ಸೋರುತಿಹುದು ಗಡಿನಾಡ ಕನ್ನಡ ಭವನ!


Team Udayavani, Sep 20, 2019, 2:47 PM IST

uk-tdy-2

ಜೋಯಿಡಾ: ಗಡಿ ತಾಲೂಕಿನಲ್ಲಿ ಕನ್ನಡ ಭಾಷೆ ಅಭಿವೃದ್ಧಿ ಆಗಬೇಕು. ಇಲ್ಲಿ ಕನ್ನಡಕ್ಕೆ ಹೆಚ್ಚಿನ ಪ್ರಾಧಾನ್ಯತೆ ದೊರೆಯಬೇಕು. ಈ ಮೂಲಕ ಕನ್ನಡ ಭಾಷೆ, ಸಂಸ್ಕೃತಿ ಬೆಳೆಸಬೇಕು ಎನ್ನುವ ಸದುದ್ದೇಶದಿಂದ ರಾಜ್ಯ ಕನ್ನಡ ಪ್ರಾಧಿಕಾರ ಪ್ರತಿ ಗಡಿ ತಾಲೂಕಿನಲ್ಲಿ ಕನ್ನಡ ಭವನ ನಿರ್ಮಿಸಿದೆ. ಆದರೆ ಜೋಯಿಡಾ ತಾಲೂಕಿನಲ್ಲಿ ಬೇಕಾಬಿಟ್ಟಿ ಬಳಕೆಯಾದ ಈ ಕಟ್ಟಡ ನಿರ್ವಹಣೆ ಇಲ್ಲದೆ, ಸಂಕಲ್ಪಿತ ಉದ್ದೇಶವೂ ಈಡೇರದೆ ಅನಾಥವಾಗಿ ನಿಂತಿದೆ.

ಕಳೆದ 2006-07 ರಲ್ಲಿ ಬಿಜೆಪಿ ಸರಕಾರವಿದ್ದಾಗ ತಾಲೂಕಿನ ಕನ್ನಡ ಭವನ ನಿರ್ಮಾಣಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆರಂಭದಲ್ಲಿ 5ಲಕ್ಷ ರೂ. ನೀಡಿತ್ತು. ನಂತರ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಮತ್ತು ಪ್ರಾಧಿಕಾರದ ಸದಸ್ಯ ವಿಷ್ಣು ನಾಯ್ಕರ ವಿಶೇಷ ಕಾಳಜಿಯಿಂದ ಗಡಿಭಾಗ ಜೋಯಿಡಾದಲ್ಲಿ 20 ರೂ. ಲಕ್ಷದ ಕನ್ನಡ ಭವನ ನಿರ್ಮಾಣಕ್ಕೆ ಚಾಲನೆ ದೊರೆಯಿತು. ಆದರೆ ಕನ್ನಡ ಭವನದ ನೀಲ ನಕ್ಷೆಯಂತೆ ಗ್ರಂಥಾಲಯ, ವಿಶ್ರಾಂತಿ ಕೋಠಡಿ ನಿರ್ಮಾಣವಾಗದೆ ಕಳಪೆ ಕಾಮಗಾರಿ ಸುದ್ದಿ ಹರಡಿ, ಪ್ರಾಧಿಕಾರದ ಕೆಣಗಣ್ಣಿಗೆ ಗುರಿಯಾಗಿತ್ತು. ಕೊನೆಯಲ್ಲಿ ತಕ್ಕಮಟ್ಟಿಗೆ ಕನ್ನಡಿಗರಿಗೊಂದು ಕನ್ನಡ ಭವನ ಎಂಬಂತೆ ನಿರ್ಮಾಣಗೊಂಡ ಸಮಾಧಾನ ತಂದಿತ್ತು.

