ಪರಿಸರವಾದಿಗಳ ವಿರುದ್ಧ ಆಕ್ರೋಶ
Team Udayavani, Feb 28, 2021, 4:53 PM IST
ಶಿರಸಿ: ಇಲ್ಲಿನ ಶಿರಸಿ-ಕುಮಟಾ ರಸ್ತೆ ನಿರ್ಮಾಣಕ್ಕೆ ಮರ ತೆರವು ಕಾರ್ಯದ ವಿರುದ್ಧ ಹೈಕೋರ್ಟ್‌ಗೆ ಪಿಟಿಶನ್ ದಾಖಲಿಸಿದ ಪರಿಸರವಾದಿಗಳ ವಿರುದ್ಧ ಈ ಭಾಗದ ನಾಗರಿಕರು ಆಕ್ಷೇಪ ವ್ಯಕ್ತಪಡಿಸಿದರು.
ಈ ರಸ್ತೆ ಅಮ್ಮಿನಳ್ಳಿ ಬಳಿ ಕುಮಟಾ-ಶಿರಸಿ ರಸ್ತೆ ಅಭಿವೃದ್ಧಿ ಹೋರಾಟ ಸಮಿತಿ ನೇತೃತ್ವದಲ್ಲಿ ನೂರಾರು ಜನ ಶನಿವಾರ ರಸ್ತೆ ತಡೆ ನಡೆಸಿ ತಕ್ಷಣ ಈ ಮಾರ್ಗದ ಅಭಿವೃದ್ಧಿಗೆ ಚಾಲನೆ ನೀಡುವಂತೆ ಆಗ್ರಹಿಸಿದರು.ಕಾಮಗಾರಿಗೆ ತೊಂದರೆ ತಂದವರನ್ನು ಢೋಂಗಿಪರಿಸರವಾದಿಗಳು ಎಂದು ಘೋಷಣೆ ಕೂಗಿದರು. ಶಿರಸಿ ಕುಮಟಾ ರಸ್ತೆ ಅಭಿವೃದ್ಧಿ ಸಮಿತಿ ಪ್ರಮುಖ ಸುಬ್ರಹ್ಮಣ್ಯ ಹೆಗಡೆ ಸುತ್ಮನೆ, ಶಿರಸಿ ಕುಮಟಾ ರಸ್ತೆಯಲ್ಲಿ ವಾಹನ ದಟ್ಟಣೆ ಜಾಸ್ತಿ ಇದೆ. ಯಾವಾಗಲೋ ಇದುರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆ ಆಗಬೇಕಿತ್ತು. ಈಗ ಅಂತೂ ಕಾಮಗಾರಿ ಆರಂಭಗೊಂಡಿದ್ದರೂಪರಿಸರವಾದಿಗಳು ಅಡ್ಡಗಾಲಾಗಿದ್ದಾರೆ. ಈಗಾಗಲೇಈ ರಸ್ತೆಯನ್ನು ಹೆದ್ದಾರಿಯಾಗಿ ಪರಿವರ್ತಿಸುವಸಲುವಾಗಿ ಇಲ್ಲಿ ಸಂಚಾರ ನಿಷೇಧಿಸಲಾಗಿದೆ. ಈ ರಸ್ತೆಯಲ್ಲಿ ಅಪಘಾತ ಸಂಭವಿಸಿದರೆ ಯಾವುದೇವಿಮಾ ಕಂಪನಿ ಪರಿಹಾರ ನೀಡುವುದಿಲ್ಲ. ಈಗಾಗಲೇ ಅನೇಕ ಅಪಘಾತಗಳಾಗಿದ್ದು, ರಸ್ತೆ ಕಾಮಗಾರತುರ್ತಾಗಿ ಪೂರೈಸಲು ಸಾರ್ವಜನಿಕರು ಸಹಕಾರ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಪರಿಸರವಾದಿಗಳಿಂದ ಅನಗತ್ಯ ವಿಳಂಬವಾಗುತ್ತಿದೆ ಎಂದು ಆಕ್ಷೇಪಿಸಿದರು.
