Karwar; ಲಂಚಕ್ಕಾಗಿ ಮೊಬೈಲ್ ಬೇಡಿಕೆ ಇಟ್ಟ ಅಧಿಕಾರಿಗೆ ಒಂದು ವರ್ಷ ಶಿಕ್ಷೆ

Team Udayavani, Nov 15, 2023, 8:34 PM IST

mob

ಕಾರವಾರ : ದಂಡ ಹಾಕಿದ ಮೊತ್ತ ಕಡಿಮೆ ಮಾಡಲು ಮೊಬೈಲ್‌ ಬೇಡಿಕೆ ಇಟ್ಟ ಶಿರಸಿ ಉಪ ವಿಭಾಗದ ಕಾನೂನು ಮಾಪನ ಶಾಸ್ತ್ರ ಇಲಾಖೆಯ ನಿರೀಕ್ಷಕ ಕೆ. ಸಿ. ಮೋಹನಗೆ ಒಂದು ವರ್ಷ ಕಾರಾಗೃಹ ವಾಸ , ಐದು ಸಾವಿರ ರೂ.‌ ದಂಡ ವಿಧಿಸಿ ವಿಶೇಷ ಮತ್ತು ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶ ಡಿ. ಎಸ್.ವಿಜಯ ಕುಮಾರ್ ತೀರ್ಪು ನೀಡಿದ್ದಾರೆ‌.

ಯಲ್ಲಾಪುರದ ವಿಶ್ವನಾಥ ನಾರಾಯಣ ದೇಸಾಯಿ, ಅಂಗಡಿಯ ಮೇಲೆ ಕಾನೂನು ಮಾಪನ‌ಶಾಸ್ತ್ರ ಇಲಾಖೆಯ ಅಧಿಕಾರಿ ಮೋಹನ್ ದಾಳಿ ಮಾಡಿದ್ದರು. ಅಂಗಡಿಯಲ್ಲಿ ಮೊಬೈಲ್ ಸೆಟ್ಟಗಳನ್ನು, ಅದರ ಬಿಲ್ಲನ್ನು ಹಾಜರ ಪಡಿಸದೇ ಇದ್ದ ಹಾಗೂ ಉತ್ಪಾದಕರ ಹೆಸರು ವಿಳಾಸ ಹಾಗೂ ದಿನಾಂಕಗಳನ್ನು ನಮೂದಿಸದೆ ಇರುವ ಕಾರಣ ವಿಶ್ವನಾಥ ದೇಸಾಯಿ ಅಂಗಡಿಯ ಆ ಮೊಬೈಗಳನ್ನು ಜಪ್ತಿ ಮಾಡಿದ್ದರು. ಹಾಗೂ 20-25 ಸಾವಿರ ದಂಡವನ್ನು ಭರಿಸಬೇಕು ಅಂತಾ ಹೇಳಿದ್ದರು. ನಂತರ ದಂಡದ ಹಣವನ್ನು ಕಡಿಮೆ ಮಾಡಲು ಲಂಚದ ರೂಪದಲ್ಲಿ ಒಂದು ಸ್ಯಾಮ್‌ಸೆಂಗ್ ಮೊಬೈಲ್ ಸೆಟ್ಟಿಗೆ ಬೇಡಿಕೆ ಇಟ್ಟಿದ್ದರು. ಹಾಗೂ 3000 ರೂ. ದಂಡವನ್ನು ತುಂಬುವಂತೆ ಹೇಳಿ ಲಂಚದ ರೂಪದಲ್ಲಿ ಮೊಬೈಲ್ ಗಾಗಿ ಬೇಡಿಕೆ ಇಟ್ಟಿದ್ದರು.

ಈ ಬಗ್ಗೆ ಮೋಹನ್ ಎಂಬ ಅಧಿಕಾರಿಯ ವಿರುದ್ಧ ಕಾರವಾರ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ವಿಶ್ವನಾಥ ದೇಸಾಯಿ ಪ್ರಕರಣ ದಾಖಲಿಸಿದ್ದರು‌ . ನಂತರ ಟ್ರ‍್ಯಾಪ್ ಕಾರ್ಯಾಚರಣೆಯ ಕಾಲದಲ್ಲಿ ಆಪಾದಿತ ಅಧಿಕಾರಿ ಮೋಹನ್ ಲಂಚದ ರೂಪದಲ್ಲಿ ಸ್ಯಾಂಮ್ ಸಂಗ್ ಗ್ಯಾಲಕ್ಸಿ ಯಂಗ್ ವೈ ಡಿಯೋಸ್ ಮೊಬೈಲ್ ಹ್ಯಾಂಡ್ ಸೆಟ್ ಪಡೆವಾಗ ಸಿಕ್ಕಿಬಿದ್ದಿದ್ದರು‌.

