ಕಾಳಿ ನೀರು ಸಾಗಿಸಲು ತೀವ್ರ ವಿರೋಧ
Team Udayavani, Mar 13, 2021, 5:23 PM IST
ದಾಂಡೇಲಿ: ಕಾಳಿ ನದಿಯಿಂದ ಅಳ್ನಾವರ ಪಟ್ಟಣಕ್ಕೆ ಕುಡಿಯುವ ನೀರು ಸಾಗಿಸುವ ಯೋಜನೆಯನ್ನುವಿರೋಧಿಸಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿರುವಪ್ರಮುಖರೊಂದಿಗೆ ಶುಕ್ರವಾರ ನಗರಸಭೆಸಭಾಭವನದಲ್ಲಿ ಅಧಿಕಾರಿಗಳು ನಡೆಸಿದ ಮಾತುಕತೆ ವಿಫಲವಾಗಿದೆ.
ಸ್ಥಳೀಯವಾಗಿ ಅಹವಾಲು ಸಭೆ ನಡೆಸದೆ ಅಳ್ನಾವರ ಪಟ್ಟಣಕ್ಕೆ ಕಾಳಿ ನದಿಯಿಂದ ನಿರು ಸಾಗಿಸುವುದನ್ನು ಸ್ಪಷ್ಟವಾಗಿ ವಿರೋಧಿಸಿರುವ ಧರಣಿ ನಿರತ ಮುಖಂಡರು, ಕಾಳಿ ನದಿ ಉತ್ತರ ಕನ್ನಡ ಜಿಲ್ಲೆಯ ಜೀವ ನದಿಯಾಗಿದೆ. ಜಿಲ್ಲೆಯ ಕುಡಿಯುವ ನೀರು ಪೂರೈಕೆಗೆ ಮಹತ್ವನೀಡುವ ಬದಲು ಬೇರೆ ಜಿಲ್ಲೆಗೆ ನೀರು ಸಾಗಿಸಲು ಪ್ರಯತ್ನ ನಡೆ ಸಿರುವುದು ಸರಿಯಲ್ಲ. ಅದರಲ್ಲೂದಾಂಡೇಲಿ, ಜೋಯಿಡಾ ಮತ್ತು ರಾಮನಗರದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರವಿದೆ.
ಇವೆಲ್ಲವುಗಳಿಗೆ ಮೊದಲು ಪ್ರಾಮುಖ್ಯತೆ ನೀಡಬೇಕು. 2007 ರಲ್ಲಿ ಧರಣಿ ಸತ್ಯಾಗ್ರಹದ ಫಲವಾಗಿ ದಾಂಡೇಲಿ ನಗರದ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರ ಕೇಳಿಪಡೆದಿದ್ದ ಜೈನ್ ವರದಿಯಲ್ಲಿ ಪ್ರಮುಖ ಅಂಶಗಳನ್ನುಅನುಷ್ಠಾನಕ್ಕೆ ತರಬೇಕು. ಸೂಪಾ ಜಲಾಶಯದಿಂದ ಕನಿಷ್ಠ ಹರಿವಿದ್ದಾಗ ಕಾಳಿ ನದಿ ಬತ್ತಿದ ಸ್ಥಿಥಿಯಲ್ಲಿದ್ದರೂಸಹ ಎಡಬಿಡದೆ ನೀರನ್ನು ಹಳಿಯಾಳ ತಾಲೂಕಿಗೆ ಸಾಗಿಸಲಾಗುತ್ತಿರುವುದರಿಂದ ಕಾಳಿ ನದಿ ಸಂಪೂರ್ಣ ಬತ್ತಿದ ಸ್ಥಿಥಿಗೆ ತಲುಪಿದೆ. ಇದಕ್ಕೆ ಕಡಿವಾಣ ಹಾಕಿ ನದಿಯಲ್ಲಿನ ಕನಿಷ್ಠ ಹರಿವನ್ನು ಉಳಿಸಿ ಕೊಳ್ಳಬೇಕೆಂದು ಧರಣಿ ನಿರತರು ವಾದಿಸಿದರು.
