ಎಂ.ಎ.ಹೆಗಡೆ ಅವರಿಗೆ ಮರಣೋತ್ತರ ಚಂದುಬಾಬು ಪ್ರಶಸ್ತಿ ಪ್ರದಾನ
Team Udayavani, Oct 24, 2021, 6:15 PM IST
ಶಿರಸಿ: ಸರಕಾರಕ್ಕೆ ಬಾಗದ ಹೋರಾಟಗಾರ, ಯೋಜನೆ ತಲುಪಿಸಲು ಜನ ಸೇವಕ ಎಂದು ಹಿರಿಯ ವಿದ್ವಾನ್ ಉಮಾಕಾಂತ ಭಟ್ಟ ಕೆರೇಕೈ ಹೇಳಿದರು.
ನಗರದ ಟಿಎಂಎಸ್ ಸಭಾಂಗಣದಲ್ಲಿ ರವಿವಾರ ಯಕ್ಷ ಸಂಭ್ರಮ ಟ್ರಸ್ಟ ನೀಡುವ ಚಂದುಬಾಬು ಪ್ರಶಸ್ತಿಯನ್ನು ದಿವಂಗತ ಪ್ರೋ.ಎಂ.ಎ.ಹೆಗಡೆ ಅವರಿಗೆ ಮರಣೋತ್ತರವಾಗಿ ಅವರ ಮಗ ವಿನಾಯಕ ಹೆಗಡೆ ಅವರಿಗೆ ಪ್ರದಾನ ಮಾಡಿ ಮಾತನಾಡಿದರು.
ದೋಷ ಕಂಡರೆ ಸಹಿಸದೇ ಇದ್ದರೂ ಪ್ರತಿಭೆ ಕಂಡಾಗ ಪ್ರೋತ್ಸಾಹಿಸುವ ಗುಣ ಪ್ರೋ.ಎಂ.ಎ.ಹೆಗಡೆ ಅವರದ್ದು. ಪಾಂಡಿತ್ಯ ಉಳ್ಳ ಶಿಕ್ಷಕ. ವಿದ್ವತ್ ಪರಂಪರೆ ಬೆಳೆಸುವ ಆಧ್ಯಾಪಕರು. ಎಂ.ಎ.ಹೆಗಡೆ ಅವರ ಕಾರ್ಯ ಕ್ಷಮತೆಗೆ ಸರಕಾರವೇ ಎದೆ ಮುಟ್ಟಿಕೊಳ್ಳುವಂತಿತ್ತು. ವಿನಯ, ದೈನ್ಯವನ್ನು ಬೇರ್ಪಡಿಸಿಕೊಂಡು ಕೆಲಸ ಮಾಡಿದವರು ಅವರು ಎಂದರು.
ಎಂ ಎ ಹೆಗಡೆ ಅಡಿಯಲ್ಲಿ ಬೆಳೆದವರಿಗೆ ವ್ಯಕ್ತಿತ್ವ, ಮಾತುಗಾರಿಕೆ ಎಲ್ಲವೂ ಸಹಜವಾಗಿಯೇ ಬೆಳೆದುಬರುತ್ತಿತ್ತು. ಪದ ಪ್ರಯೋಗ ಬಳಕೆ, ಅದಕ್ಕೆ ಪೂರಕ ಮಾತುಕಥೆ ಅವರಿಂದ ಅನೇಕರು ಕಲಿತಿದ್ದರು ಎಂದರು.
ಇದನ್ನೂ ಓದಿ: ದಾಂಡೇಲಿ: ಕಾಳಿ ನದಿ ದಂಡೆಯ ಮೇಲೆ ಮೀನು ಹಿಡಿಯುತ್ತಿದ್ದ ಬಾಲಕನನ್ನು ಎಳೆದೊಯ್ದ ಮೊಸಳೆ.!
ಯಕ್ಷ ಸಂಭ್ರಮದ ತಾಳ ಮದ್ದಲೆ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿದ ಟಿ ಎಂ ಎಸ್ ಅಧ್ಯಕ್ಷ ಜಿ ಎಂ ಹೆಗಡೆ ಹುಳಗೋಳ, ಮನುಷ್ಯನಿಗೆ ಆರೋಗ್ಯ ಮತ್ತು ಧೈರ್ಯ ಮುಖ್ಯ. ಇವೆರಡಿದ್ದರೆ ಮುಂದುವರಿಯಲು ಸಾಧ್ಯ. ಸಾಂಸ್ಕೃತಿಕ ಚಟುವಟಿಕೆಗಳು ಮನುಷ್ಯನನ್ನು ಉಲ್ಲಸಿತವಾಗಿ ಇಡುತ್ತವೆ. ಯಕ್ಷಗಾನ ನಮ್ಮ ಜಿಲ್ಲೆಯಲ್ಲಿ ವ್ಯಾಪಕವಾಗಿ ಹಬ್ಬಿದ್ದು, ನಮಗೆ ಕಟ್ಟಿಕೊಟ್ಟಿದೆ ಎಂದರು.