ನ್ಯಾಯಾಲಯವು ಸ್ಪೆಶಲ್ ಕೇಸ್ ವಿಚಾರಣೆಯನ್ನು ನಡೆಸಿತ್ತು‌ . ಹಾಗೂ ಬುಧುವಾರ ಆಪಾದಿತನ ವಿರುದ್ಧ ಭ್ರಷ್ಟ್ಟಾಚಾರ ಪ್ರತಿಬಂಧಕ ಕಾಯ್ದೆ-1988 ಕಲಂ:07, 13(1) (ಡಿ) ಸಹಿತ 13 (2) ನೇದ್ದರಂತೆ ದಂಡ ಹಾಗೂ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದು, ಕಲಂ 07 ರ ಅಡಿಯಲ್ಲಿ 1 ವರ್ಷ ಸಾದಾ ಕಾರಾಗೃಹ ವಾಸ ವಿಧಿಸಿದೆ. ದಂಡ ಪಾವತಿಸದೇ ಇದ್ದಲ್ಲಿ ಹೆಚ್ಚುವರಿ 6 ತಿಂಗಳ ಸಾದಾ ಕಾರಾವಾಸ ಶಿಕ್ಷೆಗೆ ಗುರಿಪಡಿಸಲು ನ್ಯಾಯಾಧೀಶರು ಆದೇಶಿಸಿರುತ್ತಾರೆ.

ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಲಕ್ಷ್ಮೀಕಾಂತ ಎಸ್. ಪ್ರಭು ವಾದಿಸಿದ್ದರು ಎಂದು ಕಾರವಾರದ ಕರ್ನಾಟಕ ಲೋಕಯುಕ್ತ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಟಾಪ್ ನ್ಯೂಸ್

Udupi: ಯೋಗದಿಂದ ದೈಹಿಕ, ಮಾನಸಿಕ ಸ್ವಾಸ್ಥ್ಯ : ಪುತ್ತಿಗೆ ಶ್ರೀ

Udupi: ಯೋಗದಿಂದ ದೈಹಿಕ, ಮಾನಸಿಕ ಸ್ವಾಸ್ಥ್ಯ : ಪುತ್ತಿಗೆ ಶ್ರೀ

Subrahmanya: ಹಣವಿದ್ದ ಬ್ಯಾಗ್‌ ಕಳ್ಳರ ಪಾಲು

Subrahmanya: ಹಣವಿದ್ದ ಬ್ಯಾಗ್‌ ಕಳ್ಳರ ಪಾಲು

Kundapura: ಕೆಎಸ್‌ಆರ್‌ಟಿಸಿಗೆ ಚಾಲಕರ ನೇಮಕಕ್ಕೆ ಆಗ್ರಹ

Kundapura: ಕೆಎಸ್‌ಆರ್‌ಟಿಸಿಗೆ ಚಾಲಕರ ನೇಮಕಕ್ಕೆ ಆಗ್ರಹ

Kalladka-Theft

Bantwala: ಸೂಪರ್ ಬಜಾರ್‌ ಬೀಗ ಮುರಿದು ಹಣ ದೋಚಿದ ಖದೀಮರು!

Champions Trophy: ಚಾಂಪಿಯನ್ಸ್‌ ಟ್ರೋಫಿಗೆ ಬುಮ್ರಾ ಅಗತ್ಯವಿದೆ: ಶಾಸ್ತ್ರಿ

Champions Trophy: ಚಾಂಪಿಯನ್ಸ್‌ ಟ್ರೋಫಿಗೆ ಬುಮ್ರಾ ಅಗತ್ಯವಿದೆ: ಶಾಸ್ತ್ರಿ

ಸೀ ಸ್ಕೌಟಿಂಗ್‌ ಕೇಂದ್ರ ಮಂಗಳೂರಿಗೆ ಸ್ಥಳಾಂತರಗೊಳ್ಳಲಿ: ಸಿಂಧ್ಯಾ

ಸೀ ಸ್ಕೌಟಿಂಗ್‌ ಕೇಂದ್ರ ಮಂಗಳೂರಿಗೆ ಸ್ಥಳಾಂತರಗೊಳ್ಳಲಿ: ಸಿಂಧ್ಯಾ

T20I Rankings: 38 ಸ್ಥಾನ ನೆಗೆದು 2ನೇ ಸ್ಥಾನ ಅಲಂಕರಿಸಿದ ಅಭಿಷೇಕ್‌

T20I Rankings: 38 ಸ್ಥಾನ ನೆಗೆದು 2ನೇ ಸ್ಥಾನ ಅಲಂಕರಿಸಿದ ಅಭಿಷೇಕ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dandeli: ಮೀಟರ್ ಬಡ್ಡಿ ದಂಧೆ ವಿರುದ್ಧ ಕಾರ್ಯಾಚರಣೆ: ಇಬ್ಬರ ಬಂಧನ

