ಕಾರವಾರ: ಬೂದು ನೀರು ನಿರ್ವಹಣೆಗೆ ಶಾಶ್ವತ ಪರಿಹಾರ
ಕೊಳಚೆ ಮುಕ್ತ ಗ್ರಾಮ ಮಾಡಲು ಅನುವು ಮಾಡಿಕೊಡಲಾಗಿದೆ.
Team Udayavani, Apr 1, 2023, 5:51 PM IST
ಕಾರವಾರ: ಇಂದೂರು ಗ್ರಾಮ ಪಂಚಾಯತ್‌ನ ಕೊಪ್ಪ ಗ್ರಾಮದಲ್ಲಿ ಬೂದು ನೀರಿನ (ಕೊಳಚೆ) ನಿರ್ವಹಣೆಗಾಗಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಹಾಗೂ ಸ್ವತ್ಛ ಭಾರತ್ ಮಿಷನ್ ಯೋಜನೆಯಡಿ ಸುಮಾರು 15 ಲಕ್ಷ ರೂ. ವೆಚ್ಚದಲ್ಲಿ ದ್ರವ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಗೊಂಡಿದೆ.
ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದಿಂದ ಗ್ರಾಮೀಣ ಪ್ರದೇಶಗಳಲ್ಲಿ ನರೇಗಾದಡಿ ಬಚ್ಚಲುಗುಂಡಿ ನಿರ್ಮಾಣ, ಪೌಷ್ಠಿಕ ಕೈತೋಟ ಹಾಗೂ ಸ್ವತ್ಛ ಭಾರತ್ ಮೀಷನ್ ದಡಿ ಶೌಚಾಲಯದಂಥ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದರೂ ಸಹ, ಅಧಿಕ ಮನೆಗಳಿರುವ ಗ್ರಾಮಗಳಲ್ಲಿ ಚರಂಡಿ ನೀರಿನ ಸಮಸ್ಯೆಗೆ ಪರಿಹಾರ ಹುಡುಕಲು ಬೂದು ನೀರಿನ ನಿರ್ವಹಣಾ ಘಟಕ ನಿರ್ಮಿಸಿ ಶಾಶ್ವತ ಪರಿಹಾರಕ್ಕೆ ಮುಂದಾಗಿದೆ. ಇನ್ನು ಈ ನೀರಿನಿಂದ ಮರುಬಳಕೆ ಸಾಧ್ಯವಾಗಿದ್ದು ರೈತರ
ಅನುಕೂಲಕ್ಕೆ ಸಾಕ್ಷಿಯಾಗಿದೆ.
ಜಿಲ್ಲೆಯಲ್ಲಿ ಬೂದು ನೀರಿನ ನಿರ್ವಹಣಾ ಘಟಕಕ್ಕೆ ಆಯ್ಕೆಯಾದ ಕೊಪ್ಪ ಗ್ರಾಮದಲ್ಲಿ ಸರಿಸುಮಾರು 185 ಮನೆಗಳಿದ್ದು, 1150 ಜನಸಂಖ್ಯೆ ಹೊಂದಿದೆ. ಇನ್ನು ಇಲ್ಲಿನ ಚರಂಡಿ ನೀರು ರೈತರ ಹೊಲದ ಮೂಲಕ ಕೆರೆಯನ್ನು ಸೇರುತಿತ್ತು. ಇನ್ನು ಈ ಸಮಸ್ಯೆಯಿಂದ ಸುತ್ತಲಿನ ರೈತರ ಹೊಲಗದ್ದೆಗಳಿಗೂ ಸಹಿತ ಸಂಕಷ್ಟ ಎದುರಾಗಿತ್ತು. ಇದೀಗ ವೈಜ್ಞಾನಿಕ ಪ್ರಕ್ರಿಯೆಯಿಂದಾಗಿ ದ್ರವ ತ್ಯಾಜ್ಯ ಸಂಸ್ಕರಣಾ ಘಟಕದ ನಿರ್ಮಾಣವು ಪರಿಹಾರ ಸೂಚಿಸಿದೆ.
ಘಟಕ ನಿರ್ಮಾಣದ ಆಯ್ಕೆ: ಕೊಪ್ಪ ಗ್ರಾಮ ವ್ಯಾಪ್ತಿಯಲ್ಲಿ ಬೂದು ನೀರು ನಿರ್ವಹಣೆಗಾಗಿ ಸರ್ವೇ ಕೈಗೊಂಡಾಗ ಸಮಸ್ಯೆಯಿರುವ ಒಂದು ಸ್ಥಳವನ್ನು ಗುರುತಿಸಲಾಯಿತು. ಸದರಿ ಜಾಗವು ಫಿಲಿಪ್ ಥಾಮಸ್ ಪಾರೆಲ್ ರವರ ಖಾಸಗಿ ತೋಟದ ಮೂಲಕ ಕೆರೆಯನ್ನು ಸೇರುವುದರಿಂದ ತೋಟದ ಜಾಗದಲ್ಲೇ ಚರಂಡಿ ನೀರು ಸಂಸ್ಕರಿಸುವ ವಿಧಾನ ನಿರ್ಮಾಣ ಮಾಡಿ, ಗ್ರಾಮದ ಕೊಳಚೆ ನೀರು ಸಂಸ್ಕರಿಸಲು ಸೂಕ್ತವೆಂದು ತೀರ್ಮಾನಿಸಲಾಯಿತು. ತೋಟದ ಮಾಲಕ ಪಿಲೀಪ್ ಥಾಮಸ್ ಪಾರೆಲ್ ಗೆ ಗ್ರಾಮದ ಸಮಸ್ಯೆ ಬಗ್ಗೆ ತಿಳಿಸಿ ಅವರ ಒಪ್ಪಿಗೆ ಪಡೆಯಲಾಯಿತು.
