ಸಮಗ್ರ ಅಭಿವೃದ್ಧಿಗೆ ಕಾದಿದೆ ಕರಸುಳ್ಳಿ ‘ಕೊಪ್ಪಳಗದ್ದೆ’ದೊಡ್ಡ ಕೆರೆ

Team Udayavani, Jul 11, 2021, 9:46 AM IST

ಸಮಗ್ರ ಅಭಿವೃದ್ಧಿಗೆ ಕಾದಿದೆ ಕರಸುಳ್ಳಿ ‘ಕೊಪ್ಪಳಗದ್ದೆ’ದೊಡ್ಡ ಕೆರೆ

ಶಿರಸಿ: ತಾಲೂಕಿನ ಪಶ್ಚಿಮ ಭಾಗದಲ್ಲಿ ಪ್ರಮುಖ ಜೀವಜಲದ ತಾಣಗಳಲ್ಲಿ ಒಂದಾದ ಯಡಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕರಸುಳ್ಳಿ ಕೊಪ್ಪಳಗದ್ದೆ ಕೆರೆಯು ಅಭಿವೃದ್ಧಿಗೆ ಕಾದಿದೆ.

ಪೂರ್ವಜರು ನಿರ್ಮಾಣ ಮಾಡಿದ್ದ ಈ  ಕೆರೆ ಸಹಜ ಜೀವ ಜಲದ ಸಂಪತ್ತುಗಳ ರಾಶಿಯಾಗಿಗೆ ಆಸರೆಯಾಗಿದೆ. ಕರಸುಳ್ಳಿ ಊರಿನ ಸುಮಾರು 25 ಎಕರೆ ಅಡಿಕೆ ತೋಟ, 25-30 ಎಕರೆ ಕೆರೆ ಭತ್ತದ ಗದ್ದೆಗೆ ಆಶ್ರಯವಾಗಿದೆ. ಆದರೆ, ಈಗ ಹೂಳು ತುಂಬಿದ್ದು, ಹೂಳು ತೆಗೆಯುವ ಜೊತೆಗೆ ಕೆರೆಯ ಏರಿ ಹಾಗೂ ಕೋಡಿಯು ದುರಸ್ತಿಗೆ ಕಾದಿದೆ. ಕೆರೆಯ ನೀರಿನ ಮೇಲೆ ನೀರ ಹುಲ್ಲೂ ಬೆಳೆದಿದೆ.  ಒಂದು ಕಾಲಕ್ಕೆ ಬಾತುಕೋಳಿಗಳೂ ಓಡಾಡಿಕೊಂಡಿದ್ದವು ಈಗ ಪುನಶ್ಚೇತನಕ್ಕೆ ಹಾತೊರೆಯುತ್ತಿದೆ.

ತಾಲೂಕಿನ ಪೂರ್ವ ಭಾಗದಲ್ಲಿ ದೊಡ್ಡ ಕೆರೆಗಳು ಇವೆ. ಆದರೆ, ಪಶ್ಚಿಮ ಭಾಗದಲ್ಲಿ ದೊಡ್ಡ ಕೆರೆಗಳು ಅಪರೂಪ. 15-20 ಗುಂಟೆ ಕೆರೆ ಇದ್ದರೆ ಅದೇ ದೊಡ್ಡದು ಎಂಬ ಮಾತುಗಳೇ ಇವೆ. ಆದರೆ, ಕರಸುಳ್ಳಿ ಕೊಪ್ಪಳ ಗದ್ದೆ ಕೆರೆ ಎರಡು ಎಕರೆ ಮೂರು ಗುಂಟೆ ಕ್ಷೇತ್ರದ್ದಾಗಿದೆ.

ಈ ಕೆರೆಗೆ ಮೇಲೊಂದು 15 ಗುಂಟೆ ಕೆರೆ ಕೂಡ ಇದೆ. ಇದು ಒಂದು  ಸರಪಳಿ ಮಾದರಿಯಲ್ಲಿ ಜೋಡಿಸಿ ಕೊಂಡಿದೆ. ಇಲ್ಲಿಂದ ಹೊರಗೆ ಬರುವ ನೀರು ಕೋಡಿಯ ಮೂಲಕ ಭತ್ತದ ಗದ್ದೆಗಳಿಗೆ ಮಳೆಗಾಲ ಮುಗಿಯುತ್ತಿದ್ದಂತೇ ಆಸರೆಯಾಗಿದ್ದವು. ಆದರೆ, ಈಗ ಕೋಡಿ ಹಾಗೂ ಕೆರೆ ಅಭಿವೃದ್ಧಿ ಆಗಬೇಕಿದೆ.

ಇದನ್ನೂ ಓದಿ: ಮೇಕೆ ಕದ್ದನೆಂದು ದಲಿತ ಯುವಕನ ಮೇಲೆ ಹಲ್ಲೆ: ವಿಡಿಯೋ ವೈರಲ್ ಆದ ಬೆನ್ನಲ್ಲೇ 15 ಮಂದಿಯ ಬಂಧನ

