ಕೃಷಿ ಇಲಾಖೆ ಜಾಗದಲ್ಲೇ ಐಟಿಐ ಕಾಲೇಜು
Team Udayavani, Feb 22, 2021, 5:28 PM IST
ಕುಮಟಾ: ಪಟ್ಟಣದ ಕೃಷಿ ಇಲಾಖೆ ವಶದಲ್ಲಿದ್ದ 4 ಎಕರೆ ಜಮೀನನ್ನು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಕಟ್ಟಡ ನಿರ್ಮಾಣಕ್ಕೆ ಮಂಜೂರಿ ಮಾಡಿಸುವಲ್ಲಿ ಶಾಸಕ ದಿನಕರ ಶೆಟ್ಟಿ ಯಶಸ್ವಿಯಾಗಿದ್ದು, ಸ್ಥಳ ಪರಿಶೀಲನೆ ನಡೆಸಿದರು.
ಹೊಸ ಬಸ್ ನಿಲ್ದಾಣದ ಪಕ್ಕದಲ್ಲೇ ಐಟಿಐ ಕಾಲೇಜು ನಿರ್ಮಾಣವಾಗಲಿರುವುದು ಎಲ್ಲ ವಿದ್ಯಾರ್ಥಿಗಳಿಗೂ ಸಂತಸ ಮೂಡುವಂತಾಗಿದೆ. ಶಾಸಕ ದಿನಕರಶೆಟ್ಟಿ ನೇತೃತ್ವದಲ್ಲಿ ಜಿಪಂ ಸದಸ್ಯ ಗಜಾನನ ಪೈ, ಕೃಷಿ ಇಲಾಖೆ, ಪುರಸಭೆ, ಪಿಡಬ್ಲ್ಯುಡಿ ಅಧಿಕಾರಿಗಳ ತಂಡ ನಿವೇಶನವಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಹೊಸ ಬಸ್ ನಿಲ್ದಾಣ ಹಿಂಭಾಗದಲ್ಲಿರುವ 4 ಎಕರೆ ವಿಶಾಲ ಪ್ರದೇಶವು ಕಾಲೇಜ್ ನಿರ್ಮಾಣಕ್ಕೆ ಪ್ರಶಸ್ತವಾಗಿದೆ ಎಂಬ ಅಭಿಪ್ರಾಯ ಎಲ್ಲ ಅಧಿಕಾರಿಗಳಿಂದ ವ್ಯಕ್ತವಾಯಿತು.
ಪಟ್ಟಣದ ಹೆಗಡೆ ರಸ್ತೆಯ ಕೈಗಾರಿಕಾ ಪ್ರದೇಶದಲ್ಲಿರುವ ಬಾಡಿಗೆ ಕಟ್ಟಡದಲ್ಲಿ 2014 ಆಗಸ್ಟ್ನಲ್ಲಿ ಐಟಿಐ ಕಾಲೇಜ್ ಆರಂಭಿಸಲಾಯಿತು. ಪಿಟ್ಟರ್ ಮತ್ತು ಇಲೆಕ್ಟ್ರಿಕಲ್ ವಿಭಾಗದಲ್ಲಿ ಸುಮಾರು 100ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಬಾಡಿಗೆಕಟ್ಟಡವಾಗಿದ್ದರಿಂದ ಕಾಲೇಜ್ಗೆ ಪೂರಕವಾತಾವರಣ ಇಲ್ಲದ ಕಾರಣ ವಿದ್ಯಾರ್ಥಿಗಳಕಲಿಕೆಗೆ ತೊಂದರೆಯಾಗಿತ್ತು. ಅಲ್ಲದೇ,ಪ್ರತಿ ತಿಂಗಳು ಕಾಲೇಜ್ ಕಟ್ಟಡಕ್ಕೆ 89ಸಾವಿರ ಬಾಡಿಗೆಯನ್ನು ಸರ್ಕಾರಪಾವತಿಸಬೇಕಾಗಿದ್ದರಿಂದ ಬಾಡಿಗೆ ಮೊತ್ತಹೊರೆಯಾಗಿತ್ತು. ಹಾಗಾಗಿ ಐಟಿಐ ಕಾಲೇಜ್ನ ಸ್ವಂತ ಕಟ್ಟಡ ನಿರ್ಮಾಣಕ್ಕೆ ಅಗತ್ಯ ನಿವೇಶನದ ಹುಡುಕಾಟ ನಡೆದಿತ್ತು. 2018ರಲ್ಲಿ ಕಾಲೇಜ್ ಕಟ್ಟಡ ನಿರ್ಮಾಣಕ್ಕೆ 2.40 ಕೋಟಿ ರೂ. ಅನುದಾನ ಬಿಡುಗಡೆಯಾಗಿ, ಧಾರೇಶ್ವರದ ಹರನೀರನಕಾಡು ಪ್ರದೇಶದಲ್ಲಿ ಕಾಲೇಜ್ ನಿರ್ಮಾಣಕ್ಕೆ ನಿವೇಶನ ನಿಗದಿ ಪಡಿಸಲಾಗಿತ್ತು.
