ಮಾರುತಿ ದೇವರ ಮಹಾದ್ವಾರ ಲೋಕಾರ್ಪಣೆ
ಮಹಾದ್ವಾರ ನೋಡಿದರೆ ಒಳಗೆ ಬರಲು ಪ್ರೇರೇಪಿಸುವಂತಿದೆ: ಸ್ಪೀಕರ್ ಕಾಗೇರಿ
Team Udayavani, May 23, 2022, 12:23 PM IST
ಶಿರಸಿ: ಕೊಳಗಿಬೀಸ್‌ನ ಮಹಾದ್ವಾರ ನೋಡಿದರೆ ಪವಿತ್ರ ಕ್ಷೇತ್ರದ ಮಾರುತಿ ದರ್ಶನ ಮಾಡಲು ಒಳಗೆ ಬಂದು ಕೈ ಮುಗಿಯುವಂತೆ ಪ್ರವಾಸಿಗರನ್ನು ಪ್ರೇರೇಪಿಸುತ್ತದೆ. ಚೆಂದದ ಮಹಾದ್ವಾರ ಕ್ಷೇತ್ರಕ್ಕೆ ನವಿಲುಗರಿಯಾಗಿದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಬಣ್ಣಿಸಿದರು.
ರವಿವಾರ ಅವರು ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಟಾರ ಕುಟುಂಬದವರು ಕೊಳಗಿಬೀಸ್ ದೇವಸ್ಥಾನಕ್ಕೆ ನಿರ್ಮಿಸಿದ ಮಹಾದ್ವಾರ ಉದ್ಘಾಟಿಸಿ ಮಾತನಾಡಿದರು.
ಸನಾತನ ಪರಂಪರೆಯಲ್ಲಿ ದೇವರನ್ನು ನಂಬಿ ಬದುಕಿದವರು. ನಂಬಿಕೆಯ ಶ್ರದ್ಧಾ ಭಕ್ತಿ ಕೇಂದ್ರಗಳನ್ನು ಉಳಿಸಿಕೊಂಡು ಹೋಗಬೇಕು. ಸಂಸ್ಕಾರಯುತ ಜೀವನ ನಡೆಸಲು ಇವು ಕಾರಣ ಎಂದ ಅವರು, ವಿಶಾಲ ದೃಷ್ಟಿಕೋನ ಬೆಳಸಿಕೊಳ್ಳಲು ಮಂದಿರಗಳು, ಗುರು ಪರಂಪರಾ ಕೇಂದ್ರಗಳು ಕಾರಣ ಎಂದರು.
ಸೇವಾ ಮನೋಭಾವನೆಯಿಂದ ಕಾರ್ಯ ಮಾಡುವಾಗ ಒಳ್ಳೆಯದೇ ಆಗಲಿದೆ. ಕೊಳಗಿಬೀಸ್ ಕ್ಷೇತ್ರಕ್ಕೆ ಧಾರ್ಮಿಕ ಪ್ರಾಮುಖ್ಯತೆ ಇದೆ. ಮಹಾದ್ವಾರ ಇನ್ನಷ್ಟು ಮೆರಗು ತಂದಿದೆ ಎಂದರು.
ಮಾಜಿ ಸಚಿವ ಆರ್.ವಿ. ದೇಶಪಾಂಡೆ, ಅಂಧ ಶ್ರದ್ಧೆಯಿಂದ ಯಾರೂ ನಡೆಯಬಾರದು. ಮೌಲ್ಯಗಳು ಕುಸಿಯುತ್ತಿವೆ. ನಮ್ಮ ಜವಾಬ್ದಾರಿ ಇಂಥ ವೇಳೆ ಹೆಚ್ಚಾಗಿದೆ. ಉಳ್ಳವರು ದಾನ ಮಾಡುವ ಪ್ರವೃತ್ತಿ ಬೆಳಸಿಕೊಳ್ಳಬೇಕು. ಇಂಥ ಕೆಲಸದಿಂದ ಸಮಾಧಾನ ಸಿಗುತ್ತದೆ. ನಾನು ಮಾಡಿದ್ದು ನಂದಲ್ಲ, ಎಲ್ಲದೂ ಹಿರಿಯರದ್ದು ಎಂದರು.
