Karwar ನೌಕಾ ನೆಲೆಯಲ್ಲಿ ನಿರ್ಮಿಸಿದ ಬಹುಮಹಡಿಯ 600 ಫ್ಲಾಟ್ಸ್ ಉದ್ಘಾಟನೆ
Team Udayavani, Aug 21, 2023, 9:48 PM IST
ಕಾರವಾರ: ನೌಕಾನೆಲೆ ಐಎನ್ ಎಸ್ ಕದಂಬ ಪ್ರದೇಶ ವ್ಯಾಪ್ತಿಯ ಅಮದಳ್ಳಿ ಮತ್ತು ಅರ್ಗಾ ನೇವಲ್ ಬೇಸ್‌ನಲ್ಲಿ ತಲಾ 600 ಫ್ಲಾಟ್‌ಗಳನ್ನು ಒಳಗೊಂಡ ಎರಡು ಬಹುಮಹಡಿ ವಸತಿ ಕಟ್ಟಡಗಳನ್ನು ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್.ಹರಿ ಕುಮಾರ್ ಉದ್ಘಾಟಿಸಿದರು.
ಇಲ್ಲಿನ ನೌಕಾನೆಲೆಯ ಆವರಣದಲ್ಲಿ ಏರ್ಪಟ್ಟ ಸಮಾರಂಭದಲ್ಲಿ ಅವರು ವಸತಿ ಸಂಕೀರ್ಣಗಳನ್ನು ನೇವಿ ಸೇಲರ್ಸ ಮತ್ತು ಅವರ ಕುಟುಂಬದವರಿಗೆ ಅರ್ಪಿಸಿ ಮಾತನಾಡಿದರು. ಈ ಕಾರ್ಯಕ್ರಮಕ್ಕೆ ನೌಕಾ ಸಿಬ್ಬಂದಿ ಮತ್ತು ರಕ್ಷಣಾ ನಾಗರಿಕರ ಕುಟುಂಬಗಳು ಸಾಕ್ಷಿಯಾಗಿದ್ದವು.
ಬಹುಮಹಡಿಯ 10 ವಸತಿ ಗೋಪುರಗಳನ್ನು ಐಜಿಬಿಸಿ ಗೋಲ್ಡ್ ರೇಟಿಂಗ್‌ಗೆ ಅನುಗುಣವಾಗಿ ಆಧುನಿಕ ಸೌಕರ್ಯಗಳ ಸಹಿತ ನಿರ್ಮಿಸಲಾಗಿದೆ. ಸುಧಾರಿತ ಒಳಾಂಗಣಗಳ ಸಹಿತ ವಸತಿ ಸಂಕೀರ್ಣಗಳನ್ನು ರೂಪಿಸಲಾಗಿದೆ ಎಂದು ಅವರು ನುಡಿದರು.
ಈ ಮೂಲಸೌಕರ್ಯ ಹಾಗೂ ಅಭಿವೃದ್ಧಿ ಕಾರ್ಯಗಳು ಸೀಬರ್ಡ ನೌಕಾನೆಲೆಯ ಎರಡನೇ ಹಂತದ ಯೋಜನೆಯ ಎ ಭಾಗದ ಕಾರ್ಯಗಳಾಗಿವೆ. ಈ ವಸತಿ ಸಂಕೀರ್ಣಗಳಲ್ಲಿ ಸುಮಾರು 10,000 ನೇವಿ ಸೇಲರ್ಸ ಮತ್ತು ನೇವಿ ಸಿಬ್ಬಂದಿ ಹಾಗೂ ಅವರ ಕುಟುಂಬಗಳ ವಾಸಕ್ಕೆ ನಿರ್ಮಿಸಲಾಗಿದೆ ಎಂದು ನೇವಿ ಮುಖ್ಯಸ್ಥರು ನುಡಿದರು.
ಹತ್ತು ಸಾವಿರ ಕುಟುಂಬಗಳ ವಾಸಸ್ಥಾನವನ್ನು ನೌಕಾನೆಲೆ ಹೊಂದಿದೆ. ಈ ಬಹುಮಹಡಿ ಕಟ್ಟಡ ನಿರ್ಮಾಣ ದಿಂದ
ಹತ್ತು ಹಲವು ಅಭಿವೃದ್ಧಿಗೆ ಕಾರಣವಾಗಿದೆ. ಹಲವು ನೇರ ಮತ್ತು ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಯಾಗಿವೆ. ಯೋಜನೆಯು ಆತ್ಮನಿರ್ಭರ ಭಾರತದೊಂದಿಗೆ ಹೊಲಿಸಬಹುದು ಎಂದರು. ದೇಶೀಯವಾಗಿ ಶೇ.90 ಕ್ಕಿಂತ ಹೆಚ್ಚಿನ ವಸ್ತುಗಳನ್ನು ನಿರ್ಮಾಣದಲ್ಲಿ ಬಳಸಲಾಗಿದೆ.
ಉನ್ನತ ಗುಣಮಟ್ಟದ ರಕ್ಷಣಾ ಮೂಲಸೌಕರ್ಯಗಳು ಪ್ರಾಜೆಕ್ಟ್ ಸೀಬರ್ಡ್ ನಲ್ಲಿ ಆಗುತ್ತಿರುವುದನ್ನು ಈ ನಿಟ್ಟಿನಲ್ಲಿ ನಡೆದ ಪ್ರಯತ್ನವನ್ನು ನೌಕಾದಳ ಮುಖ್ಯಸ್ಥ ಹರಿ ಕುಮಾರ್ ಶ್ಲಾಘಿಸಿದರು.ಇಲ್ಲಿ ಆಗಬೇಕಾದ ಉಳಿದ ಸೌಲಭ್ಯಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಅವರು ಸಂಬಂಧಿತರಿಗೆ ಸೂಚಿಸಿದರು.
ಆರಂಭದಲ್ಲಿ ನೇವಿ ಮುಖ್ಯಸ್ಥ ಹರಿ ಕುಮಾರ್ ಅವರನ್ನು ಕರ್ನಾಟಕ ನೇವಿ ಕಮಾಂಡರ್ ಸ್ವಾಗತಿಸಿದರು. ನೇವಿಯ ವಿವಿಧ ವಿಭಾಗದ ಮುಖ್ಯಸ್ಥರು,ಹಿರಿಯ ನೇವಿ ಅಧಿಕಾರಿಗಳು, ಸೀಬರ್ಡ ನೌಕಾನೆಲೆ ಸಿಬ್ಬಂದಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Dandeli: ವಿದ್ಯುತ್ ಕಂಬದ ಜಿಓಎಸ್ ಕಳವು ಮಾಡಿದ್ದ ಆರೋಪಿ;ಮಾಲು ಸಹಿತ ವಶಕ್ಕೆ ಪಡೆದ ಪೊಲೀಸರು
Gujjar Kere: ಕೆರೆ ಪರಿಸರದ ರಕ್ಷಣೆಗೆ ಆದ್ಯತೆ ಅಗತ್ಯ; ತಹಶೀಲ್ದಾರ್‌ಗೆ ಮರು ಮನವಿ
Dandeli:ತುಂಡಾಗಿ ಬಿದ್ದಿದ್ದ ಕೇಬಲ್ ವೈರ್ ಸುತ್ತಿ ದ್ವಿಚಕ್ರ ವಾಹನ ಸ್ಕಿಡ್: ಸವಾರನಿಗೆ ಗಾಯ
Dandeli; ಆತ್ಮಹ*ತ್ಯೆಗೆ ಯತ್ನಿಸಿದ ವೃದ್ಧನ ರಕ್ಷಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.