Dandeli: ಮೀಟರ್ ಬಡ್ಡಿ ದಂಧೆ ವಿರುದ್ಧ ಕಾರ್ಯಾಚರಣೆ: ಇಬ್ಬರ ಬಂಧನ

10

Dandeli: ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ದ್ವಿಚಕ್ರ ವಾಹನ ಡಿಕ್ಕಿ; ಮಹಿಳೆಗೆ ಗಾಯ

9(1

Dandeli: ನಗರ ಸಭೆಯ ಜಾಗವನ್ನು ಅತಿಕ್ರಮಿಸಿ ನಿರ್ಮಿಸಿದ್ದ ಮನೆಗಳ ತೆರವು

Minister Mankala Vaidya: ದನ ಕದ್ದರೆ ಸರ್ಕಲ್‌ನಲ್ಲಿ ನಿಲ್ಲಿಸಿ ಗುಂಡು

Minister Mankala Vaidya: ದನ ಕದ್ದರೆ ಸರ್ಕಲ್‌ನಲ್ಲಿ ನಿಲ್ಲಿಸಿ ಗುಂಡು

11

Sirsi: ಮಳಲಗಾಂವದಲ್ಲಿ ಶಿವಣ್ಣ‌ ದಂಪತಿ

MUST WATCH

udayavani youtube

ಮಹಿಳೆಯರ ಸಣ್ಣ ಉದ್ದಿಮೆಗಳ ಬೆಂಬಲಕ್ಕೆ ‘ ಪವರ್ ಪರ್ಬ’

udayavani youtube

ಶ್ರೀ ಕೃಷ್ಣ ಮುಖ್ಯ ಪ್ರಾಣ ದೇವರ ದರ್ಶನ ಪಡೆದ e ಹಾಗೂ ಡಾ| ವೀರೇಂದ್ರ ಹೆಗ್ಗಡೆ

udayavani youtube

ಧರ್ಮಸ್ಥಳ ಕ್ಷೇತ್ರದಂತೆ ಎಸ್.ಡಿ.ಎಂ ಉಜಿರೆ ವೈದ್ಯಕೀಯ ತಂಡದಿಂದ ನಡೆಯಿತೇ ಪವಾಡ

udayavani youtube

ಬದನೆ ಕೃಷಿ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ

udayavani youtube

ಅಲ್ಲಲ್ಲಿ ನಡೆಯುತ್ತಿರುವ ಗೋ ಹಿಂಸೆ ಖಂಡಿಸುತ್ತೇವೆ :ಪೇಜಾವರ ಶ್ರೀ

ಹೊಸ ಸೇರ್ಪಡೆ

5

Mangluru: ಮಾದಕ ವಸ್ತು ಸೇವನೆ; ಬಂಧನ

Udupi: ಯೋಗದಿಂದ ದೈಹಿಕ, ಮಾನಸಿಕ ಸ್ವಾಸ್ಥ್ಯ : ಪುತ್ತಿಗೆ ಶ್ರೀ

Udupi: ಯೋಗದಿಂದ ದೈಹಿಕ, ಮಾನಸಿಕ ಸ್ವಾಸ್ಥ್ಯ : ಪುತ್ತಿಗೆ ಶ್ರೀ

Subrahmanya: ಹಣವಿದ್ದ ಬ್ಯಾಗ್‌ ಕಳ್ಳರ ಪಾಲು

Subrahmanya: ಹಣವಿದ್ದ ಬ್ಯಾಗ್‌ ಕಳ್ಳರ ಪಾಲು

Kundapura: ಕೆಎಸ್‌ಆರ್‌ಟಿಸಿಗೆ ಚಾಲಕರ ನೇಮಕಕ್ಕೆ ಆಗ್ರಹ

Kundapura: ಕೆಎಸ್‌ಆರ್‌ಟಿಸಿಗೆ ಚಾಲಕರ ನೇಮಕಕ್ಕೆ ಆಗ್ರಹ

4

Udupi: ಲಕ್ಷಾಂತರ ರೂ. ಮೌಲ್ಯದ ಟವರ್‌ ವಸ್ತು ಕಳವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.