ವಾಚನಾಲಯವಲ್ಲ ಜ್ಞಾನ ಮಂದಿರ
Team Udayavani, Nov 3, 2019, 4:20 PM IST
ಹೊನ್ನಾವರ: ನಗರ ಕೇಂದ್ರ ಸ್ಥಳದಲ್ಲಿರುವ ವಾಚನಾಲಯ ಜ್ಞಾನಮಂದಿರದಂತೆ ಶೋಭಿಸುತ್ತಿದೆ. ಬಾಗಿಲಲ್ಲಿಯೇ ಚಪ್ಪಲಿಗಳನ್ನು ಬಿಟ್ಟು ಒಳಬಂದು ಮೊಬೈಲ್ ಗಳನ್ನು ಸ್ವಿಚ್ ಆಫ್ ಮಾಡಿ, ಸಹಿ ಮಾಡಿ, ಸ್ವಂತ ವಸ್ತುಗಳನ್ನು ಗುರುತಿಸಿದ ಸ್ಥಳದಲ್ಲಿಟ್ಟು ಮುಂದೆ ಬರಬೇಕು. ಇಲ್ಲವಾದರೆ ವಿನಯದ ಸೂಚನೆಯ ಧ್ವನಿ ಕೇಳಿಬರುತ್ತದೆ.
ಬೆಳಗ್ಗೆ 9ರಿಂದ ಮಧ್ಯಾಹ್ನ 12ರವರೆಗೆ, ಸಂಜೆ 4ರಿಂದ 7:30ರವರೆಗೆ ತೆರೆದಿರುವ ಈ ಜ್ಞಾನಮಂದಿರದಲ್ಲಿ 26,603 ಪುಸ್ತಕಗಳಿವೆ. 22 ದಿನಪತ್ರಿಕೆಗಳು ಬರುತ್ತವೆ. ಎಲ್ಲ ವಾರಪತ್ರಿಕೆಗಳು ಜೊತೆಯಲ್ಲಿ ಇಂಗ್ಲಿಷ್ ದಿನಪತ್ರಿಕೆಗಳು, ಡೈಜೆಸ್ಟ್ ಮೊದಲಾದವುಗಳಿವೆ. ಪತ್ರಿಕೆ ಓದಲು ಸದಸ್ಯರಾಗಬೇಕಿಲ್ಲ, 5ಸಾವಿರ ರೂ. ಗಳನ್ನು ಪತ್ರಿಕೆಗಳ ಖರೀದಿಗಾಗಿ ವೆಚ್ಚ ಮಾಡಲಾಗುತ್ತಿದೆ. ಪುಸ್ತಕ ಓದಲು ಒಯ್ಯುವ 1,490 ಸದಸ್ಯರಿದ್ದಾರೆ. ಒಂದು ಬಾರಿ ಕೇವಲ 112 ರೂ. ನೀಡಿ, ಖಾಯಂ ಸದಸ್ಯತ್ವ ಪಡೆದವರು ಎಲ್ಲ ದಿನಗಳಲ್ಲೂ ಪತ್ರಿಕೆ ಓದಬಹುದು. ಮೂರು ಪುಸ್ತಕಗಳನ್ನು ಪಡೆದು ಓದಿ, ಎರಡು ವಾರಗಳಲ್ಲಿ ಹಿಂದಿರುಗಿಸಬೇಕಾದದ್ದು ಕಡ್ಡಾಯ. ರಾಶಿ ಹೊಸ ಪುಸ್ತಕಗಳು ಬಂದಿವೆ. ಇವುಗಳನ್ನು ಹೊಂದಿಸಲು ಸ್ಟ್ಯಾಂಡ್ ಬರಬೇಕಾಗಿದೆ.