ಸಂಕಲ್ಪದ ಪ್ರಮೋದ ಹೆಗಡೆ, ಎಂ.ಎ.ಹೆಗಡೆ ಅವರು ಮೂರೂ ಸರಕಾರದ ಅವಧಿಯಲ್ಲಿ ಅಧ್ಯಕ್ಷರಾಗಿದ್ದರು. ಜಿಲ್ಲೆಗೊಂದು ವ್ಯವಸ್ಥಿತ ರಂಗ ಮಂದಿರದ ಕೊರತೆ ಇದೆ ಎಂದರು.
ಯಕ್ಷ ಸಂಭ್ರಮದ ಅಧ್ಯಕ್ಷ ಕೇಶವ ಹೆಗಡೆ ಗಡಿಕೈ ಅಧ್ಯಕ್ಷತೆ ವಹಿಸಿದ್ದರು. ಸೀತಾರಾಮ ಚಂದು ಸ್ವಾಗತಿಸಿದರು. ಅನಂತ ದಂತಳಿಕೆ ಸಮ್ಮಾನ ಪತ್ರ ವಾಚಿಸಿದರು. ವಾದಿರಾಜ ಕಲ್ಲೂರಾಯ ನಿರ್ವಹಿಸಿದರು. ಎಂ.ವಿ.ಹೆಗಡೆ ಅಮಚಿಮನೆ ವಂದಿಸಿದರು.
ಈ ವೇಳೆ ವಿನಾಯಕ ಎಂ.ಹೆಗಡೆ, ಬಕುಲ ಹೆಗಡೆ, ಸಾವಿತ್ರಿ ಹೆಗಡೆ, ಶ್ರೀಪಾದ ಹೆಗಡೆ ಸೋಮನಮನೆ, ಇಂದಿರಾ ಹೆಗಡೆ ಇತರರು ಇದ್ದರು.
ಮತ್ತೀಘಟ್ಟದ ರಾಮಕೃಷ್ಣ ಹೆಗಡೆ ಅವರಿಗೆ ಚಂದುಬಾಬು ಪ್ರಶಸ್ತಿ ಮೊತ್ತವನ್ನು ಅಕಾಡೆಮಿ ಸದಸ್ಯೆ ನಿರ್ಮಲಾ ಹೆಗಡೆ ಅವರ ಮೂಲಕ ಹಸ್ತಾಂತರಿಸಿದರು.
ಬಳಿಕ ಎಂ.ಎ.ಹೆಗಡೆ ಅವರು ಬರೆದ ಗಯಯಜ್ಞ ಆಖ್ಯಾನ ಪ್ರಸ್ತುತಗೊಂಡಿತು. ವಿ.ಗಣಪತಿ ಭಟ್ಟ, ಅನಂತ ದಂತಳಿಕೆ, ನರಸಿಂಹ ಭಟ್ಟ, ಪ್ರಸನ್ನ ಭಟ್ ಹಿಮ್ಮೇಳದಲ್ಲಿ, ಉಮಾಕಾಂತ ಭಟ್ಟ, ವಾಸುದೇವ ರಂಗಾ ಭಟ್ಟ, ಗಣಪತಿ ಸಂಕದಗುಂಡಿ, ವಾದಿರಾಜ ಕಲ್ಲೂರಾಯ, ಪ್ರಸಾದ ಭಟಕಳ, ಡಿ.ಕೆ.ಗಾಂವ್ಕರ್ ಅರ್ಥದಾರಿಗಳಾಗಿ ಪಾಲ್ಗೊಂಡರು. ಸೋಮವಾರ ದಕ್ಷಾದ್ವರ ತಾಳಮದ್ದಲೆ ನಡೆಯಲಿದ್ದು, ಸತೀಶ ಪಟ್ಲ ಇತರರು ಪಾಲ್ಗೊಳ್ಳಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ
Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!
ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ
Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
FIR 6to6 movie: ಆ್ಯಕ್ಷನ್ ಚಿತ್ರದಲ್ಲಿ ವಿಜಯ ರಾಘವೇಂದ್ರ
Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.