ಇನ್ನೂ ಬಳಕೆಯಾಗದ ರೆಡ್‌ಕ್ರಾಸ್ ಕೊಟ್ಟ ಮಾಸ್ಕ್!
ಗುಣಮಟ್ಟದ 200 ಬಾಕ್ಸ್ ಮಾಸ್ಕ್ ಕೊಳೆಯುತ್ತಿದೆ; ರೆಡ್‌ಕ್ರಾಸ್ ಆಶಯಕ್ಕೆ ಕಂದಾಯ ಇಲಾಖೆ ನಿರ್ಲಕ್ಷ್ಯ
Team Udayavani, Sep 19, 2022, 4:28 PM IST
ಶಿರಸಿ: ಕೊರೋನಾ ಮೂರನೇ ಅಲೆಯ ವೇಳೆಯಲ್ಲಿ ಸೋಂಕು ತಡೆಯಲು ಸಾಮಾಜಿಕ ಸೇವಾ ಆಶಯದ ಸಂಸ್ಥೆ ರೆಡ್ ಕ್ರಾಸ್ ನೀಡಿದ್ದ ಲಕ್ಷಾಂತರ ಸಂಖ್ಯೆಯ ಮಾಸ್ಕ್ ಬಳಕೆಯಾಗದೆ ಕೊಳೆಯುತ್ತಿರುವ ಪ್ರಸಂಗ ಬೆಳಕಿಗೆ ಬಂದಿದೆ.
ಶಿರಸಿ ತಹಶೀಲ್ದಾರ್ ಕಚೇರಿ ಮೂಲಕ ಘಟ್ಟದ ಮೇಲ್ಭಾಗದ ಆರು ತಾಲೂಕುಗಳಿಗೆ ವಿತರಿಸಲು ತರಿಸಲಾಗಿದ್ದ 200 ಬಾಕ್ಸ್ ಗುಣಮಟ್ಟದ ಮಾಸ್ಕ್ ಇನ್ನೂ ಬಾಕ್ಸ್‌ನಲ್ಲೇ ಕೊಳೆಯುತ್ತಿದೆ. ತಾಲೂಕು ಆಡಳಿತದ ನಿರ್ಲಕ್ಷ್ಯದಿಂದ ಕಳೆದ ವರ್ಷದಿಂದ ಗೋಡಾನ್ ಒಂದರಲ್ಲಿ ತುಂಬಿಯೇ ಉಳಿದಿದ್ದು, ಈಗ ಸ್ವತಃ ಅಧಿಕಾರಿಗಳಿಗೂ ಮುಜುಗರಕ್ಕೆ ಕಾರಣವಾಗುತ್ತಿದೆ.
ಬಿಡುಗಡೆ ಭಾಗ್ಯವಿಲ್ಲ!: ಖರೀದಿಸಿದ ಮಾಸ್ಕ್ ಹಾಗೇ ಕಂಪನಿಯಿಂದ ನೇರವಾಗಿ ರೆಡ್ ಕ್ರಾಸ್ ಮೂಲಕ ತಹಶೀಲ್ದಾರ್ ಕಚೇರಿಗೆ ಬಂದಿತ್ತು. ಸ್ವತಃ ಆಗಿನ ತಹಶೀಲ್ದಾರರು ಅದನ್ನು ಸ್ವೀಕರಿಸಿಯೂ ಇದ್ದರು. ಮೂರನೇ ಅಲೆಯ ಕಾಲ ಘಟ್ಟದಲ್ಲಿ ಮಕ್ಕಳಿಗೆ, ಕೊರೊನಾ ಅಪಾಯ ತಡೆಗಟ್ಟಲು ನೀಡಲಾಗಿದ್ದ ಮಾಸ್ಕ್ ಹಂಚದೇ ಹಾಗೇ ಬಿಡಲಾಗಿತ್ತು. ಬಾಕ್ಸ್‌ಗಳಲ್ಲಿ ಇದ್ದ ಮಾಸ್ಕ್ ಹಾಗೇ ಪ್ಯಾಕ್ ಆಗಿ ಉಳಿದಿದೆ. ಇದರಿಂದ ರೆಡ್‌ಕ್ರಾಸ್ ಮೂಲ ಆಶಯಕ್ಕೆ ಕಂದಾಯ ಇಲಾಖೆ ನಿರ್ಲಕ್ಷ್ಯಕ್ಕೆ ಕೊಳೆಯುವಂತಾಗಿದೆ.