ಸ್ಥಳೀಯ ವಿ.ಎಂ. ಹೆಗಡೆ ಹಣಗಾರ, ಜಿಲ್ಲೆಯಲ್ಲಿ ಕೈಗಾ ಅಣುಸ್ಥಾವರದಂತಹ ಮಾರಕ ಯೋಜನೆಗಳುಜಾರಿ ಬಂದರೂ ಪರಿಸರವಾದಿಗಳಿಂದ ಏನೂ ಮಾಡಲು ಸಾಧ್ಯವಾಗಿಲ್ಲ. ಎರಡು ವರ್ಷಗಳ ಹಿಂದೆಯೇಶಿರಸಿ ಕುಮಟಾ ರಸ್ತೆಗೆ ಹಣ ಮಂಜೂರಾಗಿದ್ದರೂಪರಿಸರವಾದಿಗಳಿಂದ ಕಾಮಗಾರಿ ಆರಂಭವಾಗಿಲ್ಲ.ಈಗ ರಸ್ತೆ ವಿಸ್ತೀರ್ಣ ಕಡಿಮೆಗೊಳಿಸಿದೆ ಎಂದರು.ಶಿರಸಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಉಪೇಂದ್ರಪೈ, ಪರಿಸರ ವಾದಿಗಳಿಂದ ಕಲ್ಲು ಕ್ವಾರಿಗಳು ಬಂದಾಗಿ ಬಡವರ, ಕಾರ್ಮಿಕರ ಬದುಕು ಅತಂತ್ರವಾಗಿದೆ ಎಂದರು.
ಹೋರಾಟಗಾರ ಪರಮಾನಂದ ಹೆಗಡೆ, ಪರಿಸರವಾದಿಗಳು ಬೆಟ್ಟದಲ್ಲಿಯೇ ಅಡಕೆ ಗಿಡ ನೆಟ್ಟರೆ ತೊಂದ್ರೆ ಆಗಲ್ಲ, ಮನೆಗಳಿಗೆ ನಾಟಾ ಜಾಸ್ತಿ ಬಳಕೆ ಮಾಡಿದರೂ ಕೇಳುವವರಿಲ್ಲ. ಆದರೆ, ರಸ್ತೆ ಕಾಮಗಾರಿಗೆ ಅರಣ್ಯನಾಶವಾಗುತ್ತಿದೆ ಎಂದು ಆಕ್ಷೇಪಿಸುತ್ತಿದ್ದಾರೆ ಎಂದರು. ಬಂಡಲದ ದೇವರಾಜ ಮರಾಠಿ, ಈ ರಸ್ತೆಯನ್ನುಮೊದಲು 18 ಮೀ. ಅಗಲದಲ್ಲಿ ನಿರ್ಮಿಸುವ ಪ್ರಸ್ತಾಪ ಇತ್ತಾದರೂ, ಢೋಂಗಿ ಪರಿಸರವಾದಿಗಳು ಹೋರಾಟ ಮಾಡಿ 15 ಮೀ.ಗೆ ಇಳಿಸಿದ್ದಾರೆ. ಇಷ್ಟಾದರೂ ಕಾಮಗಾರಿ ನಡೆಸಲು ಬಿಡುತ್ತಿಲ್ಲ. ವಿಳಂಬ ಮಾಡದೆ ಹೆಚ್ಚುವರಿ ಖರ್ಚು ಬರಲಿದ್ದು, ಇದು ಸಾರ್ವಜನಿಕರಮೇಲೆ ಹೊರೆಯಾಗಲಿದೆ. ಒಂದೇ ಒಂದೂ ಗಿಡ ನೆಡದವರು ಈಗ ನ್ಯಾಯಾಲಯಕ್ಕೆ ತೆರಳಿದ್ದಾರೆ ಎಂದು ಆಕ್ಷೇಪಿಸಿದರು.
