ಕಾರವಾರ: ಇದ್ದೂ ಇಲ್ಲದಂತಾದ ನಗರಸಭೆಯ ಈಜುಕೊಳ!


Team Udayavani, Feb 2, 2024, 5:18 PM IST

ಕಾರವಾರ: ಇದ್ದೂ ಇಲ್ಲದಂತಾದ ನಗರಸಭೆಯ ಈಜುಕೊಳ!

ಉದಯವಾಣಿ ಸಮಾಚಾರ
ಕಾರವಾರ: ನಗರಸಭೆ ಒಡೆತನದ ಈಜುಕೊಳ ಬಾಗಿಲು ಮುಚ್ಚಿ 6 ವರ್ಷ ಕಳೆದಿದ್ದು ಈಜು ಪ್ರಿಯರಿಗೆ ಈಜುಕೊಳ ಇದ್ದೂ ಇಲ್ಲದಂತಾಗಿದೆ. ಹಲವು ಗೊಂದಲಗಳಿಂದ ಮುಚ್ಚಿಹೋದ ಈಜುಕೊಳವನ್ನು ಗುತ್ತಿಗೆ ಪಡೆದವರ ಅವಧಿ  ಮುಗಿದ ನಂತರ ಬೇರೊಬ್ಬರು ಗುತ್ತಿಗೆ ಪಡೆದು ಅದನ್ನು ನಡೆಸದೇ ವರ್ಷಗಟ್ಟಲೇ ನಗರಸಭೆ ಜೊತೆ ಸಂಘರ್ಷಕ್ಕೆ ಇಳಿದಿದ್ದರಿಂದ ಅದರ ನಿರ್ವಹಣೆ ಸಹ ಇಲ್ಲದೆ ಪಾಳು ಬಿದ್ದು ಪಾಚಿಗಟ್ಟಿತು.

ನಂತರ ಅದರ ನವೀಕರಣಕ್ಕೆ ನಗರಸಭೆ ಮುಂದಾಯಿತಾದರೂ, ಕಾಮಗಾರಿ ಗುತ್ತಿಗೆ ಪಡೆದವರು ಆಸಕ್ತಿ ವಹಿಸದ ಕಾರಣ ಈಜುಕೊಳ ಮತ್ತೆ ಪಾಳು ಬಿತ್ತು. ನವೀಕರಣ ಕೆಲಸ ಕುಂಟುತ್ತಾ ಸಾಗಿದ್ದು, ಸದ್ಯಕ್ಕೆ ಕೆಲಸ ಮುಗಿಯುವ ಸಾಧ್ಯತೆ ಇಲ್ಲ.

ಈಜುಕೊಳದ ನೀರು ಖಾಲಿ ಮಾಡದ ಪರಿಣಾಮ ಪಾಚಿಗಟ್ಟಿರುವ ನೀರು ಆತಂಕ ಹುಟ್ಟಿಸಿದೆ. ನಗರಸಭೆ ಸುಪರ್ದಿಯಲ್ಲಿರುವ ಈಜುಕೊಳವನ್ನು ಸ್ಥಳೀಯ ಸಂಸ್ಥೆಯೊಂದು ಸ್ವಂತ ವೆಚ್ಚ ಭರಿಸಿ ನವೀಕರಿಸಲು ಮುಂದೆ ಬಂದಿತ್ತು. ಕಳೆದ ವರ್ಷ ನಗರಸಭೆ ಸಾಮಾನ್ಯಸಭೆಯಲ್ಲಿ ಕಾಮಗಾರಿಗೆ ಅನುಮೋದನೆ ನೀಡಲಾಗಿತ್ತು. ಕೆಲಸ ಆರಂಭಗೊಂಡು ವರ್ಷ ಸಮೀಪಿಸಿದೆ. ಆದರೆ ಶೇ.35 ರಷ್ಟು ಕೆಲಸವೂ ಪೂರ್ಣಗೊಂಡಿಲ್ಲ.

