ಆರೋಗ್ಯ ಸೇವೆಯ ಮೂಲಕ ಆರೋಗ್ಯ ಭಾರತಿ ಸಂಘಟನೆಯನ್ನು ಕಟ್ಟಿ ಬೆಳೆಸೋಣ- ಸುಧಾಕರ ಶೆಟ್ಟಿ
Team Udayavani, Dec 13, 2021, 1:59 PM IST
ದಾಂಡೇಲಿ: ಎಲ್ಲದಕ್ಕೂ ಆರೋಗ್ಯವೆ ಮೂಲ. ಆರೋಗ್ಯವಿದ್ದಲ್ಲಿ ಸುಖ, ಶಾತಿ, ಸಮೃದ್ದಿ ನೆಲೆಗೊಳ್ಳಲು ಸಾಧ್ಯವಿದೆ. ಸಮಾಜದಲ್ಲಿ ಆರೋಗ್ಯ ಜಾಗೃತಿಯ ಜೊತೆಗೆ ಸಂಕಷ್ಟದ ಸಂದರ್ಭದಲ್ಲಿ ಆರೋಗ್ಯ ಸೇವೆಯನ್ನು ನೀಡುವ ಮಹತ್ವದ ಸಂಕಲ್ಪದಡಿ ದಾಂಡೇಲಿ-ಜೋಯಿಡಾ ತಾಲೂಕು ಮಟ್ಟದ ಆರೋಗ್ಯ ಭಾರತಿ ಸಂಘಟನೆಯನ್ನು ಜನಸ್ನೇಹಿ ಮತ್ತು ಆರೋಗ್ಯ ಸಂರಕ್ಷಣಾ ಸಂಘಟನೆಯಾಗಿ ಕಟ್ಟಿ ಬೆಳೆಸೋಣ ಎಂದು ದಾಂಡೇಲಿ – ಜೋಯಿಡಾ ತಾಲೂಕು ಮಟ್ಟದ ಆರೋಗ್ಯ ಭಾರತಿ ಸಂಘಟನೆಯ ಅಧ್ಯಕ್ಷರಾದ ಸುಧಾಕರ ಶೆಟ್ಟಿಯವರು ಹೇಳಿದರು.
ಅವರು ನಗರದ ರೋಟರಿ ಶಾಲೆಯ ಸಭಾಭವನದಲ್ಲಿ ನೂತನವಾಗಿ ರಚನೆಯಾದ ದಾಂಡೇಲಿ – ಜೋಯಿಡಾ ತಾಲೂಕು ಮಟ್ಟದ ಆರೋಗ್ಯ ಭಾರತಿ ಸಂಘಟನೆಯ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು. ಆರೋಗ್ಯ ಸೇವೆ ನೀಡಲು ಆರೋಗ್ಯ ಭಾರತಿ ಸಂಘಟನಯೆ ಮೂಲಕ ಮಹತ್ವದ ಅವಕಾಶವಿದೆ. ಆರೋಗ್ಯ ಸೇವೆ ನಿಜವಾಗಿಯೂ ಪುಣ್ಯದ ಸೇವೆಯಾಗಿದ್ದು, ಸೇವೆ ಎಂಬ ಯಜ್ಞದಲ್ಲಿ ನಮ್ಮನ್ನು ನಾವು ಸಮರ್ಪಣಾಭಾವದಿಂದ ಸಮರ್ಪಿಸಿಕೊಳ್ಳುವುದರ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಪ್ರಾಂಜಲ ಮನಸ್ಸಿನಿಂದ ಶ್ರಮಿಸೋಣ ಎಂದು ಕರೆ ನೀಡಿ, ಎಲ್ಲರ ಸಹಕಾರ ಕೋರಿದರು.
ಆರೋಗ್ಯ ಭಾರತಿ ಸಂಘಟನೆಯ ನೂತನ ಘಟಕವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ನಗರದ ಶೇಖರ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಶೇಖರ ಅವರು ಆರೋಗ್ಯ ಭಾರತಿ ಸಂಘಟನೆಯ ದ್ಯೇಯೋದ್ದೇಶಗಳು ಸಾಮಾಜಿಕ ಕಾಳಜಿಯನ್ನು ಸಾದರಪಡಿಸುತ್ತಿದೆ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಹಾಗೂ ಮುನ್ನೆಚ್ಚರಿಕೆ ಅಗತ್ಯ. ಈ ದಿಸೆಯಲ್ಲಿ ನೂತನ ಆರೋಗ್ಯ ಭಾರತಿ ಘಟಕ ದಾಂಡೇಲಿ ಮತ್ತು ಜೋಯಿಡಾ ತಾಲೂಕಿನಲ್ಲಿ ಆರೋಗ್ಯ ಸೇವೆಯ ಮೂಲಕ ಜನಮನದ ಸಂಘಟನೆಯಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಹಿರಿಯರಾದ ವಾಸುದೇವ ಪ್ರಭು ಅವರು ಆರೋಗ್ಯ ಸೇವೆ ನೀಡುವಂತಹ ಪುಣ್ಯದ ಕಾರ್ಯ ಇನ್ನೊಂದಿಲ್ಲ. ಪವಿತ್ರ ಕಾರ್ಯಕ್ಕಾಗಿಯೆ ಆರೋಗ್ಯ ಭಾರತಿ ಜನ್ಮತೆಳೆದಿದೆ ಎಂದರು. ಭಜರಂಗ ದಳದ ಅಖಿಲ ಭಾರತೀಯ ಸಹ ಸಂಘಟನಾ ಕಾರ್ಯದರ್ಶಿ ಸೂರ್ಯನಾರಾಯಣ, ಆರ್.ಎಸ್.ಎಸ್. ಜಿಲ್ಲಾ ಸಹ ಸಂಚಾಲಕರಾದ ರಾಹು ಸಾಹೇಬ್ ಅವರುಗಳು ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.
