ಕಾಯಿ ಅಡಿಕೆಯನ್ನು ’ಮಾರಲು ಸಿದ್ಧ’ವಾಗಿಸಿ ಕೊಡುವ ಉಕ ಸೊಸೈಟಿ
Team Udayavani, Feb 19, 2022, 7:28 PM IST
ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಹುಳಗೋಳ ಗ್ರೂಪ್ ಗ್ರಾಮಗಳ ಸಹಕಾರಿ ಸಂಘ ( ಭೈರುಂಬೆ) ತನ್ನ ’ತೋಟಕಾಶಿ ರೈತೋತ್ಪಾದಕ ಕಂಪೆನಿಯ ಮೂಲಕ ಈ ವರ್ಷ ಮೊದಲ ಬಾರಿಗೆ ವಿನೂತನ, ಕೃಷಿಕಪರ ಸೇವೆ ಆರಂಭಿಸಿ ಗಮನ ಸೆಳೆದಿದೆ.
ಸೇವೆ ಬೇಕಾದ ಸದಸ್ಯರ ಮನೆಯಿಂದ ಒಟ್ಟು 35 ಟನ್ ಕಾಯಿ ಅಡಿಕೆ ತಂದು, ಸುಲಿದು ಬೇಯಿಸಿ ಅವರ ಮನೆ ಬಾಗಿಲಿಗೇ ಪ್ರಾಮಾಣಿಕವಾಗಿ ತಲುಪಿಸಿ ಕೊಟ್ಟಿದ್ದಾರೆ. ನೀಡಗೋಡ, ಬೊಮ್ನಳ್ಳಿ, ಹುಳಗೋಳಗಳಲ್ಲಿ ತಲಾ ಹತ್ತು ಕಾರ್ಮಿಕರ ಮೂಲಕ ಅಡಿಕೆ ಸುಲಿಸಿ ಬೇಯಿಸಿ ಒಣಗಿಸಿ ಕೊಟ್ಟಿದ್ದಾರೆ. ಆಯಾ ಕೃಷಿಕರು, ಬೇಕಿದ್ದರೆ ಇದನ್ನು ನೇರ ಮಾರಬಹುದಾಗಿದೆ.
ಈ ಸೇವೆಗೆ ತೋಟಕಾಶಿ ಕ್ವಿಂಟಾಲ್ ಅಡಿಕೆಗೆ 4,500 ಶುಲ್ಕ ವಿಧಿಸಿದೆ. ಮಾನವಶಕ್ತಿಯಿಂದ ಅಡಿಕೆ ಸುಲಿದದ್ದಕ್ಕೆ ಕಿಲೋಗೆ 12 – 13 ರೂ ತಗಲಿದೆ. ನಮ್ಮ ಸೇವಾ ಶುಲ್ಕದಲ್ಲಿ ಇದುವೇ ಗಣನೀಯ ಖರ್ಚಿನ ಘಟಕ ಆಗಿದ್ದು, ಸುಲಿತದ ಯಾಂತ್ರೀಕರಣದತ್ತ ಚಿಂತಿಸುತ್ತಿದ್ದೇವೆ ಎನ್ನುತ್ತಾರೆ ಸಂಸ್ಥೆಯ ಪದಾಧಿಕಾರಿಗಳು. ಇದೊಂದು ಮಾದರಿ ಪ್ರಯೋಗ ಆಗಿದೆ ಎಂದು ಹಿರಿಯ ಪತ್ರಕರ್ತ ಶ್ರೀ ಪಡ್ರೆ ಬಣ್ಣಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!
ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ
Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ
Ankola: ರಕ್ತದೊತ್ತಡ ಕುಸಿದ ಪರಿಣಾಮ ಕಬಡ್ಡಿ ಆಡುವಾಗಲೇ ಕ್ರೀಡಾಳು ಸಾವು
Murdeshwar: ನಾಲ್ವರು ವಿದ್ಯಾರ್ಥಿನಿಯರು ಸಮುದ್ರಪಾಲು; 1 ಶವ ಪತ್ತೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.