ಈಜುಕೊಳದ ಆವರಣದಲ್ಲಿ ಆಳೆತ್ತರದವರೆಗೆ ಗಿಡಗಂಟಿಗಳು ಬೆಳೆದು ನಿಂತಿವೆ. 12 ಅಡಿ ಆಳದ ಈಜುಕೊಳದಲ್ಲಿ ಪೂರ್ಣ ಪ್ರಮಾಣದಲ್ಲಿ ನೀರು ನಿಂತಿದೆ. ಮಳೆನೀರು ಸೇರಿಕೊಂಡಿದೆ. ಹಲವು ತಿಂಗಳು ಕಳೆದಿದ್ದರಿಂದ ಈಜುಕೊಳ ಪಾಚಿಕಟ್ಟಿ
ಗಬ್ಬುನಾರುತ್ತಿದೆ.

ಈಜುಕೊಳದ ಪಕ್ಕದಲ್ಲಿ ಉಪನೋಂದಣಾಧಿಕಾರಿ ಕಚೇರಿ, ಹೂವು-ಹಣ್ಣಿನ ಮಾರುಕಟ್ಟೆ, ಅಂಗಡಿ ಮುಂಗಟ್ಟುಗಳು ಇವೆ. ನಗರದ ಹೃದಯಭಾಗದಲ್ಲಿರುವ ಈಜುಕೊಳದಲ್ಲಿ ಮಲೀನ ನೀರು ನಿಲ್ಲಲು ಅವಕಾಶ ಮಾಡಿಕೊಟ್ಟಿದ್ದು ಸೊಳ್ಳೆ ಉತ್ಪತ್ತಿಗೆ ಕಾರಣವಾಗುತ್ತಿದೆ. ಇದರಿಂದ ಅಕ್ಕಪಕ್ಕದ ಪ್ರದೇಶದಲ್ಲಿ ಸೊಳ್ಳೆ ಕಾಟವೂ ಹೆಚ್ಚಿದ್ದು ರೋಗರುಜಿನ ಹರಡುವ ಆತಂಕ ಎದುರಾಗಿದೆ ಎಂದು ಅಂಗಡಿಕಾರ ಸಲೀಂ ಮುಕ್ತಾರ ಹೇಳುತ್ತಾರೆ.

ಕಾರವಾರಕ್ಕೆ ಆಗಮಿಸುವ ಪ್ರವಾಸಿಗರು ಸಮುದ್ರದಲ್ಲಿ ಸ್ನಾನ ಮಾಡಿ ನಂತರ ಈಜುಕೊಳದಲ್ಲಿ ಸ್ನಾನ ಮಾಡಲು ಆಸಕ್ತಿ ತೋರುತ್ತಾರೆ. ಅಲ್ಲದೆ ವಾರದ ರಜೆ ಅವಧಿಯಲ್ಲಿ ಮಕ್ಕಳು, ವಿದ್ಯಾರ್ಥಿಗಳು ಈಜು ಚಟುವಟಿಕೆಯಲ್ಲಿ ತೊಡಗಲು ಮುಂದಾಗುತ್ತಾರೆ.

