ಕಡಲ ವಿಜ್ಞಾನ ಸಂಶೋಧನಾ ಹಡಗು
Team Udayavani, Sep 29, 2019, 12:48 PM IST
ಕಾರವಾರ: ನಗರದ ಬಂದರಿಗೆ ಶನಿವಾರ ಬಂದ ಮೀನುಗಾರಿಕೆ ಕಡಲವಿಜ್ಞಾನ ಸಂಶೋಧನಾ ಹಡಗು (ಎಫ್‌ಒಆರ್‌ವಿ) ಸಾಗರ ಸಂಪದವನ್ನು ವಿವಿಧ ಕಾಲೇಜಿನ ವಿದ್ಯಾರ್ಥಿಗಳು ವೀಕ್ಷಣೆ ಮಾಡಿದರು. ಸ್ವಚ್ಛತೆಯೇ ಸೇವೆ ಅಭಿಯಾನದ ಅಂಗವಾಗಿ ಕೊಚ್ಚಿಯ ಭೂ ವಿಜ್ಞಾನ ಸಚಿವಾಲಯದ ಕಡಲಜೀವ ಸಂಪನ್ಮೂಲ ಮತ್ತು ಪರಿಸರ ವಿಜ್ಞಾನ ಕೇಂದ್ರ (ಸಿಎಂಎಲ್‌ಆರ್‌ಇ) ವಿವಿಧ ಬಂದರಿನಲ್ಲಿ ಕಾರ್ಯಕ್ರಮ ಆಯೋಜಿಸುತ್ತಿದೆ.
ಅದರಂತೆಯೇ, ನಗರದ ಬಂದರಿಗೆ ಬಂದ ಹಡಗು, ಭಾನುವಾರ ಮಧ್ಯಾಹ್ನದವರೆಗೆ ಇಲ್ಲಿಯೇ ಇರಲಿದೆ. ಅರಗಾದ ಕೇಂದ್ರೀಯ ವಿದ್ಯಾಲಯ ಹಾಗೂ ಕೋಡಿಬಾಗದ ಕಡಲ ಜೀವವಿಜ್ಞಾನ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ಮಧ್ಯಾಹ್ನ ಭೇಟಿ ನೀಡಿ, ಹಡಗಿನ ವಿಶೇಷತೆ ಬಗ್ಗೆ ಮಾಹಿತಿ ಪಡೆದರು. ಸಮುದ್ರ ಹಾಗೂ ಕಡಲ ಜೀವರಾಶಿಗಳ ಮೇಲೆ ಪ್ಲಾಸ್ಟಿಕ್‌ನಿಂದ ಉಂಟಾಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಸ್ವಚ್ಛತೆಯೇ ಸೇವೆ ಅಭಿಯಾನದ ಅಡಿ ಹಮ್ಮಿಕೊಳ್ಳುತ್ತಿದ್ದೇವೆ. ಗುಜರಾತ್‌ನ ಓಖಾದಿಂದ ಪ್ರಾರಂಭಿಸಿ, ಪೋರ್‌ಬಂದರಿನಲ್ಲಿ ಕಾರ್ಯಕ್ರಮ ನಡೆಸಿ ಇಲ್ಲಿಗೆ ಬಂದಿದ್ದೇವೆ.
ಅ.2ಕ್ಕೆ ಈ ಅಭಿಯಾನವನ್ನು ಕೊಚ್ಚಿಯಲ್ಲಿ ಸಮಾಪ್ತಿಗೊಳಿಸುತ್ತೇವೆ ಎಂದು ಸಿಎಂಎಲ್‌ಆರ್‌ಇನ ಭೌತಿಕ ಕಡಲವಿಜ್ಞಾನಿ (ಫಿಸಿಕಲ್ ಓಶಿಯನೋಗ್ರಾಫರ್) ಡಾ| ಸ್ಮಿತಾ ಹೇಳಿದರು. ರಸಾಯನ ವಿಜ್ಞಾನಿ ಡಾ| ಎಂ.ಸುಬ್ರಮಣಿಯನ್, ಮೀನುಗಾರಿಕಾ ವಿಜ್ಞಾನಿ ಡಾ| ಹಾಶಿಂ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mumbai: ಹೊಸ ವರ್ಷದ ಮುನ್ನಾದಿನ 17,800 ವಾಹನ ಚಾಲಕರಿಗೆ ದಂಡ, 89 ಲಕ್ಷ ರೂ. ಸಂಗ್ರಹ
Hubballi: ಹಳೇ ವೈಷಮ್ಯದಿಂದ ಸಹಚರರೊಂದಿಗೆ ಸೇರಿ ಹಲ್ಲೆ; ವ್ಯಕ್ತಿ ಮೃತ್ಯು
Delhi: ಕೇಜ್ರಿವಾಲ್ ಚುನಾವಣೆಯಲ್ಲಿ ನೀಡಿದ್ದ ಒಂದೂ ಭರವಸೆ ಈಡೇರಿಸಿಲ್ಲ: ಬಿಜೆಪಿ ವಾಗ್ದಾಳಿ
2025 ‘ಸುಧಾರಣೆಗಳ ವರ್ಷ’ಎಂದು ಘೋಷಣೆ ಮಾಡಿದ ರಕ್ಷಣ ಸಚಿವಾಲಯ
Kaup: ಎಲ್ಲೂರು ಘಟಕದಲ್ಲಿ ಉಚ್ಚಿಲದ ತ್ಯಾಜ್ಯ ವಿಲೇವಾರಿ ಬೇಡಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.