ಕೋವಿಡ್‍ಗಿಂತ ಚಿತ್ರರಂಗಕ್ಕೆ ದೊಡ್ಡ ಆಘಾತ ನೀಡಿದ್ದು ಪುನೀತ್ ಆಗಲಿಕೆ: ಟೆನ್ನಿಸ್ ಕೃಷ್ಣ
Team Udayavani, Feb 13, 2022, 1:50 PM IST
ಭಟ್ಕಳ: ಚಿತ್ರರಂಗಕ್ಕೆ ಕಳೆದ ಎರಡು ವರ್ಷಗಳಿಂದ ಕೊರೊನಾ ನೀಡಿದ ಹೊಡೆತಕ್ಕಿಂತ ಇತ್ತೀಚೆಗೆ ಪುನೀತ್ ರಾಜ್‍ಕುಮಾರ್ ಅವರ ನಿಧನ ಹೆಚ್ಚು ಆಘಾತಕಾರಿಯಾಗಿದೆ. ಚಿತ್ರರಂಗ ಇನ್ನೂ ಕೂಡಾ ಅವರ ನಿಧನದ ದುಖಃದಿಂದ ಹೊರಬಂದಿಲ್ಲ ಎಂದು ಹಾಸ್ಯನಟ ಟೆನ್ನಿಸ್ ಕೃಷ್ಣ ಹೇಳಿದರು.
ಅವರು ಭಟ್ಕಳದಲ್ಲಿ ಕಿಸ್‍ಮತ್ ಕಿರು ಚಿತ್ರ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಚಿತ್ರರಂಗಕ್ಕೆ ಇದೊಂದು ದೊಡ್ಡ ನಷ್ಟವಾಗಿದ್ದು ಅವರ ಅಗಲಿಕೆಯ ದುಖಃ ಕೇವಲ ನಮಗಷ್ಟೇ ಅಲ್ಲ, ಆಂದ್ರ, ತಮಿಳುನಾಡಿನಿಂದ ಕೂಡಾ ತಂಡೋಪ ತಂಡವಾಗಿ ಜನ ಬಂದು ಅವರ ದರ್ಶನ ಪಡೆಯುತ್ತಿರುವುದು ಅವರ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಇಂದಿನ ಚಿತ್ರರಂಗಕ್ಕೂ ಮೊದಲಿನ ಚಿತ್ರರಂಗಕ್ಕೂ ಅನೇಕ ಬದಲಾವಣೆಗಳಾಗಿವೆ ಎಂದರು.
ಹಿಂದೆ ಒಂದು ಚಿತ್ರದಲ್ಲಿನ ಕಥೆಗೂ ಅದರಲ್ಲಿನ ಹಾಡಿಗೂ ಒಂದಕ್ಕೊಂದು ಸಂಬಂಧ ಇರುತ್ತಿತ್ತು. ಒಮ್ಮೆ ಕೇಳಿದರೆ ಮತ್ತೊಮ್ಮೆ ಕೇಳಬೇಕೆನ್ನಿಸುವ ಹಾಡು ಅಂದಿನ ಚಿತ್ರಗಳಲ್ಲಿತ್ತು. ಅಂದಿನ ಚಿತ್ರ ಸಾಹಿತಿಗಳು ಒಳ್ಳೊಳ್ಳೆ ಹಾಡುಗಳನ್ನು ಚಿತ್ರರಂಗಕ್ಕೆ ಕೊಟ್ಟಿದ್ದಾರೆ. ಚಿತ್ರರಂಗದ ಬೇರೆ ಬೇರೆ ಬಾಷೆಗಳ ಚಿತ್ರರಂಗಕ್ಕೆ ಪೈಪೋಟಿ ನೀಡುವುದಕ್ಕೋಸ್ಕರ ಈಗಿನ ಬದಲಾವಣೆಯನ್ನು ನಾವು ನೋಡುತ್ತಿದ್ದೇವೆ ಎಂದು ಹೇಳಿದರು.
