ಶಾಂತಕ್ಕನ ಕೆಸು ಪುರಾಣ ಅವಲೋಕನ

ಕಸ ಕೊಟ್ಟರೂ ರಸ ಹುಡುಕುವ ಬುದ್ಧಿಯ ಜಾನಪದ ವಿದ್ವಾಂಸೆ

Team Udayavani, Apr 12, 2021, 4:21 PM IST

ಶಾಂತಕ್ಕನ ಕೆಸು ಪುರಾಣ ಅವಲೋಕನ

ಹೊನ್ನಾವರ: ಕಸಕೊಟ್ಟರೂ ರಸ ಹುಡುಕುವ ಬುದ್ಧಿಯ ಜಾನಪದ ವಿದ್ವಾಂಸೆ ಶಾಂತಿ ನಾಯಕ ಈ ಬಾರಿ ಕೆಸು ಪುರಾಣ ಮತ್ತು ವಾಸ್ತವ ಎಂಬ 80 ಪುಟಗಳ ಪುಸ್ತಕವನ್ನು ಸಾರಸ್ವತ ಲೋಕಕ್ಕೆ ನೀಡಿದ್ದಾರೆ. ಅವನೀ ಪ್ರಕಾಶನ ಇದನ್ನು ಪ್ರಕಟಿಸಿದೆ.

ಮಾನ ಮುಚ್ಚಿಕೊಳ್ಳಲು, ತಿನ್ನಲು, ಮನೆ ಕಟ್ಟಿಕೊಳ್ಳಲುಸೊಪ್ಪನ್ನು ಬಳಸುವ ಪರಂಪರೆ ಹಿಂದಿನಿಂದ ಇದೆ. ಮಲೆನಾಡಿಗರುಕಾಡಿನಲ್ಲಿ ಸಹಜವಾಗಿ ಸಿಗುವಸೊಪ್ಪುಗಳನ್ನು ಬಳಸಿ ಅಡುಗೆಮಾಡಿ ಊಟ ಮಾಡುತ್ತ ತಮ್ಮ ಆರೋಗ್ಯಕಾಪಾಡಿಕೊಂಡು ಬಂದಿದ್ದಾರೆ. ಖನಿಜಾಂಶಗಳಗಣಿಯಾಗಿರುವ ಕೆಸುವಿನ ಅಡುಗೆಯ ವಾಸ್ತವಪ್ರಪಂಚ ಅದ್ಭುತವಾದದ್ದು. ಎಲ್ಲ ಕೆಸುಗಳುಆಹಾರಕ್ಕೆ ಯೋಗ್ಯವಲ್ಲ. ಕೆಲವು ಪ್ರತಿಕೂಲ ಪರಿಣಾಮ ಬೀರುತ್ತವೆ.

ಹವಾಯಿಯನ್ನರು, ರೋಮನ್ನರು ಸಹಪ್ರಾಚೀನ ಕಾಲದಲ್ಲಿ ಕೆಸುವಿನ ಅಡುಗೆಬಲ್ಲವರಾಗಿದ್ದರು. ಕರಾವಳಿಯ ಕರಗಲಿ, ಪತ್ರೊಡೆ,ಸಹಿತ ವಿವಿಧ ಕೆಸುವಿನ ಆಹಾರ ತಯಾರಿಕೆ ಕುರಿತುವಿವರವಾಗಿ ಬರೆದಿರುವ ಶಾಂತಕ್ಕ ಕಾಡೆRಸು,ಬೀಳ್ಗೆಸು, ಮರಗೆಸು, ಕಲ್ಲುಕೆಸುಗಳ ಸಹಿತ 9 ವಿಧದಕೆಸುಗಳನ್ನು ಬರೆದಿದ್ದು, ಜಗತ್ತಿನಲ್ಲಿ 87ಬಗೆಯ ಕೆಸುಗಳಿವೆ ಅನ್ನುತ್ತಾರೆ. ಜೀವಸತ್ವಗಳ ಗಣಿಯಾದ ಕೆಸುವಿನ ಕರಗಲಿ ಕುರಿತು ಬರೆದಿದ್ದಾರೆ.