ಆದರೆ ನಗರದಲ್ಲಿ ಸಿಹಿನೀರಿನ ಈಜುಕೊಳ ಇದ್ದೂ ಪ್ರಯೋಜನಕ್ಕೆ ಬರದಂತಾಗಿದೆ. ಕೆಲವು ವರ್ಷಗಳಿಂದಲೂ ಈ ಸಮಸ್ಯೆ ಮುಂದುವರೆದಿದೆ ಎಂದು ಸ್ಥಳೀಯರಾದ ಗಿರೀಶ್‌ ಬಿ. ಬೇಸರ ವ್ಯಕ್ತಪಡಿಸಿದರು. ಈಜುಕೊಳ ನವೀಕರಣ ಕಾಮಗಾರಿಯನ್ನು ಕಳೆದ ಬೇಸಿಗೆಯಲ್ಲೇ ಮುಗಿಸಲು ಸೂಚಿಸಲಾಗಿತ್ತು. ನಿಧಾನಗತಿಯಲ್ಲಿ ಕೆಲಸ ಮಾಡಲಾಗುತ್ತಿದೆ. ಕೆಲವು ದಿನದಿಂದ ಕೆಲಸವೂ ನಡೆಯುತ್ತಿಲ್ಲ .ಈ ಬಗ್ಗೆ ಕ್ರಮಕ್ಕೆ ಮುಂದಾಗಲಾಗುವುದು ಎಂದು ನಗರಸಭೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈಜುಕೊಳದಲ್ಲಿ ಪಾಚಿಗಟ್ಟಿರುವ ನೀರನ್ನು ತೆರವು ಮಾಡಿ ಕೊಳವನ್ನು ಶುಚಿಯಾಗಿಡುವಂತೆ ಗುತ್ತಿಗೆ ಪಡೆದ ಸಂಸ್ಥೆಗೆ ಸೂಚಿಸಲಾಗುವುದು ಎಂದು ನಗರಸಭೆ ಎಇಇ ಸದಾನಂದ ಸಾಳೆಹಿತ್ತಲ ತಿಳಿಸಿದ್ದಾರೆ. ಈಜುಕೊಳದ ನವೀಕರಣ ಕಾಮಗಾರಿ ಇಷ್ಟರೊಳಗೆ ಪೂರ್ಣಗೊಳ್ಳಬೇಕಿತ್ತು. ಸ್ವ ಆಸಕ್ತಿಯಿಂದ ಈಜುಕೊಳದ ನಿರ್ವಹಣೆಗೆ ಮುಂದೆ ಬಂದಿರುವ
ಸಂಸ್ಥೆಯವರು ಅಂದಾಜು ರೂ. 23 ಲಕ್ಷ ವೆಚ್ಚದಲ್ಲಿ ನವೀಕರಣ ಕೆಲಸ ಮಾಡುತ್ತಿರುವುದಾಗಿ ಅವರು ತಿಳಿಸಿದ್ದಾರೆ.

ಈಜು ಕೊಳದ ನವೀಕರಣ ಕೆಲಸ ನಿಧಾನಗತಿಯಲ್ಲಿ ನಡೆಯುತ್ತಿರುವುದಕ್ಕೆ ಹಲವು ಬಾರಿ ನೊಟೀಸ್‌ ನೀಡಲಾಗಿದೆ. ತ್ವರಿತವಾಗಿ ಕೆಲಸ ಮಾಡುವಂತೆ ಇನ್ನೊಮ್ಮೆ ಸೂಚಿಸಲಾಗುವುದು.
*ಸದಾನಂದ ಸಾಳೆಹಿತ್ತಲ ಎಇಇ .
ನಗರಸಭೆ.ಕಾರವಾರ.