ಅನಾಥವಾದ ಭವನ: 2008-09 ರಲ್ಲಿ ಕನ್ನಡ ಭವನ ಉದ್ಘಾಟನೆಗೊಂಡು ಈತನಕ 10 ವರ್ಷಗಳಲ್ಲಿ ನೂರಾರು ಸಭೆ ಸಮಾರಂಭಗಳು ನಡೆದಿವೆ. ಇನ್ನೂ ನಡೆಯುತ್ತಲೇ ಇದೆ. ಆದರೆ ಒಂದು ಬಾರಿಯೂ ಕಟ್ಟಡಕ್ಕೆ ಸುಣ್ಣಬಣ್ಣ ಹಾಕಲಾಗಿಲ್ಲ. ಕೊಠಡಿಯ ಸ್ವತ್ಛತೆಗೆ ನಿಗಾ ವಹಿಸಿಲ್ಲ, ಇಲ್ಲಿನ ಫ್ಯಾನ್‌ ತಿರುಗುತ್ತಿಲ್ಲ, ಶೌಚಕೊಠಡಿ ಬಳಕೆಗೆ ಯೋಗ್ಯವಿಲ್ಲ. ಕೊಠಡಿ ಒಂದು ಬಾಗಿಲು ಮುರಿದು ಬಿದ್ದಿದೆ. ಕಟ್ಟಡದ ಮೇಲ್ಛಾವಣಿ ಸೋರುತ್ತಿದೆ. ಆದರೆ ಈ ಕಟ್ಟಡದ ಸುಪರ್ದಿ ಪಡೆದ ಇಲಾಖೆ ಅಧಿಕಾರಿಗಳು ಮಾತ್ರ ಇದು ತಮ್ಮದಲ್ಲ ಎಂಬಂತೆ ಬೇಕಾಬಿಟ್ಟಿ ಬಳಕೆಗೆ ಮಾತ್ರ ಸೀಮಿತವಾಗಿಟ್ಟು ಪಾಳು ಕೆಡವುತ್ತಿದ್ದಾರೆ ಎನ್ನುವ ಆರೋಪ ಕನ್ನಡಪರ ಸಂಘಟನೆಯಿಂದ ಕೇಳಿಬರುತ್ತಿದೆ.

ನಿರ್ವಹಣಾ ಸಮೀತಿ ಇಲ್ಲ: ನೂರಾರು ಕಾರ್ಯಕ್ರಮಗಳಿಗೆ ಉಪಯೋಗಿಸುತ್ತಿರುವ ಕನ್ನಡ ಭವನ ಸೋರುತ್ತಿದ್ದು, ಬಾಗಿಲು ಕಿಡಕಿಗಳು ಕೃಷಗೊಂಡು ಪಾಳು ಬಿದ್ದ ಕಟ್ಟಡಂತೆ ಕಾಣುತ್ತಿದೆ. ಆದರೆ ಇದರ ಉಪಯೋಗ ಪಡೆದ ಇಲಾಖೆಗಳು ಇದರ ದುರಸ್ತಿಗೆ, ಸ್ವತ್ಛತೆಗೆ ಕಿಂಚಿತ್ತೂ ಕಾಳಜಿ ವಹಿಸುತ್ತಿಲ್ಲವೇಕೆ ಎನ್ನುವ ಪ್ರಶ್ನೆ ಕೇಳುವಂತೆ ಮಾಡಿದೆ. ಕನ್ನಡ ಭವನಕ್ಕೆ ಇರುವ ವಿದ್ಯುತ್‌ ಸಂಪರ್ಕದ ಬಿಲ್‌ ಕಟ್ಟಲಾಗದೆ ವಿದ್ಯುತ್‌ ತೆಗೆದಿದ್ದಾರೆ ಎನ್ನುವ ಮಾಹಿತಿ ಇದೆ. ಕಾರ್ಯಕ್ರಮ ನಡೆಸುವವರು ಪಕ್ಕದ ಇಲಾಖೆಯಿಂದ ವಿದ್ಯುತ್‌ ಸಂಪರ್ಕ ಪಡೆದು ನಡೆಸುತ್ತಿದ್ದಾರೆ ಎನ್ನಲಾಗಿದೆ. ಇಂದಿಗೂ ಕಟ್ಟಡ ಹೆಸರಿಗಷ್ಟೇ ಕನ್ನಡ ಭವನವಾಗಿ ಉಳಿದಿದೆ. ಕನ್ನಡ ಭವನ ನಿರ್ವಹಣಾ ಸಮೀತಿ ಇದ್ದರೆ ಕಾಲಕಾಲಕ್ಕೆ ಸರಿಯಾಗಿ ಕೆಲಸ ಆಗುತ್ತಿತ್ತು. ಇದರ ಉಸ್ತುವಾರಿ ಹೊತ್ತುಕೊಂಡ ಇಲಾಖೆ ಮಾತ್ರ ಈ ಬಗ್ಗೆ ಕಿಂಚಿತ್ತೂ ಯೋಚಿಸುತ್ತಿಲ್ಲ ಎಂದು ಆರೋಪಿಸಲಾಗಿದೆ.

