ರಸ್ತೆ ಸಾರಿಗೆ ಸಂಸ್ಥೆಗೆ ಸಂಕಷ್ಟ


Team Udayavani, Aug 10, 2020, 12:36 PM IST

uk-tdy-1

ದಾಂಡೇಲಿ: ಕೋವಿಡ್‌-19 ಕಾರಣ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ತೊಂದರೆಗೆ ಒಳಗಾಗಿದ್ದಾರೆ. ಅದೇ ರೀತಿ ರಸ್ತೆ ಸಾರಿಗೆ ಸಂಸ್ಥೆಯೂ ಪ್ರಯಾಣಿಕರಿಲ್ಲದೆ ಅಪಾರ ನಷ್ಟ ಅನುಭವಿಸುತ್ತಿದ್ದೆ. ಆರ್ಥಿಕವಾಗಿ ತೀವ್ರ ಸಂಕಷ್ಟ ಎದುರಿಸುವಂತಾಗಿದೆ.

ಅನ್‌ಲಾಕ್‌ ಆದ ದಿನದಿಂದಲೇ ಸಾರಿಗೆ ಸಂಸ್ಥೆಯವರು ಪ್ರಯಾಣಿಕರ ಸೇವೆಗೆ ಬಸ್‌ ಬಿಟ್ಟರೂ ಪ್ರಯಾಣಿಕರು ಮಾತ್ರ ಬಸ್‌ ಹತ್ತುತ್ತಿಲ್ಲ. ಪ್ರತಿದಿನ 61 ಬಸ್‌ಗಳನ್ನು ಬಿಡುತ್ತಿದ್ದ ನಗರದ ಸಾರಿಗೆ ಸಂಸ್ಥೆ ಘಟಕದವರು ಈಗ 28 ಬಸ್‌ಗಳನ್ನಷ್ಟೇ ಬಿಟ್ಟಿದ್ದಾರೆ. ಕೋವಿಡ್ ಬರುವ ಮುನ್ನ 61 ಬಸ್‌ ನಿತ್ಯ ಸಂಚರಿಸುತ್ತಿದ್ದು, ಪ್ರತಿದಿನ 6.50ರಿಂದ 7 ಲಕ್ಷ ಆದಾಯ ಬರುತ್ತಿತ್ತು. ಈಗ ದಿನವೊಂದಕ್ಕೆ 1 ಲಕ್ಷದಿಂದ 1.25 ಲಕ್ಷ ಆದಾಯ ಬರಲು ಪ್ರಾರಂಭಿಸಿದೆ. ಹಿಂದೆ ಧಾರವಾಡಕ್ಕೆ ಪ್ರತಿದಿನ 60 ಟ್ರಿಪ್‌ ಹೋಗುತ್ತಿದ್ದಲ್ಲಿ ಈಗ 20ರಿಂದ 25 ಟ್ರಿಪ್‌ ಗಳಷ್ಟೇ ಹೋಗಲಾಗುತ್ತಿದೆ. ಇದಕ್ಕೂ ಪ್ರಯಾಣಿಕರು ತುಂಬಲು ಗಂಟೆಗಟ್ಟಲೆ ಕಾಯಬೇಕಾಗಿದೆ. ನಗರದೊಳಗಡೆ ಒಟ್ಟು 3 ಬಸ್‌ ಸಂಚರಿಸುತ್ತಿದ್ದರೂ ಅದು ಅಷ್ಟಕ್ಕಷ್ಟೆ ಆದಾಯ ತರುತ್ತಿದೆ.

