ವಿಕಲಚೇತನರಿಗಿನ್ನು ತಾಲೂಕಲ್ಲೇ ಐಡಿ
Team Udayavani, Oct 16, 2019, 2:46 PM IST
ಶಿರಸಿ: ವಿಕಲಚೇತನರ ಗುರುತಿನ ಚೀಟಿ ನೀಡಿಕೆ ಸಂಬಂಧ ಇನ್ನು ಮುಂದೆ ತಾಲೂಕು ವೈದ್ಯಾಧಿಕಾರಿಗಳೇ ದೃಢೀಕರಿಸಿ ಯುನಿಕ್ ಐಡಿ ನೀಡುವಂತೆ ಹತ್ತು ದಿನಗಳಲ್ಲಿ ಸರಕಾರದ ಆದೇಶ ಬರಲಿದೆ ಎಂದು ರಾಜ್ಯ ವಿಕಲಚೇತನರ ಸಬಲೀಕರಣ ಇಲಾಖೆ ನಿರ್ದೇಶಕಿ ಕೆ.ಲೀಲಾವತಿ ತಿಳಿಸಿದರು.
ಅವರು ನಗರದ ತಾಪಂನಲ್ಲಿ ವಿಕಲಚೇತನರ ಜೊತೆ ಸಮಾಲೋಚನೆ ನಡಸಿ, ಈವರೆಗೆ ಗುರುತಿನ ಚೀಟಿ ನೀಡುವ ಅನುಮತಿ ಜಿಲ್ಲಾ ಕೇಂದ್ರ ವೈದ್ಯಾಧಿಕಾರಿಗಳಿಂದ ಆಗಬೇಕಿತ್ತು. ಆದರೆ, ಇದರಿಂದ ಅನೇಕ ಗುಡ್ಡಗಾಡು ಜಿಲ್ಲೆಗಳಿಂದ ಸಮಸ್ಯೆ ಆಗುತ್ತಿದ್ದವು. ಇದನ್ನು ತಪ್ಪಿಸಲು ತಾಲೂಕು ಹಂತದ ವೈದ್ಯರಿಗೇ ಈ ಅವಕಾಶ ನೀಡುವ ಬಗ್ಗೆ ಸರಕಾರ ಚಿಂತಿಸಿದೆ ಎಂದರು.
ರಾಜ್ಯದಲ್ಲಿ ಯುನಿಕ್ ಐಡಿ 9,72,305 ಬುದ್ದಿಮಾಂದ್ಯ ಹಾಗೂ ಅಂಗವಿಕಲರಿಗೆ ಕೊಡಬೇಕಿತ್ತು. ಆದರೆ, ಈವರೆಗೆ ಆಗಿದ್ದು ಕೇವಲ 53 ಸಾವಿರ ಜನರಿಗೆ. ಈ ಪ್ರಕ್ರಿಯೆ ವೇಗಗೊಳಿಸಲು ಸರಕಾರ ತಾಲೂಕು ಹಂತದಲ್ಲಿ ದಿನಕ್ಕೆ ಕನಿಷ್ಠ 20 ಜನರಿಗಾದರೂ ಮಾನ್ಯತೆ ಮಾಡಬೇಕು ಎಂದು ಸೂಚಿಸಿದೆ ಎಂದ ಲೀಲಾವತಿ, ಅಂತಾರಾಜ್ಯದ ಗಡಿಗಳಲ್ಲಿ ಎರಡೂ ರಾಜ್ಯದ ಗುರುತಿನ ಚೀಟಿ ಪಡೆದ ಉದಾಹರಣೆಗಳೂ ಇವೆ. ಈ ಕಾರಣದಿಂದ ಎಲ್ಲೇ ಇದ್ದರೂ ಒಂದೇ ಯುನಿಕ್ ಐಡಿ ಇರಬೇಕು ಎಂದು ಕೇಂದ್ರ ಸರಕಾರ ಸೂಚಿಸಿದೆ ಎಂದರು.
