ಅತಿಕ್ರಮಣದಾರರಿಗೆ ಹಕ್ಕು ಪತ್ರ ನೀಡಲು ಒತ್ತಾಯ
Team Udayavani, Dec 17, 2019, 4:37 PM IST
ಮುಂಡಗೋಡ: ರೈತರ ಬೆಳೆಗೆ ಬೆಂಬಲ ಬೆಲೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಅನ್ನದಾತ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ತಹಶ್ರೀಲ್ದಾರ್‌ಗೆ ಸೋಮವಾರ ಮನವಿ ಸಲ್ಲಿಸಲಾಯಿತು.
ತಾಲೂಕಿನಲ್ಲಿ ಸಾವಿರಾರು ರೈತರು ಹಲವಾರು ದಶಕಗಳಿಂದ ಅರಣ್ಯ ಭೂಮಿ ಅತಿಕ್ರಮಣ ಮಾಡಿಕೊಂಡು ಬಂದಿದ್ದು ಇದೂವರೆಗೂ ಹಕ್ಕುಪತ್ರ ನೀಡಿಲ್ಲ. ಹಂಗಾಮಿ ಲಾಗಣಿ ಭೂಮಿಯಲ್ಲಿಯೂ ಕೆಲವರಿಗೆ ಮಾತ್ರ ಹಕ್ಕುಪತ್ರ ವಿತರಿಸಲಾಗಿದೆ. ಇದರಿಂದಸಾಕಷ್ಟು ಅತಿಕ್ರಮಣದಾರರು ತೊಂದರೆ ಅನುಭವಿಸುತ್ತಿದ್ದು ಕೂಡಲೆ ಹಕ್ಕುಪತ್ರ ವಿತರಿಸಬೇಕು ಎಂದು ಆಗ್ರಹಿಸಿದರು. ಅಲ್ಲದೆ, ರೈತರು ಬೆಳೆದ ಭತ್ತಕ್ಕೆ 2500 ರೂ. ಹಾಗೂ ಗೋವಿನ ಜೋಳಕ್ಕೆ 3000 ರೂ., ಕಬ್ಬಿಗೆ 3500 ರೂ. ಬೆಂಬಲ ಬೆಲೆ ನೀಡಬೇಕು. ಸತತ ಮಳೆಯಿಂದ ಹಾನಿ ಅನುಭವಿಸಿದ ನೇರೆ ಸಂತ್ರಸ್ತರಿಗೆ ಶಾಶ್ವತ ಪರಿಹಾರ ಒದಗಿಸಿ ಕೊಡಬೇಕು ಹಾಗೂ ಮದ್ಯಮುಕ್ತ ರಾಜ್ಯ ಮಾಡುವ ಮೂಲಕ ಗಾಂಧಿಜೀಯವರ ಕನಸು ನನಸು ಮಾಡಿ ಬಡ ಕುಟುಂಬಗಳಿಗೆ ಅನುಕೂಲ ಮಾಡಿ ಕೋಡಬೇಕು. ವ್ಯವಸಾಯ ಸೇವಾ ಸಂಘ ಹಾಗೂ ಬ್ಯಾಂಕ್‌ಗಳಲ್ಲಿ ಸರಕಾರದಿಂದ ಬಂದಂತಹ ಬೆಳೆಸಾಲ ಹಾಗೂ ಬೆಳೆ ವಿಮೆ ನೀಡುವುದರಲ್ಲಿ ತಾರತಮ್ಯ ಆಗದಂತೆ ಕ್ರಮ ವಹಿಸಬೇಕು ಹಾಗೂ ಎಲ್ಲ ರೈತರಿಗೆ ಈ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಇದೂವರೆಗೂ ನಿವೇಶನ ಹಂಚಿಕೆ ಆಗಿಲ್ಲ. ಕೂಡಲೆ ನಿವೇಶನ ನೀಡುವ ಕೆಲಸ ಮಾಡಬೇಕು. ಹೆಣ್ಣುಮಕ್ಕಳ ಹಾಗೂ ಬಾಲಕಿಯರ ಮೇಲೆ ಅತ್ಯಾಚಾರ ಮಾಡಿದ ಅಪರಾಧಿಗಳಿಗೆ ಗಲ್ಲುಶಿಕ್ಷೆ ನೀಡುವುದರ ಮೂಲಕ ಇಂತಹ ಘಟನೆಗಳು ಜರುಗದಂತೆ ಜಾಗೃತಿ ವಹಿಸಬೇಕು ಎಂದು ಅವರು ನೀಡಿದ ಮನವಿಯಲ್ಲಿ ತಿಳಿಸಿದ್ದಾರೆ.
ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುತ್ತೇವೆ ಎಂದು ಅವರು ಎಚ್ಚರಿಸಿದ್ದಾರೆ. ರಾಜ್ಯ ಅನ್ನದಾತ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಚಿದಾನಂದ ಹರಿಜನ, ಸುಂಕಪ್ಪ ಜಕ್ಕನಕಟ್ಟಿ, ಮಂಜುನಾಥ ಭಟ್ಟ, ಲೋಹೀತ್ ಮಟ್ಟಿಮನಿ, ಮಾರ್ಟಿನ ಬಳ್ಳಾರಿ, ಕೇಮಣ್ಣ ಲಮಾಣಿ, ಜೈತುನಬಿ ಜಿಗಳೂರ, ಮಂಜುನಾಥ ಕುರ್ತಕೋಟಿ ಸೇರಿದಂತೆ ಮುಂತಾದವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.