Landslides: ಹಲವೆಡೆ ಭೂ ಕುಸಿತ: ರಸ್ತೆ ಸಂಚಾರ ಸ್ಥಗಿತ
ಪ್ರಯಾಣಿಕರು ಈ ಬಗ್ಗೆ ಗಮನ ವಹಿಸಿ ಪ್ರಯಾಣಿಸಿ
Team Udayavani, Jul 19, 2024, 3:33 PM IST
ಶಿರಸಿ: ರಾಗಿಹೊಸಳ್ಳಿ ಗುಡ್ಡಕುಸಿದು ರಾಷ್ಟ್ರಿಯ ಹೆದ್ದಾರಿ 766ಇ ಶಿರಸಿ ಕುಮಟಾ ಸಂಪರ್ಕ ಕಡಿತವಾಗಿದ್ದು, ಜು.19ರ ಶುಕ್ರವಾರ ಕೂಡ ಮತ್ತೆ ಧರೆ ಕುಸಿದಿದೆ.
ಈ ಗುಡ್ಡ ಮಾತ್ರವಲ್ಲದೆ ಇಲ್ಲಿಯ ಮೊಸಳೆಗುಂಡಿ, ಚಿಕ್ಕಡಿ ಹಾಗೂ ಬಂಡಲದವರೆಗಿನ ಸ್ಥಿತಿ ಹಾಗೇ ಇದೆ. ರಸ್ತೆಪಕ್ಕದ ಧರೆ ಕುಸಿದು ರಸ್ತೆಗೆ ಬೀಳುತ್ತಿದೆ. ಮರಗಳೂ ರಸ್ತೆ ಮೇಲೆ ಬೀಳುತ್ತಿವೆ. ಸಮೀಪದ ಊರುಗಳಿಗೆ ತೆರಳುವವರೂ ಆತಂಕದಲ್ಲೇ ತೆರಳುವಂತಾಗಿದೆ.
ಯಾವ ಕ್ಷಣದಲ್ಲಿ ಎಲ್ಲಿ ಮರ ಬೀಳತ್ತೆ, ಭೂ ಕುಸಿತ ಆಗುತ್ತೆ ಎಂದು ಗೊತ್ತಾಗದ ಸ್ಥಿತಿ ಉಂಟಾಗಿದೆ.
ರಾಗಿಹೊಸಳ್ಳಿ ಬಳಿ ಜು.15ರ ಸೋಮವಾರ ರಾತ್ರಿ ಕುಸಿದ ಗುಡ್ಡದಿಂದ ಈವರೆಗೂ ಕುಮಟಾ ಶಿರಸಿ ಸಂಪರ್ಕ ಸಂಪೂರ್ಣ ಕಡಿದು ಹೋಗಿದೆ.
ಕುಮಟಾ: ಕುಮಟಾ- ಸಿದ್ದಾಪುರ ರಸ್ಥೆಯ ಸಂತೆಗುಳುಯ ಉಳ್ಳೂರುಮಠ ಕ್ರಾಸ್ ನಲ್ಲಿ ಒಂದು ಎಕರೆ ಪ್ರದೇಶಕ್ಕೂ ಮೀರಿದ ಭೂ ಕೂಸಿತ ಉಂಟಾಗಿ ರಸ್ತೆ ಸಂಚಾರ ಸ್ಥಗಿತಗೊಡಿದೆ.
ಸ್ಥಳೀಯಲ್ಲಿ ಆತಂಕ ಹೆಚ್ಚಾಗಿದ್ದು, ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಸೇರಿದಂತೆ ಹಲವರು ಭೇಟಿ ನೀಡಿದ್ದಾರೆ.
ಹೊನ್ನಾವರ: ಶರಾವತಿಯ ನದಿಯ ಮಾಗೋಡ ಗ್ರಾಮದ ಬೀರನಗೋಡ ಬಳಿ ಜನ ಹಾಗೂ ಶಾಲಾ ಮಕ್ಕಳು ಓಡಾಡುವ ರಸ್ತೆಯಲ್ಲಿ ಜು.19ರ ಶುಕ್ರವಾರ ಭಾರೀ ಭೂಕುಸಿತ ಉಂಟಾಗಿದೆ. ಶಾಲೆ ರಜೆಯಾಗಿದ್ದರಿಂದ ಹಾಗೂ ಮಧ್ಯಾಹ್ನ ಸಮಯವಾದ್ದರಿಂದ ಯಾವುದೇ ಜೀವ ಹಾನಿ ಸಂಭವಿಸಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dandeli: ವಕ್ಫ್ ಮಂಡಳಿ ಮತ್ತು ರಾಜ್ಯ ಸರ್ಕಾರದ ಕ್ರಮ ವಿರೋಧಿಸಿ ಬಿಜೆಪಿಯಿಂದ ಪ್ರತಿಭಟನೆ
Dandeli: ನಗರಸಭೆಯ ಜವಾನನನ್ನು ನಿಂದಿಸಿರುವುದರ ವಿರುದ್ಧ ನಗರ ಸಭೆಯ ಪೌರಾಯುಕ್ತರಿಗೆ ದೂರು
ಕೃಷಿ ಭೂಮಿ ಉಳಿಸುವ ಪ್ರಯತ್ನವಾಗಲಿ: ರಾಮಕೃಷ್ಣ ಶ್ರೀಪಾದ ಹೆಗಡೆ
ಶಿರಸಿ: ಕನ್ನಡ ಸಾಹಿತ್ಯ ಸಮ್ಮೇಳನ ಲಾಂಛನ ಬಿಡುಗಡೆ
Karate: ಅಂತರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಮಿಂಚಿದ ದಾಂಡೇಲಿಯ ಕರಾಟೆ ಪಟುಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.