ಹೊಸ ತಂತ್ರಜ್ಞಾನ ಬಳಸಿ ಗ್ರಾಹಕರಿಗೆ ಉತ್ತಮ ಸೇವೆ ಕೊಡಲು ಕರ್ನಾಟಕ ಬ್ಯಾಂಕ್ ಸದಾ ಸಿದ್ದ
Team Udayavani, Dec 28, 2021, 7:42 PM IST
ಭಟ್ಕಳ: ಕರ್ಣಾಟಕ ಬ್ಯಾಂಕ್ ತಂತ್ರಜ್ಞಾನದಲ್ಲಿ ಮುಂದೆ ಇದ್ದು ಈಗಾಗಲೇ ನಾವು 2020-24ಕ್ಕೆ ಅಗತ್ಯವಾದ ತಂತ್ರಜ್ಞಾನದ ಅವಿಷ್ಕಾರದಲ್ಲಿದ್ದೇವೆ ಎಂದು ಕರ್ಣಾಟಕ ಬ್ಯಾಂಕ್ ಸಹಾಯಕ ಪ್ರಧಾನ ವ್ಯವಸ್ಥಾಪಕ ರಾಜಗೋಪಾಲ ಅವರು ಹೇಳಿದರು.
ಅವರು ಕರ್ಣಾಟಕ ಬ್ಯಾಂಕ್ ಭಟ್ಕಳ ಶಾಖೆಯ 46ನೇ ವಾರ್ಷಿಕೋತ್ಸವ ಹಾಗೂ ಗ್ರಾಹಕರ ದಿನಾಚರಣೆ ಕಾರ್ಯಕ್ರಮವನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಇಂದು ಹೊಸ ಹೊಸ ತಂತ್ರಜ್ಞಾನಗಳ ಅಳವಡಿಕೆಯು ಅನಿವಾರ್ಯವಾಗಿದೆ. ನಮ್ಮ ಬ್ಯಾಂಕು ಬಹಳ ಹಿಂದೆಯೇ ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದೆ ಎಂದ ಅವರು ಭಟ್ಕಳ ಶಾಖೆಯು ನಡೆದು ಬಂದ ಕುರಿತು ವಿವರಿಸುತ್ತಾ ಗ್ರಾಹಕರ ಸಹಕಾರದಿಂದ ಬ್ಯಾಂಕು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು. ಗ್ರಾಹಕರ ಅನೇಕ ಪ್ರಶ್ನೆಗಳಿಗೆ ಉತ್ತರಿಸಿದ ಅವರು ಬ್ಯಾಂಕು ಗ್ರಾಹಕರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಕೆಲವೊಂದು ಸಾಲದ ಬಡ್ಡಿದರವನ್ನು ಕಡಿಮೆ ಇಟ್ಟಿದೆ. ಗ್ರಾಹಕರ ವ್ಯವಹಾರವನ್ನು ನೋಡಿಕೊಂಡು ಬಡ್ಡಿದರಲ್ಲಿ ಸ್ವಲ್ಪ ವ್ಯತ್ಯಾಸವನ್ನು ಕೂಡಾ ಮಾಡಿಕೊಡಲು ಬ್ಯಾಂಕು ತಯಾರಿದೆ ಎಂದೂ ಅವರು ಹೇಳಿದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು ಮಾತನಾಡಿದ ಶ್ರೀ ಕುಟುಮೇಶ್ವರ ಸೌಹಾರ್ಧ ಸಹಕಾರಿಯ ಅಧ್ಯಕ್ಷ ರಾಮಾ ಖಾರ್ವಿ ಬ್ಯಾಂಕ್ ಬೆಳವಣಿಗೆಗೆ ಗ್ರಾಹಕರು ನೀಡುವ ಸಹಕಾರ ಕಾರಣ. ಇಲ್ಲಿನ ಶಾಖೆಯು ಅತ್ಯಂತ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದು ಸಿಬ್ಬಂದಿಗಳ ಉತ್ತಮ ಸೇವೆಯಿಂದ ತಾಲೂಕಿನಲ್ಲಿ ಗ್ರಾಹಕರನ್ನು ಸೆಳೆದುಕೊಳ್ಳುವತ್ತ ಯಶಸ್ವೀಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಬ್ಯಾಂಕಿನ ನಿವೃತ್ತ ಶಾಖಾಧಿಕಾರಿ ತಿಮ್ಮಪ್ಪಯ್ಯ ಶಿರೂರು ಅವರು ಮಾತನಾಡಿ ಕರ್ಣಾಟಕ ಬ್ಯಾಂಕ್ ನಡೆದು ಬಂದ ದಾರಿಯನ್ನು ವಿವರಿಸುತ್ತಾ, ಭಟ್ಕಳ ಶಾಖೆಯ ಆರಂಭದಿಂದ ಇಲ್ಲಿಯ ತನಕದ ಬೆಳವಣಿಗೆಯನ್ನು ವಿವರಿಸಿದರು. ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಬ್ಯಾಂಕಿನ ಶಾಖೆಯನ್ನು ಗಣಕೀಕೃತಗೊಳಿಸಿದ್ದನ್ನು ಸ್ಮರಿಸಿದ ಅವರು ಗ್ರಾಹಕರ ಸಹಕಾರದಿಂದ ಶಾಖೆ 46 ವರ್ಷಗಳ ಕಾಲ ಬೆಳೆದು ಬಂದಿದ್ದು ಪ್ರೌಢಾವಸ್ಥೆಯಲ್ಲಿದೆ ಎಂದರು.