ಶ್ರೀಪಾದ ಹೆಗಡೆ ಕಡವೆ, ಎಂ.ಎಂ. ಭಟ್, ಎಸ್.ಕೆ. ಭಾಗ್ವತ್, ಪ್ರವೀಣಗೌಡ ತೆಪ್ಪಾರ, ನಾಗರಾಜ ಮಡಿವಾಳ,ಗಣೇಶ ದಾವಣಗೆರೆ, ವಿನಾಯಕ ಮುಂಡಗೇರ, ಧನುಗೌಡ, ರಮೇಶ ಆಚಾರಿ ಇತರರಿದ್ದರು.ಎಸಿ ಬರಲು ಪಟ್ಟು: ಶಿರಸಿ ಸಹಾಯಕ ಆಯುಕ್ತೆಯೇ ಸ್ಥಳಕ್ಕೆ ಬಂದು ಸಾರ್ವಜನಿಕರ ಮನವಿ ಸ್ವೀಕರಿಸಬೇಕುಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.ಇದರಿಂದಾಗಿ ಎರಡು ತಾಸಿಗೂ ಅಧಿಕ ಕಾಲ ರಸ್ತೆ ಸಂಚಾರಕ್ಕೆ ತೊಂದರೆಯಾಯಿತು. ಪೊಲೀಸರುಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದರಾದರೂಅದು ಸಾಧ್ಯವಾಗಲಿಲ್ಲ. ಬಳಿಕ ತಹಶೀಲ್ದಾರ್ ಎಂ.ಆರ್. ಕುಲಕರ್ಣಿ ಸ್ಥಳಕ್ಕಾಗಮಿಸಿ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು.
ತಹಶೀಲ್ದಾರ್ ಮಾತನಾಡಿ, ಪ್ರಕರಣ
ನ್ಯಾಯಾಲಯದಲ್ಲಿ ಇರುವುದರಿಂದ ಅಧಿಕಾರಿಗಳ ವ್ಯಾಪ್ತಿಯಲ್ಲಿಲ್ಲ. ಈ ಕುರಿತು ಬರುವ ಸೂಚನೆಗಳನ್ನು ಪಾಲಿಸಲಿದ್ದೇವೆ. ಸಾರ್ವಜನಿಕರಿಗೆ ಸಂಚಾರಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು ಎಂದರು. ಇದೇ ವೇಳೆ ಶಿರಸಿ ಕುಮಟಾ ರಸ್ತೆಗಾಗಿ ತೆರವುಗೊಳಿಸಲಾಗುವ ಮರಗಳ ಸಂಖ್ಯೆಗಿಂತ ಜಾಸ್ತಿಗಿಡಗಳನ್ನು ತಮ್ಮ ಸೊಪ್ಪಿನ ಬೆಟ್ಟದಲ್ಲಿ ಬೆಳೆಸಿ ಪೋಷಿಸಲುಪ್ರ ತಿಭಟನಾಕಾರರು ಮತ್ತು ಸ್ಥಳಿಯರು ಈ ವೇಳೆ ಶಪಥ ಮಾಡಿದರು. ರಸ್ತೆ ಕಾಮಗಾರಿಗೆ ಅನಗತ್ಯ ಕಿರುಕುಳ ಉಂಟು ಮಾಡಬಾರದು. ತಕ್ಷಣವೇ ಪರಿಸರವಾದಿಗಳುಹೈಕೋರ್ಟ್‌ಗೆ ಸಲ್ಲಿಸಿರುವ ಪಿಟಿಶನ್ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ
Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!
ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ
Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ
Ankola: ರಕ್ತದೊತ್ತಡ ಕುಸಿದ ಪರಿಣಾಮ ಕಬಡ್ಡಿ ಆಡುವಾಗಲೇ ಕ್ರೀಡಾಳು ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.