ರಾಜ್ಯದ ಧಾರವಾಡ, ಬೆಳಗಾವಿ, ರಾಯಚೂರು, ಶಕ್ತಿನಗರ, ಬೆಂಗಳೂರು ಮೊದಲಾದ ಕಡೆಗಳಿಗೆ ಇಲ್ಲಿಂದ ಬಸ್‌ ಸಂಚಾರ ಪ್ರಾರಂಭವಾಗಿದ್ದು, ಜನರ ಬೇಡಿಕೆಯಾನುಸಾರ ಬಸ್‌ ಬಿಡಲಾಗುತ್ತಿದೆ. ಇನ್ನೂ ನಗರದಿಂದ ಧರ್ಮಸ್ಥಳಕ್ಕೆ, ಮಹಾರಾಷ್ಟ್ರ-ಕೊಲ್ಲಾಪುರಕ್ಕೆ ಬಸ್‌ ಸಂಚಾರ ಪ್ರಾರಂಭಿಸಿಲ್ಲ. ದಾಂಡೇಲಿ ಸಾರಿಗೆ ಘಟಕದಲ್ಲಿ ಅಧಿಕಾರಿಗಳು, ಸಿಬ್ಬಂದಿ ಸೇರಿ ಒಟ್ಟು 263 ಜನ ಕೆಲಸ ನಿರ್ವಹಿಸುತ್ತಿದ್ದು, ಇವರಲ್ಲಿ ಅರ್ಧಕ್ಕಿಂತ ಹೆಚ್ಚು ಜನರಿಗೆ ನಿತ್ಯ ಕೆಲಸ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಆದರೂ ಸಾರಿಗೆ ಘಟಕದ ವ್ಯವಸ್ಥಾಪಕ ಎಚ್‌.ವೈ. ಜೋಗಿನ್‌ ನೇತೃತ್ವದಲ್ಲಿ ಸಾರಿಗೆ ಘಟಕದ ಅಧಿಕಾರಿಗಳು ರೊಟೇಶನ್‌ ಮಾದರಿಯಲ್ಲಿ ಕೆಲಸ ನೀಡುತ್ತಿದ್ದಾರೆ.

ಸಂಕಷ್ಟದಲ್ಲಿಯೂ ಸೇವೆ ಕೋವಿಡ್‌ ಸಂಕಷ್ಟದಲ್ಲಿಯೂ ಪ್ರಯಾಣಿಕರಿಗೆ ಉತ್ತಮ ಸೇವೆ ನೀಡಬೇಕೆಂಬುವುದು ನಮ್ಮ ಗುರಿ. ಹಾಗಾಗಿ ಹೆಚ್ಚು ರಿಸ್ಕ್ ತೆಗೆದುಕೊಂಡು ಪ್ರಯಾಣಿಕರಿಗೆ ಸೇವೆ ನೀಡಲು ಮುಂದಾಗಿದ್ದೇವೆ. ಪ್ರಯಾಣಿಕ ಸಂಖ್ಯೆ ತೀರಾ ಕಡಿಮೆಯಿದೆ. ಸಂಸ್ಥೆ ಆರ್ಥಿಕವಾಗಿ ತೊಂದರೆಯಲ್ಲಿದೆ. ಆದಾಗ್ಯೂ ಸಂಸ್ಥೆಯ ಎಲ್ಲ ಸಿಬ್ಬಂದಿ ಸಮಸ್ಯೆಗಳನ್ನರಿತು ಒಂದಾಗಿ ಸೇವೆ ನೀಡುತ್ತಿದ್ದೇವೆ. –ಎಚ್‌.ವೈ. ಜೋಗಿನ್‌ ಘಟಕ ವ್ಯವಸ್ಥಾಪಕ

 

-ಸಂದೇಶ್‌ ಎಸ್‌. ಜೈನ್‌

 

ಟಾಪ್ ನ್ಯೂಸ್

ದ್ವೇಷದ ರಾಜಕಾರಣ ಸುಡುವ ಕಾಲ ಸನ್ನಿಹಿತ: ಸೂರಜ್‌ ರೇವಣ್ಣ

ದ್ವೇಷದ ರಾಜಕಾರಣ ಸುಡುವ ಕಾಲ ಸನ್ನಿಹಿತ: ಸೂರಜ್‌ ರೇವಣ್ಣ

Supreme Court: ಪೂಜಾ ಸ್ಥಳ ಕಾಯ್ದೆ: ಒವೈಸಿ ಅರ್ಜಿ ಫೆ.17ಕ್ಕೆ ವಿಚಾರಣೆ

Supreme Court: ಪೂಜಾ ಸ್ಥಳ ಕಾಯ್ದೆ: ಒವೈಸಿ ಅರ್ಜಿ ಫೆ.17ಕ್ಕೆ ವಿಚಾರಣೆ

mamata

BSF ಒಳನುಸುಳುಕೋರರು ಪ್ರವೇಶಿಸಲು ನೆರವಾಗುತ್ತಿದೆ: ಮಮತಾ ಬ್ಯಾನರ್ಜಿ

1-st

ಜ.26-30: ಅತ್ತೂರು ಸಂತ ಲಾರೆನ್ಸ್‌ ಬಸಿಲಿಕ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವ

1-gil

450 ಕೋಟಿ ಚಿಟ್ ಫಂಡ್ ಹಗರಣ: ಶುಭಮನ್ ಗಿಲ್ ಸೇರಿ ನಾಲ್ವರಿಗೆ ಸಿಐಡಿ ಸಮನ್ಸ್ ಸಾಧ್ಯತೆ

CT Ravi

ನೇತ್ರಾವತಿ ನದಿಯಲ್ಲಿ ಗೋಮಾಂಸ ಪತ್ತೆ ಮತಾಂಧತೆ ತೋರಿಸುತ್ತದೆ: ಸಿ.ಟಿ. ರವಿ ಕಿಡಿ

nucchinunde

Healthy Recipe: ಹಳೇ ಕಾಲದ ರುಚಿ; ಈ ರೆಸಿಪಿ ಮಾಡದಿದ್ದರೆ ಒಮ್ಮೆಯಾದ್ರು ಮಾಡಿ ನೋಡಿ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-dandeli

Dandeli: ಗಾಂಜಾ ಅಕ್ರಮ ಮಾರಾಟ ಯತ್ನ; ಮಾಲು ಸಹಿತ ಆರೋಪಿಯ ಬಂಧನ

6-honnavara

Honnavar: ಮೂವರು ಯುವಕರ ಬಲಿ ತೆಗೆದುಕೊಂಡ ಭೀಕರ ರಸ್ತೆ ಅಪಘಾತ

5-1

Mundgod: ಹಾವು ಕಡಿದು ಅಂಗನವಾಡಿ ಬಾಲಕಿ ಸಾವು

1-up

Dandeli; ಕುಸಿದು ಬಿದ್ದು ಯುಪಿ ಮೂಲದ ಯುವಕ ಸಾ*ವು

16-yellapura

Yellapura: ಬಸ್‌- ಬೈಕ್‌ ಡಿಕ್ಕಿ; ಟಯರ್‌ ತಲೆ ಮೇಲೆ ಹರಿದು ಇಬ್ಬರು ಸ್ಥಳದಲ್ಲೇ ಮೃತ್ಯು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ದ್ವೇಷದ ರಾಜಕಾರಣ ಸುಡುವ ಕಾಲ ಸನ್ನಿಹಿತ: ಸೂರಜ್‌ ರೇವಣ್ಣ

ದ್ವೇಷದ ರಾಜಕಾರಣ ಸುಡುವ ಕಾಲ ಸನ್ನಿಹಿತ: ಸೂರಜ್‌ ರೇವಣ್ಣ

Supreme Court: ಪೂಜಾ ಸ್ಥಳ ಕಾಯ್ದೆ: ಒವೈಸಿ ಅರ್ಜಿ ಫೆ.17ಕ್ಕೆ ವಿಚಾರಣೆ

Supreme Court: ಪೂಜಾ ಸ್ಥಳ ಕಾಯ್ದೆ: ಒವೈಸಿ ಅರ್ಜಿ ಫೆ.17ಕ್ಕೆ ವಿಚಾರಣೆ

mamata

BSF ಒಳನುಸುಳುಕೋರರು ಪ್ರವೇಶಿಸಲು ನೆರವಾಗುತ್ತಿದೆ: ಮಮತಾ ಬ್ಯಾನರ್ಜಿ

Sandalwood: ಸ್ಯಾಂಡಲ್‌ವುಡ್‌ಗೆ ಪ್ರಿಯಾಂಕಾ ಸೋದರ ಎಂಟ್ರಿ

Sandalwood: ಸ್ಯಾಂಡಲ್‌ವುಡ್‌ಗೆ ಪ್ರಿಯಾಂಕಾ ಸೋದರ ಎಂಟ್ರಿ

1-st

ಜ.26-30: ಅತ್ತೂರು ಸಂತ ಲಾರೆನ್ಸ್‌ ಬಸಿಲಿಕ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.