ಅಂದರ್ ಬಾಹರ್ ಅಡ್ಡೆ ಮೇಲೆ ಮಾರುಕಟ್ಟೆ ಪೊಲೀಸರ ದಾಳಿ: 8 ಜನರ ಬಂಧನ
Team Udayavani, Jul 19, 2023, 7:22 PM IST
ಶಿರಸಿ: ಅಕ್ರಮವಾಗಿ ಅಂದರ್ ಬಾಹರ್ ಆಡುತ್ತಿದ್ದ ತಂಡದ ಮೇಲೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಶಿರಸಿ ಹೊಸಮಾರುಕಟ್ಟೆ ಪೊಲೀಸರು ಎಂಟು ಜನರನ್ನು ಬಂಧಿಸಿ ನಗದು ಹಣವನ್ನು, ಮೊಬೈಲ್ ಗಳನ್ನು ವಶಪಡಿಸಿಕೊಂಡ ಘಟನೆ ನಗರದ ಕೆ.ಎಚ್.ಬಿ ಕಾಲೋನಿ ನಡೆದಿದೆ.
ನಗರದ ಕೆ.ಎಚ್.ಬಿ ಕಾಲೋನಿ 4 ನೇ ಕ್ರಾಸ್‌ನಲ್ಲಿರುವ ಬುಡೇನ್ ಸಾಬ್ ಇವರ ಮನೆಯ ಒಳಗೆ ಅಂದರ್ ಬಾಹರ್ ಜುಗಾರಾಟ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ.
ಬುಡೇನ್ ಸಾಬ್ ಗರೀಬ್ ಸಾಬ್ ಗಾಣಗ , ಗೌಸ್ ಮೊಹಿದ್ದಿನ್ ಮಹಮ್ಮದ್ ಸ್ಮಾಯಿಲ್ ಕೆಂಚರಗಟ್ಟಿ , ಮಹಮ್ಮದ್ ಕಾಸಿಮ್ ನೂರಅಹಮ್ಮದ್ ತಿಮ್ಮಾಪುರ, ಶಾಬಾಜ್ ರೆಹಮುತ್ತಲ್ಲಾ ಶೇಖ್ , ಜಾಫರ ಅಬ್ದುಲ್ ಸತ್ತಾರ ಶೇಖ್ , ಜಾವೀದ ಇಸಾಕ ಶೇಖ್, ಮಾರುತಿ ರಾಮ ನಾಯ್ಕ , ಸಲ್ಮಾನ್ ಇನಾಯತ್ ಶೇಖ್ ಎಂಬುವವರನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಗಳಿಂದ ಆರು ಮೊಬೈಲ್ ಗಳನ್ನು 10,200 ರೂ. ನಗದು ಹಣವನ್ನು ಹಾಗೂ ಅಂದರ್ ಬಾಹರ್ ಆಟಕ್ಕೆ ಬಳಸಲಾದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಈ ಕಾರ್ಯಚರಣೆಯು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ವಿಷ್ಣುವರ್ಧನ್, ಹೆಚ್ಚುವರಿ ವರಿಷ್ಠಾಧಿಕಾರಿ ಜಿ.ಟಿ.ಜಯಕುಮಾರ್, ಡಿ.ಎಸ್.ಪಿ ಗಣೇಶ ಕೆ.ಎಲ್. ಇವರ ಮಾರ್ಗದರ್ಶನ ದಲ್ಲಿ ಸಿ.ಪಿ.ಐ. ರಾಮಚಂದ್ರ ನಾಯಕ ರವರ ನೇತೃತ್ವದಲ್ಲಿ, ಮಾರುಕಟ್ಟೆ ಪಿ.ಎಸ್.ಐ. ಭೀಮಾಶಂಕರ ಸಿನ್ನೂರ ಸಂಗಣ್ಣ, ಸಿಬ್ಬಂದಿಯವರಾದ ಮೋಹನ ನಾಯ್ಕ , ಹನುಮಂತ ಮಾಕಾಪುರ, ವೃತ್ತ ಕಛೇರಿಯ ಸಿಬ್ಬಂದಿ ಮಹಾದೇವ ನೀರೊಳ್ಳಿ, ರಾಜು ಸಾಲಗಾವಿ , ಶಿರಸಿ ನಗರ ಠಾಣೆಯ ಸಿಬ್ಬಂದಿ ಪ್ರಶಾಂತ ಪಾವಸ್ಕರ್, ಪಾಂಡುರಂಗ ನಾಗೋಜಿ ಇವರು ಭಾಗವಹಿಸಿ ಸ್ವತ್ತು ಹಾಗೂ ಆರೋಪಿತರನ್ನು ವಶಕ್ಕೆ ಪಡೆಯಲು ಸಹಕರಿಸಿರುತ್ತಾರೆ. ಈ ಕಾರ್ಯಚರಣೆಯ ಬಗ್ಗೆ ಪೊಲೀಸ ಅಧೀಕ್ಷಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shimoga; ಕಾಂಗ್ರೆಸ್ ಸರಕಾರ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ: ಈಶ್ವರಪ್ಪ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Rohit Sharma; ಮುಗಿಯಿತಾ ರೋಹಿತ್ ಕ್ರಿಕೆಟ್ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.