ಎಂ.ಎ. ಹೆಗಡೆ ಅಧ್ಯಯನ ಪೀಠಕ್ಕೆ ಒತ್ತಾಯ
ಎಂ.ಎ. ಹೆಗಡೆ ಅವರು ಸಕ್ರಿಯವಾಗಿ ಕೆಲಸ ಮಾಡಿ ಕಲಾವಿದರಿಗೆ ಧೈರ್ಯ ತುಂಬಿದ್ದಾರೆ
Team Udayavani, Nov 13, 2021, 6:24 PM IST
ಶಿರಸಿ: ಬಹುಭಾಷಾ ವಿದ್ವಾಂಸ, ಯಕ್ಷಗಾನದ ಶ್ರೇಷ್ಠ ಕಲಾವಿದ ಪ್ರೊ| ಎಂ.ಎ. ಹೆಗಡೆ ಜೀವನ ಗಾಥೆ ಕುರಿತ ಸಾಕ್ಷ್ಯ ಚಿತ್ರ ನಿರ್ಮಾಣ ಮಾಡುವ ಮೂಲಕ ಮುಂದಿನ ತಲೆಮಾರಿಗೂ ಅವರ ಜೀವನ ಸಾಧನೆ ದಾಟಿಸಬೇಕು ಎಂದು ಸಂಯುಕ್ತ ಕರ್ನಾಟಕದ ಕಾರ್ಯನಿರ್ವಾಹಕ ಸಂಪಾದಕ, ಲೋಕ ಶಿಕ್ಷಣ ಟ್ರಸ್ಟ್ ಸಿಇಒ ಮೋಹನ್ ಹೆಗಡೆ ಹೇಳಿದರು.
ಅವರು ಶುಕ್ರವಾರ ಸ್ವರ್ಣವಲ್ಲೀ ಸುಧರ್ಮಾ ಸಭಾಂಗಣದಲ್ಲಿ ದಿ| ಎಂ.ಎ. ಹೆಗಡೆ ಅವರ ಸಂಸ್ಮರಣೆ ನಿಮಿತ್ತ ಯಕ್ಷ ಶಾಲ್ಮಲಾ ಹಾಗೂ ದಿ| ಎಂ.ಎ. ಹೆಗಡೆ ಸಂಸ್ಮರಣ ಸಮಿತಿ ಜಂಟಿಯಾಗಿ ಹಮ್ಮಿಕೊಂಡ ಸರಣಿ ಕಾರ್ಯಕ್ರಮಗಳ ಪ್ರಾರಂಭೋತ್ಸವದಲ್ಲಿ ಅತಿಥಿಯಾಗಿ ಮಾತನಾಡಿದರು.
ಈ ಸಾಕ್ಷ್ಯ ಚಿತ್ರವು ಉಭಯ ಭಾಷಾ ಪ್ರೇಮಿಗಳಿಗೆ, ಯಕ್ಷಗಾನ ಆಸಕ್ತರಿಗೆ, ಅಧ್ಯಯನಕಾರರಿಗೆ ಅನುಕೂಲ ಆಗಬೇಕು. ಇದರ ಜೊತೆಗೆ ಎಂ.ಎ. ಹೆಗಡೆ ಅವರ ಹೆಸರಿನಲ್ಲಿ ವಿಶ್ವ ವಿದ್ಯಾಲಯಗಳಲ್ಲಿ ಅಧ್ಯಯನ ಪೀಠ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.
ನಾಡಿನ ಶ್ರೇಷ್ಠ ಕಲಾವಿದ, ಹೆಮ್ಮೆಯ ಪ್ರಾಧ್ಯಾಪಕ ಎಂ.ಎ. ಹೆಗಡೆ ಅವರಾಗಿದ್ದರು. ಅವರು ಯಕ್ಷಗಾನ ಕ್ಷೇತ್ರ, ಕನ್ನಡ, ಸಂಸ್ಕೈತ ಕ್ಷೇತ್ರಕ್ಕೆ ಅನೇಕ ಅಚ್ಚಳಿಯದ ಕೊಡುಗೆ ನೀಡಿದ್ದಾರೆ. ಪತ್ರಿಕಾ ಕ್ಷೇತ್ರವೂ ಭಾಷೆ ಬಳಕೆಯ ಕುರಿತು ಅವರ ಸಲಹೆ ಪಡೆದಿದ್ದಿದೆ ಎಂದರು.
ಜಿ.ವೆಂಕಟಸುಬ್ಬಯ್ಯ ಅವರಂಥವರೂ ಎಂ.ಎ. ಅವರ ಕನ್ನಡ ಪಾಂಡಿತ್ಯ ಅಚ್ಚಳಿಯದೇ ಇರುವಂಥದ್ದು ಎಂದು ಶ್ಲಾಘಿಸಿದ್ದಾರೆ. ಹೆಗಡೆ ಅವರ ವಾಕ್ ಚಾತುರ್ಯ, ಅವರು ಗಮನ ಸೆಳೆಯುವ ರೀತಿ ಮೆಚ್ಚುಗೆ ಆಗುತ್ತಿದ್ದವು. ಅಕಾಡೆಮಿಗೆ ಆರ್ಥಿಕ ಬಿಕ್ಕಟ್ಟು, ಅಧಿ ಕಾರ ಶಾಹಿಯಿಂದ ಕೆಲಸ ಮಾಡಲು ಹೆಗಡೆ ಅವರ ವೇಗಕ್ಕೆ ಕೂಡಿರಲಿಲ್ಲ. ಕೊರೊನಾ ಕಾಲದಲ್ಲೂ ಎಂ.ಎ. ಹೆಗಡೆ ಅವರು ಸಕ್ರಿಯವಾಗಿ ಕೆಲಸ ಮಾಡಿ ಕಲಾವಿದರಿಗೆ ಧೈರ್ಯ ತುಂಬಿದ್ದಾರೆ ಎಂದರು.
