ಅರ್ಜಿಗಾಗಿ ಅತಿಕ್ರಮಣದಾರರ ಅಲೆದಾಟ
•ದಾಖಲೆ ಸಂಗ್ರಹಕ್ಕಾಗಿ ಜೀವನ ಪೂರ್ತಿ ಜಿಲ್ಲೆ-ತಾಲೂಕು ಕೇಂದ್ರಗಳಿಗೆ ನಿಲ್ಲದ ಓಡಾಟ
Team Udayavani, Jul 28, 2019, 12:18 PM IST
ಶಿರಸಿ: ಮಳೆಯ ಮಧ್ಯೆ ಆಯುಕ್ತರ ಕಚೇರಿಗೆ ಆಗಮಿಸಿದ ಅರಣ್ಯ ಅತಿಕ್ರಮಣದಾರರು.
ಶಿರಸಿ: ಒಂದು ಕಡೆ ಆರ್ಭಟ ಮಳೆ, ಇನ್ನೊಂದು ಕಡೆ ಬೆಳೆ ನಾಶ, ಮತ್ತೂಂದೆಡೆ ಅತಿಕ್ರಮಣ ಭೂಮಿ ಮಂಜೂರಿಗೆ ಹೆಚ್ಚಿನ ದಾಖಲೆ ಒದಗಿಸಿ ನೋಟಿಸ್. ಜೀವನಪೂರ್ತಿ ಅತಿಕ್ರಮಣ ಮಂಜೂರಿಗೆ ದಾಖಲೆ ಕೊಡುವುದು ಅರ್ಜಿ ಹಿಡಿದು ಅಲೆದಾಟ ಸಾಕಪ್ಪಾ ಸಾಕು ಅತಿಕ್ರಮಣ ಭೂಮಿಯು ಬೇಡಾ, ಪಟ್ಟವೂ ಬೇಡಾ ಎಂದು ಅಲವತ್ತುಕೊಳ್ಳುವಂತಾಗಿದೆ. ಇದು ಅರಣ್ಯ ಹಕ್ಕು ಕಾಯಿದೆ ಅಡಿ ಅರ್ಜಿ ಪುನರ್ ಪರಿಶೀಲನೆಗೆ ಯಲ್ಲಾಪುರ ತಾಲೂಕಿನಿಂದ ಶಿರಸಿ ಉಪವಿಭಾಗ ಕಚೇರಿಗೆ ಬಂದ ಅತಿಕ್ರಮಣದಾರರ ಅಳಲಾಗಿದೆ.
ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ಕೇಂದ್ರ ಸರ್ಕಾರ ಪರಿಶಿಷ್ಟ ವರ್ಗಗಳ ಕಲ್ಯಾಣ ನಿರ್ದೇಶನಾಲಯದ ಸೂಚನೆ ಮೇರೆಗೆ ತಿರಸ್ಕಾರಗೊಂಡ ಅತಿಕ್ರಮಣ ಅರ್ಜಿಗಳಿಗೆ ಪುನರ್ ಪರಿಶೀಲನೆಗೆ ಉಪವಿಭಾಗ ಸಮಿತಿ ಅಧ್ಯಕ್ಷರು ಹಾಗೂ ಉಪವಿಭಾಗ ಅಧಿಕಾರಿ ಕಚೇರಿಗೆ ಸಮಿತಿ ನೋಟಿಸ್ ನೀಡಿದೆ. ಉಪವಿಭಾಗ ವ್ಯಾಪ್ತಿಯ ಯಲ್ಲಾಪುರ, ಮುಂಡಗೋಡ, ಶಿರಸಿ ಮತ್ತು ಸಿದ್ದಾಪುರ ತಾಲೂಕು ವ್ಯಾಪ್ತಿಯ ಅತಿಕ್ರಮಣದಾರರಿಗೆ ಪುನರ್ ಪರಿಶೀಲನೆ ಕಾರ್ಯ ನಡೆಸಲಾಗಿದೆ. ಈ ಸಮಯದಲ್ಲಿ ಖುದ್ದಾಗಿ ಹಾಜರಿದ್ದು ಅರ್ಜಿದಾರರು ಕಾಯಿದೆಯಂತೆ 2005 ಡಿ.13 ಕ್ಕಿಂತಲೂ ಮುಂಚಿತವಾಗಿ ಕೊನೆ ಪಕ್ಷ 3 ತಲೆ ಮಾರಿನವರೆಗೆ ಪ್ರಧಾನವಾಗಿ ಅರಣ್ಯಗಳಲ್ಲಿ ವಾಸಿಸಿದ ಮತ್ತು ವಾಸ್ತವಿಕ ಜೀವನೋಪಾಯದ ಅವಶ್ಯಕತೆಗಳಿಗಾಗಿ ಅರಣ್ಯ ಅಥವಾ ಅರಣ್ಯ ಜಮೀನಿನ ಮೇಲೆ ಅವಲಂಬಿತವಾಗಿರುವ ಬಗ್ಗೆ ದೃಢೀಕೃತ ದಾಖಲೆಗಳನ್ನು ಹಾಜರು ಪಡಿಸಬೇಕಿದೆ. ಅತಿಕ್ರಮಣದಾರರು ಇದ್ದಂತಹ ದಾಖಲೆಗಳನ್ನೆಲ್ಲಾ 70, 80 ಕಿಮೀ ದಿಂದ ಶಿರಸಿಗೆ ಬಂದು ಸಮಿತಿ ಮುಂದೆ ಹಾಜರಾಗುತ್ತಿದ್ದಾರೆ. ಈ ವೇಳೆ ಇಂಥ ಅಭಿಪ್ರಾಯ ವ್ಯಕ್ತವಾಗಿದೆ.