ಕನ್ನಡ ಚಿತ್ರರಂಗದ ಬದಲಾವಣೆ ಅನಿವಾರ್ಯವಾಗಿತ್ತು ಲಾಕ್‍ಡೌನ್ ಆಗುವುದಕ್ಕೆ ಮುಂಚೆ ಲವ್‍ಮಾಕ್ವೆಲ್, ತಿಥಿ ಚಿತ್ರಗಳು ಬಂದವು. ಅವುಗಳಲ್ಲಿ ತಿಥಿ ಎನ್ನುವ ಚಿತ್ರ ಅತ್ಯಂತ ಕಡಿಮೆ ಬಜೆಟ್‍ನ ಚಿತ್ರವಾಗಿದ್ದ ಅನೇಕ ಪ್ರಶಸ್ತಿಗಳನ್ನು ಗಳಿಸುವಲ್ಲಿ ಯಶಸ್ವೀಯಾಗಿದ್ದಲ್ಲದೇ ಚಿತ್ರರಂಗದ ದಿಗ್ಗಜರು ಕೂಡಾ ಚಿತ್ರದ ಕುರಿತು ತಿಳಿದುಕೊಳ್ಳುವಂತೆ ಮಾಡಿ ಉತ್ತಮ ಸದ್ದು ಮಾಡಿದೆ. ಹೊಸ ಕಲಾವಿದರು, ಹೊಸ ನಿರ್ದೇಶಕರು ಕೂಡಿ ಮಾಡಿದ ಈ ಚಿತ್ರ 15 ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದು ಅನೇಕ ಹಿಂದಿ ನಟರುಗಳು ಸಹ ಚಿತ್ರದ ಕುರಿತು ತಿಳಿದುಕೊಂಡಿದ್ದಾರೆ ಎಂದರೆ ಅದು ಕನ್ನಡ ಚಿತ್ರರಂಗದ ಹೆಮ್ಮೆ.
ಕೊರೊನಾ ಹೊಡೆತದ ನಂತರ ಚಿತ್ರರಂಗ ಮತ್ತೆ ಚೇತರಿಸಿಕೊಳ್ಳುವತ್ತ ಸಾಗುತ್ತಿದೆ. ಎಲ್ಲಾ ಥಿಯೇಟರ್ ಳಲ್ಲಿ ಶೇ.100ರಷ್ಟು ಭರ್ತಿಗೆ ಪರವಾನಿಗೆ ಸರಕಾರ ನೀಡಿದ್ದು ಜನತೆ ಕನ್ನಡ ಚಿತ್ರಗಳನ್ನು ನೋಡುವ ಮೂಲಕ ಚಿತ್ರಗಳನ್ನು ಉಳಿಸಿ, ಕಲಾವಿದರನ್ನು ಬೆಳೆಸುವಂತೆ ಕರೆ ನೀಡಿದರು.
ಕರಾವಳಿ ನಂಟು
ಕರಾವಳಿಯ ಕುರಿತು ತನ್ನ ಸಂಬಂಧವನ್ನು ಬಿಚ್ಚಿಟ್ಟ ಟೆನ್ನಿಸ್ ಕೃಷ್ಣ ನನ್ನ ಪತ್ನಿ ಮಂಗಳೂರಿನವಳು, ತನ್ನ ಮೊದಲ ಚಿತ್ರ ಮಲ್ಪೆಯಲ್ಲಿ ಚಿತ್ರೀಕರಣಗೊಂಡಿದ್ದರಿಂದ ಕರಾವಳಿಯ ನನ್ನ ಸಂಬಂಧ ಇನ್ನಷ್ಟು ಗಟ್ಟಿಗೊಂಡಿದೆ. ಮುರ್ಡೇಶ್ವರದಲ್ಲಿ, ಭಟ್ಕಳದಲ್ಲಿ ಅನೇಕ ಕಡೆಗಳಲ್ಲಿ ಶೂಟಿಂಗ್‍ಗೆ ಬಂದಿದ್ದ ತನಗೆ ಕರಾವಳಿ ಅಚ್ಚುಮೆಚ್ಚು ಎಂದರು.
ನನ್ನ ಅನೇಕ ಸಂಬಂಧಿಗಳು ಮಂಗಳೂರು, ಹೊನ್ನಾವರ, ಕುಮಟಾದಲ್ಲಿದ್ದಾರೆ ಎಂದು, ಭಟ್ಕಳದ ರಾಮಕೃಷ್ಣ ನಾಯ್ಕ, ರಾಜು ಗುಡಿಗಾರ ಅವರ ಬಹಳ ವರ್ಷದ ಸ್ನೇಹ ನೆನಪಿಸಿಕೊಳ್ಳಲು ಮರೆಯಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Prashanth Neel: ಸಲಾರ್‌ಗೆ ನಾನು ಇನ್ನಷ್ಟು ಶ್ರಮ ಹಾಕಬೇಕಿತ್ತು; ಪ್ರಶಾಂತ್ ನೀಲ್
UI Movie: ಉಪ್ಪಿ ಯುಐ ಮೆಚ್ಚಿದ ಯಶ್
Shivaraj Kumar: ಶಿವರಾಜ್ ಕುಮಾರ್ ಅವರ ಆಪರೇಷನ್ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ
Max: ಇಂದು ಸುದೀಪ್ ಮ್ಯಾಕ್ಸ್ ತೆರೆಗೆ; ಆ್ಯಕ್ಷನ್ ಅಡ್ಡದಲ್ಲಿ ಕಿಚ್ಚ ಮಿಂಚು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Belthangady: ಜೈನ ಧರ್ಮಕ್ಕೆ ಅವಹೇಳನ; ದೂರು ದಾಖಲು
Udupi: 22 ವರ್ಷದ ಬಳಿಕ ಮನೆ ಸೇರಿಕೊಂಡ ವೃದ್ಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.