![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Dec 23, 2020, 7:00 PM IST
ಮುಂಡಗೋಡ: ಶಿರಸಿ ಜಿಲ್ಲಾ ಕೇಂದ್ರವಾದರೆ ಘಟ್ಟದ ಮೇಲಿನ ತಾಲೂಕಿನ ಜನರಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಆದ್ದರಿಂದ ಶಿರಸಿ ಜಿಲ್ಲಾ ಕೇಂದ್ರವನ್ನಾಗಿ ಮಾಡಲು ನಾವೆಲ್ಲರೂ ಸೇರಿ ಒಗ್ಗಟ್ಟಾಗಿ ಹೋರಾಡೋಣ ಎಂದು ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಉಪೇಂದ್ರ ಪೈ ಮಂಗಳವಾರ ಹೇಳಿದರು.
ಪಟ್ಟಣದ ಓಶಿಮಠ ಅವರ ಮನೆಯಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಮಾತನಾಡಿದರು. ಘಟ್ಟದ ಮೇಲಿನ ತಾಲೂಕಿನ ಜನರು ಜಿಲ್ಲಾ ಕೇಂದ್ರದಲ್ಲಿನ ಕಚೇರಿಗಳಿಗೆ ಹೋಗಿ ಬರಲುಸಾಕಷ್ಟು ತೊಂದರೆಯಾಗುತ್ತಿದೆ. ಆದ್ದರಿಂದ ಘಟ್ಟದ ಮೇಲಿನ ತಾಲೂಕಿನ ಜನರಿಗೆ ಅನುಕೂಲವಾಗುವ ಉದ್ದೇಶದಿಂದ ಶಿರಸಿ ಜಿಲ್ಲಾ ಕೇಂದ್ರವನ್ನಾಗಿ ಮಾಡಲು ನಾವು ನಿರಂತರ ಹೋರಾಟ ಮಾಡುತ್ತಿದ್ದೇವೆ. ಈಗಾಗಲೆ ಶಿರಸಿಯಲ್ಲಿ ಜಿಲ್ಲಾಮಟ್ಟದ ಹಲವಾರುಕಚೇರಿಗಳು ಕಾರ್ಯ ನಿರ್ವಹಿಸುತ್ತಿವೆ. ಶಿರಸಿಯನ್ನುಜಿಲ್ಲಾ ಕೇಂದ್ರವನ್ನಾಗಿ ಘೋಷಣೆ ಮಾಡುವುದು ಅವಶ್ಯವಿದೆ. ಈ ತಾಲೂಕಿನ ಜನರು ಶಿರಸಿ ಜಿಲ್ಲಾಕೇಂದ್ರವನ್ನಾಗಿಸಲು ಹೆಚ್ಚು ಬೆಂಬಲ ನೀಡಬೇಕು ಎಂದರು.
ಹೋರಾಟ ಸಮಿತಿಯ ಪರಮಾನಂದ ಹೆಗಡೆ ಮಾತನಾಡಿ, ಶಿರಸಿ ಜಿಲ್ಲೆಯನ್ನಾಗಿಸಬೇಕು ಎಂಬ ಕೂಗು ರಾಜಧಾನಿಯವರೆಗೂ ತಲುಪಿದೆ. ಇದಕ್ಕೆಜನಪ್ರತಿನಿಧಿಗಳ ಇಚ್ಛಾಶಕ್ತಿಯೂ ಅತಿ ಅವಶ್ಯವಿದೆ. ಘಟ್ಟದ ಮೇಲಿನ ತಾಲೂಕಿನ ಜನರು ಶಿರಸಿ ಜಿಲ್ಲಾ ಕೇಂದ್ರವನ್ನಾಗಿ ಮಾಡಲು ಹೋರಾಟವನ್ನು ತೀವ್ರಗೊಳಿಸುವುದು ಅವಶ್ಯವಿದೆ ಎಂದರು.
ಉದ್ಯಮಿ ಬಸವರಾಜ ಓಶಿಮಠ ಮಾತನಾಡಿ, ಕದಂಬ ಜಿಲ್ಲೆಯೆಂದು ನಾಮಕರಣ ಮಾಡಿ ಈ ಜಿಲ್ಲೆಯ ಹೋರಾಟಕ್ಕೆ ನಾನು ಸದಾ ಸಿದ್ಧನಿದ್ದೇನೆ.ಹೋರಾಟ ಆಮೆಗತಿಯಲ್ಲಿ ಸಾಗುತ್ತಿದ್ದು,ಇದೂ ತೀವ್ರವಾಗಿ ನಡೆಯಬೇಕು. ಶಿರಸಿ ಜಿಲ್ಲಾಕೇಂದ್ರವಾದರೆ ಘಟ್ಟದ ಮೇಲಿನ ಸಾರ್ವಜನಿಕರಿಗೆಹಾಗೂ ಸರಕಾರಿ ನೌಕರರಿಗೆ, ಸಂಘ ಸಂಸ್ಥೆ ಹೀಗೆಎಲ್ಲ ವರ್ಗದವರಿಗೂ ಹೆಚ್ಚು ಅನುಕೂಲವಾಗಲಿದೆ ಎಂದರು.
ಇದೆ ವೇಳೆ ಬಸವರಾಜ ಓಶಿಮಠ ಅವರನ್ನು ಶಿರಸಿ ಜಿಲ್ಲಾ ಹೋರಾಟ ಸಮಿತಿ ಗೌರವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಎಂ.ಎಂ. ಭಟ್, ಮಂಜುನಾಥ ಮೂಗೇರ, ಶ್ರೀಧರ ಮೂಗೇರ, ರಾಘು ಕಾನಡೆ, ವಿನೋದ ಹೊಸಪಟ್ಟಣ, ಮಾರುತಿ ಓಂಕಾರ, ಎಸ್.ಕೆ. ಬೋರ್ಕರ, ಸೋಮಣ್ಣ ಮುಡೇಣ್ಣವರ, ಶ್ರೀಧರ ಡೋರಿ, ವಸಂತ ಕೋಣಸಾಲಿ, ಮತ್ತಣ್ಣ ವಾಲಿಶೆಟ್ಟರ, ವಿನಾಯಕ ಶೇಟ್, ಸಂಗಪ್ಪ ಕೋಳೂರ, ಜಗದೀಶ ಕಾನಡೆ ಮುಂತಾದವರಿದ್ದರು.
Dandeli: ಯಾತ್ರಾರ್ಥಿಗಳ ತಂಡದಿಂದ ಹಲ್ಲೆ, ಇಬ್ಬರಿಗೆ ಗಂಭೀರ ಗಾಯ
Dandeli: ಮರಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಕಾರು… ಎಂಟು ಜನರಿಗೆ ಗಾಯ, ಓರ್ವ ಗಂಭೀರ
ಹಾಡು ನಿಲ್ಲಿಸಿದ ಜಾನಪದ ಕೋಗಿಲೆ… ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ನಿಧನ
Dandeli: ಬರ್ಚಿ- ಗಣೇಶಗುಡಿ ರಸ್ತೆಯಲ್ಲಿ ದ್ವಿಚಕ್ರ ವಾಹನ ಸ್ಕಿಡ್, ಸವಾರನಿಗೆ ಗಾಯ
Yellapur: ನಿಯಂತ್ರಣ ತಪ್ಪಿ ಪಲ್ಟಿಯಾದ ಸರಕಾರಿ ಬಸ್… ಇಬ್ಬರಿಗೆ ಗಂಭೀರ ಗಾಯ
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.