ಮಲೆನಾಡು ಗಿಡ್ಡ ತಳಿಯ ಹಾಲುಶ್ರೇಷ್ಠ 

Team Udayavani, Mar 23, 2019, 10:32 AM IST

23-march-15.jpg

ಹೊನ್ನಾವರ: ರೈತರು ಒರಟು ಮತ್ತು ಮೃದು ಸ್ವಭಾವದ ಮಲೆನಾಡ ಗಿಡ್ಡ ತಳಿಯಲ್ಲಿ ಆಯ್ದುಕೊಂಡು ಬೆಳೆಸಬೇಕಾದ ಅಗತ್ಯವಿದೆ. ಮಲೆನಾಡು ಗಿಡ್ಡ ತಳಿಯ ಹಾಲು ಶ್ರೇಷ್ಠ ಎಂದು ಅಲೌಕಿಕವಾದ, ವೈಜ್ಞಾನಿಕವಾಗಿ ಸಿದ್ಧಪಟ್ಟು. ಇದು ಲೌಕಿಕ ಸತ್ಯವಾದರೂ ಜನ ನಂಬಲು ಸಿದ್ಧರಿಲ್ಲ. ಗೃಹಿಣಿಯರು ಬೇಡವೇ ಬೇಡ ಎನ್ನುತ್ತಾರೆ.  ಒಂದು ಲೋಟ ಹಾಲಿಗಾಗಿ 50 ರೂ. ಆಹಾರ ನೀಡಿ, ಹಾಲು ಕರೆಯಲು ಮುಂದೆ ಹೋದರೆ ಹಾಯುವ, ಹಿಂದೆ ಬಂದರೆ ಒದೆಯುವ ಆ ದನದ ಸಹವಾಸ ಬೇಡ ಎನ್ನುತ್ತಿದ್ದಾರೆ.

ಬೇಲಿ ಮುರಿದು ತೋಟಕ್ಕೆ ನುಗ್ಗಿ, ಎಲೆ ಬಳ್ಳಿ ತಿಂದು ಹಾಕುವ, ಅಟ್ಟಿಸಿಕೊಂಡು ಹೋದರೆ ಛಂಗನೆ ನೆಗೆದು ಮಾಯವಾಗುವ ಆ ತಳಿ ಬೇರೆ ಮನೆಯ ಮುರುಕು ಬೇಲಿ ದಾಟಿದರೂ ಬೈಗುಳ ತಪ್ಪಿದ್ದಲ್ಲ ಎನ್ನುತ್ತಾರೆ.