ರಾಸಾಯನಿಕಗಳಿಂದ ತೋಯ್ದ ಅಧಿಕ ಬೆಲೆಯತಾಜಾತನವಿಲ್ಲದ ಪೇಟೆಯ ತರಕಾರಿಗಿಂತ ಕೆಸುಹೇಗೆ ಮಿಗಿಲು, ಅದರಲ್ಲಿರುವ ಪೋಷಕಾಂಶಗಳುಎಷ್ಟು ಎಂಬುದನ್ನು ಈ ಕೃತಿಯಲ್ಲಿ ದಾಖಲಿಸಿದ್ದಾರೆ.ಕೆಸುವಿನ ಬಿಳಲುಗಳ ಅಡುಗೆ ಕುರಿತು ವಿವರಗಳಿವೆ.

ನೆಟ್ಟು ಬೆಳೆಸುವ ಕರಿಕೆಸುವಿನ ಧಾರ್ಮಿಕಮಹತ್ವವನ್ನು, ಅದರ ದಡಿಯ ಕಡುಬುಮತ್ತು ದೊಡ್ನ ತಯಾರಿಕೆ ಕುರಿತು ಬರೆದಿದ್ದಾರೆ.ಕೃಷ್ಣಾಷ್ಠಮಿ ದಿನ ಕರಿಕೆಸುವಿನ ಎಲೆಯು ಕೃಷ್ಣನಪೂಜೆಗೆ ಬಳಸುವುದನ್ನು ಬರೆದಿದ್ದಾರೆ. ಶ್ರಾದ್ಧದದಿನ ಕೆಸುವಿನ ಗಡ್ಡೆ ಹಸಿಮಾಡುವ ಪದ್ಧತಿ,ಭಟ್ಕಳದ ಗೊಂಡರ ಹಬ್ಬದಲ್ಲಿ ಕೆಸುವಿನ ಸ್ಥಾನ,ಬಾಣಂತಿ ಊಟಕ್ಕೆ ಕೆಸುವಿನ ಬಳಕೆ, ಮರಗೆಣಸಿನಎಲೆಯಲ್ಲಿ ಗೌರಿ, ಹೀಗೆ ತಮ್ಮ ಕೈಗೆ ಸಿಲುಕಿದ, ಕಣ್ಣಿಗೆಕಂಡ ಮಾತ್ರವಲ್ಲ ಅಂತರ್ಜಾಲದಲ್ಲಿ ತಡಕಾಡಿಕೆಸುವನ್ನು ಕಿತ್ತುಕೊಟ್ಟಿದ್ದಾರೆ. ಕೆಸುವಿನಲ್ಲಿರುವಪೌಷ್ಠಿಕಾಂಶಗಳು, ಆರೋಗ್ಯ ವರ್ಧಕ ಅಂಶಗಳನ್ನು ಪುಸ್ತಕದಲ್ಲಿ ದಾಖಲಿಸಿದ್ದಾರೆ.

ಎಂಎ, ಬಿಎಡ್‌ ಓದಿ ಕರ್ಕಿ ಪ್ರೌಢಶಾಲೆ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತ ಜಾನಪದ ಹಿರಿಯವಿದ್ವಾಂಸ ಡಾ| ಎನ್‌.ಆರ್‌. ನಾಯಕರಧರ್ಮಪತ್ನಿಯಾಗಿ ಅವರ ಎಲ್ಲ ಕೆಲಸಗಳಲ್ಲಿಜೊತೆಯಾಗಿ ದುಡಿದು ಸ್ವತಂತ್ರವಾಗಿ 25ಕ್ಕೂ ಹೆಚ್ಚುಜಾನಪದ ಅಡುಗೆಯ ಸಾಹಿತ್ಯ, ಮನೆಮದ್ದು,ಮೊದಲಾದ ಪುಸ್ತಕಗಳನ್ನು ಪ್ರಕಟಿಸಿರುವ ಶಾಂತಿನಾಯಕರಿಗೆ ರಾಜ್ಯೋತ್ಸವ ಪ್ರಶಸ್ತಿ, ಅತ್ತಿಮಬ್ಬೆಪ್ರಶಸ್ತಿ, ಸಹಿತ ಹಲವು ಪ್ರಶಸ್ತಿಗಳು ದೊರಕಿವೆ. 78ರಈ ವಯಸ್ಸಿನಲ್ಲಿ ಕೆಸುವಿನ ಕುರಿತು ಬರೆದಿರುವ ಶಾಂತಕ್ಕನ ಕಸುವು ಮೆಚ್ಚತಕ್ಕದು.