ಬೂದು ನೀರಿನ ನಿರ್ವಹಣೆ ಉಪಯೋಗಗಳು: ನೀರಿನ ಇಂಗುವಿಕೆಯಿಂದ ಅಂತರ್ಜಲ ಮಟ್ಟ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಸುತ್ತಲಿನ ರೈತರ ಹೊಲ ಸುರಕ್ಷತೆ ಜತೆಗೆ ಅದೇ ನೀರಿನ ಪುನರ್ ಬಳಕೆ ಹೊಲಗಳಿಗೆ ಅನುಕೂಲವಾಗಿದೆ. ಗ್ರಾಮದ ಸ್ವಚ್ಛ ಹಾಗೂ ಸುಂದರ ಆರೋಗ್ಯಯುತ ಪರಿಸರ ನಿರ್ಮಾಣ. ನೀರಿನ ಶುದ್ಧೀಕರಣದಿಂದ ಸುತ್ತಲಿನ ಮಣ್ಣಿನ ಫಲವತ್ತತೆ ಕಾಪಾಡಲು ಸಹಾಯಕವಾಗಲಿದೆ.
ಚರಂಡಿಯಲ್ಲಿ ಸಂಸ್ಕರಿಸುವ ವಿಧಾನ ನಿರ್ಮಾಣದಿಂದ ಚರಂಡಿಯಲ್ಲಿ ಹರಿಯುವ ನೀರು ವ್ಯರ್ಥವಾಗದೆ ನಮ್ಮ ತೋಟದಲ್ಲಿ ಇಂಗುವುದರಿಂದ 6 ಎಕರೆ ತೋಟಕ್ಕೆ ಹಾಗೂ ಅಕ್ಕ ಪಕ್ಕದ 5 ಎಕರೆ ಅಡಿಕೆ ತೋಟಕ್ಕೆ ಅನುಕೂಲವಾಗಿದೆ. ಕೊಳಚೆ ಮುಕ್ತ ಗ್ರಾಮ ಮಾಡಲು ಅನುವು ಮಾಡಿಕೊಡಲಾಗಿದೆ.
ಜಿಲ್ಲೆಯಲ್ಲಿ ಇವರೆಗೂ ಸ್ಥಳ ಲಭ್ಯತೆ ಇರುವ 9 ಕಡೆಗಳಲ್ಲಿ ಸಮುದಾಯ ಹಂತದ ಬೂದು ನೀರು ನಿರ್ವಹಣಾ ಘಟಕವನ್ನು ಕೈಗೆತ್ತಿಗೊಂಡಿದ್ದು ಕಾಮಗಾರಿಯನ್ನು ಅನುಷ್ಠಾನ ಮಾಡಲಾಗುತ್ತಿದೆ. ಈ ಮೂಲಕ ಗ್ರಾಮ ಪಂಚಾಯಿತಿಗಳನ್ನು ಕೊಳಚೆ ಮುಕ್ತ ಗ್ರಾಮಗಳನ್ನಾಗಿಸಲು ಸಾರ್ವಜನಿಕರು ಕೈಜೊಡಿಸಬೇಕಿದೆ.
ಈಶ್ವರ ಕಾಂದೂ, ಸಿಇಒ, ಜಿಪಂ, ಉತ್ತರ ಕನ್ನಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Dandeli: ವಿದ್ಯುತ್ ಕಂಬದ ಜಿಓಎಸ್ ಕಳವು ಮಾಡಿದ್ದ ಆರೋಪಿ;ಮಾಲು ಸಹಿತ ವಶಕ್ಕೆ ಪಡೆದ ಪೊಲೀಸರು
Gujjar Kere: ಕೆರೆ ಪರಿಸರದ ರಕ್ಷಣೆಗೆ ಆದ್ಯತೆ ಅಗತ್ಯ; ತಹಶೀಲ್ದಾರ್‌ಗೆ ಮರು ಮನವಿ
Dandeli:ತುಂಡಾಗಿ ಬಿದ್ದಿದ್ದ ಕೇಬಲ್ ವೈರ್ ಸುತ್ತಿ ದ್ವಿಚಕ್ರ ವಾಹನ ಸ್ಕಿಡ್: ಸವಾರನಿಗೆ ಗಾಯ
MUST WATCH
ಹೊಸ ಸೇರ್ಪಡೆ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.