ಹೆಸರು ಕೆಡಿಸುವವರ ವಿರುದ್ಧ ಕಾನೂನು ಹೋರಾಟ

ಸ್ಕೂಡ್‌ವೇಸ್‌ ಸರ್ಕಾರದ ಜೊತೆ ಕೆಲಸ ಮಾಡಿದೆ: ಡಾ| ವೆಂಕಟೇಶ ನಾಯ್ಕ

Team Udayavani, Jun 17, 2022, 5:13 PM IST

23

ಕಾರವಾರ: ಸ್ಕೂಡ್‌ವೇಸ್‌ ಕಳೆದ 15 ವರ್ಷದಿಂದ ಸರ್ಕಾರದ ಸಂಚಾರಿ ಆರೋಗ್ಯ ಘಟಕದಿಂದ ಹಿಡಿದು ಒಟ್ಟು 22 ಯೋಜನೆಗಳಲ್ಲಿ ಕೆಲಸ ಮಾಡುತ್ತಾ ಬಂದಿದೆ. ಆದರೆ ಸಂಸ್ಥೆಯ ಹೆಸರು ಕೆಡಿಸಲು ಕಾಣದ ಕೈಗಳು ಕೆಲಸ ಮಾಡಿದ್ದು ಇದರ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಸ್ಕೂಡ್‌ವೇಸ್‌ ಕಾರ್ಯಾಧ್ಯಕ್ಷ ಡಾ| ವೆಂಕಟೇಶ ನಾಯ್ಕ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಕೂಡ್‌ವೇಸ್‌ ಪ್ರತಿಷ್ಠಿತ ಸ್ವಯಂ ಸೇವಾ ಸಂಸ್ಥೆ. ಇದರಲ್ಲಿ 300 ಜನ ಕೆಲಸ ಮಾಡುತ್ತಿದ್ದಾರೆ. ಐಎಸ್‌ಒ ಪ್ರಮಾಣ ಪತ್ರ ಪಡೆದಿದೆ. ಆದರೆ ಸಂಸ್ಥೆಯ ಹೆಸರು ಕೆಡಿಸಲು ಕೆಲವರು ಯತ್ನಿಸಿದ್ದು, ಈಗ ಅವರ ವಿರುದ್ಧ ದಾಖಲೆ ಸಹಿತ ಕಾನೂನು ಹೋರಾಟ ಮುಂದುವರಿಯಲಿದೆ ಎಂದೂ ಹೇಳಿದರು.

ವ್ಯಕ್ತಿಯೋರ್ವರು ಆರೋಗ್ಯ ಇಲಾಖೆಯ ಲೆಟರ್‌ ಹೆಡ್‌, ಸಹಿ ಪೂರ್ಜರಿ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ ಎಂದರು. ಅಜಯ್‌ ಭಟ್‌ ಎಂಬ ವ್ಯಕ್ತಿ ನಮ್ಮ ಸಂಸ್ಥೆಯಲ್ಲಿ ಹಿಂದೆ ಕೆಲಸ ಮಾಡಿದ್ದು, ಅವರು ನಮ್ಮಲ್ಲಿ ಈಗ ಇಲ್ಲ. ಶಿರಸಿ ಇನ್ಫೋ ಎಂಬ ಜಾಲತಾಣ ನಡೆಸುತ್ತಿದ್ದು, ಶಿರಸಿ ಮಾರಿಕಾಂಬಾ ದೇವಸ್ಥಾನದ ಬಗ್ಗೆ ಪ್ರಚಾರ ನೀಡಿದ್ದರು. ನಂತರ ಪ್ರಚಾರ ಮಾಡಿದಕ್ಕೆ ಕೆಲ ಬಿಲ್‌ ತಂದು, ಅದನ್ನು ಪಾವತಿಸುವಂತೆ ಕೇಳಿಕೊಂಡರು. ತಮ್ಮಷ್ಟಕ್ಕೆ ತಾವೇ ಪ್ರಚಾರ ನೀಡಿ, ನಂತರ ಹಣ ಕೊಡಿ ಎಂದರೆ, ಹೇಗೆ. ದೇವಸ್ಥಾನ ಟ್ರಸ್ಟ್‌ನಿಂದ ಹಣ ಪಾವತಿಸಲು ಸಾಧ್ಯವಿಲ್ಲ ಎಂದೆವು. ನಂತರ ನನಗೆ ಕೊಲೆ ಬೆದರಿಕೆ ಬಂತು. ಮನೆ ಎದುರು ವಾಮಾಚಾರ ನೆಡಸಿದರು. ಮನೆಯ ಮೇಲೆ ಡ್ರೋಣ ಹಾರಿಸಿದರು. ಇದಾವುದಕ್ಕೂ ನಾವು ಬಗ್ಗಿಲ್ಲ. ನಮ್ಮ ಸ್ಕೂಡ್‌ವೇಸ್‌ ತನ್ನ ಕೆಲಸ ಮಾಡಿಕೊಂಡು ಹೊರಟಿದೆ. ಹಾಗಾಗಿ ಕೇಂದ್ರ, ರಾಜ್ಯ ಸರ್ಕಾರದ ಯೋಜನೆಗಳ ಅನುಷ್ಠಾನ ನಮಗೆ ಸಿಕ್ಕಿದೆ. ಸಿಎಸ್‌ ಆರ್‌ ಕೆಲಸ ಸಹ ಮಾಡಿದೆ ಎಂದು ವಿವರಿಸಿದರು.