ಈ ಜಾಗವನ್ನು ಪರಿಶೀಲಿಸಲು ತೆರಳಿದ ಶಾಸಕ ದಿನಕರ ಶೆಟ್ಟಿ, ಈ ಕಾಡಿನಲ್ಲಿ ಕಾಲೇಜ್ನಿರ್ಮಿಸುವುದು ಸೂಕ್ತವಲ್ಲ. ವಿದ್ಯಾರ್ಥಿಗಳ ರಕ್ಷಣೆ ಮತ್ತು ಹಿತದೃಷ್ಟಿಯಿಂದ ಪಟ್ಟಣ ವ್ಯಾಪ್ತಿಯಲ್ಲಿಯೇ ನಿವೇಶನಗುರುತಿಸಿಕೊಡುವ ಭರವಸೆ ನೀಡಿದ್ದರು.ತಕ್ಷಣ ಕೃಷಿ ಇಲಾಖೆ ವಶದಲ್ಲಿರುವ ಪ್ರದೇಶವನ್ನು ಐಟಿಐ ಕಾಲೇಜ್ ನಿರ್ಮಾಣಕ್ಕೆ ಆಯ್ಕೆ ಮಾಡಿದ್ದಾರೆ.
ಪಟ್ಟಣದ ಚಿಕ್ಕೊಳ್ಳಿ ಗ್ರಾಮದಲ್ಲಿರುವ ಕೃಷಿ ಪಾಠಶಾಲೆ ಮತ್ತು ಬೀಜೋತ್ಪಾದನಾಕೇಂದ್ರದ ವಶದಲ್ಲಿದ್ದ 4 ಎಕರೆ ಪ್ರದೇಶವನ್ನುಐಟಿಐ ಕಾಲೇಜ್ ನಿರ್ಮಾಣಕ್ಕೆ ನೀಡುವಂತೆಶಾಸಕರು ಕೃಷಿ ವಿವಿಗೆ ಎರಡು ತಿಂಗಳ ಹಿಂದೆ ಮನವಿ ಮಾಡಿದ್ದರು.ಶಾಸಕರ ಮನವಿಗೆ ಸ್ಪಂದಿಸಿದ ಕೃಷಿ ವಿವಿ ಕುಲ ಸಚಿವರು ಐಟಿಐ ಕಾಲೇಜ್ಗೆ ಅಗತ್ಯ ಜಮೀನನ್ನು ಸರ್ಕಾರಿ ನಿಯಮದ ಪ್ರಕಾರ ಹಸ್ತಾಂತರಿಸಬಹುದು.
