ಮೀನು ಮಾರುಕಟ್ಟೆ ಶೀಘ್ರ ಆರಂಭಿಸಲಿ
Team Udayavani, Jun 10, 2020, 6:53 AM IST
ಶಿರಸಿ: ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಸ್ಥಗಿತಗೊಳಿಸಿದ ಮೀನು ಮಾರುಕಟ್ಟೆ ವ್ಯವಹಾರ ಜಿಲ್ಲಾದ್ಯಂತ ಲಾಕ್‌ಡೌನ್ ತೆರವಿನ ನಂತರವೂ ಶಿರಸಿಯಲ್ಲಿ ಮಾತ್ರ ಬಂದಾಗಿರುವ ಹಿನ್ನೆಲೆಯಲ್ಲಿ ಅತೀ ಶೀಘ್ರದಲ್ಲಿ ಮೀನಿನ ಮಾರ್ಕೆಟಿನಲ್ಲಿ ಮೀನಿನ ವ್ಯವಹಾರ ಪ್ರಾರಂಭಿಸಬೇಕು ಎಂದು ಹೋರಾಟಗಾರ ಎ.ರವೀಂದ್ರ ನಾಯ್ಕ ಆಗ್ರಹಿಸಿದ್ದಾರೆ.
ಶಿರಸಿಯಲ್ಲಿ ಹಳೆ ಬಸ್ ನಿಲ್ದಾಣದ ಪಕ್ಕದಲ್ಲಿ ಮತ್ತು ಅಗಸೆ ಬಾಗಿಲಿನಲ್ಲಿ ನಗರಸಭೆ ಕಟ್ಟಡದಲ್ಲಿ ಹಿಂದಿನಿಂದಲೂ ನಿರಂತರವಾಗಿ ಮೀನು ವ್ಯಾಪಾರ ಜರುಗುತ್ತಿತ್ತು. ಆದರೆ ಲಾಕ್‌ಡೌನ್ ಸಂದರ್ಭದಲ್ಲಿನ 70 ದಿನಗಳಲ್ಲೂ ಸಂಪೂರ್ಣವಾಗಿ ಬಹಿರಂಗ ಮೀನಿನ ಮಾರಾಟ ಸ್ಥಗಿತಗೊಳಿಸಿದರು. ಭಟ್ಕಳ ತಾಲೂಕು ಒಂದು ಬಿಟ್ಟು ಉಳಿದೆಲ್ಲ ತಾಲೂಕಿನ ಮೀನು ಮಾರುಕಟ್ಟೆ ಸಂಕೀರ್ಣದಲ್ಲಿ ಬಹಿರಂಗವಾಗಿ ಮೀನಿನ ವ್ಯವಹಾರಕ್ಕೆ ಜಿಲ್ಲಾಡಳಿತ ಅನುವು ಮಾಡಿಕೊಟ್ಟಿತ್ತು. ಆದರೆ ಶಿರಸಿಯಲ್ಲಿ ಮಾತ್ರ ಇಂದಿಗೂ ಅಧಿಕೃತವಾಗಿ ಮೀನಿನ ಮಾರ್ಕೇಟಿನ ಸಂಕೀರ್ಣ ಜಿಲ್ಲಾಡಳಿತ ಬಂದ್ ಮಾಡಿಟ್ಟು ಮೀನಿನ ವಹಿವಾಟಿಗೆ ತಡೆ ಉಂಟಾಗಿರುವುದಕ್ಕೆ ಕಾರಣ ಏನು ಎಂದು ಕೇಳಿದ್ದಾರೆ.
ಸೂಕ್ತ ಮುಂಜಾಗ್ರತ ಕ್ರಮ ನಿರ್ದೇಶನ ನೀಡಿ ಅತೀ ಶೀಘ್ರದಲ್ಲಿ ಮೀನು ಮಾರ್ಕೆಟಿನ ಸಂಕೀರ್ಣದಲ್ಲಿ ಹಿಂದಿನಂತೆಯೇ ಮೀನಿನ ವ್ಯವಹಾರ ಜರುಗಿಸಿ ಮೀನು ಪ್ರಿಯರಿಗೆ ಸಹಕರಿಸಬೇಕು ಎಂದು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!
ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ
Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ
Ankola: ರಕ್ತದೊತ್ತಡ ಕುಸಿದ ಪರಿಣಾಮ ಕಬಡ್ಡಿ ಆಡುವಾಗಲೇ ಕ್ರೀಡಾಳು ಸಾವು
Murdeshwar: ನಾಲ್ವರು ವಿದ್ಯಾರ್ಥಿನಿಯರು ಸಮುದ್ರಪಾಲು; 1 ಶವ ಪತ್ತೆ
MUST WATCH
ಹೊಸ ಸೇರ್ಪಡೆ
United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್ ನೇತೃತ್ವ
Operation: ಕಾಸರಗೋಡಿನಲ್ಲಿ ಎನ್.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ
Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…
Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು
Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.