ವಿಸ್ತಾರ ಮೀಡಿಯಾದ ಸಿಇಒ ಹರಿಪ್ರಕಾಶ ಕೋಣೆಮನೆ, ಮಾರುತಿಯಿಂದ ರಾಮಾಯಣಕ್ಕೆ ವಿಶೇಷತೆ ಬಂದಿದೆ. ಮಾರುತಿ ಎಂದರೆ ಭಕ್ತಿ, ಮಾರುತಿ ಎಂದರೆ ಯುಕ್ತಿ. ಭಾರತೀಯ ಪರಂಪರೆಯಲ್ಲಿ ಶಕ್ತಿ, ಭಕ್ತಿ, ಯುಕ್ತಿ ಇದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಟಾರ್, ಒಳ್ಳೆಯ ಕೆಲಸ ಮಾಡಲು ಕುಟುಂಬದ ಪ್ರೇರಣೆ ಸಿಕ್ಕರೆ ಒಳ್ಳೆಯದೇ ಆಗುತ್ತದೆ. ನಮ್ಮದಲ್ಲದ ಟ್ರಕ್ ಹಿಂದಿದ್ದ ಮಹಾದ್ವಾರ ಕೆಡಗಿತ್ತು. ಆದರೆ, ನಮ್ಮ ಹೆಸರು ಬಂದಿತ್ತು. ಈ ಕಾರಣದಿಂದ ಈ ಸೇವೆ ಸಲ್ಲಿಸಲು ಸ್ಥಳೀಯರು, ದೇವಸ್ಥಾನದಿಂದ ಅವಕಾಶ ನೀಡಿದ್ದಾರೆ. ನಮ್ಮ ಪ್ರತೀ ಕೆಲಸದಲ್ಲಿ ಕಾಗೇರಿ ಅವರ ಸಹಕಾರ ನೀಡುತ್ತಿದ್ದಾರೆ ಎಂದರು.
ಮೆಗಾಲೈಟ್ ಇಂಡಸ್ಟ್ರೀಸ್‌ನ ಎಚ್.ವಿ. ಧರ್ಮೆàಶ, ದೇವಸ್ಥಾನದ ಅಧ್ಯಕ್ಷ ಶ್ರೀಧರ ಹೆಗಡೆ ಇಳ್ಳುಮನೆ, ಹೇಮಾ ಹೆಬ್ಟಾರ್, ನಿವೇದಿತಾ, ಅಕ್ಷತ್ ಹೆಗಡೆ, ಅವನಿ, ಗಿರಿಧರ ಕಬ್ನಳ್ಳಿ ನಿರ್ವಹಿಸಿದರು.
ಸಮಾಜದಲ್ಲಿ ಸಣ್ಣದಾಗಲಿ, ದೊಡ್ಡದಾಗಲಿ ಯಾವುದೇ ಆದರೂ ಅದನ್ನು ಪ್ರೋತ್ಸಾಹಿಸುವ ಕೆಲಸ ಎಲ್ಲರೂ ಮಾಡಬೇಕು. –ವಿಶ್ವೇಶ್ವರ ಹೆಗಡೆ ಕಾಗೇರಿ, ಸ್ಪೀಕರ್
ಕಾಗೇರಿ ಅವರು ಎತ್ತರ ದೈಹಿಕ ನಿಲುವಿನಲ್ಲಿ ಕೂಡ ಮಾತ್ರವಲ್ಲ, ಸಾಂಸ್ಕೃತಿಕ, ಸರಳತೆಯಲ್ಲೂ ಎತ್ತರದವರು. ಇಡೀ ದೇಶಕ್ಕೆ ಅಲ್ಪ ಅವಧಿಯಲ್ಲಿ ಕರ್ನಾಟಕ ವಿಧಾನ ಸಭೆ ಮಾದರಿಯಾಗಿದೆ. ಸಾರ್ವಜನಿಕ ಜೀವನದಲ್ಲಿ ಇದ್ದವರಿಗೆ ಮೇಲ್ಪಂಕ್ತಿಯನ್ನು ಕಾಗೇರಿ ಹಾಕಿದ್ದಾರೆ. –ಹರಿಪ್ರಕಾಶ ಕೋಣೆಮನೆ,
ಸಿಇಒ ವಿಸ್ತಾರ ಮೀಡಿಯಾ ಇ ಸ್ವತ್ತಿನ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ನಮ್ಮ ಬಡವರಿಗೆ ಬ್ಯಾಂಕಿನ ಸಾಲ ಕೂಡ ಸಿಗುತ್ತಿಲ್ಲ. ನಮ್ಮವರೇ ಇದ್ದಾಗ ಈ ಸಮಸ್ಯೆ ಬಗೆಹರಿಯಲಿ. –ಶ್ರೀನಿವಾಸ ಹೆಬ್ಟಾರ್, ಜೀವಜಲ, ಕಾರ್ಯಪಡೆ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Bhairathi Ranagal Review: ರೋಣಾಪುರದ ರಣಬೇಟೆಗಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.