ಯಲ್ಲಾಪುರ: ಕಾರಿಗೆ ಢಿಕ್ಕಿ ಹೊಡೆದ ಲಾರಿ; ಕಾರು ಚಾಲಕ ಸಾವು
Team Udayavani, Aug 15, 2022, 8:14 PM IST
ಯಲ್ಲಾಪುರ: ಲಾರಿಯೊಂದು ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ ಮೃತಪಟ್ಟ ಘಟನೆ ಯಲ್ಲಾಪುರ ತಾಲೂಕಿನ ರಾ.ಹೆದ್ದಾರಿ 63 ಇಡಗುಂದಿ ಶೇಡಿಕೆರೆ ಗಣಪತಿ ಕಟ್ಟೆ ಬಳಿ ಸೋಮವಾರ ಸಂಭವಿಸಿದೆ.
ಕಾರು ಚಾಲಕ ಸೋಮಪ್ಪ ಹೋಮವ್ವ ದೊಡ್ಡಮನೆ ಬೂದಿಹಾಳ ಮೃತ ವ್ಯಕ್ತಿ. ಇವರು ಕೊಪ್ಪಳದವ ಎನ್ನಲಾಗಿದೆ.
ಅತೀವೇಗ ನಿರ್ಲಕ್ಷ್ಯದಿಂದ ಬಂದ ಲಾರಿ ಕಾರಿಗೆ ಢಿಕ್ಕಿ ಹೊಡೆದಿದ್ದು, ಕಾರು ಸಂಪೂರ್ಣ ನುಜ್ಜುಗುಜ್ಜಾದ ಪರಿಣಾಮ ಗಂಭೀರ ಗಾಯಗೊಂಡ ಕಾರು ಚಾಲಕನನ್ನು ಕಾರಿನ ಚಾಲಕನನ್ನು ಹುಬ್ಬಳ್ಳಿ ಕಿಮ್ಸ್ ಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.
ಕಾರಿನಲ್ಲಿದ್ದ ನಾಲ್ವರಿಗೆ ಗಾಯಗಳಾಗಿದ್ದು ಅವರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಿದೆ. ಲಾರಿ ಚಾಲಕ ಲಾರಿ ಬಿಟ್ಟು ಸ್ಥಳದಿಂದ ನಾಪತ್ತೆಯಾಗಿದ್ದು ಈತನ ಮಾಹಿತಿ ತಿಳಿದು ಬಂದಿಲ್ಲ. ಯಲ್ಲಾಪುರ ಠಾಣಾ ಸಿಪಿಐ ಸುರೇಶ ಯೆಳ್ಳೂರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Dandeli: ವಿದ್ಯುತ್ ಕಂಬದ ಜಿಓಎಸ್ ಕಳವು ಮಾಡಿದ್ದ ಆರೋಪಿ;ಮಾಲು ಸಹಿತ ವಶಕ್ಕೆ ಪಡೆದ ಪೊಲೀಸರು
Gujjar Kere: ಕೆರೆ ಪರಿಸರದ ರಕ್ಷಣೆಗೆ ಆದ್ಯತೆ ಅಗತ್ಯ; ತಹಶೀಲ್ದಾರ್ಗೆ ಮರು ಮನವಿ
Dandeli:ತುಂಡಾಗಿ ಬಿದ್ದಿದ್ದ ಕೇಬಲ್ ವೈರ್ ಸುತ್ತಿ ದ್ವಿಚಕ್ರ ವಾಹನ ಸ್ಕಿಡ್: ಸವಾರನಿಗೆ ಗಾಯ
Dandeli; ಆತ್ಮಹ*ತ್ಯೆಗೆ ಯತ್ನಿಸಿದ ವೃದ್ಧನ ರಕ್ಷಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.