Mundgod; ಚಿರತೆ ಪ್ರತ್ಯಕ್ಷ; ಸ್ಥಳೀಯರಲ್ಲಿ ಆತಂಕ
Team Udayavani, Aug 6, 2023, 4:24 PM IST
ಮುಂಡಗೋಡ: ಪಟ್ಟಣ ವ್ಯಾಪ್ತಿಯ ಜನನಿಬಿಡ ಪ್ರದೇಶ ಖಬರಸ್ತಾನದ (ಸ್ಮಶಾನ) ಅಕ್ಕ ಪಕ್ಕದಲ್ಲಿ ಕಳೆದ ಎರಡ್ಮೂರು ದಿನದಿಂದ ಚಿರತೆ ಓಡಾಡುತ್ತಿದ್ದು ಸ್ಥಳೀಯರಲ್ಲಿ ಭಯದ ವಾತಾವರಣ ಸೃಷ್ಟಿ ಮಾಡಿದೆ.
ಮುಂಡಗೋಡ ಕಲಘಟಗಿ ರಾಜ್ಯ ಹೆದ್ದಾರಿ ಮತ್ತು ಪಟ್ಟಣಕ್ಕೆ ಹತ್ತಿರ ಇರುವ ಮುಸ್ಲಿಂ ಸಮುದಾಯದ ಖಬರಸ್ತಾನ(ಸ್ಮಶಾನ) ಹತ್ತಿರ ಚಿರತೆ ಪ್ರತ್ಯಕ್ಷವಾಗಿದೆ. ಪ್ರತಿನಿತ್ಯ ಈ ರಸ್ತೆಯಲ್ಲಿ ನೂರಾರು ವಾಹನ ಮತ್ತು ಬೈಕ್ ಒಡಾಡುತ್ತವೆ. ಅಲ್ಲದೆ ಹತ್ತಿರವೇ ಜನರು ವಾಸಿಸುವ ಬಡಾವಣೆಗಳು ಇದೆ. ಶನಿವಾರ ಸಂಜೆ ಹಾಲೇಶ ಎಂಬಾತನು ಖಬರಸ್ತಾನ (ಸ್ಮಶಾನ) ಕಾಂಪೌಂಡ್ ನ ಮೇಲೆ ಚಿರತೆ ಓಡಾಡುತ್ತಿರುವುದು ನೋಡಿ ತನ್ನ ಮೊಬೈಲ್‌ನಲ್ಲಿ ವಿಡಿಯೋ ಸೆರೆ ಹಿಡಿದಿದ್ದಾನೆ. ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ಮತ್ತು ಆ ಭಾಗದ ರೈತರನ್ನು ಚಿಂತೆಗೆ ಈಡುಮಾಡಿದೆ.
ಅರಣ್ಯ ಅಧಿಕಾರಿಗಳು ಭೇಟಿ: ಚಿರತೆಯೂ ಪಟ್ಟಣದ ಹತ್ತಿರವೇ ಓಡಾಡುತ್ತಿದೆ ಎಂಬ ಮಾಹಿತಿ ಸಿಕ್ಕ ತಕ್ಷಣವೇ ರವಿವಾರ ಇಲ್ಲಿನ ವಲಯ ಅರಣ್ಯಧಿಕಾರಿ ಸುರೇಶ ಕುಳ್ಳೊಳ್ಳಿ ಉಪವಲಯ ಅರಣ್ಯಧಿಕಾರಿ ಗಿರೀಶ ಕೊಳೆಕರ್ ಹಾಗೂ ಮುತ್ತು ಹಿರೇಕನಗಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆ ಸ್ಥಳದಲ್ಲಿ ಚಿರತೆ ಓಡಾಡಿದ ಹೆಜ್ಜೆ ಗುರುತನ್ನು ಪತ್ತೆ ಹಚ್ಚಿದ್ದಾರೆ. ಅಲ್ಲದೆ ಆ ಪ್ರದೇಶದಲ್ಲಿ ಸಿಬ್ಬಂದಿಗಳು ಗಸ್ತು ತಿರುಗುತ್ತಿದ್ದಾರೆ.
ಧ್ವನಿವರ್ಧಕದ ಮೂಲಕ ಜಾಗೃತಿ: ಚಿರತೆ ಓಡಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಅರಣ್ಯಾಧಿಕಾರಿಗಳು ಮುನ್ನೆಚ್ಚರಿಕೆ ಕ್ರಮವಾಗಿ ಪಟ್ಟಣದ ಹಳೂರ, ಮಾರಿಕಾಂಬಾ ನಗರ ಕೊಪ್ಪದ ಓಣಿ, ಪಟ್ಟಣದ ನಿವಾಸಿಗಳು ಮತ್ತು ಬೈಕ್ ಸವಾರರಿಗೆ ಚಿರತೆ ಓಡಾಡಿದ ಪ್ರದೇಶದಲ್ಲಿ ಒಬ್ಬಂಟಿಯಾಗಿ ಓಡಾಡಬಾರದು, ರಾತ್ರಿ ಸಮಯ ಆ ಪ್ರದೇಶದಲ್ಲಿ ಹೋಗಬಾರದು. ಆಕಸ್ಮಾತ್ ಹೋಗಬೇಕಾದರೆ ಗುಂಪು ಗುಂಪಾಗಿ ತೆರಳುವಂತೆ ಧ್ವನಿವರ್ಧಕದ ಮೂಲಕ ಎಚ್ಚರಿಕೆಯ ಸಂದೇಶ ನೀಡುತ್ತಿದ್ದಾರೆ.