ಅಲ್ಲದೇ, ಯಾವುದೇ ಕಾರಣಕ್ಕೂ ಸರ್ಕಾರದ ಆದೇಶವಿದೆ ಎಂದು ಸಬೂಬು ಹೇಳಿ ಅಳ್ನಾವರ ಪಟ್ಟಣಕ್ಕೆಕಾಳಿ ನದಿಯಿಂದ ನೀರು ಸಾಗಿಸಲು ಬಿಡುವುದಿಲ್ಲಎಂದು ಅಧಿಕಾರಗಳಿಗೆ ಸ್ಪಷ್ಟವಾಗಿ ಹೇಳಿದರು. ಧಾರವಾಢ ವಿಭಾಗದ ನಗರ ನೀರು ಸರಬರಾಜು ಮತ್ತು ಒಳಚರಂಡಿ ಸಹಾಯಕ ಅಭಿಯಂತರ ಕಿರಣಮಾಸ್ಥಿ ಮಾತನಾಡಿ, 2017 ರಲ್ಲಿಯೇ ಅಳ್ನಾವರಪಟ್ಟಣಕ್ಕೆ ಕುಡಿಯುವ ನೀರು ಪೂರೈಸಲು ಸರ್ಕಾರದಆದೇಶವಾಗಿದೆ. ಅದರಂತೆ ಈಗಾಗಲೇ ಶೇ.80 ಪ್ರತಿಶತಕಾಮಗಾರಿ ಮುಗಿದಿದೆ. ಕುಡಿಯುವ ನೀರು ಜನ ಸಾಮಾನ್ಯರ ಮೂಲ ಸೌಲಭ್ಯಗಳಲ್ಲಿ ಒಂದಾಗಿದ್ದು,ಯಾವ ಜಿಲ್ಲೆ ಅಥವಾ ಯಾವ ಪ್ರದೇಶಕ್ಕೆ ನೀರು ಸಾಗಿಸಲಾಗುತ್ತದೆ ಎನ್ನುವ ಪ್ರಶೆ¡ ಉದ್ಭವಿಸುವುದಿಲ್ಲ,ಆದ ಕಾರಣ ಕುಡಿಯುವ ನೀರು ಪೂರೈಕೆಗೆ ಅವಕಾಶ ಮಾಡಿಕೊಂಡಬೇಕೆಂದು ಹೇಳಿದರು.
ಕರ್ನಾಟಕ ವಿದ್ಯುತ್ ನಿಗಮದ ಸಹಾಯಕ ಅಭಿಯಂತರ ರಾಮದಾಸ ಮಾತನಾಡಿ, ಸರ್ಕಾರದಆದೇಶದಂತೆ 812 ಟಿಎಂಸಿ ನೀರನ್ನು ಸಾಗಿಸಲುಅನುಮತಿ ನೀಡಲಾಗಿದೆ. ಅದರಂತೆ ಕೆಪಿಸಿಗೆವಾರ್ಷಿಕವಾಗಿ ತಗಲುವ 2.3 ಕೋಟಿ ರೂ. ವೆಚ್ಚವನ್ನು ಸರ್ಕಾರ ಭರಿಸಲಿದೆ ಎಂದರು.
ಪೌರಾಯಕ್ತ ಗಣಪತಿ ಶಾಸ್ತ್ರಿ, ತಹಶೀಲ್ದಾರ್ ಶೈಲೇಶ ಪರಮಾನಂದ, ಅಳ್ನಾವರ ಪುರಸಭೆಮುಖ್ಯಾಧಿಕಾರಿ ಗುಡಕಾರ, ಧಾರವಾಡ ವಿಭಾಗದಸಹಾಯಕ ಅಭಿಯಂತರ ರವಿಕುಮಾರ, ಧರಣಿ ನಿರತ ಮುಖಂಡರಾದ ಅಕ್ರಂ ಖಾನ್, ವಾಸುದೇವಪ್ರಭು, ಬಲವಂತ ಬೊಮ್ಮನಹಳ್ಳಿ, ರಮೇಶ ನಾಯ್ಕ,ಸತೀಶ ನಾಯ್ಕ, ಪ್ರಮೋದ ಸಪ್ರ, ಇಲಿಯಾಸ್ ಕಾಟಿ, ಅಶೋಕ ಪಾಟೀಲ, ಅಬ್ದುಲ್ ವಹಾಬ ಬಾಂಸರಿ, ಶಾರದಾ ಪರಶುರಾಮ, ವಸಂತಕುಮಾರ್ ಮನ್ನೇರಿ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Actor Darshan: 6 ತಿಂಗಳ ಬಳಿಕ ದರ್ಶನ್ ಭೇಟಿ: ಪವಿತ್ರಾ ಭಾವುಕ
Nimma Vasthugalige Neeve Javaabdaararu review: ಜವಾಬ್ದಾರಿಯಿಂದ ಸಿನಿಮಾ ನೋಡಿ
Bangladesh: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ತಮೀಮ್ ಇಕ್ಬಾಲ್
Mangaluru: ಹಿಂದಿ ರಾಷ್ಟ್ರ ಭಾಷೆ ಅಲ್ಲ… ಆರ್.ಅಶ್ವಿನ್ ಹೇಳಿಕೆಗೆ ಅಣ್ಣಾಮಲೈ ಹೇಳಿದ್ದೇನು?
Mudhol: ರೈತರ ಜಮೀನಿನಲ್ಲಿ ಮೊಸಳೆ ಪ್ರತ್ಯಕ್ಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.