ಸ್ಥಳೀಯ ಸಂಸ್ಥೆಗಳು ಮೀಸಲಿಡಬೇಕಾದ ವಿಕಲಚೇತನರ ಅನುದಾನದ ಮೊತ್ತವನ್ನು ಸದ್ಬಳಕೆ ಮಾಡಿಕೊಳ್ಳಲು ಹಗೂ ಆಯಾ ವರ್ಷದ ಹಣ ಆಯಾ ವರ್ಷವೇ ಬಳಸಲು ಗ್ರಾಮೀಣಾಭಿವೃದ್ಧಿ ಇಲಾಖೆ ಜೊತೆ ಸಮಾಲೋಚನೆ ನಡೆಸುತ್ತಿರುವುದಾಗಿ ಕೂಡ ತಿಳಿಸಿದರು.
ಸರಕಾರದ ಸೂಚನೆ ಪ್ರಕಾರ 21 ಬಗೆಯ ಅಂಗವೈಕಲ್ಯತೆಯನ್ನು ಆಯಾ ಪ್ರಮಾಣದಲ್ಲಿ ಸೂಚಿಸಲಾಗಿದೆ. ಪಾರ್ಶ್ವವಾಯು, ಅರ್ಧಾಂಗವಾತ ಇದರೊಳಗೆ ಸೇರಿಲ್ಲ ಎಂದ ಅವರು, ಬಿಪಿಎಲ್ ಕಾರ್ಡ್ ಸೌಲಭ್ಯದಾರರಿಗೆ ಸಿಗುವ ವಿಶೇಷ ಸವಲತ್ತು ಎಪಿಎಲ್ ಕಾರ್ಡ್ ಉಳ್ಳವರರಿಗೂ ಸಿಗುವಂತೆ ಆಗಬೇಕು. ವಿಲಕಚೇತನ ಮಕ್ಕಳನ್ನು ಸ್ವತಂತ್ರವಾಗಿಸುವ ಪ್ರಯತ್ನ ಮಾಡಬೇಕು. ಯಾರಾದರೂ ಪ್ರಸ್ತಾವನೆ ಸಲ್ಲಿಸಿದರೆ ಖಂಡಿತ ಸರಕಾರಕ್ಕೆ ಈ ಬಗ್ಗೆ ಶಿಫಾರಸ್ಸೂ ಮಾಡುವುದಾಗಿ ಹೇಳಿದರು.
ಉತ್ತರ ಕನ್ನಡ ಸೇರಿದಂತೆ ಹಲವಡೆ ಧೂಳು ಹಿಡಿದ ತ್ರಿಚಕ್ರ ಗಾಡಿಗಳನ್ನು ತಕ್ಷಣ ಅರ್ಹ ಫಲಾನುಭವಿಗಳಿಗೆ ಹಸ್ತಾಂತರಿಸಲು ಕೂಡ ಸೂಚನೆ ನೀಡುವುದಾಗಿ ತಿಳಿಸಿದರು.
ಇಲಾಖೆ ಉಪ ನಿರ್ದೇಶಕ ಪ್ರವೀಣ ಪಾಟೀಲ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ರಾಜೇಂದ್ರ ಬೇಕಲ್, ತಹಶೀಲ್ದಾರ್ ಎಂ.ಆರ್. ಕುಲಕರ್ಣಿ, ತಾಲೂಕು ಅಧಿಕಾರಿ ಡಿ.ಎಂ. ಭಟ್ಟ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Dandeli: ವಿದ್ಯುತ್ ಕಂಬದ ಜಿಓಎಸ್ ಕಳವು ಮಾಡಿದ್ದ ಆರೋಪಿ;ಮಾಲು ಸಹಿತ ವಶಕ್ಕೆ ಪಡೆದ ಪೊಲೀಸರು
Gujjar Kere: ಕೆರೆ ಪರಿಸರದ ರಕ್ಷಣೆಗೆ ಆದ್ಯತೆ ಅಗತ್ಯ; ತಹಶೀಲ್ದಾರ್‌ಗೆ ಮರು ಮನವಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.