ಅವೈಜ್ಞಾನಿಕ ಮೀನುಗಾರಿಕೆಯಿಂದ ಕ್ಷಾಮ
ಲಂಗುರ ಹಾಕಿರುವ ಬೋಟ್‌ಗಳು | ಆಳ ಸಮುದ್ರ ಮೀನುಗಾರಿಕೆ ನಿರ್ಬಂಧಿಸಲು ಒತ್ತಾಯ
Team Udayavani, Feb 13, 2020, 3:43 PM IST
ಕಾರವಾರ: ಅರಬ್ಬಿ ಸಮುದ್ರದಲ್ಲಿ ಮತ್ಸ್ಯ ಕ್ಷಾಮದಿಂದ ಮೀನುಗಾರಿಕೆಗೆ ತೆರಳಿದ ಪರ್ಶಿನ್ ಹಾಗೂ ಟ್ರಾಲರ್ ಬೋಟ್‌ಗಳು ಖಾಲಿ ಬಲೆಯೊಂದಿಗೆ ಹಿಂದಿರುಗಿವೆ. ಬೈತಖೋಲ್ ಮೀನುಗಾರಿಕಾ ಬಂದರಿನಲ್ಲಿ ಬೋಟ್ ಗಳು ಲಂಗುರ ಹಾಕಿವೆ. ಸಮುದ್ರ ಬೆಳೆಯಿಲ್ಲದೇ ಮೀನುಗಾರರು ಆತಂಕ ಪಡುವಂತಾಗಿದೆ.
ಅವೈಜ್ಞಾನಿಕ ಮತ್ತು ಕಾನೂನುಬಾಹಿರವಾಗಿ ಲೈಟ್ ಫಿಶಿಂಗ್, ಬುಲ್ ಟ್ರಾಲ್ ಮೀನುಗಾರಿಕೆ ಮತ್ತು ಮೀನು ಹಿಡಿಯಲು ಆಳ ಸಮುದ್ರದಲ್ಲಿ ಕ್ಯಾಸುರಿನಾ ಗಿಡಗಳನ್ನು ಬೆಳಸುತ್ತಿರುವ ವಿಧಾನಗಳು ಮೀನು ಕ್ಷಾಮಕ್ಕೆ ಕಾರಣವಾಗಿವೆ ಎಂದು ಮೀನುಗಾರರು ಆರೋಪಿಸಿದ್ದಾರೆ.
ಕಳೆದ ಹದಿನೈದು ದಿನಗಳ ಹಿಂದೆ ಸಾಗರಮಾಲಾ ಯೋಜನೆಯಡಿ ಕಾರವಾರ ವಾಣಿಜ್ಯ ಬಂದರು ವಿಸ್ತರಣೆ ವಿರೋಧಿಸಿ ಹದಿಮೂರು ದಿನಗಳ ಕಾಲ ಮೀನುಗಾರಿಕೆ ಚಟುವಟಿಕೆಗಳನ್ನು ಮೀನುಗಾರರು ಸಂಪೂರ್ಣ ಸ್ಥಗಿತ ಮಾಡಿದ್ದರು. ಈಗ ಸಮುದ್ರದಲ್ಲಿ ಮೀನು ಬೇಟೆ ಯಶಸ್ವಿಯಾಗದೇ ಖಾಲಿ ಬೋಟ್‌ಗಳಲ್ಲಿ ಮರಳುತ್ತಿದ್ದಾರೆ ಎಂದು ಮೀನುಗಾರರು ತಿಳಿಸಿದ್ದಾರೆ.
ಕೇರಳ, ಮಹಾರಾಷ್ಟ್ರ ಮತ್ತು ಗುಜರಾತ್‌ನಲ್ಲಿ 24 ನಾಟಿಕಲ್ ಮೈಲಿ ಮೀರಿದ ಮೀನುಗಾರಿಕೆ ಚಟುವಟಿಕೆ ನಿಷೇಧಿಸಲಾಗಿದೆ. ಆದರೆ ಗೋವಾ ಮತ್ತು ಕರ್ನಾಟಕದಲ್ಲಿ ಇದಕ್ಕೆ ಅನುಮತಿ ನೀಡಲಾಗಿದೆ. ಇದರಿಂದ ಇತರ ರಾಜ್ಯಗಳ ಮೀನುಗಾರರು ಇದರ ಲಾಭ ಪಡೆದುಕೊಳ್ಳುತ್ತಿದ್ದಾರೆ. ಹೊರ ರಾಜ್ಯದವರು ನಿರಾತಂಕದಿಂದ ರಾಜ್ಯದ ಸಮುದ್ರ ಗಡಿಯೊಳಗಿನ ಆಳ ಸಮುದ್ರದ ಮಧ್ಯದಲ್ಲಿ ಅಪಾರ ಪ್ರಮಾಣದ ಮೀನುಗಳನ್ನು ಹಿಡಿಯುತ್ತಿದ್ದಾರೆ.
