ವಿದ್ಯುತ್ ಸರಬರಾಜು ಸುಧಾರಣೆಗೆ ಹೆಚ್ಚು ಪ್ರಾಮುಖ್ಯತೆ ಸಿಗಬೇಕು: ಸ್ಪೀಕರ್ ಕಾಗೇರಿ
Team Udayavani, Jul 1, 2021, 9:31 AM IST
ಶಿರಸಿ: ರಾಜ್ಯಕ್ಕೆ ಹೆಚ್ಚು ವಿದ್ಯುತ್ ಕೊಟ್ಟ ಜಿಲ್ಲೆ ಉತ್ತರ ಕನ್ನಡ. ಇದೀಗ ರಾಜ್ಯದಲ್ಲಿ ವಿದ್ಯುತ್ ಸರಬರಾಜು ಸುಧಾರಣೆಗೆ ಪ್ರಾಮುಖ್ಯತೆ ಹೆಚ್ಚು ಸಿಗಬೇಕಾಗಿದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಬಹುಕಾಲದ ಬೇಡಿಕೆ ಅತ್ಯಂತ ಮಹತ್ವದ ಹೆಸ್ಕಾಂ ಶಿರಸಿ ವೃತ್ತ ಹಾಗೂ ವಿಭಾಗೀಯ ಕಚೇರಿಗಳ ನೂತನ ಕಟ್ಟಡದ ಭೂಮಿ ಪೂಜೆಯನ್ನು ನೆರವೇರಿಸಿ ಅವರು ಮಾತನಾಡಿದರು.
ವಿದ್ಯುತ್ ಸುಧಾರಣೆಗೆ ಎಷ್ಟೆಲ್ಲ ಸೌಲಭ್ಯ ಸಿಗಬೇಕಿತ್ತೋ ಅಷ್ಟು ಸಿಕ್ಕಿಲ್ಲ. ನಮಗೆ ಬೇಕಾದ ಗ್ರಿಡ್ ಸೇರಿದಂತೆ ವಿವಿಧ ಸೌಲಭ್ಯ, ಟಿಸಿ, ಬ್ರೆಕರ್ ತನಕ ದೀನದಯಾಳು ವಿದ್ಯುತ್ತೀಕರಣ ಬಂದಿದ್ದರಿಂದ ನಿರ್ವಹಣೆ ಆಗುತ್ತಿದೆ ಎಂದರು. ಅಧಿಕಾರಿಗಳಿಗೂ ಈ ಗಂಭೀರತೆ ಬರಬೇಕು. ಅದನ್ನು ಮಾಡುವ ಇಚ್ಚಾ ಶಕ್ತಿರೂಢಿಸಬೇಕು.
ಬನವಾಸಿ, ಹತ್ತರಗಿ, ಕಾನಸೂರು ಮುಂತಾದೆಡೆ ಸಮಸ್ಯೆ ಬಗೆ ಹರಿಸಬೇಕು. ಜನತೆಗೆ ಕೊಡಬೇಕಾದ ಇಚ್ಚಾ ಶಕ್ತಿ ನೀಡಬೇಕು. ವಿದ್ಯುತ್ ಉತ್ಪಾದನೆ ಹೆಚ್ಚಿದೆ. ಆದರೆ, ವಿದ್ಯುತ್ ಪ್ರಸರಣದ ಹೊಂದಾಣಿಕೆ ಕೊರತೆ ಇದೆ ಎಂದರು.
ಇದನ್ನೂ ಓದಿ: ಕಷ್ಟಕಾಲದಲ್ಲೂ ವೃತ್ತಿಪರತೆಯನ್ನು ಎತ್ತಿಹಿಡಿದ ಪತ್ರಕರ್ತರಿಗೆ ಕೋಟಿ ಕೋಟಿ ನಮನಗಳು: ಎಚ್ ಡಿಕೆ
ಬೇರೆ ಬೇರೆ ಬಾಡಿಗೆ ಕಟ್ಟಡದಲ್ಲಿ ಇದ್ದ ಕಚೇರಿಗಳು ಇನ್ನು ಮುಂದೆ ಒಂದೇ ಕಡೆ ಬರಲಿದೆ. ವಸತಿ ಗೃಹ ತೆಗೆದು ಹೊಸ ಕಟ್ಟಡ ಬರುತ್ತಿದೆ ಎಂದರು. ವಿಭಾಗೀಯ ಕಚೇರಿ ದೂರ ಇದ್ದರೆ ಸಮಸ್ಯೆ ಆಗುತ್ತಿದ್ದವು. ಒಂದೇ ಕಡೆ ಈಗ ಈ ಸಂಕೀರ್ಣ ಬರಲಿದೆ. 4.12 ಕೋಟಿ ರೂ. ಕಟ್ಟಡ ಇದಾಗಿದ್ದು 7500 ಚದರಡಿ ಕಟ್ಟಡ ನಿರ್ಮಾಣ ಆಗಲಿದೆ. ಮೂರು ಅಂತಸ್ತಿನ ಕಟ್ಟಡ ಇದಾಗಿದೆ ಎಂದರು.