 ರಿಪೇರಿಗೆ ಅನುದಾನವಿಲ್ಲವೇ?: ತಾಲೂಕಿನ ವಿವಿಧ ಇಲಾಖೆ ಕಟ್ಟಡಗಳಿಗೆ ರಿಪೇರಿ ಅಗತ್ಯವಿಲ್ಲದಿದ್ದರೂ ಹಂಚಿನ ಮೇಲೆ ಅಲ್ಯೂಮಿನಿಯಂ ಸೀಟ್‌ ಹೊದಿಕೆ ಹಾಕಿ ತೋರಿಕೆಗೆ ರಿಪೇರಿ ಮಾಡಿ, ಅನುದಾನ ಖರ್ಚು ತೋರಿಸುವ ಅಧಿಕಾರಿಗಳು, ನಮ್ಮದೇ ಸರಕಾರದ ಗಡಿ ಕನ್ನಡಿಗರ ಕನ್ನಡ ಭವನ ರಿಪೇರಿಗೆ ಮುತುವರ್ಜಿ ವಹಿಸುತ್ತಿಲ್ಲವೇಕೆ. ಇದಕ್ಕೆ ರಿಪೇರಿ ಮಾಡಿದರೆ ಕಡಿಮೆ ಅನುದಾನ ತಗುಲಲಿದೆ.

