ಅಂತರ ಸಾಧಿಸಿ ಜಯ ಗಳಿಸೋಣ
Team Udayavani, Apr 12, 2020, 3:40 PM IST
ಜೋಯಿಡಾ: ತಾಲೂಕಾಸ್ಪತ್ರೆಗೆ ಭೇಟಿ ನೀಡಿದ ಶಾಸಕ ದೇಶಪಾಂಡೆ ತಮ್ಮ ರುಡ್‌ಸೆಟ್ ಸಂಸ್ಥೆಯಿಂದ ಸ್ಯಾನಿಟೈಸರ್ ಮತ್ತು ಮಾಸ್ಕ್ ವಿತರಿಸಿದರು
ಜೋಯಿಡಾ: ಎಲ್ಲರೂ ಮನೆಯಲ್ಲೇ ಇದ್ದು ಸಾಮಾಜಕ ಅಂತರ ಕಾಯ್ದುಕೊಂಡು ಕೊರೊನಾ ವಿರುದ್ಧ ಜಯ ಸಾ ಧಿಸೋಣ ಎಂದು ಆರ್.ವಿ. ದೇಶಪಾಂಡೆ ಕರೆ ನೀಡಿದರು. ಪಂ ಸಭಾಭವನದಲ್ಲಿ ಅಧಿಕಾರಿಗಳ ಸಭೆ ಬಳಿಕ ತಾಲೂಕಾಸ್ಪತ್ರೆ, ಹಾಸ್ಟೆಲ್‌ಗಳಿಗೆ ಭೇಟಿ ನೀಡಿ ವೀಕ್ಷಿಸಿದ ನಂತರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.
ಸ್ಥಳೀಯ ಜನಪ್ರತಿನಿಧಿಗಳೂ ಜನರ ಸಮಸ್ಯೆಗೆ ಸ್ಪಂದಿಸಬೇಕು. ಏ. 14ರೊಳಗೆ ಎಲ್ಲರಿಗೂ ಪಡಿತರ ವಿತರಿಸಲು ಸೂಚಿಸಲಾಗಿದೆ ಎಂದು ಹೇಳಿದರು. ಬೆಳೆ ಹಾನಿಯಾದರೆ ಪರಿಹಾರ ನೀಡಲು, ಅಗತ್ಯ ಬೀಜ-ಗೊಬ್ಬರ ದಾಸ್ತಾನಿಡಲು, ಹಣ್ಣುಗಳಿಗೆ ಮಾರುಕಟ್ಟೆ ಕಲ್ಪಿಸಲು, ರೈತರಿಗೆ ಕೃಷಿ ಉಪಕರಣ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಆಶಾ ಕಾರ್ಯಕರ್ತರು ಹಳ್ಳಿಗೆ ಹೋದಾಗ ಸ್ಪಂದಿಸಿ ಸಹಕರಿಸಬೇಕು. ಯಾರೂ ಅನಗತ್ಯ ಮನೆಯಿಂದ ಹೊರಬರಬಾರದು. ಅಗತ್ಯವಿದ್ದರೆ ಮಾತ್ರ ತಹಶೀಲ್ದಾರ್ ಇಲ್ಲವೇ ತಾಪಂ ಇಒ ಪರವಾನಗಿ ಪಡೆದುಕೊಳ್ಳಬೇಕೆಂದರು.
ತಾಲೂಕಾ ಕೇಂದ್ರದಲ್ಲಿ ಕೊರೊನಾ ಹಿನ್ನೆಲೆಯಲ್ಲಿ 55 ಬೆಡ್ ವ್ಯವಸ್ಥೆ ಮಾಡಲಾಗಿದೆ. ತಾಲೂಕಾಸ್ಪತ್ರೆಯಲ್ಲಿ 20 ಬೆಡ್, ಬಾಲಕರ ಹಾಸ್ಟೆಲ್‌ನಲ್ಲಿ 15 ಹಾಗೂ ಮೊರಾರ್ಜಿ ಹಾಸ್ಟೆಲ್‌ನಲ್ಲಿ 20 ಬೆಡ್ ವ್ಯವಸ್ಥೆ ಮಾಡಲಾಗಿದೆ ಎಂದರು. ಎಂಎಲ್‌ಸಿ ಘೋಕ್ಲೃಕರ್, ಪ್ರಿಯಾಂಕಾ ಎಂ., ತಾಪಂ ಅಧ್ಯಕ್ಷೆ ನರ್ಮದಾ ಪಾಕ್ಲೃಕರ್ ಇನ್ನಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Amazon,Flipkart ವಿರುದ್ಧ ತನಿಖೆ: ಸುಪ್ರೀಂನಿಂದ ಎಲ್ಲಾ ಪ್ರಕರಣಗಳು ಕರ್ನಾಟಕ ಹೈಕೋರ್ಟ್‌ಗೆ
Waqf; ವಿಜಯೇಂದ್ರ ವಿರುದ್ಧ ಲಂಚ ಆರೋಪ: ಸಿಬಿಐ ತನಿಖೆಗೆ ಬಿಜೆಪಿ ಒತ್ತಾಯ
Sri Lanka; ಭಾರತದ ವಿರುದ್ದ ನಮ್ಮ ಭೂಮಿಯನ್ನು ಬಳಸಲು ಬಿಡೆವು: ಲಂಕಾ ಅಧ್ಯಕ್ಷ ಡಿಸಾನಾಯಕೆ
Constitution Debate:ಸಚಿವೆ ನಿರ್ಮಲಾ Balraj,Sultanpuri ಬಂಧನ ಘಟನೆ ಉಲ್ಲೇಖಿಸಿದ್ದೇಕೆ?
Kiccha Sudeep: ಬಿಗ್ ಬಾಸ್‌ಗೆ ಗುಡ್ ಬೈ.. ನಿರ್ಧಾರದ ಹಿಂದಿನ ಕಾರಣ ಬಿಚ್ಚಿಟ್ಟ ಕಿಚ್ಚ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.