ಬದನಗೋಡ ಪಂಚಾಯತನ ಮಾಜಿ ಅಧ್ಯಕ್ಷ ಬಸವರಾಜ ನಂದಿಕೇಶ್ವರಮಠ ಎಂಬಾತ ಶಿರಸಿ ಇನ್ಫೋ ಎಂಬ ಎಫ್‌ಬಿ ಪೇಜ್‌ನಲ್ಲಿ ಸ್ಕೂಡ್‌ವೇಸ್‌ ಸಂಸ್ಥೆಯಲ್ಲಿ ಕೋಟ್ಯಾಂತರ ರೂ. ಅವ್ಯವಹಾರವಾಗಿದೆ ಎಂದು ಆರೋಪಿಸಿದ್ದರು.

ಕಾರವಾರ, ದಾವಣಗೆರೆ ಡಿಎಚ್‌ಒ ಅವರು ಸ್ಕೂಡ್‌ವೇಸ್‌ ಸಂಸ್ಥೆ ಸರಿಯಾಗಿ ಕೆಲಸ ಮಾಡಿಲ್ಲ. ಹಾಗಾಗಿ 3 ಕೋಟಿ ವಸೂಲಾತಿಗೆ ಪತ್ರ ಬರೆದಿದ್ದಾರೆ ಎಂದೂ, ಈ ಆರೋಪಗಳ ಬಗ್ಗೆ ಆರೋಗ್ಯ ಇಲಾಖೆ ಕಾರ್ಯದರ್ಶಿಗೆ, ಕಾರ್ಮಿಕ ಇಲಾಖೆಗೆ ದೂರು ನೀಡಿದ್ದರು.

ಈಗ ಬಸವರಾಜ ನಂದಿಕೇಶ್ವರಮಠ ಹಾಗೂ ಅಜಯ್‌ ಭಟ್‌ ದೂರಿಗೆ ಲಗತ್ತಿಸಿದ ಪತ್ರ ನಕಲಿ. ಅವರು ಡಿಎಚ್‌ಒ ಕಚೇರಿ ಪತ್ರ, ಲೆಟರ್‌ ಹೆಡ್‌, ಸಹಿ ಫೋರ್ಜರಿ ಮಾಡಿದ್ದಾರೆ ಎಂದು ಕಾರವಾರ, ದಾವಣಗೆರೆ ಡಿಎಚ್‌ಒ ಪತ್ರ ಬರೆದಿದ್ದಾರೆ. ಹಾಗೂ ನಂದಿಕೇಶ್ವರ ಜಿಲ್ಲಾ ನ್ಯಾಯಾಧೀಶರಿಗೆ ಬರೆದ ಪತ್ರ ಸಹ ನಕಲಿ ಎಂದಾಗಿದೆ. ಶಿರಸಿ ಮಾರಿಕಾಂಬಾ ದೇವಸ್ಥಾನ ಲೆಟರ್‌ ಹೆಡ್‌ ಸಹ ಫೋರ್ಜರಿ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ. ಈ ಸಂಬಂಧ ಇವರ ಮೇಲೆ ದೂರು ದಾಖಲಿಸಿದ್ದೇವೆ. ಅಲ್ಲದೆ 2 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಲಾಗಿದೆ. ಎರಡು ಕ್ರಿಮಿನಲ್‌ ಪ್ರಕರಣ ಸಹ ದಾಖಲಿಸಿದ್ದೇವೆ ಎಂದರು.