ಆದರೆ ಮರುಳು ಮಾಡುವ ಮಲೆನಾಡು ಗಿಡ್ಡ ತಳಿಯ ದನಗಳು ವಶೀಲಿ ಮಾಡಿ ವಸೂಲಿ ಮಾಡುವುದನ್ನು ಕಂಡು ನಗದವರಿಲ್ಲ. ಪೇಟೆಯಲ್ಲಿ ಮನೆಯಿದ್ದ ಹಲವರು ಭಕ್ತಿಯಿಂದ ಮಲೆನಾಡು ಗಿಡ್ಡ ಸಾಕುತ್ತ ಬಂದಿದ್ದಾರೆ. ಹೊಟ್ಟೆ ತುಂಬ ಆಹಾರ ಕೊಟ್ಟು, ಹಾಲು ಕರೆದು, ಮೈ ತೊಳೆದು, ಕಾಲಾಡಿಕೊಂಡು ಬರಲಿ ಎಂದು ಬಿಡುತ್ತಾರೆ. ಈ ದನಗಳು ಹೊಟ್ಟೆ ತೂಗಾಡಿಸುತ್ತ ನೇರ ಪೇಟೆ ಸುತ್ತ ತೊಡಗುತ್ತವೆ. ಕಿರಾಣಿ ಅಂಗಡಿ ಎದುರು ಹೋಗಿ ನಿಲ್ಲುತ್ತವೆ. ಹಿಂಡಿ ಕೊಟ್ಟರೆ ಮಾತ್ರ ತಿನ್ನುತ್ತವೆ. ಬಿಸ್ಕಿಟ್‌ ಅಥವಾ ಇನ್ನೇನು ಕೊಟ್ಟರೂ ಅದನ್ನು ಮೂಸಿ ಬಿಟ್ಟು, ಹಿಂಡಿ ಕೊಡುವವರೆಗೆ ಅಂಗಡಿ ಎದುರು ನಿಲ್ಲುತ್ತವೆ. ಒಂದಾದ ಮೇಲೆ ಇನ್ನೊಂದು ಅಂಗಡಿ, ಬಾಳೆಹಣ್ಣು ಅಂಗಡಿ. ಹೀಗೆ ತನಗೆ ಬೇಕಾದ ಆಹಾರ ಕೊಡುವ ಅಂಗಡಿಗಳ ಎದುರು ಮಾತ್ರ ನಿಲ್ಲುವ, ನಿತ್ಯ ನಿಗದಿತ ಸಮಯಕ್ಕೆ ಬಂದು ನಿಲ್ಲುವ ದನಗಳು ಮಧ್ಯಾಹ್ನ ಬಿಸಿಯಾದ ನೆಲದ ಮೇಲೆ ಮಲಗಿ ತಿಂದಿದ್ದನ್ನು ಜೀರ್ಣ ಮಾಡಿಕೊಂಡು ಸಂಜೆ ಎರಡನೇ ಸುತ್ತು ವಸೂಲಿ ಮುಗಿಸಿ ಮನೆಗೆ ಹೋಗುತ್ತದೆ. ಹಾಯದ, ಒದೆಯದ ಈ ಹಸುಗಳನ್ನು ಕಂಡು ಹಿಂಡಿ ಕೊಟ್ಟ ಅಂಗಡಿಕಾರರಿಗೂ ಖುಷಿ. ದನ ಬರದಿದ್ದರೆ ಬೇಜಾರು. ಈ ಹಸುಗಳು ಹೊತ್ತಿಗೆ ಅರ್ಧ, ಒಂದು ಲೀಟರ್‌ ಹಾಲು ಕೊಡುತ್ತದೆ. ಇಂತಹ ವಶೀಲಿ ಮಾಡಿ ವಸೂಲು ಮಾಡುವ ದನಗಳ ತಳಿಯನ್ನು ಗುರುತಿಸಿ, ಸಾಕಿ ಬೆಳೆಸಬೇಕಾಗಿದೆ. ಇವುಗಳ ಗಂಡು ಸಂತತಿಯನ್ನು ಗದ್ದೆ ಹೂಡಲು ಕೊಡದೆ ಉಳಿಸಿಕೊಡಬೇಕಾಗಿದೆ. ಈ ಮಾರ್ಗದಲ್ಲಿ ಆಗಬೇಕಾದ ಕೆಲಸ ಸಾಕಷ್ಟಿದೆ.

ಸಹವಾಸ ಬೇಡ ಎನ್ನುತ್ತಾರೆ ಜನ
ಮಲೆನಾಡು ಗಿಡ್ಡ ತಳಿಯ ಹಾಲು ಶ್ರೇಷ್ಠ ಎಂಬುವುದು ವೈಜ್ಞಾನಿಕವಾಗಿ ಸತ್ಯ. ಇದು ಲೌಕಿಕ ಸತ್ಯವಾದರೂ ಜನ ನಂಬಲು ಸಿದ್ಧರಿಲ್ಲ. ಒಂದು ಲೋಟ ಹಾಲಿಗಾಗಿ 50 ರೂ. ಆಹಾರ ನೀಡಿ, ಹಾಲು ಕರೆಯಲು ಮುಂದೆ ಹೋದರೆ ಹಾಯುವ, ಹಿಂದೆ ಬಂದರೆ ಒದೆಯುವ ಮಾತ್ರವಲ್ಲ, ಕರೆಯಲು ಕೂತರೆ ಲೋಟ ಹಾರಿಹೋಗುವಂತೆ ಒದೆಯುವ, ಕೈ ಬಳೆಗಳನ್ನು ಪುಡಿಗಟ್ಟಿಸುವ ಆ ದನದ ಸಹವಾಸ ಬೇಡ ಎನ್ನುತ್ತಿದ್ದಾರೆ. ಆದರೆ ಇದನ್ನು ಪೇಟೆಯಲ್ಲಿ ಮನೆಯಿದ್ದ ಹಲವರು ಭಕ್ತಿಯಿಂದ ಮಲೆನಾಡು ಗಿಡ್ಡ ಸಾಕುತ್ತ ಬಂದಿದ್ದಾರೆ. ಇದೇ ಅವರಿಗೊಂದು ಖುಷಿ.