ಹೊನ್ನಾವರದ ಭೂಮಿ ಜಾನಪದ ಪ್ರತಿಷ್ಠಾನವು ಶಾಂತಿ ನಾಯಕರು ಬರೆದು ಪ್ರಕಟಿಸಿರುವ,ಕೆಸು ಪುರಾಣ ಮತ್ತು ವಾಸ್ತವ ಪುಸ್ತಕದ ಕುರಿತು ಬರಹಗಳನ್ನು ಆಹ್ವಾನಿಸಿದೆ. ಪ್ರತಿ ಬರಹವು ಏ4ಆಕಾರದ 4-5 ಪುಟಗಳಿಗೆ ಮೀರದಂತಿರಬೇಕು.ಆಯ್ಕೆಗೊಂಡ ಐದು ಬರಹಗಳ ಲೇಖಕರನ್ನುಗೌರವ ಪ್ರಶಸ್ತಿ ಪತ್ರದೊಂದಿಗೆ ತಲಾ ಎರಡು ಸಾವಿರ ರೂ.ಗಳನ್ನು ನೀಡಿ ಗೌರವಿಸಲಿದೆ. ಬರಹಗಳನ್ನು ಮೇ 15 ರೊಳಗೆ ಸುಹಾಸ,ಉದಯಗಿರಿ ಪ್ರಭಾತನಗರ, ಹೊನ್ನಾವರ(ಉ.ಕ.)-581334 ಈ ವಿಳಾಸಕ್ಕೆ ಕಳಿಸಬೇಕು.ಪುಸ್ತಕವನ್ನು ರಿಯಾಯತಿ ದರದಲ್ಲಿ ಈಕೆಳಗಿನ ವಿಳಾಸದಲ್ಲಿ ಪಡೆಯಬಹುದು.ಚಂದ್ರಿಕಾ ಪಿ., ಅಭಿನವ, 2 ಮೊದಲನೆ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-40. ಮೊ. 9448804044.ಶಾಂತಿ ನಾಯಕ, ಸುಹಾಸ, ಉದಯಗಿರಿ,ಪ್ರಭಾತನಗರ. ಹೊನ್ನಾವರ ಮೊ. 9482438577.

 

ಜೀಯು, ಹೊನ್ನಾವರ

ಟಾಪ್ ನ್ಯೂಸ್

Nijjar ಹ*ತ್ಯೆಗೆ ಮೋದಿ ನಂಟು ವರದಿ: “ಗುಪ್ತಚರರ’ ವಿರುದ್ಧ ಟ್ರಾಡೊ ಗರಂ

Nijjar ಹ*ತ್ಯೆಗೆ ಮೋದಿ ನಂಟು ವರದಿ: “ಗುಪ್ತಚರರ’ ವಿರುದ್ಧ ಟ್ರಾಡೊ ಗರಂ

DK SHI NEW

Maharashtra BJP ಗೃಹಲಕ್ಷ್ಮಿ ನಕಲು ಮಾಡಿ ಗೆದ್ದಿದೆ: ಡಿ.ಕೆ.ಶಿವಕುಮಾರ್‌

Kanakapura-laxmi

New Scheme: ಶೀಘ್ರವೇ ಗೃಹಲಕ್ಷ್ಮೀ ಸಂಘ ಸ್ಥಾಪನೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