ನಾವು ಶಿರಸಿಯ ಬ್ಲಾಕ್‌ವೆುàಲ್‌ ತಂಡಕ್ಕೆ ಹೆದರುವುದಿಲ್ಲ. ಕಾನೂನಾತ್ಮಕ ಹೋರಾಟ ಹಾಗೂ ಪ್ರತಿಭಟನೆ ನಡೆಸುತ್ತೇವೆ. ನಾವು ಸರ್ಕಾರಿ ಸಂಸ್ಥೆ, ಸಂಘ ಸಂಸ್ಥೆ ಹಾಗೂ ಕಾರ್ಪೂರೇಟ್‌ ಸಂಸ್ಥೆಗಳ ಜೊತೆ ಕೆಲಸ ಮುಂದುವರಿಸಲಿದ್ದೇವೆ. ಫೋರ್ಜರಿ ಪತ್ರ ಬರೆದು, ಸಂಸ್ಥೆಯ ಹೆಸರು ಕೆಡಿಸುವುದು ಸರಿಯಲ್ಲ. ಇದು ಮುಂದುವರಿದರೆ, ಇಂತಹ ಕಿಡಗೇಡಿಗಳಿಗೆ ತೊಂದರೆ ಆಗಲಿದೆ ಎಂದು ಹೇಳಿದರು.

ಸ್ಕೂಡ್‌ವೇಸ್‌ ಯೋಜನಾಧಿಕಾರಿ ರಿಯಾಜ್‌ ಮಾತನಾಡಿ, ಸಂಸ್ಥೆ ಸಮಾಜ ಸೇವೆಯ ಜೊತೆಗೆ ಹಲವು ಉತ್ತಮ ಕೆಲಸ ಮಾಡಿದೆ. ಸಂಸ್ಥೆಯಲ್ಲಿ 300 ಉದ್ಯೋಗಿಗಳು ಬದುಕು ಕಟ್ಟಿಕೊಂಡಿದ್ದಾರೆ. ಕಾರಣವೇ ಇಲ್ಲದೆ ಸಂಸ್ಥೆ ವಿರುದ್ಧ ಪಿತೂರಿ ಮಾಡುವುದು ಸರಿಯಲ್ಲ. ಸಂಸ್ಥೆಗೆ ಕೇಡು ಬಯಸಬಾರದು ಎಂದು ವಿನಂತಿಸಿದರು.

ಯೋಜನೆಗಳ ಮ್ಯಾನೇಜರ್‌ ಮಾಲತಿ ಕರ್ಕಿ ಮಾತನಾಡಿ, ಸ್ಕೂಡ್‌ವೇಸ್‌ ದಶಕಗಳಿಗೂ ಹೆಚ್ಚು ಕಾಲದಿಂದ ಜನರ ನಡುವೆ ಇದೆ. ಸಂಸ್ಥೆಯ ಕಾರ್ಯವೈಖರಿಯನ್ನು ಜನ, ಸರ್ಕಾರ ನೋಡಿದೆ. ಸ್ಕೂಡ್‌ವೇಸ್‌ ಯಶಸ್ವಿಯಾಗಿ ಜಾರಿ ಮಾಡಿದ ಯೋಜನೆಯನ್ನು ಮುಖ್ಯಮಂತ್ರಿ ರಾಜ್ಯವ್ಯಾಪಿ ಘೋಷಣೆ ಮಾಡಿದ್ದಾರೆ. ಇಂಥ ಸಂಸ್ಥೆ ಮೇಲೆ ಕಾರಣವೇ ಇಲ್ಲದೆ ಅಪಪ್ರಚಾರ ಮಾಡುವುದು ಸರಿಯಲ್ಲ ಎಂದರು. ಸುಧೀರ್‌ ಶೆಟ್ಟಿ, ಪ್ರಜ್ಞಾ ಕುಮಾರ್‌ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ

Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ

Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ

Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ

Bheema-Naik

KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ

MM-Singh-ACC-Pm

Accidental Prime Minister: ದ ಮೇಕಿಂಗ್‌ ಆ್ಯಂಡ್‌ ಅನ್‌ಮೇಕಿಂಗ್‌ ಆಫ್ ಡಾ.ಸಿಂಗ್‌

New York:ಆಸ್ತಿ ಹಂಚಿದ ಶ್ರೀಮಂತ ಹೂಡಿಕೆದಾರ ಬಫೆಟ್‌; ಕುಟುಂಬದ 4 ಫೌಂಡೇಶನ್‌ ಆಸ್ತಿ ಹಂಚಿಕೆ

New York:ಆಸ್ತಿ ಹಂಚಿದ ಶ್ರೀಮಂತ ಹೂಡಿಕೆದಾರ ಬಫೆಟ್‌; ಕುಟುಂಬದ 4 ಫೌಂಡೇಶನ್‌ ಆಸ್ತಿ ಹಂಚಿಕೆ

MM-Singh–Bush

Tribute Dr.Singh: ಡಾ.ಸಿಂಗ್‌ ಅವಧಿಯಲ್ಲಿ ಭಾರತ-ಅಮೆರಿಕ ನಡುವೆ ಅಣ್ವಸ್ತ್ರ ಒಪ್ಪಂದ

Supreme Court: ಕ್ರೆಡಿಟ್‌ ಕಾರ್ಡ್‌ ಬಾಕಿ ಮೇಲೆ 30% ಬಡ್ಡಿಗೆ ಸುಪ್ರೀಂ ಅಸ್ತು!

Supreme Court: ಕ್ರೆಡಿಟ್‌ ಕಾರ್ಡ್‌ ಬಾಕಿ ಮೇಲೆ 30% ಬಡ್ಡಿಗೆ ಸುಪ್ರೀಂ ಅಸ್ತು!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೆಳೆವಿಮೆ ಸಿಗದೆ ಕೃಷಿಕರ ಪರದಾಟ: ಅಡಕೆ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸದ ಸರ್ಕಾರ

ಬೆಳೆವಿಮೆ ಸಿಗದೆ ಕೃಷಿಕರ ಪರದಾಟ: ಅಡಕೆ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸದ ಸರ್ಕಾರ

Sathish-sail–court

Belekeri Mining Case: ಕಾಂಗ್ರೆಸ್‌ ಶಾಸಕ ಸತೀಶ್‌ ಸೈಲ್‌ ಜೈಲು ಶಿಕ್ಷೆಗೆ ಹೈಕೋರ್ಟ್‌ ತಡೆ

ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಹೊತ್ತಿ ಉರಿದ ಲಾರಿ… ಅಪಾರ ಪ್ರಮಾಣದ ಸೊತ್ತು ಬೆಂಕಿಗಾಹುತಿ

ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಹೊತ್ತಿ ಉರಿದ ಲಾರಿ… ಅಪಾರ ಪ್ರಮಾಣದ ಸೊತ್ತು ಬೆಂಕಿಗಾಹುತಿ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ

Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ

Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ

Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ

Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ

Bheema-Naik

KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ

MM-Singh-ACC-Pm

Accidental Prime Minister: ದ ಮೇಕಿಂಗ್‌ ಆ್ಯಂಡ್‌ ಅನ್‌ಮೇಕಿಂಗ್‌ ಆಫ್ ಡಾ.ಸಿಂಗ್‌

5

Mangaluru: ವಿಚ್ಛೇದಿತ ಮಹಿಳೆಯನ್ನು ಹಿಂಬಾಲಿಸಿದ ಇಬ್ಬರು ವಶಕ್ಕೆ;‌ ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.