ಟಾಪ್ ನ್ಯೂಸ್

Maha-Leaders

Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ

Delhi Pollution: ಅಸ್ತಮಾ, ಶ್ವಾಸಕೋಶ ಕ್ಯಾನ್ಸರ್‌ ಭೀತಿ!

Delhi Pollution: ಅಸ್ತಮಾ, ಶ್ವಾಸಕೋಶ ಕ್ಯಾನ್ಸರ್‌ ಭೀತಿ!

IPL-2025: ಓಂಕಾರ್‌ ಸಾಳ್ವಿ ಆರ್‌ಸಿಬಿ ಬೌಲಿಂಗ್‌ ಕೋಚ್‌

IPL-2025: ಓಂಕಾರ್‌ ಸಾಳ್ವಿ ಆರ್‌ಸಿಬಿ ಬೌಲಿಂಗ್‌ ಕೋಚ್‌

Siddu-Somanna

MUDA: ಸುಮ್ನಿರಯ್ಯ ಗೊತ್ತಿಲ್ದೆ ಮಾತಾಡ್ತಿಯಾ: ಸೋಮಣ್ಣಗೆ ಸಿದ್ದರಾಮಯ್ಯ ಪ್ರೀತಿಯ ಗದರಿಕೆ!

Market: ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!

Market: ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!

Siddu–Muniyappa

Ration Card: ಬಡವರಿಗೆ ಬಿಪಿಎಲ್‌ ಕಾರ್ಡ್‌ ತಪ್ಪದಂತೆ ನೋಡಿಕೊಳ್ಳಿ: ಸಿಎಂ ಸೂಚನೆ

Session: ವಕ್ಫ್ ಜೊತೆ ಬಿಪಿಎಲ್‌ ಹೋರಾಟಕ್ಕೆ ಬಿಜೆಪಿ ಸಜ್ಜು

Session: ವಕ್ಫ್ ಜೊತೆ ಬಿಪಿಎಲ್‌ ಹೋರಾಟಕ್ಕೆ ಬಿಜೆಪಿ ಸಜ್ಜು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-dandeli

Dandeli:ತುಂಡಾಗಿ ಬಿದ್ದಿದ್ದ ಕೇಬಲ್ ವೈರ್ ಸುತ್ತಿ ದ್ವಿಚಕ್ರ ವಾಹನ ಸ್ಕಿಡ್: ಸವಾರನಿಗೆ ಗಾಯ

1-dandeli

Dandeli; ಆತ್ಮಹ*ತ್ಯೆಗೆ ಯತ್ನಿಸಿದ ವೃದ್ಧನ ರಕ್ಷಣೆ

10

Dandeli: ಅಂಬೇವಾಡಿಯ ಬಿಸಿಎಂ ವಸತಿ ನಿಲಯದಲ್ಲಿ ವಿದ್ಯಾರ್ಥಿ ಸಾವು

7-

Dandeli: ವಿವಾಹಿತ ವ್ಯಕ್ತಿ ಆತ್ಮಹತ್ಯೆ

Yellapur: ಚಾಲಕನ ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಲಾರಿ; ಪ್ರಾಣಾಪಾಯದಿಂದ ಪಾರು…!

Yellapur: ಚಾಲಕನ ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಲಾರಿ; ಪ್ರಾಣಾಪಾಯದಿಂದ ಪಾರು…!

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Maha-Leaders

Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ

Delhi Pollution: ಅಸ್ತಮಾ, ಶ್ವಾಸಕೋಶ ಕ್ಯಾನ್ಸರ್‌ ಭೀತಿ!

Delhi Pollution: ಅಸ್ತಮಾ, ಶ್ವಾಸಕೋಶ ಕ್ಯಾನ್ಸರ್‌ ಭೀತಿ!

IPL-2025: ಓಂಕಾರ್‌ ಸಾಳ್ವಿ ಆರ್‌ಸಿಬಿ ಬೌಲಿಂಗ್‌ ಕೋಚ್‌

IPL-2025: ಓಂಕಾರ್‌ ಸಾಳ್ವಿ ಆರ್‌ಸಿಬಿ ಬೌಲಿಂಗ್‌ ಕೋಚ್‌

Siddu-Somanna

MUDA: ಸುಮ್ನಿರಯ್ಯ ಗೊತ್ತಿಲ್ದೆ ಮಾತಾಡ್ತಿಯಾ: ಸೋಮಣ್ಣಗೆ ಸಿದ್ದರಾಮಯ್ಯ ಪ್ರೀತಿಯ ಗದರಿಕೆ!

Market: ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!

Market: ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.