ಜಿಲ್ಲೆಯಲ್ಲಿ ಸಂಭ್ರಮದ ಹೋಳಿಹಬ್ಬ: ಬಣ್ಣಗಳಲ್ಲಿ ಮಿಂದೆದ್ದ ಕಡಲ ಒಡಲು
Team Udayavani, Mar 7, 2023, 9:48 PM IST
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಕೇಂದ್ರ ಸೇರಿದಂತೆ ಎಲ್ಲಾ 12 ತಾಲೂಕು ಕೇಂದ್ರಗಳಲ್ಲಿ ಮಂಗಳವಾರ ಸಂಭ್ರಮದ ಬಣ್ಣದ ಹಬ್ಬ ಹೊಳಿಯನ್ನು ಆಚರಿಸಲಾಯಿತು.
ಕಾರವಾರದಲ್ಲಿ ಜನರು ಸಡಗರ ದಿಂದ ಬಣ್ಣ ಆಡಿದರು .ಮಕ್ಕಳು ,ಮಹಿಳೆಯರು, ಯುವಕರು ,ಯುವತಿಯರು ಹೋಳಿಯನ್ನು ಸಂಭ್ರಮಿಸಿದರು . ಬಣ್ಣ ಹಚ್ಚಿಕೊಂಡು ಪರಸ್ಪರರು ಶುಭಾಶಯ ವಿನಿಮಯ ಮಾಡಿಕೊಂಡರು. ಸೋಮವಾರ ರಾತ್ರಿ ನಗರದ ಕೋಡಿಭಾಗ, ರಂಗಮಂದಿರ, ಮಾರುತಿ ಮಂದಿರ ಬಳಿ ಕಾಮದಹನ ಮಾಡಲಾಯಿತು. ಮಂಗಳವಾರ ಬೆಳಗಿನಿಂದ ಬಣ್ಣ ಚೆಲ್ಲಿ ಹೊಳಿ ಆಡಲಾಯಿತು. ನೀರಿಗೆ ಬಣ್ಣ ಮಿಶ್ರ ಮಾಡಿ ಪರಸ್ಪರ ಎರಚಿ ಸಂಭ್ರಮಿಸಲಾಯಿತು. ಡಿಜೆ ಹಾಕಿ ಬೀದಿ ಬೀದಿಗಳಲ್ಲಿ ನೃತ್ಯ ಮಾಡುವುದು ಕಂಡು ಬಂತು. ಇಡೀ ನಗರ ಬಣ್ಣಗಳಿಂದ ಅಲಂಕರಿಸಿದಂತಿತ್ತು . ವಾರದಿಂದ ವಿವಿಧ ವೇಷಧಾರಿಗಳು, ಸುಗ್ಗಿ ಕುಣಿತ , ವಿವಿಧ ಸಮುದಾಯಗಳು ತಂಡ ಕಟ್ಟಿಕೊಂಡು ತಮ್ಮದೇ ಆದ ಭಿನ್ನ ಶೈಲಿಯಲ್ಲಿ ಹೊಳಿಗೆ ಮೆರಗು ತಂದಿದ್ದವು. ಶಿರಸಿಯಲ್ಲಿ ಬೇಡರ ಕುಣಿತ ವಿಶಿಷ್ಟವಾಗಿತ್ತು. ಅಂಕೋಲಾದ ಬೆಳಂಬಾರ ಸುಗ್ಗಿ ತಂಡ ಗಮನಸೆಳೆಯಿತು.
ಸಮುದ್ರ ಸ್ನಾನ:
ಕಾರವಾರದಲ್ಲಿ ಬಣ್ಣ ಆಡಿದ ನಂತರ ಜನರು ಸಮುದ್ರ ಸ್ನಾನಕ್ಕೆ ತೆರಳುವುದು ವಿಶೇಷ. ಮಧ್ಯಾಹ್ನ 12 ರಿಂದ 2 ಗಂಟೆತನಕ ಸಾವಿರಾರು ಜನ ಬೀಚ್ ನಲ್ಲಿ ಸಮಾವೇಶಗೊಂಡು ಸಮುದ್ರ ಸ್ನಾನ ಮಾಡಿದರು. ಇಡೀ ಕಡಲು ಬಣ್ಣ ಉಂಡಂತೆ ರಂಗು ರಂಗಾಗಿತ್ತು. ಜನರ ಸಂಭ್ರಮ ಎಲ್ಲೆಡೆ ಮನೆ ಮಾಡಿತ್ತು.
ಇದನ್ನೂ ಓದಿ: ಮಧುಗಿರಿ: ಎರಡು ಲಾರಿಗಳ ನಡುವೆ ಭೀಕರ ಅಪಘಾತ, ಕ್ಲಿನರ್ ಸ್ಥಳದಲ್ಲೇ ಸಾವು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ
Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.