ಆರೋಗ್ಯ ಭಾರತಿ ಪ್ರಮುಖರಾದ ನಾಗೇಶ ಪಟಗಾರ ಅವರು ಆರೋಗ್ಯ ಭಾರತಿ ಸಂಘಟನೆಯ ಉದ್ದೇಶಗಳು ಮತ್ತು ಕಾರ್ಯನಿರ್ವಹಣೆಯನ್ನು ವಿವರಿಸಿ, ಜಾತಿ, ಮತ, ಬೇಧವಿಲ್ಲದೇ ಸ್ಥಳೀಯವಾಗಿ ಹಾಗೂ ಸಂಕಷ್ಟದ ಸಂದರ್ಭದಲ್ಲಿ ಜನಮುಖಿಯಾಗಿ ಆರೋಗ್ಯ ಸೇವೆ ನೀಡುವ ಮಹತ್ವದ ಆಶಯದಡಿ ಆರೋಗ್ಯ ಭಾರತಿ ಕಾರ್ಯನಿರ್ವಹಿಸಲಿದೆ ಎಂದು ಹೇಳಿ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.
ಆರೋಗ್ಯ ಭಾರತಿ ಸಂಘಟನೆಯ ಸದಸ್ಯ ಅರುಣ್ ನಾಯ್ಕ ಸ್ವಾಗತಿಸಿ, ನಿರೂಪಿಸಿದ ಕಾರ್ಯಕ್ರಮಕ್ಕೆ ಸಮಿತಿಯ ಉಪಾಧ್ಯಕ್ಷ ವಿದ್ಯಾರಣ್ಯ ಜಡೆ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ತಡರಾತ್ರಿ ಸಾರ್ವಜನಿಕ ಸ್ಥಳಗಳಲ್ಲಿ ಹರಟೆ ಹೊಡೆಯುತ್ತಿದ್ದ ಯುವಕರ ಚಳಿ ಬಿಡಿಸಿದ ಪೊಲೀಸರು
Dandeli: ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದವರಿಗೆ ಖಡಕ್ ಎಚ್ಚರಿಕೆ ನೀಡಿದ ಡಿವೈಎಸ್ಪಿ
Yakshagana; ಯಕ್ಷಗಾನದಲ್ಲಿ ಮೊದಲ ಬಾರಿ ಮಂಥರೆಯಾಗಿ ಮಿಂಚಿದ ಖ್ಯಾತ ನಟಿ ಉಮಾಶ್ರೀ
ಮೊದಲ ಬಾರಿಗೆ ಯಕ್ಷಗಾನ ಕ್ಷೇತ್ರಕ್ಕೆ ಪ್ರವೇಶಿಸಲಿರುವ ನಟಿ ಉಮಾಶ್ರೀ
ಮುಂಡಗೋಡ: ವಿಜೃಂಭಣೆಯ ಬಾಣಂತಿದೇವಿ ಜಾತ್ರೆ -ವಿಶೇಷ ಪೂಜೆ-ಹರಕೆ ಸಲ್ಲಿಕೆ
MUST WATCH
ಹೊಸ ಸೇರ್ಪಡೆ
Padubidri: ಸ್ಕೂಟಿಗೆ ಈಚರ್ ವಾಹನ ಢಿಕ್ಕಿ; ಸವಾರನಿಗೆ ಗಾಯ
BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ
R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು
ಅಖಿಲ ಭಾರತ ಅಂತರ್ ವಿ.ವಿ.ವೇಟ್‌ಲಿಫ್ಟಿಂಗ್:ಮಂಗಳೂರು ವಿವಿ ರನ್ನರ್ ಅಪ್
Farmers; ಕಬ್ಬು ಹಾನಿಗೆ ಪರಿಹಾರ ನಿಧಿ,ತೊಗರಿಗೆ ಬೆಂಬಲ ಬೆಲೆ: ಸಚಿವ ಶಿವಾನಂದ ಪಾಟೀಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.