ಮೊದಲು ಶ್ರೀಮಂತರಿಗೆ ಮಾತ್ರ ವಿದ್ಯುತ್ ಆಗಿತ್ತು. ಈಗ ಹಾಗಲ್ಲ. ಕೇಂದ್ರ ರಾಜ್ಯ ಸರಕಾರದ ಕಾರಣದಿಂದ ಮನೆಮನೆಗೂ ವಿದ್ಯುತ್ ಬಂದಿದೆ. ಈಗ ವಿದ್ಯುತ್ ಎಲ್ಲವಕ್ಕೂ ಬೇಕು. ವಿದ್ಯುತ್ ಕೊಡಲು ವ್ಯವಸ್ಥೆ ಸರಿಯಾಗಿ ರೂಪಿಸಿಕೊಳ್ಳಬೇಕು.
ಇದನ್ನೂ ಓದಿ: ಅಂದು ಸೆಕ್ಯೂರಿಟಿ ಗಾರ್ಡ್ ಆಗಿದ್ದ ವ್ಯಕ್ತಿ; ಇಂದು ತಿಂಗಳಿಗೆ 2 ಲಕ್ಷ ಗಳಿಸುವ ಚಹಾ ವ್ಯಾಪಾರಿ
ಹೆಸ್ಕಾಂ ಅಧೀಕ್ಷಕ ಅಭಿಯಂತರ ದೀಪಕ ಕಾಮತ್ ಮಾತನಾಡಿ, 19966ರಲ್ಲಿ ಜಿಲ್ಲಾ ಮಟ್ಟದ ಒಂದೇ ಡಿವಿಸನ್ ಇತ್ತು. 1990ರ ನಂತರ ಕಾರವಾರದಲ್ಲಿ ಸಬ್ ಡಿವಿಸನ್ ಆಯಿತು. ನಂತರ ಅಧೀಕ್ಷಕ ಅಭಿಯಂತರ ಕಚೇರಿ ಕೂಡ ನಡೆಸಲಾಗುತ್ತಿದೆ. ಸ್ವಂತ ಕಟ್ಟಡ 2014ರ ನಂತರ ಕಟ್ಟಡ ಪ್ರಸ್ತಾವನೆ ಇತ್ತು. 13 ವರ್ಷದ ನಂತರ ಕಾಗೇರಿ ಅವರ ಪ್ರಯತ್ನದಿಂದ ಜಾಗ ಬರುವ ಮೊದಲೇ ಟೆಂಡರ್ ಆಯಿತು. ಬಹುಕಾಲದ ನಂತರ ಬಂದ ಕಾಮಗಾರಿಯನ್ನು ನಮ್ಮದು ಎಂದು ಭಾವಿಸಿ ನಡೆಸಬೇಕು ಎಂದರು.
ಅಧ್ಯಕ್ಷ ಗಣಪತಿ ನಾಯ್ಕ, ಉಪಾಧ್ಯಕ್ಷೆ ವೀಣಾ ಶೆಟ್ಟಿ, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ನಂದನ ಸಾಗರ, ವಿಜಯ ರಾಚೋಟಿ ಇತರರು ಇದ್ದರು. ಜ್ಯೋತಿ ಪ್ರಾರ್ಥಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Perth Test: ಜೈಸ್ವಾಲ್ ಶತಕದಾಟ; ರಾಹುಲ್ ಜತೆ ದಾಖಲೆಯ ಜೊತೆಯಾಟ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.