ಈ ಕೆರೆ ಸರಿಯಾಗಿದ್ದರೆ ಊರಿನ ಜಲ ಮಟ್ಟ ಕೂಡ ಏರುತ್ತದೆ. ದೊಡ್ಡ ಕೆರೆ ಆಗಿದ್ದರಿಂದ ಕೇವಲ ಗ್ರಾಮಸ್ಥರಿಂದ ಅಭಿವೃದ್ಧಿ ಕಷ್ಟ. ಅಂದಾಜು 25-30 ಲಕ್ಷ ರೂಪಾಯಿ ಬೇಕಾಗಬಹುದು. ಆದರೆ, ಗ್ರಾಮದ ಸರ್ವ ಹಿತದ ಕಾರಣದಿಂದ ಆಗಲೇಬೇಕಾದ ಅಭಿವೃದ್ಧಿ ಕಾರ್ಯವಾಗಿದೆ. ಈ ಜಲ ಪಾತ್ರೆ ಉಳಿಸಿಕೊಡಿ ಎಂದು ಜಲ ಕೈಂಕರ್ಯ ನಡೆಸುವವರಲ್ಲಿ ಕೇಳಿಕೊಳ್ಳುವದೇ ಆಗಿದೆ ಎನ್ನುತ್ತಾರೆ ಗ್ರಾಮಸ್ಥರಾದ ಅನಂತ ಭಟ್ಟ ಕರಸುಳ್ಳಿ ಹಾಗೂ ಪ್ರಶಾಂತ ಭಟ್ಟ, ಯೋಗೀಶ ಭಟ್ಟ.

ಇದಕ್ಕೆ ಒರತೆ ನೀರು ಇದೆ. ಕುಡಿಯುವ ನೀರಿಗೂ ಇದೇ ಮೂಲ. ಸರ್ವೆ ನಂಬರ್ 229 ನಲ್ಲಿದೆ ನಮ್ಮ ಜಲಪಾತ್ರೆ. ಜನಪ್ರತಿನಿಧಿಗಳ ಹಾಗೂ ಆಸಕ್ತರ ಮೂಲಕ ಈ ಕೆರೆ ಅಭಿವೃದ್ಧಿ ಮಾಡಿಕೊಡಿಸಲು ಮನವಿ ಮಾಡಿಕೊಳ್ಳುತ್ತೇವೆ. ಈಗ ಮಳೆಗಾಲ ಆಗಿದ್ದರಿಂದ ಹೂಳೆತ್ತಲು ಆಗದು. ಎಪ್ರೀಲ್ ಮೇ ತಿಂಗಳು ಸಕಾಲ ಆದರೂ ಈಗ ಪ್ರಸ್ತಾವನೆ ಸಲ್ಲಿಸಿದರೆ ಮುಂದಿನ ಮೇ ಹೊತ್ತಿಗೆ ಅಭಿವೃದ್ಧಿ ಕಾಣಬಹುದು ಎಂಬುದು ನಿರೀಕ್ಷೆ ಎನ್ನುತ್ತಾರೆ ಗ್ರಾಮದ ಗಿರೀಶ ಭಟ್ಟ ಹಾಗೂ ನಾಗರಾಜ್ ಜೋಶಿ.

ಶತಮಾನಗಳಿಂದ ಹೂಳೆತ್ತಿಸಿಕೊಳ್ಳದ, ಹೂಳು, ಕೆಸರಿನಿಂದ ತುಂಬಿದ ಕರಸುಳ್ಳಿಯ ದೊಡ್ಡ ಕೆರೆ ಸಮಗ್ರ ಅಭಿವೃದ್ಧಿಗೆ ಕಾದಿದೆ. ಸರಕಾರ ಹಾಗೂ ಸಹಕಾರಿಗಳಿಂದ ಜಲ ರಕ್ಷಣೆಯ ಕಾರ್ಯಕ್ಕೆ ಕೈ ಜೋಡಿಸುವ ಕಾರ್ಯ ಆಗಬೇಕಿದೆ.

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dandeli: ಯಾತ್ರಾರ್ಥಿಗಳ ತಂಡದಿಂದ ಹಲ್ಲೆ, ಇಬ್ಬರಿಗೆ ಗಂಭೀರ ಗಾಯ

Dandeli: ಯಾತ್ರಾರ್ಥಿಗಳ ತಂಡದಿಂದ ಹಲ್ಲೆ, ಇಬ್ಬರಿಗೆ ಗಂಭೀರ ಗಾಯ

Dandeli: ಮರಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಕಾರು… ಎಂಟು ಜನರಿಗೆ ಗಾಯ, ಓರ್ವ ಗಂಭೀರ

Dandeli: ಮರಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಕಾರು… ಎಂಟು ಜನರಿಗೆ ಗಾಯ, ಓರ್ವ ಗಂಭೀರ

ಹಾಡು ನಿಲ್ಲಿಸಿದ ಜಾನಪದ ಕೋಗಿಲೆ… ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ನಿಧನ

ಹಾಡು ನಿಲ್ಲಿಸಿದ ಜಾನಪದ ಕೋಗಿಲೆ… ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ನಿಧನ

12

Dandeli: ಬರ್ಚಿ- ಗಣೇಶಗುಡಿ ರಸ್ತೆಯಲ್ಲಿ ದ್ವಿಚಕ್ರ ವಾಹನ ಸ್ಕಿಡ್, ಸವಾರನಿಗೆ ಗಾಯ

Yellapur: ನಿಯಂತ್ರಣ ತಪ್ಪಿ ಪಲ್ಟಿಯಾದ ಸರಕಾರಿ ಬಸ್… ಇಬ್ಬರಿಗೆ ಗಂಭೀರ ಗಾಯ

Yellapur: ನಿಯಂತ್ರಣ ತಪ್ಪಿ ಪಲ್ಟಿಯಾದ ಸರಕಾರಿ ಬಸ್… ಇಬ್ಬರಿಗೆ ಗಂಭೀರ ಗಾಯ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.