಉಡುಪಿ-ಮಂಗಳೂರು-ಕೊಚ್ಚಿಗೆ ಹೋಗಿ ಬರುವ ವಾಹನಗಳು ಇದೇ ಸರ್ಕಲ್‌ನಿಂದ ಹಾಯ್ದು ಹೋಗುತ್ತವೆ. ಬೆಂಗಳೂರು- ಶಿವಮೊಗ್ಗ-ಜೋಗ ಮಾರ್ಗ ವಾಗಿ ಕಾರವಾರದಿಂದ ಭಟ್ಕಳದವರೆಗೆ ಬಂದು ಹೋಗುವ ವಾಹನಗಳು ಈ ಸರ್ಕಲ್‌ ದಾಟಿ ಹೋಗುತ್ತವೆ. ಉತ್ತರ ಕರ್ನಾಟಕದಿಂದ ಹುಬ್ಬಳ್ಳಿ- ಯಲ್ಲಾಪುರ-ಶಿರಸಿ ಮಾರ್ಗವಾಗಿ ಮಂಗಳೂರಿನಿಂದ ಕೇರಳ ತನಕ ಬಂದು ಹೋಗುವ ವಾಹನಗಳು ಇದೇ ಸರ್ಕಲ್‌ ಹಾಯ್ದು ಹೋಗುತ್ತವೆ.

ನಾಲ್ಕು ದಿಕ್ಕುಗಳಲ್ಲಿರುವ ಶಾಲೆ, ಆಸ್ಪತ್ರೆ, ದೇವಾಲಯ, ಚರ್ಚ್‌, ಸರ್ಕಾರಿ ಕಚೇರಿಗಳಿಗೆ ಹೋಗಿ ಬರುವ ಜನ ಮತ್ತು ಹಳ್ಳಿಗಳಿಂದ ಬರುವ ಜನ ಈ ಸರ್ಕಲ್‌ ದಾಟಲೇ ಬೇಕು. ನಗರ ಯೋಜನಾಬದ್ಧವಲ್ಲದ ಕಾರಣ ಜನಸಾಮಾನ್ಯರಿಗೆ ಬೇಕಾದ ಸಂಸ್ಥೆಗಳು ನಾಲ್ಕು ದಿಕ್ಕಿನಲ್ಲಿವೆ. ಸಾವಿರಾರು ಜನ ಈ ಸರ್ಕಲ್‌ ಬಳಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಚತುಷ ³ಥ ಹಾಯ್ದು ದೂರದ ವಾಹನಗಳು, ಊರವಾಹನಗಳು, ವಿದ್ಯಾರ್ಥಿಗಳು, ವೃದ್ಧರು, ರೋಗಪೀಡಿತರು ದಾಟುವುದು ಹೇಗೆ. ಸರ್ವಿಸ್‌ ರಸ್ತೆ ಒದಗಿಸಿದರೂ ಸಮಸ್ಯೆ ಪರಿಹಾರವಾಗುವುದಿಲ್ಲ. ಮೇಲ್‌ ಸೇತುವೆಯೊಂದೇ ಪರಿಹಾರವಾಗಿತ್ತು. ಚತುಷ್ಪಥಕ್ಕೆ ನಿಗದಿಪಡಿಸಿದ ಅವಧಿ ಮುಗಿಯುತ್ತ ಬಂದ ಕಾರಣ ಗಡಿಬಿಡಿಯಲ್ಲಿ ಐಆರ್‌ಬಿ ಕೆಲಸ ಮುಗಿಸುತ್ತಿದೆ. ಸ್ಥಳೀಯರಿಗೂ, ನಾಲ್ಕು ಪ್ರಮುಖ ಜಿಲ್ಲೆಗಳಿಂದ, ಗೋವಾದಿಂದ ಈ ಸರ್ಕಲ್‌ ಹಾಯ್ದು ಓಡಾಡುವ ವಾಹನಗಳಿಗೂ ಅನುಕೂಲ ಮಾಡಿಕೊಡುವುದು ಹೇಗೆ ? ಸರ್ಕಲ್‌ ಅಪಾಯಕಾರಿಯಾಗಿ ಇರಬೇಕೋ? ಮೇಲ್‌ ಸೇತುವೆ ಬೇಕೋ ? ಸರ್ಕಲ್‌ ಶಾಶ್ವತ ಶಾಪ ಆಗದಿರಲು ಜನರ ಜೊತೆ ರಾಜಕಾರಣಿಗಳು ಹೋರಾಡಿ ಮೇಲ್‌ ಸೇತುವೆ ಪಡೆಯಬೇಕಾಗಿದೆ.

