ಜಲ ಸಂರಕ್ಷಣಾ ಕಾರ್ಯ ಪರಿಶೀಲನೆ
ಕೇಂದ್ರದ ಜಲಶಕ್ತಿ ತಂಡದ ಅಧಿಕಾರಿಗಳಿಂದ ಗೋಕರ್ಣ, ಬರ್ಗಿ, ಕಡತೋಕ, ಕೆಕ್ಕಾರಕ್ಕೆ ಭೇಟಿ
Team Udayavani, Jul 21, 2022, 4:00 PM IST
ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಜಿಪಂನಿಂದ ಜಿಲ್ಲೆಯ ವಿವಿಧೆಡೆ ಆಗಿರುವ ಜಲ ಸಂರಕ್ಷಣಾ ಕಾರ್ಯವನ್ನು ಕೇಂದ್ರದ ಜಲಶಕ್ತಿ ತಂಡದ ಅಧಿಕಾರಿಗಳು ಪರಿಶೀಲಿಸಿದರು.
ಕುಮಟಾ ಹಾಗೂ ಹೊನ್ನಾವರ ತಾಲೂಕಿನಲ್ಲಿ ಜಲಶಕ್ತಿ ಅಭಿಯಾನದಡಿ ಕೈಗೊಂಡ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೇಂದ್ರ ಸರಕಾರದ ಉಪ ಕಾರ್ಯದರ್ಶಿ ಅಂಕಿತ ಮಿಶ್ರಾ, ವಿಜ್ಞಾನಿ ಎನ್.ಎ. ಸೋನಾವಾನೆ ಅವರನ್ನೊಳಗೊಂಡ ಜಲಶಕ್ತಿ ತಂಡದ ಸದಸ್ಯರು ವೀಕ್ಷಿಸಿ ಕಾಮಗಾರಿಗಳ ಮಾಹಿತಿ ಪಡೆದುಕೊಂಡರು.
ಕುಮಟಾ ತಾಲೂಕಿನ ಗೋಕರ್ಣ ಗ್ರಾಪಂದಿಂದ ಅಭಿವೃದ್ಧಿಪಡಿಸಲಾದ ಕೋಟಿ ತೀರ್ಥ ಕಲ್ಯಾಣಿ, ಅಗಸ್ತ್ಯ ತೀರ್ಥ ಕಲ್ಯಾಣಿ, ಬರ್ಗಿ ಗ್ರಾಪಂ ವ್ಯಾಪ್ತಿಯ ಕೆರೆ ಕಾಮಗಾರಿ ವೀಕ್ಷಿಸಿ ಕಾಮಗಾರಿ ಕಡತಗಳನ್ನು ಪರಿಶೀಲಿಸಿದರು. ಕೋಟಿತೀರ್ಥ ಕಾಮಗಾರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮೊದಲಿಗೆ ಕಾರವಾರ, ಅಂಕೋಲಾ ತಾಲೂಕಿನಲ್ಲಿ ಜಲ ಸಂರಕ್ಷಣೆ ಮಾದರಿ ಕೆಲಸಗಳನ್ನು ಪರಿಶೀಲಿಸಿ, ಖುದ್ದಾಗಿ ಸ್ಥಳ ವೀಕ್ಷಣೆ ಮಾಡಿತ್ತು. ಜಿಪಂ ಸಿಇಒ ಪ್ರಿಯಾಂಕಾ ಅವರ ಕಾರ್ಯಕ್ಷಮತೆಯನ್ನು, ಜಲ ಸಂರಕ್ಷಣೆಯಲ್ಲಿ ವಹಿಸಿದ ಕಾಳಜಿಯನ್ನು ಪ್ರಶಂಸಿಸಿತು.