ಸಾನ್ನಿಧ್ಯ ವಹಿಸಿª ಸ್ವರ್ಣವಲ್ಲೀ ಮಠಾಧಿಧೀಶ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ಆಶೀರ್ವಚನ ನೀಡಿ, ಎಂ.ಎ. ಹೆಗಡೆ ಅವರು ಸಂಸ್ಕೃತ, ಕನ್ನಡ ಸಾಹಿತ್ಯಕ್ಕೂ ಯಕ್ಷಗಾನಕ್ಕೂ ಅನುಪಮ ಕೊಡುಗೆ ನೀಡಿದ್ದಾರೆ.
ಯಕ್ಷಗಾನಕ್ಕೆ ಅನೇಕ ಉತ್ತಮ ಭವಿಷ್ಯ ನೀಡಲು ಕೆಲಸ ಮಾಡಿದವರು. ಯಕ್ಷಶಾಲ್ಮಲಾ ಎರಡು ದಶಕಗಳ ಕಾಲ ಉತ್ತಮ ಮೌಲ್ಯಯುತ ಕೆಲಸ ಮಾಡಲು ಎಂ.ಎ. ಹೆಗಡೆ ಅವರೂ ಕಾರಣ. ಯಕ್ಷ ಶಾಲ್ಮಲಾಕ್ಕೆ ಮುಂದೆ ಏನು ಎಂಬುದು ಕಷ್ಟವಾಗಿದೆ. ಇಂದು ಎಂ.ಎ. ಹೆಗಡೆ ಅವರ ಪುಟ ಮುಚ್ಚಿದೆ. ಆದರೆ ಅದನ್ನು ದಾಖಲಿಸುವ ಕಾರ್ಯ ಆಗಬೇಕು. ಸರಣಿ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಸಹಕಾರ ಬೇಕಿದೆ ಎಂದರು.
ಸ್ವರ್ಣವಲ್ಲೀ ಯಕ್ಷಶಾಲ್ಮಲಾದ ಅಧ್ಯಕ್ಷ ಆರ್.ಎಸ್. ಹೆಗಡೆ ಭೈರುಂಬೆ ಸ್ವಾಗತಿಸಿದರು. ಪದ್ಮನಾಭ ಅರೆಕಟ್ಟ ಕಾರ್ಯದರ್ಶಿ ನಾಗರಾಜ್ ಜೋಶಿ ಸೋಂದಾ ಪ್ರಾಸ್ತಾವಿಕ ಮಾತನಾಡಿದರು. ಜಿ.ಜಿ. ಹೆಗಡೆ ಕನೇನಳ್ಳಿ ವಂದಿಸಿದರು.
ಎಂ.ಎ. ಹೆಗಡೆ ಅವರ ನೆನಪಿನಲ್ಲಿ ನಾಡಿನ ಹಲವೆಡೆ ಸರಣಿ ಕಾರ್ಯಕ್ರಮ ಸಂಸ್ಮರಣ ಸಮಿತಿ ಮೂಲಕ ಆಯೋಜಿಸುತ್ತಿದ್ದೇವೆ.
ನಾಗರಾಜ್ ಜೋಶಿ, ಯಕ್ಷ ಶಾಲ್ಮಲಾ
ಯಕ್ಷಗಾನದ ಶಿಸ್ತು ದಾಟುವ ಕಲಾವಿದರನ್ನು ಎಂ.ಎ. ಹೆಗಡೆ ಅವರು ಒಪ್ಪುತ್ತಿರಲಿಲ್ಲ. ಅಂಥ ಶಿಸ್ತು ಎಲ್ಲರೂ ಬೆಳಸಿಕೊಳ್ಳವೇಕು.
ಸ್ವರ್ಣವಲ್ಲೀ ಶ್ರೀ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Dandeli: ವಿದ್ಯುತ್ ಕಂಬದ ಜಿಓಎಸ್ ಕಳವು ಮಾಡಿದ್ದ ಆರೋಪಿ;ಮಾಲು ಸಹಿತ ವಶಕ್ಕೆ ಪಡೆದ ಪೊಲೀಸರು
Gujjar Kere: ಕೆರೆ ಪರಿಸರದ ರಕ್ಷಣೆಗೆ ಆದ್ಯತೆ ಅಗತ್ಯ; ತಹಶೀಲ್ದಾರ್‌ಗೆ ಮರು ಮನವಿ
Dandeli:ತುಂಡಾಗಿ ಬಿದ್ದಿದ್ದ ಕೇಬಲ್ ವೈರ್ ಸುತ್ತಿ ದ್ವಿಚಕ್ರ ವಾಹನ ಸ್ಕಿಡ್: ಸವಾರನಿಗೆ ಗಾಯ
Dandeli; ಆತ್ಮಹ*ತ್ಯೆಗೆ ಯತ್ನಿಸಿದ ವೃದ್ಧನ ರಕ್ಷಣೆ
MUST WATCH
ಹೊಸ ಸೇರ್ಪಡೆ
Kasaragod: ಫ್ಯಾಶನ್ ಗೋಲ್ಡ್ ವಂಚನೆ ಪ್ರಕರಣ: ಪೂಕೋಯ ತಂಙಳ್ ಮತ್ತೆ ಬಂಧನ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.