ಇದಲ್ಲದೇ ಹಗ್ಗಗಳನ್ನು ಕಟ್ಟಿ ಕ್ಯಾಸುರಿನಾ ಗಿಡಗಳನ್ನು ಸಮುದ್ರ ಮಧ್ಯದಲ್ಲಿ ಎಸೆದು ಕೊಳೆಯಲು ಬಿಡಲಾಗುತ್ತದೆ. ಇದು ಅಪಾರ ಪ್ರಮಾಣದ ಮೀನುಗಳನ್ನು ಆಕರ್ಷಿಸುತ್ತದೆ. ನಂತರ ಹೊರ ರಾಜ್ಯದವರು ಅದರ ಸುತ್ತಲೂ ಬಲೆ ಹರಡಿ ಮೀನು ಹಿಡಿಯುತ್ತಾರೆ. ಆದರೂ ರಾಜ್ಯ ಸರ್ಕಾರ ಕಣ್ಣು ಮುಚ್ಚಿಕೊಂಡಿದೆ ಎಂದು ಮೀನುಗಾರ ಯುವ ಮುಖಂಡ ವಿನಾಯಕ ಹರಿಕಂತ್ರ ಆರೋಪಿಸಿದ್ದಾರೆ.
ನಾವು ಅದನ್ನು ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಆದರೆ ಏನೂ ಪ್ರಯೋಜನವಾಗಲಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಳ ಸಮುದ್ರದಲ್ಲಿ ಇತರೆ ರಾಜ್ಯದವರ ಅವೈಜ್ಞಾನಿಕ ಮೀನುಗಾರಿಕೆಯಿಂದ ಇದರ ದುಷ್ಪರಿಣಾಮಗಳಿಂದ ಸಮುದ್ರದಲ್ಲಿ ಮೀನು ಸಿಗುತ್ತಿಲ್ಲ. ಮೀನುಗಾರರಿಗೆ ಇದು ಮತ್ಸ್ಯ ಬೇಟೆ ಸಮಯವಾಗಿದ್ದು, ಮೀನುಗಾರಿಕೆಯಿಂದ ಹಣ ಸಂಪಾದಿಸುವ ಕಾಲವಾಗಿದೆ.ಆದರೆ ಈಗ ನಮ್ಮ ಸಾಂಪ್ರದಾಯಿಕ ದೋಣಿಗಳು ಹಾಗೂ ಆಳ ಸಮುದ್ರ ಮೀನುಗಾರಿಕೆಯ ಯಾಂತ್ರಿಕೃತ ಬೋಟ್‌ಗಳು ಮೀನು ಇಲ್ಲದೇ ಖಾಲಿ ಮರಳುತ್ತಿವೆ. ಈ ಹಿನ್ನೆಲೆಯಲ್ಲಿ ಕೂಡಲೇ ಸರ್ಕಾರ ಅಕ್ರಮ ಮೀನುಗಾರಿಕೆ ನಿಷೇಧಿಸಬೇಕು. ರಾಜ್ಯದ ಸಾಗರ ಗಡಿಯೊಳಗೆ ಬಂದು ಕಾನೂನು ಬಾಹಿರವಾಗಿ ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿರುವ ತಮಿಳುನಾಡು, ಕೇರಳ ಮೀನುಗಾರಿಕಾ ಬೋಟ್‌ಗಳನ್ನು ನಿರ್ಬಂಧಿಸಬೇಕು ಎಂದು ಇಲ್ಲಿನ ಸ್ಥಳೀಯ ಮೀನುಗಾರರು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೆಳೆವಿಮೆ ಸಿಗದೆ ಕೃಷಿಕರ ಪರದಾಟ: ಅಡಕೆ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸದ ಸರ್ಕಾರ
Belekeri Mining Case: ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಜೈಲು ಶಿಕ್ಷೆಗೆ ಹೈಕೋರ್ಟ್ ತಡೆ
ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಹೊತ್ತಿ ಉರಿದ ಲಾರಿ… ಅಪಾರ ಪ್ರಮಾಣದ ಸೊತ್ತು ಬೆಂಕಿಗಾಹುತಿ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.