ಟಾಪ್ ನ್ಯೂಸ್

ಗೋ ರಕ್ಷಣೆಗೆ ಯಾವ ತ್ಯಾಗಕ್ಕೂ ಸಿದ್ಧ: ಪುನೀತ್‌ ಅತ್ತಾವರ

Belthangady; ಗೋ ರಕ್ಷಣೆಗೆ ಯಾವ ತ್ಯಾಗಕ್ಕೂ ಸಿದ್ಧ: ಪುನೀತ್‌ ಅತ್ತಾವರ

BBK11: ಫಿನಾಲೆಗೆ ಹೋಗುವ ಪರಸ್ಪರ ಕಿತ್ತಾಡಿಕೊಂಡ ಬಿಗ್ ಬಾಸ್ ಸ್ಪರ್ಧಿಗಳು

BBK11: ಫಿನಾಲೆಗೆ ಹೋಗುವ ಪರಸ್ಪರ ಕಿತ್ತಾಡಿಕೊಂಡ ಬಿಗ್ ಬಾಸ್ ಸ್ಪರ್ಧಿಗಳು

1-davn

Davanagere; ಸಿಲಿಂಡರ್ ಸ್ಫೋ*ಟ: ಆವರಿಸಿದ ದಟ್ಟ ಹೊಗೆ

JP-Nadda

HMPV Issue: ಎಚ್‌ಎಂಪಿವಿ ಹೊಸ ವೈರಸ್ ಏನಲ್ಲ, ಆತಂಕಪಡುವ ಅಗತ್ಯವಿಲ್ಲ: ಜೆ.ಪಿ.ನಡ್ಡಾ

Raichuru-Rims

Raichuru: ರಿಮ್ಸ್‌ ಆಸ್ಪತ್ರೆಯಲ್ಲಿ ಮತ್ತೋರ್ವ ಬಾಣಂತಿ ಸಾವು; 3 ತಿಂಗಳಿನಲ್ಲಿ 12 ಮಂದಿ ಬಲಿ

Hosnagara-Bus

Hosanagar: ಪ್ರಪಾತಕ್ಕೆ ಉರುಳಿದ ಬಸ್; ಸಣ್ಣ ಪುಟ್ಟ ಗಾಯಗಳಿಂದ ಪ್ರಯಾಣಿಕರು ಪಾರು

Mangaluru: ಒಂದೇ ಹೆರಿಗೆಯಲ್ಲಿ ನಾಲ್ಕು ಮಕ್ಕಳಿಗೆ ಜನ್ಮನೀಡಿದ ತಾಯಿ

Mangaluru: ಒಂದೇ ಹೆರಿಗೆಯಲ್ಲಿ ನಾಲ್ಕು ಮಕ್ಕಳಿಗೆ ಜನ್ಮನೀಡಿದ ತಾಯಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Honnavara: ಲಾರಿ ಪಲ್ಟಿಯಾಗಿ ಇಬ್ಬರು ಸಾವು; ಮೂವರಿಗೆ ಗಾಯ

Honnavara: ಲಾರಿ ಪಲ್ಟಿಯಾಗಿ ಇಬ್ಬರು ಸಾವು; ಮೂವರಿಗೆ ಗಾಯ

KPTCL: ಕೆಪಿಸಿಗೆ 30 ಸಾವಿರ ಕೋಟಿ ರೂ. ಬಾಕಿ ಸಂಕಷ್ಟ !

KPTCL: ಕೆಪಿಸಿಗೆ 30 ಸಾವಿರ ಕೋಟಿ ರೂ. ಬಾಕಿ ಸಂಕಷ್ಟ !

7-dandeli

Dandeli: ಗಾಂಜಾ ಅಕ್ರಮ ಮಾರಾಟ ಯತ್ನ; ಮಾಲು ಸಹಿತ ಆರೋಪಿಯ ಬಂಧನ

6-honnavara

Honnavar: ಮೂವರು ಯುವಕರ ಬಲಿ ತೆಗೆದುಕೊಂಡ ಭೀಕರ ರಸ್ತೆ ಅಪಘಾತ

5-1

Mundgod: ಹಾವು ಕಡಿದು ಅಂಗನವಾಡಿ ಬಾಲಕಿ ಸಾವು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಗೋ ರಕ್ಷಣೆಗೆ ಯಾವ ತ್ಯಾಗಕ್ಕೂ ಸಿದ್ಧ: ಪುನೀತ್‌ ಅತ್ತಾವರ

Belthangady; ಗೋ ರಕ್ಷಣೆಗೆ ಯಾವ ತ್ಯಾಗಕ್ಕೂ ಸಿದ್ಧ: ಪುನೀತ್‌ ಅತ್ತಾವರ

BBK11: ಫಿನಾಲೆಗೆ ಹೋಗುವ ಪರಸ್ಪರ ಕಿತ್ತಾಡಿಕೊಂಡ ಬಿಗ್ ಬಾಸ್ ಸ್ಪರ್ಧಿಗಳು

BBK11: ಫಿನಾಲೆಗೆ ಹೋಗುವ ಪರಸ್ಪರ ಕಿತ್ತಾಡಿಕೊಂಡ ಬಿಗ್ ಬಾಸ್ ಸ್ಪರ್ಧಿಗಳು

1-davn

Davanagere; ಸಿಲಿಂಡರ್ ಸ್ಫೋ*ಟ: ಆವರಿಸಿದ ದಟ್ಟ ಹೊಗೆ

JP-Nadda

HMPV Issue: ಎಚ್‌ಎಂಪಿವಿ ಹೊಸ ವೈರಸ್ ಏನಲ್ಲ, ಆತಂಕಪಡುವ ಅಗತ್ಯವಿಲ್ಲ: ಜೆ.ಪಿ.ನಡ್ಡಾ

ACT

Mangaluru: ಕೊಕೇನ್‌, ಚರಸ್‌ ಸೇವನೆ; ಮೂವರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.