ಗೊತ್ತೇ ಇರಲಿಲ್ಲ!: ಕಂದಾಯ ಇಲಾಖೆಗೆ ಹಸ್ತಾಂತರ ಆದ ಮಾಸ್ಕ್ ಬಾಕ್ಸ್‌ಗಳನ್ನು ಬಿಡಿಸಿಯೂ ನೋಡದೇ ಸರಕಾರಿ ಪ್ರೌಢಶಾಲೆಯ ಹೆಚ್ಚುವರಿ ಕೊಠಡಿಯಲ್ಲಿ ಇರಿಸಲಾಗಿತ್ತು.
ಇದ್ದದ್ದು 200 ಬಾಕ್ಸ್!: ಸಾರ್ವಜನಿಕರ ಆರೋಗ್ಯ ರಕ್ಷಣೆಗೆ, ಸ್ವಯಂ ಸೇವಕರಿಗೆ ವಿತರಿಸಿ ಆರೋಗ್ಯ ಕಾಳಜಿಗೆ ತರಲಾಗಿದ್ದ ಮಾಸ್ಕ್ ಬಾಕ್ಸ್‌ಗಳು ಒಂದೆರಡಲ್ಲ. ಬರೋಬ್ಬರಿ 200 ಬಾಕ್ಸ್‌ಗಳಿಗೂ ಹೆಚ್ಚು. ಒಂದು ಬಾಕ್ಸ್‌ನಲ್ಲಿ 500 ಬಟ್ಟೆಯ ಮಾಸ್ಕ್ ಗಳಿವೆ.
ಬನಿಯನ್ ಬಟ್ಟೆಯ ಗುಣಮಟ್ಟದ ಮಾಸ್ಕ್ಗಳು ಒಂದು ಲಕ್ಷಕ್ಕೆ ಕಡಿಮೆ ಇಲ್ಲದಷ್ಟು ಇಲ್ಲಿವೆ. ರೆಡ್‌ಕ್ರಾಸ್ ಮೂಲಕ ಮಾಸ್ಕ್ ವಿತರಣೆ ಬಗ್ಗೆ ವಿವರಣೆ ಕೇಳಿದಾಗಲೇ ಮರಳಿ ಈ ಬಾಕ್ಸ್‌ಗಳು ಹೆಗಿದ್ದವೋ ಹಾಗೆ ಸಿಕ್ಕಿವೆ! ಅಧಿಕಾರಿಗಳ ನಿರ್ಲಕ್ಷ್ಯದಿಂದ ಘಟ್ಟದ ಮೇಲಿನ ತಾಲೂಕಿನ ಜನರ ಅಗತ್ಯ ಬಳಕೆಗೆ ಬೇಕಿದ್ದವೂ ನೆರವಿಗೆ ಸಿಗದಂತೆ ಆಗಿದೆ.
ನಾನೂ ಹೊಸತಾಗಿ ಬಂದಿರುವೆ. ಮಾಸ್ಕ್ಗಳು ಹಾಗೇ ಉಳಿದಿದೆ ಎಂದು ಗೊತ್ತಾದ ತಕ್ಷಣ ಅದನ್ನು ಆಯಾ ತಾಲೂಕಿಗೆ ಹಂಚಿಕೆ ಮಾಡಲು ಸೂಚನೆ ನೀಡಿರುವೆ. –ಶ್ರೀಧರ ಮುಂದಲಮನಿ, ತಹಶೀಲ್ದಾರ್, ಶಿರಸಿ
ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಇನ್ನೇನು ಹಾಗೇ ಇವೆಯೋ ಹುಡಕಬೇಕು. ಮಾಸ್ಕ್ ಗಳನ್ನು ಶಿಕ್ಷಣ ಇಲಾಖೆ ಮೂಲಕ ಹವಾಮಾನ ವ್ಯತ್ಯಾಸದಿಂದ ಆಗುವ ಥಂಡಿ, ಕೆಮ್ಮು ಆದ ಮಕ್ಕಳಾದರೂ ಬಳಸಲು ಸೂಚಿಸಬೇಕು. -ಕಮಲಾಕರ ನಾಯ್ಕ, ಪಾಲಕ
-ರಾಘವೇಂದ್ರ ಬೆಟ್ಟಕೊಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.