ತಪಾಸಣೆಗೆಂದು ಪೊಲೀಸರು ಕಾರನ್ನು ನಿಲ್ಲಿಸಿದರೆ ಕಾರನ್ನೇ ಬಿಟ್ಟು ಓಡಿದ ಚಾಲಕ! ಕಾರಣ ಇಲ್ಲಿದೆ
ಒಂದುವರೆ ಲಕ್ಷದ ಅಕ್ರಮ ಮದ್ಯ ಸಾಗಾಟ ಮಾಡಲು ಹೋಗಿ 5 ಲಕ್ಷದ ಕಾರು ಪೊಲೀಸರ ವಶಕ್ಕೆ
Team Udayavani, Sep 14, 2022, 8:28 AM IST
ಕಾರವಾರ : ಒಂದುವರೆ ಲಕ್ಷ ರೂ ಬೆಲೆಯ ಗೋವಾ ಸಾರಾಯಿ ಅಕ್ರಮವಾಗಿ ಸಾಗಾಟ ಮಾಡಲು ಹೋಗಿ 5 ಲಕ್ಷ ರೂಪಾಯಿ ಬೆಲೆಯ ಕಾರು ಪೊಲೀಸರ ವಶವಾಗಿದೆ.
ಖಚಿತ ಮಾಹಿತಿಯ ಮೇರೆಗೆ ಜಿಲ್ಲಾ ಪೋಲೀಸ್ ವಿಶೇಷ ವಿಭಾಗದ ಪಿಎಸ್ ಐ ಪ್ರೇಮನಗೌಡ ಪಾಟೀಲ್, ಎಚ್.ಸಿ .ರಾಘವೇಂದ್ರ ಜಿ,ಪಿ.ಸಿ. ಭಗವಾನ ಗಾಂವಕರ, ಸಂತೋಷ್ ಕುಮಾರ್, ಮಹದೇವ ಸಿದ್ದಿ ಇವರ ಪೋಲೀಸ್ ತಂಡವು, ಗೋವಾ ರಾಜ್ಯದಿಂದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕಾರವಾರದ ಕಡೆಗೆ ಬರುತ್ತಿದ್ದ ಹುಂಡೈ ವೆರ್ನಾ ಕಾರು (ನಂಬರ್ GA 08 , K 6510) ಸದಾಶಿವಗಡದ ದೇವಭಾಗ ಕ್ರಾಸ್ ನಲ್ಲಿ ತಡೆಯಲು ಯತ್ನಿಸಿದರು. ಪೊಲೀಸ್ ಬ್ಯಾರಿಕೇಡ್ ಹತ್ತಿರ ನಿಲ್ಲಿಸುವಂತೆ ಕೈ ಸನ್ನೆ ಮಾಡಿದರೂ ಇದನ್ನು ಗಮನಿಸಿದ ಡ್ರೈವರ್ ಕಾರನ್ನು ಬ್ಯಾರಿಕೇಡ್ ಹಿಂದೆಯೇ ನಿಲ್ಲಿಸಿ ಕಾರ್ ನಿಂದ ಇಳಿದು ಓಡಿ ಹೋಗಿದ್ದಾನೆ.
ಶಂಶಯಗೊಂಡು ಕಾರನ್ನು ಪರಿಶೀಲಿಸಿದಾಗ 27 ಪಾಲಿತಿನ್ ಚೀಲಗಳಲ್ಲಿ ತುಂಬಿದ್ದ 770 ಲೀಟರ್ ಸಾರಾಯಿ ಬಾಟಲಿಗಳು ಪತ್ತೆಯಾಗಿವೆ. ಇದರ ಬೆಲೆ ಸುಮಾರು 1.50 ಲಕ್ಷ. ಗೋವಾ ರಾಜ್ಯದ ಸರಾಯಿ ಬಾಟಲಿಗಳನ್ನು ವಶಕ್ಕೆ ಪಡೆದ ಸದಾಶಿವಗಡದ ಚಿತ್ತಾಕುಲ ಪೊಲೀಸ್ ರಾಣಿಯಲ್ಲಿ
ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆರೋಪಿಯ ಪತ್ತೆಗಾಗಿ ಹುಡುಕಾಟ ನಡೆದಿದೆ. ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಎಸ್ಪಿ ಸುಮನ್ ಪನ್ನೇಕರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ವಿಧಾನ ಮಂಡಲ ಅಧಿವೇಶನದಲ್ಲಿ ಒಗ್ಗಟ್ಟು ಪ್ರದರ್ಶನಕ್ಕೆ ಬಿಜೆಪಿ ನಾಯಕರ ಸೂಚನೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.