ನಾನು ಯಾವುದೇ ಹುದ್ದೆಗೆ ಅಂಟಿಕೊಂಡವನಲ್ಲ: ಭೀಮಣ್ಣ ನಾಯ್ಕ
Team Udayavani, Apr 14, 2022, 3:27 PM IST
ಶಿರಸಿ: ನಾನು ಯಾವುದೇ ಹುದ್ದೆಗೆ ಅಂಟಿಕೊಂಡವನಲ್ಲ. ಪಕ್ಷದಲ್ಲಿ ಕೆಲಸ ಮಾಡಿದವರನ್ನು ಅಂಥ ಹುದ್ದೆಗಳಲ್ಲಿ ನೋಡುವಂಥವನು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ಪ್ರತಿಪಾದಿಸಿದ್ದಾರೆ.
‘ಉದಯವಾಣಿ’ಯೊಂದಿದೆ ಮಾತನಾಡಿದ ಅವರು, ಪಕ್ಷದಲ್ಲಿ ಸಾಮಾಜಿಕ ನ್ಯಾಯ ನೋಡಿ ಹುದ್ದೆ ಕೊಡಬೇಕು. ಜಿಲ್ಲಾ ವರಿಷ್ಠರ, ಹಿರಿಯರ, ಪದಾಧಿಕಾರಿಗಳ ಜೊತೆ ಸಮಾಲೋಚಿಸಿ ಎಲ್ಲ ವರ್ಗದವರ ವಿಶ್ವಾಸ ಪಡೆದು ಕೆಲಸ ಮಾಡಬೇಕು. ಪಕ್ಷದಲ್ಲಿ ಕೆಲಸ ಮಾಡಿದ ಹಿರಿಯರಿಗೆ, ಸಕ್ರಿಯರಿಗೆ ಹುದ್ದೆ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರಿಗೆ ಪತ್ರ ಬರೆಯುವುದಾಗಿ ಹೇಳಿದರು.
ನನಗೆ ನನ್ನನ್ನೂ ಕೇಳದೇ ಕೆಪಿಸಿಸಿ ಕಾರ್ಯದರ್ಶಿ ಹುದ್ದೆ ನೀಡಿದ್ದಾರೆ. ಇದರ ಬಗ್ಗೆ ಅಸಮಧಾನ ಇಲ್ಲ. ಆದರೆ, ಕೆಲಸ ಮಾಡಿದ ಬ್ರಾಹ್ಮಣ, ಮರಾಠ ವರ್ಗಕ್ಕೂ ನ್ಯಾಯ ಕೊಡಬೇಕಿತ್ತು. ಕೇವಲ ಒಂದೇ ಕಡೆ ನೀಡುವುದು ಸರಿಯಲ್ಲ ಎಂದರು.
ನಾನು ಜನ ಸಾಮಾನ್ಯರ ಜೊತೆ ಬೆಳೆದವ. ಜಿಲ್ಲಾ ಪಂಚಾಯತ್‍ನಲ್ಲೂ ಕೆಲಸ ಮಾಡಿದ್ದೇನೆ. ಪಕ್ಷದ ಹುದ್ದೆ ಇರಲಿ, ಬಿಡಲಿ ಸದಾ ಜನರ ಜೊತೆ ಕೆಲಸ ಮಾಡುವೆ. ನಾನು ಈ ಜಾಗದಲ್ಲಿ ಕುಳಿತು ಕೊಳ್ಳುವದಕ್ಕಿಂತ ಇನ್ನೊಬ್ಬನ್ನು ನೋಡಲು ಆಸೆ ಪಡುವೆ, ಸ್ವಾರ್ಥದ ರಾಜಕಾರಣಿ ನಾನಲ್ಲ ಎಂದರು.