ಟಾಪ್ ನ್ಯೂಸ್

Shri-Guru-Kottureshwara-Temple

ಬರೀ ಹುಂಡಿ ಪೆಟ್ಟಿಗೆಗಳಿಂದ ತುಂಬಿದ ಕೊಟ್ಟೂರೇಶ್ವರ ದೇವಸ್ಥಾನ: ಭಕ್ತರಿಂದ ತೀವ್ರ ಆಕ್ರೋಶ

ಮಾನಸಿಕ ಅಸ್ವಸ್ಥ ಬಾಲಕಿ ಮೇಲೆ ಲೈಂಗಿಕದೌರ್ಜನ್ಯ: ಆರೋಪಿ ವಿಚಾರಣೆ ರದ್ದತಿಗೆ ಹೈಕೋರ್ಟ್‌ ನಕಾರ

ಮಾನಸಿಕ ಅಸ್ವಸ್ಥ ಬಾಲಕಿ ಮೇಲೆ ಲೈಂಗಿಕದೌರ್ಜನ್ಯ: ಆರೋಪಿ ವಿಚಾರಣೆ ರದ್ದತಿಗೆ ಹೈಕೋರ್ಟ್‌ ನಕಾರ

ICC ಏಕದಿನ, ಟಿ20 ಕ್ರಿಕೆಟಿಗ ಪ್ರಶಸ್ತಿ ನಾಮಿನೇಶನ್‌ ಪಟ್ಟಿ ಬಿಡುಗಡೆ; ಬುಮ್ರಾ ಹೆಸರಿಲ್ಲ

ICC ಏಕದಿನ, ಟಿ20 ಕ್ರಿಕೆಟಿಗ ಪ್ರಶಸ್ತಿ ನಾಮಿನೇಶನ್‌ ಪಟ್ಟಿ ಬಿಡುಗಡೆ; ಬುಮ್ರಾ ಹೆಸರಿಲ್ಲ

bellad

Dharwad; ನಾಲಿಗೆ ಹರಿಬಿಡುವ ನಾಯಕರ ಮೇಲೆ ಕ್ರಮ ಆಗಬೇಕು: ಶಾಸಕ ಬೆಲ್ಲದ್

17-ckm

Kottigehara: ಆಟೋ ರಿಕ್ಷಾದಲ್ಲಿ ಗಾಂಜಾ ಪತ್ತೆ: ಇಬ್ಬರು ಆರೋಪಿಗಳ ಬಂಧನ

16-yellapura

Yellapura: ಬಸ್‌- ಬೈಕ್‌ ಡಿಕ್ಕಿ; ಟಯರ್‌ ತಲೆ ಮೇಲೆ ಹರಿದು ಇಬ್ಬರು ಸ್ಥಳದಲ್ಲೇ ಮೃತ್ಯು

ಸೋಲಿನ ಭಯದಿಂದ ಬಿಜೆಪಿ ಆಪರೇಶನ್‌ ಕಮಲ ಆರಂಭಿಸಿದೆ: ಅರವಿಂದ ಕೇಜ್ರಿವಾಲ್

Delhi; ಸೋಲಿನ ಭಯದಿಂದ ಬಿಜೆಪಿ ಆಪರೇಶನ್‌ ಕಮಲ ಆರಂಭಿಸಿದೆ: ಅರವಿಂದ ಕೇಜ್ರಿವಾಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

16-yellapura

Yellapura: ಬಸ್‌- ಬೈಕ್‌ ಡಿಕ್ಕಿ; ಟಯರ್‌ ತಲೆ ಮೇಲೆ ಹರಿದು ಇಬ್ಬರು ಸ್ಥಳದಲ್ಲೇ ಮೃತ್ಯು

ಬೆಳೆವಿಮೆ ಸಿಗದೆ ಕೃಷಿಕರ ಪರದಾಟ: ಅಡಕೆ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸದ ಸರ್ಕಾರ

ಬೆಳೆವಿಮೆ ಸಿಗದೆ ಕೃಷಿಕರ ಪರದಾಟ: ಅಡಕೆ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸದ ಸರ್ಕಾರ

Sathish-sail–court

Belekeri Mining Case: ಕಾಂಗ್ರೆಸ್‌ ಶಾಸಕ ಸತೀಶ್‌ ಸೈಲ್‌ ಜೈಲು ಶಿಕ್ಷೆಗೆ ಹೈಕೋರ್ಟ್‌ ತಡೆ

ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಹೊತ್ತಿ ಉರಿದ ಲಾರಿ… ಅಪಾರ ಪ್ರಮಾಣದ ಸೊತ್ತು ಬೆಂಕಿಗಾಹುತಿ

ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಹೊತ್ತಿ ಉರಿದ ಲಾರಿ… ಅಪಾರ ಪ್ರಮಾಣದ ಸೊತ್ತು ಬೆಂಕಿಗಾಹುತಿ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1–dddd

Vitla; ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ: ದಂಪತಿಗೆ ಗಾಯ, ಬಾಲಕ ಮೃ*ತ್ಯು

Shri-Guru-Kottureshwara-Temple

ಬರೀ ಹುಂಡಿ ಪೆಟ್ಟಿಗೆಗಳಿಂದ ತುಂಬಿದ ಕೊಟ್ಟೂರೇಶ್ವರ ದೇವಸ್ಥಾನ: ಭಕ್ತರಿಂದ ತೀವ್ರ ಆಕ್ರೋಶ

10

Udupi: ಸಂಚಾರ ಬದಲಿಸಿದರೂ ಸಮಸ್ಯೆ ಬದಲಾಗಲಿಲ್ಲ!

9

Surathkal-ಗಣೇಶಪುರ ರಸ್ತೆಯಲ್ಲಿ ಟ್ಯಾಂಕರ್‌ ರಾಜ್ಯಭಾರ!

8

Mangaluru: ಕರಾವಳಿ ಉತ್ಸವ; ಮತ್ಸ್ಯ ಲೋಕದೊಳಗೆ ನಾವು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.