ಗೊತ್ತಾಗದ ಯೋಜನೆ
ಜಿಲ್ಲೆಯಲ್ಲಿ ವಿಶಿಷ್ಟವಾದ ಹೊನ್ನಾವರ ಕಾಲೇಜು ರಸ್ತೆಯಲ್ಲಿರುವ ರಾಷ್ಟ್ರೀಯ ಹೆದ್ದಾರಿ 66 ಮತ್ತು 206 ಜೋಡಿಸುವ ಸರ್ಕಲ್‌ ಗತಿಯೇನು ? ಪ್ರತಿಭೋದಯದಿಂದ ಕರ್ನಲ್‌ ಹಿಲ್‌ವರೆಗೆ ಮೇಲ್‌ಸೇತುವೆ ನಿರ್ಮಾಣ ಆಗುತ್ತದೆ ಎಂದು ನೆಲದ ಒಳಗೂ, ಹೊರಗೂ ತಂತ್ರಜ್ಞರ ಸಮೀಕ್ಷೆ ನಡೆಯಿತು. ಈಗ ಕೈಬಿಟ್ಟ ಸುದ್ದಿ ಬಂದಿದೆ. ಕೆಲವರು ತಮ್ಮ ಆಸ್ತಿ ಉಳಿಸಿಕೊಳ್ಳುವುದಕ್ಕೆ ಕರ್ನಲ್‌ ಹಿಲ್‌ ಐತಿಹಾಸಿಕ, ಮಾಸ್ತಿಗುಡಿ ಪೌರಾಣಿಕ ಎಂದೆಲ್ಲಾ ಕಥೆಕಟ್ಟುತ್ತಾ ಅರ್ಜಿ ಗುಜರಾಯಿಸುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಐಆರ್‌ಬಿ ಕಂಪನಿ ಏನೂ ಹೇಳುತ್ತಿಲ್ಲ.

ಜೀಯು ಹೊನ್ನಾವರ

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವುSiddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ

Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ

Malpe: ಕಣ್ಮರೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆMalpe: ಕಣ್ಮರೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆ

Malpe: ಕಣ್ಮರೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆ

ಮೂರು ದಿನವಾದರೂ ದಾಖಲಾಗದ ಎಫ್‌ಐಆರ್‌ ಮುಡಾ ದೂರಿನಲ್ಲಿ “ಕಡತ ತಿದ್ದುಪಡಿ’ ಅಂಶವೇ ಇಲ್ಲ!

ಮೂರು ದಿನವಾದರೂ ದಾಖಲಾಗದ ಎಫ್‌ಐಆರ್‌ ಮುಡಾ ದೂರಿನಲ್ಲಿ “ಕಡತ ತಿದ್ದುಪಡಿ’ ಅಂಶವೇ ಇಲ್ಲ!

sringeri-new

Sringeri: ಇಂದು ಸುವರ್ಣ ಭಾರತೀ ಮಹೋತ್ಸವ “ಸ್ತೋತ್ರ ತ್ರಿವೇಣಿ ಮಹಾಸಮರ್ಪಣೆ’


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-dandeli

Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ

Honnavara: ಲಾರಿ ಪಲ್ಟಿಯಾಗಿ ಇಬ್ಬರು ಸಾವು; ಮೂವರಿಗೆ ಗಾಯ

Honnavara: ಲಾರಿ ಪಲ್ಟಿಯಾಗಿ ಇಬ್ಬರು ಸಾವು; ಮೂವರಿಗೆ ಗಾಯ

KPTCL: ಕೆಪಿಸಿಗೆ 30 ಸಾವಿರ ಕೋಟಿ ರೂ. ಬಾಕಿ ಸಂಕಷ್ಟ !

KPTCL: ಕೆಪಿಸಿಗೆ 30 ಸಾವಿರ ಕೋಟಿ ರೂ. ಬಾಕಿ ಸಂಕಷ್ಟ !

7-dandeli

Dandeli: ಗಾಂಜಾ ಅಕ್ರಮ ಮಾರಾಟ ಯತ್ನ; ಮಾಲು ಸಹಿತ ಆರೋಪಿಯ ಬಂಧನ

6-honnavara

Honnavar: ಮೂವರು ಯುವಕರ ಬಲಿ ತೆಗೆದುಕೊಂಡ ಭೀಕರ ರಸ್ತೆ ಅಪಘಾತ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

BCCI

Vijay Hazare Trophy ಕ್ವಾರ್ಟರ್‌ ಫೈನಲ್‌ : ಕರ್ನಾಟಕಕ್ಕೆ ಬರೋಡ ಸವಾಲು

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

1-saaai

Malaysia Open Badminton: ಸಾತ್ವಿಕ್‌-ಚಿರಾಗ್‌ ಜೋಡಿ ಸೆಮಿಗೆ

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವುSiddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.