ಬಾಲೆ ಚಿಕಿತ್ಸೆಗೆ 16 ಕೋಟಿ ರೂ.ಲಾಟರಿ ನೆರವು
Team Udayavani, Feb 18, 2021, 9:31 PM IST
ಭಟ್ಕಳ: ಅಪರೂಪ ಹಾಗೂ ದುಬಾರಿ ಚಿಕಿತ್ಸೆ ಕಾಯಿಲೆಯಿಂದ ಬಳಲುತ್ತಿದ್ದ ಭಟ್ಕಳದ ಪುಟ್ಟ ಬಾಲಕಿ ಫಾತಿಮಾಗೆ ಸ್ವೀಡನ್‌ನ ಔಷ ಧ ಕಂಪನಿ ಲಾಟರಿ ಮೂಲಕ 16 ಕೋಟಿ ರೂ. ಧನ ಸಹಾಯ ಮಾಡಿದ್ದು, ಬಾಲಕಿ ಪ್ರಾಣಾಪಾಯ ದಿಂದ ಪಾರಾಗಿದ್ದಾಳೆ.
ಭಟ್ಕಳ ಆಜಾದ್ ನಗರದ ನಿವಾಸಿ, ದುಬೈನಲ್ಲಿ ಉದ್ಯೋಗಿ ಯಾಗಿರುವ ಮೊಹ ಮ್ಮದ್ ಬಾಸಿಲ್ ಅವರ 14 ತಿಂಗಳ ಪುಟ್ಟ ಕಂದ ಫಾತಿಮಾ ಬೆನ್ನು ಮೂಳೆಯ ಸ್ನಾಯು ಕ್ಷೀಣತೆಯಿಂದ ಬಳಲುತ್ತಿದ್ದು ಬೆಂಗಳೂರಿನ ಬಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಈ ರೋಗಕ್ಕೆ ಕ್ರಾಂತಿಕಾರಿ ಜೀನ್ ಚಿಕಿತ್ಸೆಯೇ ಅಗತ್ಯವಾಗಿದ್ದು, ಝೋಲ್ಗೆನ್ಸ್ ಜೀನ್ ಥೆರಫಿಗೆ ಒಳಗಾಗಿದ್ದಳು. ಈ ಚಿಕಿತ್ಸೆಗೆ ಸ್ವೀಡನ್‌ನ ನೊವಾರ್ಟಿಸ್ ಕಂಪನಿ ಔಷಧ ತಯಾರಿಸುತ್ತಿದ್ದು, ಅದರ ಬೆಲೆ 2.1 ಮಿಲಿಯನ್ ಯುಎಸ್ ಡಾಲರ್. ಭಾರತೀಯ ರೂಪಾಯಿ ಲೆಕ್ಕದಲ್ಲಿ ಅದರ ಬೆಲೆ ಸುಮಾರು 16 ಕೋಟಿ ರೂ. ಅಷ್ಟು ಬೆಲೆಯ ಔಷಧ ಕೊಳ್ಳುವುದು ಪಾಲಕರಿಗೆ ಸಾಧ್ಯವಿರಲಿಲ್ಲ.
ಔಷಧ ಕಂಪನಿಯು ಮಾನವೀಯತೆ ದೃಷ್ಟಿ ಯಿಂದ ಪ್ರತಿವರ್ಷ ಈ ಕಾಯಿಲೆಗೆ ತುತ್ತಾದವರ ಹೆಸರುಗಳನ್ನು ಪಡೆದು ವರ್ಷಕ್ಕೊಂದು ಔಷಧದ ಯುನಿಟ್ ಉಚಿತವಾಗಿ ನೀಡುತ್ತದೆ. ಈ ವರ್ಷ ಲಾಟರಿ ಯಲ್ಲಿ ಈ ಪುಟ್ಟ ಬಾಲಕಿ ಹೆಸರು ಬಂದಿದ್ದು ಅದೃಷ್ಟವೇ ಸರಿ. ಸದ್ಯ ಫಾತಿಮಾ ಆರೋಗ್ಯದಲ್ಲಿ ಸುಧಾರಣೆಯಾಗುತ್ತಿದ್ದು, ಮಗಳು ಸಂಪೂರ್ಣ ಗುಣಮುಖವಾಗುವ ನಿರೀಕ್ಷೆಯಲ್ಲಿದ್ದಾರೆ ಹೆತ್ತವರು. ಮಕ್ಕಳು ಅಂಬೆಗಾಲಿಡುವ ಸಮಯದಲ್ಲಿ ಸ್ಪೈನಲ್ ಮಸ್ಯುಲರ್ ಅಟ್ರೋಫಿ ಅಥವಾ ಎಸ್ ಎಂಎ ಎಂದು ಈ ಕಾಯಿಲೆ ಗುರುತಿಸಲಾಗು ತ್ತದೆ. ಮೆದುಳಿನಿಂದ ಸ್ನಾಯುಗಳಿಗೆ ವಿದ್ಯುತ್ ಸಂಕೇತಗಳನ್ನು ಒಯ್ಯುವ ನರಕೋಶ ನಷ್ಟ ದಿಂದ ಇದು ಸಂಭವಿಸುತ್ತದೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
B.S.Yediyurappa ಮೇಲೆ ಅಭಿಯೋಜನೆ ಅಸ್ತ್ರ!: ಏನಿದು 12 ಕೋಟಿ ರೂ. ಲಂಚ ಪ್ರಕರಣ?
Panchayat Raj University; ಇನ್ನು ಸಿಎಂ ಕುಲಾಧಿಪತಿ!: ರಾಜ್ಯಪಾಲರ ಅಧಿಕಾರಕ್ಕೆ ಕೊಕ್
Agriculture; ರಾಜ್ಯದ ರೈತರು, ಜನತೆಗೆ ಶುಭ ಸುದ್ದಿ: ಈ ಬಾರಿ ಬಂಪರ್ ಇಳುವರಿ!
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.