Ola Scooter; ರಿಪೇರಿಗೆ 90000 ರೂ.ಬಿಲ್‌: ಸ್ಕೂಟರ್‌ ಒಡೆದು ಹಾಕಿದ ಗ್ರಾಹಕ

Ola Scooter; ರಿಪೇರಿಗೆ 90000 ರೂ.ಬಿಲ್‌: ಸ್ಕೂಟರ್‌ ಒಡೆದು ಹಾಕಿದ ಗ್ರಾಹಕ

Accident-logo

Kolluru: ಕಾಂತಾರ ಚಿತ್ರ ತಂಡದ ವಾಹನ ಅಪಘಾತ

1-reee

Chikkamagaluru: ದತ್ತಪೀಠದಲ್ಲಿ ಕುಂಕುಮ ಲೇಪಿಸಿ ಧಾರ್ಮಿಕ ಭಾವನೆಗೆ ಧಕ್ಕೆ: ಖಾದ್ರಿ

ಹವಾಮಾನ ಹಣಕಾಸು ಪ್ಯಾಕೇಜ್‌ ತಿರಸ್ಕರಿಸಿದ ಭಾರತ

ಹವಾಮಾನ ಹಣಕಾಸು ಪ್ಯಾಕೇಜ್‌ ತಿರಸ್ಕರಿಸಿದ ಭಾರತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

drowned

Honnavar;ಸಮುದ್ರದಲ್ಲಿ ಮುಳುಗುತ್ತಿದ್ದ ಮೂವರು ಯುವತಿಯರ ರಕ್ಷಣೆ

ಮುಂಡಗೋಡ: ಮಂಗನಬಾವು ಉಲ್ಬ‌ಣ-ಮೂರು ದಿನ ಶಾಲೆಗೆ ರಜೆ

ಮುಂಡಗೋಡ: ಮಂಗನಬಾವು ಉಲ್ಬ‌ಣ-ಮೂರು ದಿನ ಶಾಲೆಗೆ ರಜೆ

Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ

Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ

3-yellapur

Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ

1-honey

Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ‌,ಮಗಳು

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Nijjar ಹ*ತ್ಯೆಗೆ ಮೋದಿ ನಂಟು ವರದಿ: “ಗುಪ್ತಚರರ’ ವಿರುದ್ಧ ಟ್ರಾಡೊ ಗರಂ

Nijjar ಹ*ತ್ಯೆಗೆ ಮೋದಿ ನಂಟು ವರದಿ: “ಗುಪ್ತಚರರ’ ವಿರುದ್ಧ ಟ್ರಾಡೊ ಗರಂ

DK SHI NEW

Maharashtra BJP ಗೃಹಲಕ್ಷ್ಮಿ ನಕಲು ಮಾಡಿ ಗೆದ್ದಿದೆ: ಡಿ.ಕೆ.ಶಿವಕುಮಾರ್‌

Kanakapura-laxmi

New Scheme: ಶೀಘ್ರವೇ ಗೃಹಲಕ್ಷ್ಮೀ ಸಂಘ ಸ್ಥಾಪನೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

Ola Scooter; ರಿಪೇರಿಗೆ 90000 ರೂ.ಬಿಲ್‌: ಸ್ಕೂಟರ್‌ ಒಡೆದು ಹಾಕಿದ ಗ್ರಾಹಕ

Ola Scooter; ರಿಪೇರಿಗೆ 90000 ರೂ.ಬಿಲ್‌: ಸ್ಕೂಟರ್‌ ಒಡೆದು ಹಾಕಿದ ಗ್ರಾಹಕ

Police

Karkala: ಎಸ್‌ಪಿ ಕಚೇರಿ ಮುತ್ತಿಗೆ ಹೇಳಿಕೆ ಆರೋಪ: ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.