ಕುಮಟಾ ತಾಲೂಕಿನ ಗ್ರಾಮಗಳ ಜಲ ರಕ್ಷಣೆ ಕಾಮಗಾರಿಗಳನ್ನು ಖುದ್ದಾಗಿ ನೋಡಿದ ನಂತರ ಹೊನ್ನಾವರ ತಾಲೂಕಿನ ಕಡತೋಕ ಗ್ರಾಪಂ ವ್ಯಾಪ್ತಿಯ ಕೆಕ್ಕಾರ ಗ್ರಾಮದಲ್ಲಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ತೋಟಗಾರಿಕೆ ಇಲಾಖೆಯಿಂದ ಅಭಿವೃದ್ಧಿಪಡಿಸಲಾದ ಕೃಷಿ ಹೊಂಡ, ನರೇಗಾದಡಿ ನಳಿನಿ ನಾಗಪ್ಪ ಗೌಡರ ಜಮೀನಿನಲ್ಲಿ ಕೈಗೊಂಡ ಡ್ರ್ಯಾಗನ್ ಫ್ರೂಟ್ ತೋಟ ನಿರ್ಮಾಣ ಕಾಮಗಾರಿ, ಮಂಕಿ-ಸಿ ಚಿತ್ತಾರ ಗ್ರಾಪಂ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಕಾಡು ಪ್ರಾಣಿಗಳ ಕುಡಿಯುವ ನೀರಿನ ಉದ್ದೇಶಕ್ಕಾಗಿ ನರೇಗಾದಡಿ ನಿರ್ಮಿಸಲಾದ ಚೆಕ್ ಡ್ಯಾಂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಜಿಪಂ ಅಭಿವೃದ್ಧಿ ವಿಭಾಗದ ಉಪ ಕಾರ್ಯದರ್ಶಿ ದಿಲೀಪ್ ಜಕ್ಕಪ್ಪಗೋಳ್, ಅಂಕೋಲಾ, ಕುಮಟಾ ಹಾಗೂ ಹೊನ್ನಾವರ ತಾಪಂ ಇಒಗಳಾದ ಪಿ.ವೈ. ಸಾವಂತ, ನಾಗರತ್ನಾ ನಾಯಕ, ಸುರೇಶ ನಾಯ್ಕ, ನರೇಗಾ ಸಹಾಯಕ ನಿರ್ದೇಶಕರಾದ ಕೃಷ್ಣಾನಂದ ಕೆ., ಬಾಲಚಂದ್ರ ಪಟಗಾರ ಹಾಗೂ ವಿವಿಧ ಇಲಾಖೆ ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಡಿಇಸಿ ಸಚಿನ್ ಬಂಟ್, ತಾಂತ್ರಿಕ ಸಂಯೋಜಕರಾದ ಅನಿಲ ಗಾಯತ್ರಿ, ಅಲೋಕ ನಾಯಕ, ಸುನಿಲ ಆಚಾರ್ಯ, ತಾಲೂಕು ಐಇಸಿ ಸಂಯೋಜಕ ಫಕ್ಕೀರಪ್ಪ ತುಮ್ಮಣ್ಣನವರ ಸೇರಿದಂತೆ ಸಿಬ್ಬಂದಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sirsi: ಟ್ರಾಫಿಕ್ ಪೊಲೀಸ್ ಠಾಣಾ ಕಟ್ಟಡ ಪರಿಶೀಲಿಸಿದ ಎಸ್ಪಿ ನಾರಾಯಣ
Sirsi: ಸಂಸದ ಕಾಗೇರಿ ಮನೆ ಅಂಗಳದಲ್ಲಿ ಚಿರತೆ ಓಡಾಟ; ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ
ಯಲ್ಲಾಪುರ: ನೀರಿನ ಟ್ಯಾಂಕ್‌ನಲ್ಲಿ ಕೊಳೆತ ಹಾವು; ಜನರಲ್ಲಿ ಆತಂಕ
Dandeli: ನಿಯಮ ಉಲ್ಲಂಘಿಸಿದ ದ್ವಿಚಕ್ರ ವಾಹನಗಳಿಗೆ ಬಿಸಿ ಮುಟ್ಟಿಸಿದ ಅಧಿಕಾರಿ
Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.