![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Sep 20, 2018, 5:04 PM IST
ಶಿರಸಿ: ಶಿಕ್ಷಣ ಇಲಾಖೆಯಡಿಯಲ್ಲಿ ಜರುಗುತ್ತಿರುವ ಕ್ರೀಡಾಕೂಟದಲ್ಲಿನ ನ್ಯೂನತೆ ಸರಿದೂಗಿಸಲು ಹಾಗೂ ಕ್ರೀಡಾಪಟುಗಳು ಮೂಲ ಸೌಲಭ್ಯಗಳಿಂದ ವಂಚಿತರಾಗದಂತೆ ಮಾಡಲು ಸ್ಪಂದನ ಸ್ಪೋರ್ಟ್ಸ್ ಅಕಾಡೆಮಿಯು ಕಾನೂನಾತ್ಮಕ ಹೋರಾಟ ಪ್ರಾರಂಭಿಸಿದೆ. ಈ ಕುರಿತು ಈಗಾಗಲೇ ಶಿಕ್ಷಣ ಇಲಾಖೆಗೆ ಕ್ರೀಡಾಕೂಟದಲ್ಲಿನ ಅವ್ಯವಸ್ಥೆ, ಅಸಮರ್ಪಕ ಕ್ರೀಡಾಂಗಣ, ಅವೈಜ್ಞಾನಿಕ ಹಾಗೂ ಕಳಪೆ ಕ್ರೀಡಾ ಸಾಮಗ್ರಿ, ಕ್ರೀಡಾ ನೀತಿ ನಿಯಮಕ್ಕೆ ವ್ಯತಿರಿಕ್ತವಾಗಿ ಶೈಕ್ಷಣಿಕ ಕ್ರೀಡಾಕೂಟಗಳು ಜರುಗಿಸುವುದನ್ನು ಸರಿದೂಗಿಸಲು ನೋಟಿಸ್ ನೀಡಲು ಆರಂಭಿಸಿದೆ. ಅಸಮರ್ಪಕ ಕ್ರೀಡಾಕೂಟದ ವ್ಯವಸ್ಥೆಯಿಂದ ಪ್ರತಿಭಾವಂತ ಕ್ರೀಡಾಪಟುಗಳ ಪ್ರತಿಭೆ ಗುರುತಿಸುವಲ್ಲಿ ಸಾಧ್ಯವಾಗುತ್ತಿಲ್ಲ. ಇದನ್ನು ಸರಿಪಡಿಸುವ ದಿಸೆಯಲ್ಲಿ ಸಂಘಟನೆ ಕಾರ್ಯಪ್ರವೃತ್ತವಾಗಿವೆ. ಸಂಘಟನೆ ನೀಡಿದ ಆಕ್ಷೇಪಣಾರ್ಹ ನೋಟಿಸಿಗೆ ಶಿಕ್ಷಣ ಇಲಾಖೆ ಮತ್ತು ಯುವ ಜನ ಸೇವಾ ಇಲಾಖೆ ಕಾರ್ಯಪ್ರವೃತ್ತರಾಗದಿದ್ದಲ್ಲಿ ನ್ಯಾಯಾಲಯದಲ್ಲಿ ಮುಂದಿನ ಹಂತವಾಗಿ ಪರಿಹಾರ ಕೇಳುವುದಕ್ಕೆ ಕೂಡ ನಿರ್ಧರಿಸಲಾಗಿದೆ.
ಕ್ರೀಡಾಪಟುಗಳ ಪರ ಹೋರಾಟ: ಅಸಮರ್ಪಕ ಕ್ರೀಡಾಕೂಟದಿಂದ ವಿದ್ಯಾರ್ಥಿ ಕ್ರೀಡಾಪಟುಗಳ ವ್ಯಕ್ತಿ ವಿಕಸನದ ಹಕ್ಕಿಗೆ ಧಕ್ಕೆ ಉಂಟಾಗುತ್ತಿರುವುದನ್ನು ಮನಗಂಡು ಈ ನಡೆ ಇಟ್ಟಿದ್ದಾಗಿ ನ್ಯಾಯವಾದಿ ಎ. ರವೀಂದ್ರನಾಯ್ಕ ತಿಳಿಸಿದ್ದಾರೆ. ಯೋಗ್ಯ ಕ್ರೀಡಾಪಟುಗಳಿಗೆ ಅನ್ಯಾಯವಾಗುವ ಹಾಗೂ ಕ್ರೀಡಾಕೂಟದಲ್ಲಿ ಅರ್ಹತೆ ಪಡೆದಿರುವ ಪಾಲಕರ ಅಪೇಕ್ಷೆಯಂತೆ ಮುಂದಿನ ದಿನಗಳಲ್ಲಿ ಕ್ರೀಡಾ ನೀತಿ ಮತ್ತು ನಿಯಮ ಅನುಸಾರವಾಗಿ ಕನಿಷ್ಠ ಸೌಲಭ್ಯದಿಂದ ವಂಚಿತವಾಗದಂತೆ ಮೂಲ ಸೌಕರ್ಯದಿಂದ ಕ್ರೀಡಾಕೂಟ ಜರುಗಿಸುವ ಉದ್ದೇಶವಿದೆ. ಈಗಾಗಲೇ ಸಂಬಂಧಿಸಿದ ಇಲಾಖೆಗೆ ಕಾನೂನಾತ್ಮಕ ನೋಟಿಸ್ ನೀಡಿದ್ದು, ಇಲಾಖೆ ನ್ಯೂನತೆ ಸರಿದೂಗಿಸದೇ ಇದ್ದಲ್ಲಿ ನ್ಯಾಯಾಲಯದ ಮೊರೆ ಹೋಗಲು ತೀಮಾರ್ನಿಸಲಾಗಿದೆ ಎಂದು ಸ್ಪಂದನ ಸ್ಪೋರ್ಟ್ಸ್ ಅಕಾಡೆಮಿ ಅಧ್ಯಕ್ಷ ನಾಯ್ಕ ತಿಳಿಸಿದ್ದಾರೆ.
Dandeli: ಯಾತ್ರಾರ್ಥಿಗಳ ತಂಡದಿಂದ ಹಲ್ಲೆ, ಇಬ್ಬರಿಗೆ ಗಂಭೀರ ಗಾಯ
Dandeli: ಮರಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಕಾರು… ಎಂಟು ಜನರಿಗೆ ಗಾಯ, ಓರ್ವ ಗಂಭೀರ
ಹಾಡು ನಿಲ್ಲಿಸಿದ ಜಾನಪದ ಕೋಗಿಲೆ… ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ನಿಧನ
Dandeli: ಬರ್ಚಿ- ಗಣೇಶಗುಡಿ ರಸ್ತೆಯಲ್ಲಿ ದ್ವಿಚಕ್ರ ವಾಹನ ಸ್ಕಿಡ್, ಸವಾರನಿಗೆ ಗಾಯ
Yellapur: ನಿಯಂತ್ರಣ ತಪ್ಪಿ ಪಲ್ಟಿಯಾದ ಸರಕಾರಿ ಬಸ್… ಇಬ್ಬರಿಗೆ ಗಂಭೀರ ಗಾಯ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ
You seem to have an Ad Blocker on.
To continue reading, please turn it off or whitelist Udayavani.