ಇದನ್ನೂ ಓದಿ : ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಲಲಿತ ಕಲೆಗಳಿಗೆ ಉತ್ತಮ ಪ್ರೋತ್ಸಾಹ:ಶಾಸಕ ಸುನಿಲ್ ನಾಯ್ಕ್
ಗ್ರಾಹಕರುಗಳಾದ ಗುತ್ತಿಗೆದಾರ ಟಿ.ಡಿ. ನಾಯ್ಕ, ಎಂ.ಜಿ. ಎಂಟರ್‍ಪ್ರೈಸಸ್ ಮಾಲಕ ಪರಮೇಶ್ವರ ಭಟ್ಟ, ನ್ಯಾಯವಾದಿ ಜೆ.ಡಿ. ಭಟ್ಟ, ಹೋಟೆಲ್ 4ಸೀಸನ್ ಪಾಲುದಾರ ನರೇಶ ಶೆಟ್ಟಿ, ಹಿರಿಯ ಗ್ರಾಹಕ ಹಾಗೂ ಕಟ್ಟಡದ ಮಾಲಿಕ ರಾಧಾಕೃಷ್ಣ ಭಟ್ಟ, ಕಡವಿನಕಟ್ಟೆ ಶ್ರೀ ದುರ್ಗಾಪರಮೇಶ್ವರಿ ದೇವಾಯಲದ ಕಾರ್ಯದರ್ಶಿ ಪ್ರಕಾಶ ಎನ್. ಭಟ್ಟ ಸಾಲೆಮನೆ ಮುಂತಾದವರು ಮಾತನಾಡಿದರು.
ಶಾಖೆಯ ಪ್ರಬಂಧಕ ಸುನಿಲ್ ಪೈ, ಹಿಂದಿನ ಶಾಖಾಧಿಕಾರಿ ವಿನಾಯಕ ಮೊಗೇರ, ಸಿಬ್ಬಂದಿಗಳು, ಬ್ಯಾಂಕಿನ ಚಾನಲ್ ಪಾರ್ಟನರ್ ಎಲ್.ಐ.ಸಿ. ಶಾಖಾಧಿಕಾರಿ ಗುರುದತ್ತ ನಾಯಕ, ಭಾರತಿ ಎಕ್ಸಾದ ರಘುನಂದನ್ ಮುಂತಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Prajwal Devaraj; ಶಿವರಾತ್ರಿಗೆ ʼರಾಕ್ಷಸʼ ಅಬ್ಬರ
Sanju Weds Geetha 2: ಸಂಜು-ಗೀತಾಗೆ ಕಿಚ್ಚ ಸಾಥ್
Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್ ಮಾದರಿಯ ಎಚ್ ಎಂಪಿವಿ ವೈರಸ್?
Gadag: ನಿರ್ಮಿತಿ ಕೇಂದ್ರದ ಗುತ್ತಿಗೆ ಆಧಾರಿತ ಇಂಜಿನಿಯರ್ ಆತ್ಮಹ*ತ್ಯೆ
Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್… ರಸ್ತೆಯಲ್ಲೇ ನಡೆಯಿತು ಪವಾಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.