ಆದರೆ ಈ ಜಮೀನು ಮೂಲತಃ ಕೃಷಿ ಇಲಾಖೆಯದ್ದಾಗಿರುವುದರಿಂದ ಕೃಷಿ ಆಯಕ್ತರಿಗೆ ಅಭಿಪ್ರಾಯ ಕೇಳಲಾಗಿದೆ. ಕೃಷಿ ಆಯುಕ್ತರು ಕೂಡ ಇದಕ್ಕೆಸಮ್ಮತಿ ಸೂಚಿಸಿದ್ದಾರೆ. ಅಲ್ಲದೇ, ಸರ್ಕಾರದ ಅನುಮೋದನೆಯೊಂದಿಗೆನಿಯಮಾನುಸಾರ ಜಮೀನನ್ನುಹಸ್ತಾಂತರಿಸಬಹುದು ಎಂದು ಕೃಷಿ ಜಂಟಿನಿರ್ದೇಶಕರು ತಿಳಿಸಿದ್ದಾರೆ. ಕಾಲೇಜ್ ಪ್ರಾಂಶುಪಾಲರು, ವಿದ್ಯಾರ್ಥಿಗಳು ಶಾಸಕರ ಶ್ರಮವನ್ನು ಶ್ಲಾಘಿ ಸುವ ಜೊತೆಗೆ ಧನ್ಯವಾದ ಸಲ್ಲಿಸಿದ್ದಾರೆ. ಜಿಪಂ ಸದಸ್ಯ ಗಜಾನನ ಪೈ, ಪುರಸಭೆ
ಅಧ್ಯಕ್ಷೆ ಮೋಹಿನಿ ಗೌಡ, ಉಪಾಧ್ಯಕ್ಷ ರಾಜೇಶ ಪೈ, ಐಟಿಐ ಕಾಲೇಜ್ ಪ್ರಾಂಶುಪಾಲ ಡಿ.ಟಿ. ನಾಯ್ಕ, ಕುಮಟಾ ಕೃಷಿ ಸಹಾಯಕ ನಿರ್ದೇಶಕಿ, ತಾಪಂ ಇಒ ಸಿ.ಟಿ. ನಾಯ್ಕ, ಪಿಡಬ್ಲ್ಯುಡಿ ಇಂಜಿನಿಯರ್ ಶಶಿಕಾಂತ, ಪುರಸಭೆ ಮುಖ್ಯಾಧಿಕಾರಿ ಸುರೇಶ ಎಂ.ಕೆ., ಬಿಜೆಪಿ ಪ್ರಮುಖರಾದ ಜಿ.ಎಸ್. ಗುನಗಾ, ಸುಧೀರ ಪಂಡಿತ, ವಿನಾಯಕ ನಾಯ್ಕ ಬಗ್ಗೊಣ ಇತರರು ಇದ್ದರು
ಸರ್ಕಾರಿ ಐಟಿಐ ಕಾಲೇಜ್ಗೆ ಧಾರೇಶ್ವರದ ಹರನೀರನ ಕಾಡುಪ್ರದೇಶದಲ್ಲಿ ಜಾಗ ನೀಡಲಾಗಿತ್ತು. ಆಪ್ರದೇಶವನ್ನು ಪರಿಶೀಲಿಸಿದ ನಾನು,ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಆಪ್ರದೇಶ ಸೂಕ್ತವಲ್ಲ ಎಂಬುದನ್ನುಅರಿತು ಪಟ್ಟಣದ ಹೊಸ ಬಸ್ ನಿಲ್ದಾಣಪಕ್ಕದಲ್ಲಿರುವ ಕೃಷಿ ಇಲಾಖೆ 4 ಎಕರೆಪ್ರದೇಶವನ್ನು ಸರ್ಕಾರ ಮಟ್ಟದಲ್ಲಿ ಶತಾಯಗತಾಯ ಪ್ರಯತ್ನ ನಡೆಸಿ ಐಟಿಐ ಕಾಲೇಜ್ಗೆ ಜಾಗ ಮಂಜೂರಿ ಮಾಡಿಸಿದ್ದೇನೆ. -ದಿನಕರ ಶೆಟ್ಟಿ, ಶಾಸಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.