ಖಾಸಗಿ ಆಸ್ಪತ್ರೆಯಲ್ಲೂ ಉಚಿತ ಚಿಕಿತ್ಸೆ
Team Udayavani, Apr 8, 2020, 5:09 PM IST
ಹೊನ್ನಾವರ: ಆಯುಷ್ಮಾನ್ ಭಾರತ ಮತ್ತು ಆರೋಗ್ಯ ಕರ್ನಾಟಕ ಯೋಜನೆ ಅನ್ವಯ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರ ಪಡೆಯಬಹುದಾದ 291 ವಿಧದ ಚಿಕಿತ್ಸೆಯನ್ನು ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲೂ ಪಡೆಯಬಹುದಾಗಿದೆ.
ಕೋವಿಡ್ 19 ಸಮಸ್ಯೆಯಿಂದಾಗಿ ಕೆಲವು ಸರ್ಕಾರಿ ಆಸ್ಪತ್ರೆಗಳನ್ನು ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಿರುವುದರಿಂದ ಆಯುಷ್ಮಾನ್ ಮತ್ತು ಆರೋಗ್ಯ ಕರ್ನಾಟಕ ಚಿಕಿತ್ಸೆ ಪಡೆಯಲು ಅರ್ಹರಾದವರಿಗೆ ತೊಂದರೆಯಾಗಬಾರದೆಂದು ಈ ತುರ್ತು ಆದೇಶ ಹೊರಡಿಸಲಾಗಿದೆ. ಸಿಜೇರಿಯನ್, ಹರ್ನಿಯಾ ಮೊದಲಾದ 291 ವಿಧದ ಚಿಕಿತ್ಸೆಗಳನ್ನು ತಮ್ಮ ಕಾರ್ಡ್ ಹಾಜರುಪಡಿಸಿ ಪಡೆಯಲು ಅವಕಾಶವಿದೆ. ಹೊನ್ನಾವರದ ಸೇಂಟ್ ಇಗ್ನೇಷಿಯಸ್, ಶಾರದಾ ನರ್ಸಿಂಗ್ ಹೋಂ, ವಿಕೆಬಿ ಬಳಕೂರ ಸ್ಮಾರಕ ಆಸ್ಪತ್ರೆ, ಆರ್.ಎನ್. ಶೆಟ್ಟಿ ಆಸ್ಪತ್ರೆ ಮುಡೇìಶ್ವರ, ಟಿಎಸ್‌ಎಸ್ ಆಸ್ಪತ್ರೆ ಶಿರಸಿ, ನಾಗಮಂಗಲ ಆಸ್ಪತ್ರೆ ಕಾರವಾರ ಸಹಿತ 10 ಆಸ್ಪತ್ರೆಗಳು ನೋಂದಾಯಿಸಿಕೊಂಡಿದ್ದು ಇನ್ನೂ ಕೆಲವು ಆಸ್ಪತ್ರೆಗಳು ನೋಂದಾಯಿಸಿಕೊಳ್ಳಬೇಕಾಗಿವೆ. ಇದರಿಂದಾಗಿ ಮಧ್ಯಮ ಸ್ಥರದ ಎಲ್ಲ ಚಿಕಿತ್ಸೆಗಳನ್ನು ನೇರ ಇಲ್ಲಿ ಪಡೆಯಬಹುದು. ಇದರಿಂದ ಉತ್ತರ ಕನ್ನಡದ ಜನತೆಗೆ ಉಪಯೋಗವಾಗಲಿದೆ. ಆರೋಗ್ಯ ಮಿತ್ರ ವೆಂಕಟೇಶ ಪಟಗಾರ ಮೊ: 85538 08646 ಇವರಿಂದ ವಿವರ ಪಡೆಯಬಹುದು.
ಜೀಯು ಹೊನ್ನಾವರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Sullia: ಮಗುವಿಗೆ ಸುಟ್ಟು ಗಾಯ ಮಾಡಿದ್ದ ತಾಯಿ; ಆರೋಪ ಸಾಬೀತು; ಶಿಕ್ಷೆ ಪ್ರಕಟ
Naxals Surrender: ಶರಣಾದ ನಕ್ಸಲರ ಪ್ರಕರಣಗಳಿಗೆ ತ್ವರಿತ ನ್ಯಾಯಾಲಯ: ಸಿಎಂ ಸಿದ್ದರಾಮಯ್ಯ
Dinner Politics: ಊಟ, ಅಜೆಂಡಾ ನಮ್ಮದು, ಬೇರೆಯವರಿಗೆ ಆತಂಕ ಏಕೆ?: ಸತೀಶ್ ಜಾರಕಿಹೊಳಿ
CLP Meeting: ಜ.13ರಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.