ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿದ ವಿದೇಶಿ ಪ್ರಜೆಯನ್ನು ರಕ್ಷಿಸಿದ ಲೈಫ್ ಗಾರ್ಡ್ ಸಿಬ್ಬಂದಿ
Team Udayavani, Nov 10, 2019, 6:41 PM IST
ಕಾರವಾರ: ಗೋಕರ್ಣದ ಓಂ ಬೀಚಿನಲ್ಲಿ ಅಪಾಯಕ್ಕೆ ಸಿಕ್ಕಿದ್ದ ವಿದೇಶಿ ಪ್ರಜೆಯ ಜೀವ ರಕ್ಷಣೆ ಮಾಡಲಾಗಿದೆ.
ಇಸ್ರೇಲ್ ಮೂಲದ ವಿಕ್ಟರ್ (73) ಎನ್ನುವ ವಿದೇಶಿ ಪ್ರಜೆ , ಓಂ ಬೀಚ್ ನಲ್ಲಿ ಈಜಲು ತೆರಳಿದ್ದಾಗ ಸಮುದ್ರದ ಭಾರೀ ಗಾತ್ರದ ಅಲೆಯಲ್ಲಿ ಸಿಲುಕಿದ್ದರು.
ಅಲೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದೇ ಇದ್ದಾಗ ಲೈಫ್ ಗಾರ್ಡ್ ಸಿಬ್ಬಂದಿಗಳ ಸಹಾಯ ಕೋರಿದರು. ಇದನ್ನು ಗಮನಿಸಿದ ಕರ್ತವ್ಯನಿರತ ಲೈಫ್ ಗಾರ್ಡ್ ಸಿಬ್ಬಂದಿಗಳಾದ ಪಾಂಡುರಂಗ ಅಂಬಿಗ, ಹರೀಶ್ ಹರಿಕಂತ್ರ, ಪ್ರಭಾಕರ್ ಅಂಬಿಗ ತಕ್ಷಣ ರಕ್ಷಣೆಗೆ ಧಾವಿಸಿ ವಿದೇಶಿ ಪ್ರಜೆಯ ಜೀವ ರಕ್ಷಣೆ ಮಾಡಿದರು. ಇವರಿಗೆ ಸುಪ್ರವೈಸರ್ ರವಿ ನಾಯ್ಕ್ ಮತ್ತು ಪ್ರವಾಸಿ ಮಿತ್ರ ಸತೀಶ್ ನಾಯ್ಕ್ ಸಹಾಯ ಮಾಡಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.