ಲಿಂಗನಮಕ್ಕಿ ಭರ್ತಿಗೆ 7 ಅಡಿ ಬಾಕಿ
Team Udayavani, Aug 13, 2021, 9:26 PM IST
ಹೊನ್ನಾವರ: ನಿರೀಕ್ಷೆಯಂತೆ ಲಿಂಗನಮಕ್ಕಿ ಅಣೆಕಟ್ಟು ತುಂಬುತ್ತ ಬಂದಿದೆ. ಅಣೆಕಟ್ಟಿನ ಜಲಾಗಾರ ಶೇ. 85.18 ರಷ್ಟು ಭರ್ತಿಯಾಗಿದ್ದು ವಿಶಾಲವಾಗಿ ಸಮುದ್ರದಂತೆ ತೋರುತ್ತಿದ್ದು ತೆರೆಗಳು ಅಣೆಕಟ್ಟನ್ನು ಮುತ್ತಿಡುತ್ತಿವೆ.
ಶರಾವತಿಕೊಳ್ಳ ಇನ್ನು ನಿದ್ದೆಗೆಡಬೇಕಾಗಿದೆ. ಗುರುವಾರ 0.15 ಫೂಟ್ ಮಾತ್ರ ಏರಿದೆ. ಅಣೆಕಟ್ಟಿನ ಒಳಹರಿವು 11,174 ಕ್ಯೂಸೆಕ್ ಇದೆ. ಜಲಾನಯನ ಪ್ರದೇಶದಲ್ಲಿ 13.80 ಮಿಮೀ ಮಳೆ ಸುರಿದಿದೆ. ಲಿಂಗನಮಕ್ಕಿ ಅಣೆಕಟ್ಟು ಆರಂಭವಾದ ಮೇಲೆ ಕೇವಲ ನಾಲ್ಕಾರು ಬಾರಿ ಪೂರ್ತಿ ತುಂಬಿ ಸ್ಯೂಸ್ ಗೇಟ್ ತೆರೆದು ನೀರು ಬಿಡಲಾಗಿದೆ. ಹೆಚ್ಚಿನ ವರ್ಷ ಪೂರ್ತಿ ತುಂಬುತ್ತ 1817 ಅಡಿ ತಲುಪಿದ ಮೇಲೆ ಮಳೆ ನಿಂತು ಹೋದ ದಾಖಲೆ ಇದೆ. ನಂತರ ಒರತೆಯ ನೀರು 1819 ಅಡಿಗಳಿಗೆ ತಲುಪಿ ಗಂಗಾಪೂಜೆ ನೆರವೇರಿದೆ.
1980ರಲ್ಲಿ ನೆರೆ ಬಂದ ವರ್ಷ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆ ಸುರಿದು ಮೊದಲ ದಿನ 4ಅಡಿ, ಮರುದಿನ 3ಅಡಿ ನೀರು ಬಂದ ಕಾರಣ ಅನಿವಾರ್ಯವಾಗಿ ನೀರು ಬಿಡಲಾಗಿತ್ತು. ಅದೇ ಕಾಲಕ್ಕೆ ಶರಾವತಿ ಕೊಳ್ಳದಲ್ಲಿ ಮಳೆ ಇತ್ತು. ಕೊಳ್ಳವನ್ನು ಸೇರಿಕೊಳ್ಳುವ ಗೇರುಸೊಪ್ಪಾ ಕಲ್ಕಟ್ಟೆ, ಮಾಗೋಡು, ಹಡಿನಬಾಳ, ಭಾಸ್ಕೇರಿ ಹೊಳೆಗಳು ತುಂಬಿ ಹರಿದ ಪರಿಣಾಮ ಶರಾವತಿ ಎಡಬಲದಂಡೆಯನ್ನು ಮೀರಿ ಕಿಮೀ ವಿಸ್ತಾರದಲ್ಲಿ ಹೊನ್ನಾವರದ ತಗ್ಗುಪ್ರದೇಶಕ್ಕೂ ನೀರು ನುಗ್ಗಿತ್ತು.
ಅಮವಾಸ್ಯೆ ಭರ್ತಿ ಇದ್ದ ಕಾರಣ ಸಮುದ್ರಕ್ಕೆ ನೀರು ಸೇರಿಕೊಳ್ಳುವುದು ವಿಳಂಬವಾಗಿ ಅನಾಹುತ ಸಂಭವಿಸಿತ್ತು. ನಂತರ ಕೆಲವು ವರ್ಷ ಲಿಂಗನಮಕ್ಕಿಯಲ್ಲಿ ನೀರು ತುಂಬಿದರೂ ಗೇಟು ತೆರೆದರೂ ಸ್ವಲ್ಪಸ್ವಲ್ಪ ನೀರು ಬಿಟ್ಟ ಕಾರಣ, ಶರಾವತಿಕೊಳ್ಳದಲ್ಲಿ ಮಳೆ ಇಲ್ಲದ ಕಾರಣ ನೆರೆ ಬರಲಿಲ್ಲ. ಈ ಬಾರಿ ಎಲ್ಲೆಡೆ ಮಳೆ ಇದೆ. ಲಿಂಗನಮಕ್ಕಿ ತುಂಬುತ್ತಿದೆ. ಟೇಲರೀಸ್ ಆಣೆಕಟ್ಟು ತನ್ನ 55 ಮೀಟರ್ ಹತ್ತಿರದಲ್ಲಿದೆ. ಆದ್ದರಿಂದ ಇನ್ನೂ ಕೆಲವು ದಿನ ಕುತೂಹಲ ಉಳಿದುಕೊಳ್ಳಲಿದೆ. ಕೆಪಿಸಿ ಮಾಮೂಲಿಯಂತೆ ನೀರು ಬಿಡುವ ಅಂತಿಮ ಸೂಚನೆ ನೀಡಿ ಶರಾವತಿಕೊಳ್ಳದ ಜನರನ್ನು ಎಚ್ಚರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Manipal ಪಾಯ್ಸನ್ ಇನ್‌ಫಾರ್ಮೇಶನ್ ಸೆಂಟರ್; ಸಮುದಾಯಕ್ಕೊಂದು ಉಪಕಾರಿ ಸೇವೆ
UV Fusion: ಆತ್ಮಹತ್ಯೆಗೂ ಆಯಸ್ಸು ಮುಗಿದಿರಬೇಕು
Vavar Mosque: ಶಬರಿಮಲೆ ಯಾತ್ರಿಗಳು ವಾವರ ಮಸೀದಿಗೆ ಹೋಗಬಾರದು: ಬಿಜೆಪಿ ಶಾಸಕ
Sydney: ಆಸ್ಟ್ರೇಲಿಯಾ ಪ್ರೇಕ್ಷಕರಿಗೆ ಸ್ಯಾಂಡ್‌ಪೇಪರ್ ಕೇಸ್ ನೆನಪು ಮಾಡಿದ ವಿರಾಟ್|Video
Viral: ಇನ್ಸ್ಟಾಗ್ರಾಮ್‌ನಲ್ಲಿ ಪರಿಚಯವಾದ 16ರ ಬಾಲಕನ ಜತೆ ಮನೆ ಬಿಟ್ಟು ಓಡಿದ 10ರ ಬಾಲಕಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.