ಇ-ಓದುಗರಿಗಾಗಿ 5 ಕಂಪ್ಯೂಟರ್‌ಗಳು ಸದ್ಯ ಸೇರ್ಪಡೆಯಾಗಲಿದೆ. ಮಕ್ಕಳನ್ನು ಕರೆತಂದರೆ ಅವರಿಗಾಗಿ ಪುಟ್ಟ ಟೇಬಲ್, 4ಕುರ್ಚಿ ಮತ್ತು ಮಕ್ಕಳ ಪುಸ್ತಕಗಳಿವೆ. ನಿತ್ಯ ಬೆಳಗ್ಗೆ, ಸಂಜೆ ಪತ್ರಿಕೆ ಓದಲು, ಪುಸ್ತಕ ಪಡೆಯಲು ನೂರು ಜನ ಬರುತ್ತಾರೆ. ನಿಶ್ಯಬ್ಧವಾಗಿ ಪತ್ರಿಕೆ ಓದುತ್ತಾರೆ. ಪ್ರಮುಖ ಸಾಹಿತಿ, ಕವಿಗಳ ಕೃತಿಗಳು ವರ್ಗೀಕರಣವಾಗಿದೆ. ಜಿಲ್ಲೆಯ ಮತ್ತು ಹೊನ್ನಾವರದ ಕವಿ, ಸಾಹಿತಿಗಳ ಕೃತಿಗಳನ್ನು ಒಂದೆಡೆ ಇಡಲಾಗಿದೆ. ಗ್ರಂಥಪಾಲ ಜಿ.ಎಂ. ಹೆಗಡೆ ಮತ್ತು ಸಹಪಾಲಕಿ ಮಂಗಲಾ ಮೇಸ್ತ ಇಬ್ಬರೇ ಇದ್ದರೂ ಸ್ವತ್ಛತೆಯಿಂದ ಆರಂಭಿಸಿ ವ್ಯವಸ್ಥಿತವಾಗಿಡುವ ಎಲ್ಲ ಕೆಲಸವನ್ನು ಇವರೇ ನಿರ್ವಹಿಸುತ್ತಾರೆ. ವಾಚನಾಲಯ ತಮ್ಮದೆಂಬ ಅಭಿಮಾನದಿಂದ ಕೆಲಸ ಮಾಡುತ್ತಾರೆ.
ತಾಲೂಕಿನಲ್ಲಿ 27 ಗ್ರಾಪಂಗಳಲ್ಲೂ ವಾಚನಾಲಯಗಳಿವೆ. ಅಲ್ಲಿ ಓದುಗರ ಸಂಖ್ಯೆ ಕಡಿಮೆ, ಹೊಸ ಪುಸ್ತಕಗಳ ಕೊರತೆ ಇದ್ದರೂ ತಾಲೂಕು ಕೇಂದ್ರದ ವಾಚನಾಲಯ ಇದ್ದರೆ ಹೀಗಿರಬೇಕು ಅನ್ನುವಂತಿದೆ. ಯುವ ಜನತೆ ಇದರ ಪ್ರಯೋಜನ ಪಡೆಯಬೇಕಾಗಿದೆ ಹೆಚ್ಚು ಜನ. ಕವಿ ರವೀಂದ್ರನಾಥ ಠಾಗೋರ ಹೆಸರಿಟ್ಟುಕೊಂಡು ಶತಮಾನದ ಹಿಂದೆ ಆರಂಭವಾಗಿದ್ದ ವಾಚನಾಲಯ ಪೇಟೆ ಮಧ್ಯೆ ಗೋಪಾಲಕೃಷ್ಣ ದೇವಸ್ಥಾನದ ಅಟ್ಟದ ಮೇಲೆ ಬಹುಕಾಲ ನಡೆದಿತ್ತು.
