ದಾಖಲೆಗಳನ್ನು ಸರಿಯಾಗಿ ಕಾಯ್ದುಕೊಳ್ಳಿ: ಎಸ್ಪಿ
Team Udayavani, Nov 7, 2020, 9:15 PM IST
ಮುಂಡಗೋಡ: ವಾಹನಗಳನ್ನು ಚಲಾವಣೆ ಮಾಡುವ ಮುನ್ನ ಎಲ್ಲ ದಾಖಲೆಗಳನ್ನು ಸರಿಯಾಗಿ ಇಟ್ಟುಕೊಳ್ಳಬೇಕು. ಇಲ್ಲದಿದ್ದರೆ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಎಸ್ಪಿ ಶಿವಪ್ರಕಾಶ ದೇವರಾಜ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು. ಬೈಕ್ ಹಾಗೂ ವಾಹನಗಳ ಸವಾರರು ಲೈಸನ್ಸ್ ಹಾಗೂ ವಿಮೆ ವಾಹನಗಳ ದಾಖಲೆಗಳು ಸರಿಯಾಗಿ ಇಟ್ಟುಕೊಳ್ಳಬೇಕು. ಇಲ್ಲದಿದ್ದರೆ ಪೊಲೀಸರು ದಂಡ ವಿಧಿ ಸುತ್ತಾರೆ ಹಾಗೂ ಅಪಘಾತಗಳು ಸಂಭವಿಸಿದಾಗ ತೊಂದರೆಯಾಗುತ್ತವೆ. ಆದ್ದರಿಂದ ವಾಹನಗಳ ದಾಖಲೆಗಳನ್ನುಇಟ್ಟುಕೊಂಡು ವಾಹನ ಚಲಾಯಿಸಬೇಕು ಎಂದರು.
ಮುಂದಿನ ದಿನಗಳಲ್ಲಿ ಸಿಪಿಐ ಹಾಗೂ ಪಿಎಸ್‌ಐ ಅವರ ನೇತೃತ್ವದಲ್ಲಿ ಪ್ರಮುಖ ಗ್ರಾಮಗಳಲ್ಲಿ ಜನಸಂಪರ್ಕ ಸಭೆಗಳನ್ನು ನಡೆಸಲಾಗುವುದು ಇದರಿಂದ ಸಾರ್ವಜನಿಕರಿಗೆ ಹೆಚ್ಚು ಅನುಕೂಲವಾಗಲಿದೆ ಎಂದರು. ಡಿಸೆಂಬರದಲ್ಲಿ ಸಂಚಾರಿ ಸಪ್ತಾಹ ಆಚರಿಸಲಾಗುತ್ತದೆ. ಒಂದೆರಡು ದಿನಧ್ವನಿವರ್ಧಕದ ಮೂಲಕ ಪ್ರತಿ ಗ್ರಾಮ ಮಟ್ಟದಲ್ಲಿಯೂ ಸಂಚಾರ ನಿಯಮಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ. ನಂತರ ದಾಖಲೆಗಳಿಲ್ಲದೆ ವಾಹನ ಚಲಾಯಿಸಿದರೆ ದಂಡ ಹಾಕುತ್ತೇವೆ ಹಾಗೂ ವಾಹನಗಳ ಪಾರ್ಕಿಂಗ್ ಬೋರ್ಡ್‌ಗಳನ್ನು ಸಹ ಅಳವಡಿಸಲಾಗುವುದು ಎಂದರು.
ಜಿಲ್ಲೆಯ ಹಳಿಯಾಳ, ಸಿದ್ದಾಪುರ ಹಾಗೂ ಮುಂಡಗೋಡ ತಾಲೂಕುಗಳು ಬೇರೆ ಜಿಲ್ಲೆಗಳ ಗಡಿಯನ್ನು ಸಮೀಪದಲ್ಲಿ ಹೊಂದಿವೆ ಅದಕ್ಕಾಗಿ ಕಳ್ಳತನದ ಆರೋಪಿಗಳನ್ನು ಪತ್ತೆ ಹಚ್ಚುವುದು ಕಷ್ಟವಾಗುತ್ತಿದೆ. ಗಡಿ ಜಿಲ್ಲೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಈ ಬಗ್ಗೆ ಸೂಕ್ತ ಕ್ರಮ ವಹಿಸಲಾಗುವುದು ಎಂದರು. ಎರಡು ಲಕ್ಷಕ್ಕೂ ಅಧಿಕ ಮೌಲ್ಯದ ಬಂಗಾರ ಬೆಳ್ಳಿ ಆಭರಣಗಳು ಹಾಗೂ ಹಣವಿರುವ ದೇವಸ್ಥಾನ ಮತ್ತು ಮಸೀದಿಗಳಿಗೆ ಕಡ್ಡಾಯವಾಗಿ ಸಿಸಿ ಕ್ಯಾಮರಾಗಳನ್ನು ಅಳವಡಿಸಬೇಕು ಹಾಗೂ ದೇವಸ್ಥಾನಗಳ ಸಮಿತಿಯವರು ಪ್ರತಿದಿನ ರಾತ್ರಿ ಒಬ್ಬರಂತೆ ಭೇಟಿ ನೀಡಬೇಕು ಎಂದರು. ಘಟ್ಟದ ಮೇಲಿನ ತಾಲೂಕುಗಳಿಗೆ ರಾತ್ರಿವೇಳೆ ಗಸ್ತು ವಾಹನಗಳ ವ್ಯವಸ್ಥೆ ಮಾಡಲಾಗುವುದು ಎಂದರು.
ಮಟ್ಕಾವನ್ನು ಸಂಪೂರ್ಣ ನಿರ್ಮೂಲನೆ ಮಾಡಬೇಕಿದೆ. ಇದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ. ಮಟ್ಕಾ ಆಡುವುದು ಕಂಡರೆ ನೇರವಾಗಿ ನನಗೆ ಮಾಹಿತಿ ನೀಡಿ. ಸೂಕ್ತ ಕ್ರಮ ಜರುಗಿಸುತ್ತೆವೆ. ಇದರಲ್ಲಿ ಯಾವುದೆ ರಾಜಿ ಇಲ್ಲ. ಯಾರೂ ಬುಕ್ಕಿಗಳಿದ್ದಾರೆ ಅವರನ್ನು ಜಿಲ್ಲೆಯಿಂದಲೆ ಓಡಿಸಲಾಗುವುದು. ಆನ್ ಲೈನ್ ಮೂಲಕ ಮಟ್ಕಾ ದಂಧೆ ನಡೆದರೆ ಅದರ ವೆಬ್‌ಸೈಟ್‌ಗಳನ್ನು ನನಗೆ ತಿಳಿಸಿ ನಾನು ಕ್ರಮ ಜರುಗಿಸುತ್ತೇನೆ ಎಂದರು. ಡಿವೈಎಸ್‌ಪಿ ಗೋಪಾಲಕೃಷ್ಣ ನಾಯ್ಕ, ಸಿಪಿಐ ಪ್ರಭುಗೌಡ ಕಿರದಳ್ಳಿ, ಪಿಎಸ್‌ಐ ಬಸವರಾಜ ಮಬನೂರ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.