ಇದನ್ನೂ ಓದಿ:ಬ್ಯಾರಿಗೇಟ್ ಹತ್ತಿ ಪೊಲೀಸರ ಮೇಲೆ ಬಿದ್ದ ಡಿ.ಕೆ. ಶಿವಕುಮಾರ್
ಪಕ್ಷದ ಬೆಳವಣಿಗೆಗೆ, ಕಾರ್ಯಕರ್ತರ ಪ್ರಶ್ನೆಗೆ ಉತ್ತರ ಕೊಡುವಂತಿದ್ದರೆ ಎಲ್ಲರೂ ಕೈ ಜೋಡಿಸುತ್ತಾರೆ. ಜಿಲ್ಲೆಯಲ್ಲಿ ಮಾಜಿ ಶಾಸಕರು, ವಿಧಾನ ಪರಿಷತ್ ಸದಸ್ಯರಾಗಿದ್ದರು, ವಿವಿಧ ಹಂತದ ಜನಪ್ರತಿನಿಧಿಗಳೂ ಇದ್ದಾರೆ. ಎಲ್ಲರ ವಿಶ್ವಾಸ ಪಡೆದು ನೇಮಕಾತಿ ಆದರೆ ಪಕ್ಷದ ಬಲವರ್ಧನೆ ಹೆಚ್ಚು ಆಗುತ್ತದೆ ಎಂದರು.
ಬದಲಾವಣೆ V/S ಮುಂದುವರಿಕೆ!
ಜಿಲ್ಲಾ ಕಾಂಗ್ರೆಸ್ ನ್ನು ಕಳೆದ ಮೂರು ಅವಧಿಗೂ ಹೆಚ್ಚುಕಾಲ ಸಕ್ರೀಯವಾಗಿ ಮುನ್ನಡೆಸಿಕೊಂಡು ಬಂದ ಜಿಲ್ಲಾ ಅಧ್ಯಕ್ಷ ಭೀಮಣ್ಣ ಅವರ ಬದಲಿಸಿ ಆ ಸ್ಥಾನಕ್ಕೆ ವೆಂಕಟೇಶ ಹೆಗಡೆ ಹೊಸಬಾಳೆ, ಸಾಯಿ ಗಾಂವಕರ್, ಶಿವಾನಂದ ಕಡತೋಕ, ರವೀಂದ್ರ ನಾಯ್ಕ ಹೆಸರು ಪ್ರಸ್ತಾಪ ಇದೆ. ಇನ್ನೊಂದು ಮೂಲದ ಪ್ರಕಾರ ಬರಲಿರುವುದು ತಾ.ಪಂ., ಜಿ.ಪಂ, ಶಾಸನ ಸಭೆಗಳ ಚುನಾವಣೆ ಆಗಿರುವದರಿಂದ ಅನುಭವಿ ಭೀಮಣ್ಣ ಅವರನ್ನೇ ಮುಂದುವರಿಸುತ್ತಾರೆ ಎಂಬ ಮಾಹಿತಿ ಕೂಡ ಇದೆ. ಆದರೆ, ರಾಜ್ಯ ಕಾರ್ಯದರ್ಶಿ ನೀಡಿದ್ದೇ ಬದಲಾಯಿಸಲು ಎಂಬ ಮಾತೂ ಕೇಳಿ ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!
ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ
Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ
Ankola: ರಕ್ತದೊತ್ತಡ ಕುಸಿದ ಪರಿಣಾಮ ಕಬಡ್ಡಿ ಆಡುವಾಗಲೇ ಕ್ರೀಡಾಳು ಸಾವು
Murdeshwar: ನಾಲ್ವರು ವಿದ್ಯಾರ್ಥಿನಿಯರು ಸಮುದ್ರಪಾಲು; 1 ಶವ ಪತ್ತೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BJP Congress;ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರಿಗೆ ಪ್ರತಿದೂರು
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ
Yakshagana;ಕನ್ನಡ ಭಾಷೆಯ ಮೌಲ್ಯವನ್ನು ಉಳಿಸುವಲ್ಲಿ ಸಾರ್ವಕಾಲಿಕ ಕೊಡುಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.