ನಂತರ ಓದುಗರ ಸಂಖ್ಯೆ ಹೆಚ್ಚಿದ ಮೇಲೆ ಟಪ್ಪರ್ ಹಾಲ್ ಕಟ್ಟಡಕ್ಕೆ ಸ್ಥಳಾಂತರವಾಯಿತು. ಹೊನ್ನಾವರ ಜಿಲ್ಲಾ ಕೇಂದ್ರವಾಗಿದ್ದ ಕಾಲದಲ್ಲಿ ಟಪ್ಪರ್ ಎಂಬ ಬ್ರಿಟೀಷ್ ಅಧಿಕಾರಿ ಕಲೆಕ್ಟರ್ ಆಗಿದ್ದರು. ಆಗ ಎರಡನೇ ಮಹಾಯುದ್ಧದ ಕಾಲ. ಅಕ್ಕಿಗೆ ಕೊರತೆಯಾಗಿ ಜನ ಹಸಿವಿನಿಂದ ಸಾಯತೊಡಗಿದರು. ಇದನ್ನು ತಪ್ಪಿಸಲು ಮಾನವೀಯ ದೃಷ್ಟಿಯಿಂದ ಟಪ್ಪರ್ ಸಾಹೇಬರು ಹೊನ್ನಾವರ ವ್ಯಾಪಾರಿಗಳಿಗೆ ರಂಗೂನ್‌ನಿಂದ (ಮಯಾನ್ಮಾರ್) ಅಕ್ಕಿ ತರಿಸಿಕೊಟ್ಟರು. ಇದರಿಂದ ಸಿಟ್ಟುಗೊಂಡ ಬ್ರಿಟೀಷ್ ಸರ್ಕಾರ ಅವರನ್ನು ವರ್ಗಾಯಿಸಿತು. ಬಂದರದಲ್ಲಿ ಸಾವಿರಾರು ಜನ ಸೇರಿ ಕಣ್ಣೀರು ಹರಿಸುತ್ತ ಟಪ್ಪರ್‌ರನ್ನು ಬೀಳ್ಕೊಟ್ಟರು. ಆಗ ಪ್ರಮುಖರಾಗಿದ್ದ ಡಾ| ಕಿರಣ್ ಬಳಕೂರರ ಅಜ್ಜ ಕೃಷ್ಣಪ್ಪ ಬಳಕೂರರು ಮತ್ತು ವಡಗೆರೆ ರಾಘವೇಂದ್ರ ರಾಯರು ಟಪ್ಪರ್ ಸಾಹೇಬನ ನೆನಪಿಗೆ ಕಟ್ಟಡವನ್ನು ಕಟ್ಟಿಸಿ, ಸಾರ್ವಜನಿಕ ಬಳಕೆಗಾಗಿ ಮುಕ್ತವಾಗಿಟ್ಟಿತ್ತು. ಅಲ್ಲಿ ಪಪಂ ಆಕ್ರಮಿಸಿತ್ತು. ಜನ ಆಕ್ಷೇಪಿಸಿ ಕೋರ್ಟಿಗೆ ಹೋದರು. ಬೇರೆ ಕಟ್ಟಡ ಕಟ್ಟಿಸಿ ಕೊಡುವ ಭರವಸೆ ಮೇಲೆ ಪ.ಪಂ ಅಲ್ಲಿ ಉಳಿಯಿತು. ಹೊಸ ಕಟ್ಟಡದಲ್ಲಿ ವಾಚನಾಲಯ ಆರಂಭವಾಗಿ ಸರ್ಕಾರಿ ಸ್ವತ್ತಾಗಿ ಮುಂದುವರಿದಿದ್ದರೂ ಹಿಂದಿನ ಇತಿಹಾಸದ ಮೌಲ್ಯಗಳಿಗೆ ತಕ್ಕಂತೆ ಜ್ಞಾನಮಂದಿರವಾಗಿದೆ ಎಂಬುದು ಹೊನ್ನಾವರಕ್ಕೆ ಹೆಮ್ಮೆ.
-ಜೀಯು, ಹೊನ್ನಾವರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yellapura: ಬಸ್- ಬೈಕ್ ಡಿಕ್ಕಿ; ಟಯರ್ ತಲೆ ಮೇಲೆ ಹರಿದು ಇಬ್ಬರು ಸ್ಥಳದಲ್ಲೇ ಮೃತ್ಯು
ಬೆಳೆವಿಮೆ ಸಿಗದೆ ಕೃಷಿಕರ ಪರದಾಟ: ಅಡಕೆ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸದ ಸರ್ಕಾರ
Belekeri Mining Case: ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಜೈಲು ಶಿಕ್ಷೆಗೆ ಹೈಕೋರ್ಟ್ ತಡೆ
ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಹೊತ್ತಿ ಉರಿದ ಲಾರಿ… ಅಪಾರ ಪ್ರಮಾಣದ ಸೊತ್ತು ಬೆಂಕಿಗಾಹುತಿ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.