ಮನ್ ಕೀ ಬಾತ್: ಶಿರಸಿಯ ‘ಮಧು’ಕೇಶ್ವರ ಹೆಗಡೆ ಅವರಿಗೆ ಪ್ರಧಾನಿ ಮೋದಿ ಶ್ಲಾಘನೆ
Team Udayavani, Jul 31, 2022, 2:17 PM IST
ಶಿರಸಿ: ಕಳೆದ ಮೂವತ್ತೈದು ವರ್ಷಗಳಿಂದ ಜೇನು ಕೃಷಿ ನಡೆಸುತ್ತ, ಅದರ ವಿವಿಧ ಉತ್ಪನ್ನಗಳನ್ನೂ ತಯಾರಿಸುತ್ತಿರುವ ಶಿರಸಿ ತಾರಗೋಡ ಸಮೀಪದ ಕಲ್ಲಳ್ಳಿ ಮನೆಯ ಮಧುಕೇಶ್ವರ ಹೆಗಡೆ ಅವರ ಶ್ರಮದ ಉಲ್ಲೇಖವನ್ನು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮಜನಪ್ರಿಯ ರೇಡಿಯೋ ಕಾರ್ಯಕ್ರಮ ಮನ್ ಕೀ ಬಾತ್ ನಲ್ಲಿ ಪ್ರಸ್ತಾಪಿಸಿ, ಹೆಸರಿನಲ್ಲಿದ್ದಂತೆ ‘ಮಧು’ಕೇಶ್ವರ ಆಗಿದ್ದಾರೆ ಎಂದು ಶ್ಲಾಘಿಸಿದ್ದಾರೆ.
ಭಾನುವಾರದ ಮನ್ ಕೀ ಬಾತ್ ನಲ್ಲಿ ಈ ಕುರಿತಾಗಿ ಮಾಹಿತಿ ಹಂಚಿಕೊಂಡಿರುವ ಪ್ರಧಾನಿ, ಕರ್ನಾಟಕದಲ್ಲಿ ಮಧುಕೇಶ್ವರ ಎಂಬುವವರು ಸರಕಾರದ ಸಬ್ಸಿಡಿಯನ್ನು ಬಳಸಿಕೊಂಡು ಉತ್ತಮವಾಗಿ ಜೇನು ಕೃಷಿಯನ್ನು ಮಾಡಿದ್ದಾರೆ. ಜೇನು ಕುಂಟುಂಬ ನಿರ್ವಹಣೆ, ಜೇನಿನಿಂದ ಉಪ ಉತ್ಪನ್ನ ಮಾಡುವ ಮೂಲಕ ಮಧುಕೇಶ್ವರ ಎಂಬ ಅವರ ಹೆಸರಿಗೆ ಅನ್ವರ್ಥರಾಗಿದ್ದಾರೆ ಎಂದು ಬಣ್ಣಿಸಿದ್ದಾರೆ.
ಉದಯವಾಣಿ ಜೊತೆ ಸಂತಸದ ಪ್ರತಿಕ್ರಿಯೆ ನೀಡಿದ ಮಧುಕೇಶ್ವರ ಹೆಗಡೆ, ನನಗೆ ಮನ್ ಕೀ ಬಾತ್ ನಲ್ಲಿ ಬರುತ್ತದೆ ಅಂತ ಗೊತ್ತಿರಲಿಲ್ಲ. ಇದು ಖುಷಿಯ ವಿಷಯ. ನಾನು ಮಂತ್ರಾಲಯದಲ್ಲಿ ಇದ್ದು ಇದು ರಾಯರ ಕೃಪೆ ಎಂದು ಭಾವಿಸುವುದಾಗಿ ಹೇಳಿದರು.
ಜೇನು ಕೃಷಿ ಮಾಡುತ್ತಲೇ ಜೇನು ಸಂಶೋಧನೆ, ಬೀ ಕ್ಯಾಲೆಂಡರ್, ಜೇನಿನಿಂದ ಬೈ ಪ್ರೊಡಕ್ಟ್ ಸಹ ತಯಾರಿಸಿದ್ದೇನೆ. ವಾರ್ಷಿಕವಾಗಿ 2 ಕೋಟಿಗೂ ಹೆಚ್ಚು ವ್ಯವಹಾರ ಮಾಡುತ್ತಿದ್ದು, 1,500 ಜೇನು ಕುಟುಂಬ ಇರುವ ಪೆಟ್ಟಿಗೆಯನ್ನು ನಿರ್ವಹಿಸುತ್ತುದ್ದೇನೆ. ಕೇವಲ 20,000 ಬಂಡವಾಳದಿಂದ ಇಂದು ಈ ಸಾಧನೆಗೆ ಸಾಧ್ಯವಾಗಿದೆ. ಪಾರಂಪರಿಕ ವೈದ್ಯ ಸೇವೆ ಕೂಡ ನೀಡುತ್ತಲೇ ವಿಪತ್ತಿನ ಅಂಚಿನ ಔಷಧ ಸಸ್ಯ ಕೂಡ ಬೆಳೆಸುತ್ತಿರುವದಾಗಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.