ಪುನರ್ ಪರಿಶೀಲನೆ ಅರ್ಜಿ ತಾಲೂಕು ಕೇಂದ್ರದಲ್ಲಿ ವಿಚಾರಣೆ ಆಗಬೇಕಿದ್ದು ಕೇಂದ್ರ ಸರ್ಕಾರದ ನಿರ್ದೇಶನದಂತೆ ಅರ್ಜಿದಾರರ ಹಕ್ಕುಗಳು ಮತ್ತು ಪರಿಗಣಿಸಬಹುದಾದ ಸಾಕ್ಷಿಗಳ ಬಗ್ಗೆ ಕಂದಾಯ ಮತ್ತು ಅರಣ್ಯ ಇಲಾಖೆಯೇ ಅತಿಕ್ರಮಣದಾರರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಆಗ್ರಹಿಸಿದ್ದಾರೆ.
ಇರುವ ಎಲ್ಲಾ ದಾಖಲೆ ಈಗಾಗಲೇ ನೀಡಿದ್ದು ಮತ್ತೆ ದಾಖಲೆ ಒದಗಿಸಿ ಎಂದು ನೋಟಿಸ್ ಬಂದಿದೆ. ಇಲ್ಲದ ದಾಖಲೆ ಎಲ್ಲಿಂದ ತರುವುದು. 30-35 ವರ್ಷದಿಂದ ಅತಿಕ್ರಮಣ ಮಂಜೂರಿಗೆ ಅರ್ಜಿ ದಾಖಲೆ ನೀಡುವುದರಲ್ಲಿ ಜೀವನ ಮುಗಿದು ಹೋಗಿದೆ. ಈಗ ಮತ್ತೆ 3 ತಲೆಮಾರಿನ ದಾಖಲೆ ಕೊಡಿ ಅಂತ ನೋಟಿಸ್ ಬಂದಿದೆ ಎಂದು ಶಿರಸಿ ಉಪವಿಭಾಗ ಸಮಿತಿ ಪುನರ್ ಪರಿಶೀಲನೆ ವಿಚಾರಣೆಗೆ ಹಾಜರಾದ ಯಲ್ಲಾಪುರ ತಾಲೂಕು ಕುಂದರಗಿ ಗ್ರಾಪಂ ವ್ಯಾಪ್ತಿಯ ಅರ್ಜಿದಾರರಾದ ಬಾಲು ಗೌಳಿ, ಸಾಧು ದೇವಾಡಿಗ, ಗೋಪಾಲ ನಾಯ್ಕ, ಗೋಪಾಲ ಪೂಜಾರಿ, ಲಲಿತಾ ಭಟ್ಟ ಆನೆಗುಂಡಿ ನೋವು ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Order: ಶಿರೂರು ಗುಡ್ಡ ಕುಸಿತ: 2 ತಿಂಗಳೊಳಗೆ 5 ಲ.ರೂ. ಪರಿಹಾರಕ್ಕೆ ಹೈಕೋರ್ಟ್ ಸೂಚನೆ
Dandeli: ಸಾರಿಗೆ ಬಸ್ಸಿನಲ್ಲೇ ಪ್ರಯಾಣಿಕನಿಗೆ ಹೃದಯಾಘಾತ… ಆಸ್ಪತ್ರೆ ಮಾರ್ಗದಲ್ಲಿ ಮೃತ್ಯು
Dandeli: ಅಪರಿಚಿತ ವಾಹನ ಡಿಕ್ಕಿ; ಕರು ಸಾವು
Dandeli: ವಕ್ಫ್ ಮಂಡಳಿ ಮತ್ತು ರಾಜ್ಯ ಸರ್ಕಾರದ ಕ್ರಮ ವಿರೋಧಿಸಿ ಬಿಜೆಪಿಯಿಂದ ಪ್ರತಿಭಟನೆ
Dandeli: ನಗರಸಭೆಯ ಜವಾನನನ್ನು ನಿಂದಿಸಿರುವುದರ ವಿರುದ್ಧ ನಗರ ಸಭೆಯ ಪೌರಾಯುಕ್ತರಿಗೆ ದೂರು
MUST WATCH
ಹೊಸ ಸೇರ್ಪಡೆ
Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
Mangaluru: ಪರಿಶಿಷ್ಟ ಜಾತಿ ಪಟ್ಟಿಗೆ ಮರುಸೇರ್ಪಡೆ ಆಗ್ರಹಿಸಿ ಕುಡುಬಿ ಸಮಾಜದವರಿಂದ ಜಾಥಾ
Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ
Uppunda: ಈ ಬಾರಿ ಕೋಟೇಶ್ವರಕ್ಕಿಂತ ಮೊದಲು ಉಪ್ಪುಂದ ರಥೋತ್ಸವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.