ಈ ಹಿಂದೆ ತಾಲೂಕಿನ ಗಡಿ ಭಾಗ ಮತ್ತು ಶಿಗ್ಗಾಂವ ದುಂಡಸಿ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ವಡಗಟ್ಟ ಮತ್ತು ತಾಯವ್ವ ಗುಡಿಯ ಅಕ್ಕ ಪಕ್ಕದಲ್ಲಿ ವಾಹನ ಸವಾರರಿಗೆ ಚಿರತೆ ಆಗಾಗ ಪ್ರತ್ಯಕ್ಷವಾಗುತ್ತಿತ್ತು ಅಲ್ಲದೆ ಚಿರತೆಯೂ ಮುಖ್ಯ ರಸ್ತೆ ದಾಟುವುದನ್ನು ಅನೇಕರು ನೋಡಿ ಭಯ ಭೀತರಾಗಿದ್ದರು. ಇದಲ್ಲದೆ ತಾಲೂಕಿನ ಅತ್ತಿವೇರಿ ಗೌಳಿದಡ್ಡಿಯ ಹತ್ತಿರ ಗೌಳಿ ಸಮುದಾಯದ ಹಲವು ಜಾನುವಾರಗಳ ಮೇಲೆ ದಾಳಿ ಮಾಡಿರುವುದನ್ನು ಇಲ್ಲಿ ಸ್ಮರಿಸಬಹುದು.
ವಲಯ ಅರಣ್ಯಧಿಕಾರಿ ಸುರೇಶ ಕುಳ್ಳೊಳ್ಳಿ ಪ್ರತಿಕ್ರಿಯಿಸಿ: ಆ ಪ್ರದೇಶದಲ್ಲಿ ಓಡಾಡಿದ ಹೆಜ್ಜೆ ಗುರುತು ಚಿರತೆಯದೆ ಆಗಿದೆ. ಮತ್ತು ಪ್ರತ್ಯಕ್ಷದರ್ಶಿ ಹಾಲೇಶ ಎಂಬಾತನಿಗೆ ಕರೆದು ಕೇಳಿದ್ದೇವೆ ಆತನು ಸಹ ನಾನು ಚಿರತೆಯನ್ನು ನೋಡಿದ್ದೇನೆ ಎಂದಿದ್ದಾನೆ. ಅಲ್ಲದೆ ವಿಡಿಯೋ ಸಹ ತೋರಿಸಿದ್ದಾನೆ. ಈಗಾಗಲೇ ಆ ಪ್ರದೇಶದಲ್ಲಿ ಚಿರತೆ ಪತ್ತೆ ಹಚ್ಚಲು ನಮ್ಮ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಮುನ್ನೆಚ್ಚರಿಕೆಯಾಗಿ ಜನರಲ್ಲಿ ಧ್ವನಿವರ್ಧಕದ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಒಟ್ಟಿನಲ್ಲಿ ಈ ಹಿಂದೆ ಗಡಿ ಪ್ರದೇಶದಲ್ಲಿ ಚಿರತೆಗಳು ಕಾಣಿಸಿಕೊಂಡು ನಾಗರಿಕರಲ್ಲಿ ಭಯ ಮೂಡಿಸುತ್ತಿತ್ತು. ಈಗ ಪಟ್ಟಣದ ಮತ್ತು ಜನದಟ್ಟಣೆ ಪ್ರದೇಶ ಹತ್ತಿರವೇ ಚಿರತೆ ಪ್ರತ್ಯಕ್ಷವಾಗಿದ್ದು ಸ್ಥಳೀಯರಲ್ಲಿ ಭಯದ ವಾತವರಣ ಸೃಷ್ಟಿ ಮಾಡಿದೆ. ಹಾಗಾಗಿ ಆದಷ್ಟೂ ಬೇಗ ಸಂಬಂಧಪಟ್ಟ ಇಲಾಖೆಯವರು ಇದನ್ನು ಸೆರೆ ಹಿಡಿದು ಜನರಲ್ಲಿ ಕಾಡುತ್ತಿರುವ ಭಯವನ್ನು ದೂರ ಮಾಡಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ
Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!
ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ
Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ
Ankola: ರಕ್ತದೊತ್ತಡ ಕುಸಿದ ಪರಿಣಾಮ ಕಬಡ್ಡಿ ಆಡುವಾಗಲೇ ಕ್ರೀಡಾಳು ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.